ತರುಣನಿಗೆ ಇಂಟರ್ನೆಟ್ ಮುಖಾಂತರ ಯುವತಿಯ ಜೊತೆಗೆ ಆಯ್ತು ಲವ್. ಸೌಂದರ್ಯದ ಕಾರಣದಿಂದ ಮುಚ್ಚಿದ ವಯಸ್ಸು ನಂತರ ಗೊತ್ತಾದಾಗ ಏನಾಯಿತು ನೋಡಿ….

ಈ ಡಿಜಿಟಲ್ ಯುಗದಲ್ಲಿ ಪ್ರತ್ಯಕ್ಷ ಭೇಟಿ ಹಾಗೂ ಪ್ರತ್ಯಕ್ಷ ಮಾತುಗಳು ಕಡಿಮೆಯಾಗುತ್ತಾ ಹೋಗುತ್ತಿವೆ. ಪ್ರತಿಯೊಂದು ಕೆಲಸ ಬೆರಳ ತುದಿಯಿಂದ ನಡೆಯುತ್ತಿದೆ. ಈ ಜಾಲತಾಣವು ಪಕ್ಕಕ್ಕೆ ಇದ್ದವರನ್ನು ದೂರಮಾಡುತ್ತದೆ, ಎಲ್ಲೋ ದೂರ ಇದ್ದವರನ್ನು ತುಂಬಾ ಸನಿಹಕ್ಕೆ ತರುತ್ತದೆ. ಸಂಬಂಧಿಕರನ್ನು ದೂರಮಾಡುತ್ತದೆ, ಅಪರಿಚಿತರನ್ನು ಸಂಬಂಧಿಕರನ್ನಾಗಿ ಮಾಡುತ್ತದೆ. ನಾಣ್ಯಕ್ಕೆ ಎರಡು ಮುಖಗಳಿದ್ದಂತೆ ಇಂಟರ್ನೆಟ್ ಗೂ ಎರಡು ಮುಖಗಳಿವೆ. ಅನೇಕ ಒಳ್ಳೆಯ ಗುಣಗಳು ಇರುವುದರ ಜೊತೆಗೆ ದೋಷಗಳು ಸಹಿತ ಇವೆ.

ಇಂಟರ್ನೆಟ್ ಮಾಧ್ಯಮದಿಂದ ಅನೇಕರು ಅಪರಿಚಿತರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಹಾಗೆಯೇ ಅಪರಿಚಿತರಿಂದ ಪ್ರೀತಿಯಲ್ಲಿ ಮೋಸವನ್ನು ಸಹಿತ ಅನುಭವಿಸಿದ್ದಾರೆ. ಬರೀ ಚಾಟಿಂಗ್ ಮುಖಾಂತರ ಎಲ್ಲವನ್ನೂ ತಿಳಿದು ಕೊಳ್ಳಲು ಸಾಧ್ಯವಿಲ್ಲ. ನಮ್ಮ ಎದುರಿಗಿರುವ ವ್ಯಕ್ತಿ ಹೇಗಿದ್ದಾನೆ, ಎಷ್ಟು ವಯಸ್ಸಿನವನು ಇದ್ದಾನೆ, ಎಂಬುದು ತಿಳಿಯಲು ಸಾಧ್ಯವಿಲ್ಲ. ಚಾಟಿಂಗ್ ಮುಖಾಂತರ ಅವರ ಭಾವನೆಗಳನ್ನು ತಿಳಿದುಕೊಳ್ಳಬಹುದು ಅಷ್ಟೇ. ಆದರೆ ತುಂಬಾ ಅಪರಿಚಿತನಾದ ವ್ಯಕ್ತಿಯ ಬಗ್ಗೆ ಎಲ್ಲವನ್ನು ತಿಳಿದುಕೊಳ್ಳುವುದು ಅಸಾಧ್ಯ.

ಪಶ್ಚಿಮ ಬಂಗಾಲದಲ್ಲಿಯ ಬೋಕಾರೋ ಊರಿನ ಒಂದು ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿಯ ಆನಂದ ಸಾಗರ ಹೆಸರಿನ ತರುಣನ ಪರಿಚಯ ಫೇಸ್ಬುಕ್ನಲ್ಲಿ ಒಬ್ಬಳು ಯುವತಿಯ ಜೊತೆಗೆ ಆಯಿತು. ಪರಿಚಯವೂ ನಿಧಾನವಾಗಿ ಪ್ರೀತಿಯಲ್ಲಿ ಬದಲಾಯಿತು. ಇಬ್ಬರೂ ಒಬ್ಬರಿಗೊಬ್ಬರು ತಮ್ಮ ಮನಸ್ಸಿನ ಅನಿಸಿಕೆಗಳನ್ನು ಬೇಕು-ಬೇಡಗಳನ್ನು ದಿನನಿತ್ಯ ಚಾಟಿಂಗ್ ಮುಖಾಂತರ ಶೇರ್ ಮಾಡಿ ಕೊಳ್ಳುತ್ತಿದ್ದರು. ಚಾಟಿಂಗ್ನಲ್ಲಿ ಆಕೆ ತಾನು 21 ವರ್ಷದವಳೆಂದು ಹೇಳಿದ್ದಳು. ಅವರ ಮಾಡುತ್ತಿದ್ದ ಚಾಟಿಂಗ್ ಗೆ ಹಗಲು-ರಾತ್ರಿಗಳು ಕಡಿಮೆ ಬೀಳುತ್ತಿದ್ದವು. ಮುಂದೆ ಒಂದು ದಿನ ಇಬ್ಬರು ಭೇಟಿಯಾಗುವ ನಿರ್ಧಾರ ಮಾಡಿದರು. ಭೇಟಿಗಾಗಿ ಮಹಿಳೆ ಬೊಕಾರೋ ದ ಸೆಕ್ಟರ್ 4 ರ ಒಂದು ಸ್ಥಳದಲ್ಲಿ ಬರಲು ಹೇಳಿದಳು.

ಇಬ್ಬರು ಪರಸ್ಪರ ಭೇಟಿಯಾದಾಗ ಆಕೆ ಒಂದು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಬಗ್ಗೆ ಗೊತ್ತಾಯ್ತು. ಆಕೆಯ ಐಡಿಯಿಂದ ಅವಳು 37 ವರ್ಷದ ಮಹಿಳೆಯಾಗಿದ್ದುದು ಗೊತ್ತಾಯ್ತು. ಆಕೆಯ ಪತಿಯಿಂದ ಅವಳಿಗೆ ಎರಡು ಮಕ್ಕಳಿದ್ದದ್ದು ಸಹಿತ ಗೊತ್ತಾಯ್ತು.

ಇದನ್ನೆಲ್ಲಾ ತಿಳಿದುಕೊಂಡು ಆನಂದ ಸಾಗರ ಮುಂದೆ ಆಕೆಯಿಂದ ಬಚಾವಾಗಲು ಆಕೆಯ ಜೊತೆಗಿನ ಸಂಪರ್ಕವನ್ನು ಕಡಿದು ಬಿಟ್ಟ. ಆದರೆ ಆಕೆ ಮಾತ್ರ ಈತನನ್ನು ಅಷ್ಟಕ್ಕೆ ಬಿಡಲಿಲ್ಲ. ಮಹಿಳೆಯು ಆನಂದ ಸಾಗರನಿಗೆ ಬೆದರಿಕೆ ಹಾಕಲು ಶುರು ಮಾಡಿದಳು. ಆಗ ಆನಂದ ಸಾಗರ ನನ್ನನ್ನು ಬಿಟ್ಟುಬಿಡು ಎಂದಾಗ ಮಹಿಳೆ ನನ್ನಿಂದ ಬಿಡಿಸಿಕೊಳ್ಳಬೇಕಾದರೆ ನನಗೆ 5 ಲಕ್ಷ ರೂಪಾಯಿಗಳನ್ನು ಕೊಡು ಎಂದಾಗ ಯುವಕ ಬೆಚ್ಚಿಬಿದ್ದು ಪೊಲೀಸರ ಮೊರೆ ಹೋಗಿದ್ದಾನೆ.

ಸದ್ಯಕ್ಕೆ ಈ ತರುಣನ ಹತ್ತಿರ ಮಹಿಳೆಯ ಚಾಟಿಂಗ್ ಹಾಗೂ ನಂತರದ ಕಾಲ್ ರೆಕಾರ್ಡಿಂಗ್ ಗಳು ಉಪಲಬ್ಧವಿವೆ. ಪೊಲೀಸರು ಯುವಕ ನೀಡಿದ ಮಾಹಿತಿಯ ಮೇರೆಗೆ ಆಕೆಯ ವಿರುದ್ಧ ಕೇಸು ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ.

.