Funny Jokes: ಗುಂಡನಿಗೆ ಮದುವೆ ಆಗಿ ಮೊದಲ ರಾತ್ರಿ ವ್ಯವಸ್ಥೆ ಆಗಿತ್ತು.. ಪತ್ನಿ ಗಾಬರಿಯಿಂದ ದಯವಿಟ್ಟು ನನಗೆ ಏನೂ ಮಾಡಬೇಡಿ ಎಂದು ಕಿರುಚಿದಳು..
ನಗು ಜೀವನಕ್ಕೆ ಒಂದು ವರ. ಈ ನಗುವು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ಅದಕ್ಕೆ ನಗುವ ಅವಕಾಶ ದೊರೆತಾಗ ನಕ್ಕು ಬಿಡಬೇಕು. ಹೀಗೆ ನಗುವುದರಿಂದ ನಮ್ಮ ನೋವುಗಳನ್ನು ಮರೆಯಲು, ಜೀವನದಲ್ಲೊಂದು ನವ ಚೈತನ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಒಂದಲ್ಲಾ ಒಂದು ದಿನ ಎಲ್ಲರೂ ಕೂಡಾ ಸಾಯಲೇಬೇಕು. ಆದರೆ ಇರುವ ಜೀವನದಲ್ಲಿ ನಗುತ್ತಾ ಇರುವುದು ಉತ್ತಮವಲ್ಲವೇ? ಅದಕ್ಕೆ ನಿಮಗಾಗಿ ನಗುವನ್ನು ನೀಡಲು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರನ್ನು ನಗಿಸಿದ ಈ ನಗೆ ಹನಿಗಳು ನಿಮಗಾಗಿ.
ಜೋಕ್ ೧
ಬಾಬುರಾವ್: ಹೇ ರಾಜು ನಮ್ಮ ಮನೇಲಿ ಹೆಣ್ಣು ನಾಯಿ ಮೊಟ್ಟೆ ಇಟ್ಟಿದೆ.
ರಾಜು: ಏನು ನಾಯಿ ಮೊಟ್ಟೆ ಇಡುತ್ತಾ? ಅದು ಹೇಗೆ ಸಾಧ್ಯ?
ಬಾಬುರಾವ್ : ಅದೇ ಕಣೋ ಈ ಬಾಬು ರಾವ್ ಸ್ಟೈಲ್… ನಾನು ನಮ್ಮ ಮನೇಲಿ ಕೋಳಿಗೆ ಹೆಣ್ಣು ನಾಯಿ ಅಂತ ಹೆಸರಿಟ್ಟಿದ್ದೀನಿ… 😂😂😂
ಜೋಕ್ ೨
ಮೊಮ್ಮಗ: ತಾತಾ ನೀವು ಯಾಕೆ ಲೈಫ್ ಇನ್ಷೂರೆನ್ಸ್ ಮಾಡ್ಸಿಲ್ಲ..
ತಾತಾ: ಯಾಕಂದ್ರೆ ನಾನು ಸತ್ತ ಮೇಲೆ ನೀವೆಲ್ಲಾ ನಿಜವಾಗ್ಲೂ ದುಃಖ ಪಡ್ಲಿ ಅಂತ…
ಜೋಕ್ ೩
ಇಬ್ಬರು ವಯಸ್ಸಾದ ದಂಪತಿ ಡೈವೋರ್ಸ್ ಗಾಗಿ ಕೋರ್ಟ್ ಮೆಟ್ಟಿಲೇರಿದರು..
ಜಡ್ಜ್ ಕೇಳಿದರು: ಈ ವಯಸ್ಸಿನಲ್ಲಿ ನಿಮಗೆ ಡೈವೋರ್ಸ್ ಯಾಕೆ?
ಅಜ್ಜಿ: ಜಡ್ಜ್ ಸಾಹೇಬ್ರೆ ನಮ್ಮ ಎಜಮಾನ್ರು ನನಗೆ ಪ್ರತಿ ದಿನ ಮಾನಸಿಕ ಹಿಂಸೆ ನೀಡ್ತಾ ಇದ್ದಾರೆ.
ಜಡ್ಜ್: (ಆಶ್ಚರ್ಯದಿಂದ): ಏನು ಮಾನಸಿಕ ಹಿಂಸೆನಾ? ಹೇಗೆ?
ಅಜ್ಜಿ: ಪ್ರತಿದಿನ ಅವರಿಗೆ ಬೇಕು ಅನಿಸಿದಾಗ ನನ್ನನ್ನು ಬಾಯಿಗೆ ಬಂದ ಹಾಗೆ ಬೈತಾರೆ. ನಾನು ಅವರನ್ನು ಬೈಯ್ಯೋಕೆ ಸ್ಟಾರ್ಟ್ ಮಾಡಿದ್ರೆ ಕಿವಿಗೆ ಹಾಕ್ಕೊಂಡಿರೋ ಮಿಷನ್ ತೆಗೆದು ಬಿಡ್ತಾರೆ..
ಈ ಮಾತು ಕೇಳಿ ಜಡ್ಜ್ ಶಾಕ್….

ಜೋಕ್ : ೪
ಹೆಂಡತಿ ಗಂಡನ ಆಫೀಸಿಗೆ ಫೋನ್ ಮಾಡಿದಳು..
ಗಂಡ: ಬೇಗ ಹೇಳು, ನಾನು ತುಂಬಾ ಬ್ಯುಸಿ ಇದ್ದೀನಿ.
ಹೆಂಡತಿ: ಒಂದು ಒಳ್ಳೆ ವಿಷಯ ಮತ್ತೆ ಇನ್ನೊಂದು ಕೆಟ್ಟ ವಿಷಯ ಎರಡೂ ಹೇಳೋದಿದೆ.
ಗಂಡ: ಒಳ್ಳೇದು ಹೇಳು. ಕೆಟ್ಟದ್ದು ಕೇಳೋಕೆ ನನಗೆ ಟೈಂ ಇಲ್ಲ..
ಹೆಂಡತಿ: ನಮ್ಮ ಕಾರಿನ ಏರ್ ಬ್ಯಾಗ್ಸ್ ಸರಿಯಾಗಿ ವರ್ಕ್ ಮಾಡಿವೆ! ಇದೆ ಒಳ್ಳೆ ಸುದ್ದಿ…
ಕೆಟ್ಟ ಸುದ್ದಿ ಕೇಳೋಕೆ ಗಂಡನಿಗೆ ಪ್ರಜ್ಞೆ ಇರ್ಲಿಲ್ಲ..
ಜೋಕ್ ೫
ನವವಿವಾಹಿತ ಪತ್ನಿ ತನ್ನ ಪತಿಯೊಂದಿಗೆ…
ಪತ್ನಿ : ರೀ ನಾವು ಇಬ್ಬರಿಂದ ಮೂರು ಜನ ಆಗೋಣ್ವಾ
ಪತಿ: ಹಾ ಡಾರ್ಲಿಂಗ್ ನಾನು ಅದೇ ಬಯಸ್ತಾ ಇದ್ದೀನಿ… ನನಗೆ ಓಕೆ.
ಪತ್ನಿ : ಸರಿ ಹಾಗಾದ್ರೆ ನಾಳೆ ನಮ್ಮಮ್ಮ ಬರ್ತಾ ಇದ್ದಾರೆ ಇನ್ಮೇಲೆ ಅಮ್ಮ ಇಲ್ಲೇ ನಮ್ಮ ಜೊತೆ ಇರ್ತಾರೆ…
ಜೋಕ್ ೬
ಒಂದು ಸಲ ಪಪ್ಪು ಸಿಟಿಯಿಂದ ತನ್ನ ಹಳ್ಳಿಯಲ್ಲಿರುವ ಅತ್ತೆಯ ಮನೆಗೆ ಹೋದ…
ತನ್ನ ಹೆಂಡತಿಯ ತಂಗಿ ನಾದಿನಿಗೆ ಒಂದು ಪರ್ಫ್ಯೂಮ್ ಬಾಟಲ್ ಗಿಫ್ಟ್ ಕೊಟ್ಟ. ಅವಳಿಗೆ ಅದೇನು ಅಂತ ಗೊತ್ತಿಲ್ದೇ ಅದನ್ನು ಕೈಯಲ್ಲಿ ಸ್ವಲ್ಪ ಹಾಕ್ಕೊಂಡು ನೆಕ್ಕಿದಳು…
ಪಪ್ಪು ಮಾವನಿಗೆ ದೂರು ಕೊಟ್ಟ, ಆಗ ಅವನ ಮಾವ ಮಗಳನ್ನು ಕರೆದು, ಏನಮ್ಮಾ ಅಷ್ಟು ಬುದ್ಧಿ ಬೇಡ್ವಾ, ಪರ್ಫ್ಯೂಮ್ ನ ಹಾಗೆ ನೆಕ್ಕೋ ಬದಲು ಚಪಾತಿಲಿ ಹಾಕ್ಕೊಂಡು ತಿನ್ನೋದಲ್ವಾ? ನೋಡು ನಿಮ್ಮ ಬಾವನಿಗೆ ಬೇಜಾರಾಗಿದೆ…
ಈ ಮಾತು ಕೇಳಿ ಪಪ್ಪು ಶಾಕ್…

ಜೋಕ್ ೭
ಒಬ್ಬ ಸೇಲ್ಸ್ ಮ್ಯಾನ್ ಮನೆ ಮನೆಗೆ ತಿರುಗಿ ಪುಸ್ತಕಗಳನ್ನು ಮಾರುತ್ತಿದ್ದ. ಒಂದು ಮನೆ ಮುಂದೆ ಬಂದು ಡೋರ್ ಬೆಲ್ ಒತ್ತಿದ.. ಮಹಿಳೆಯೊಬ್ಬರು ಬಾಗಿಲು ತೆರೆದರು..
ಸೇಲ್ಸ್ ಮ್ಯಾನ್: ಈ ಪುಸ್ತಕದಲ್ಲಿ ಗಂಡ ಮನೆಗೆ ಲೇಟಾಗಿ ಬಂದಿದ್ದಕ್ಕೆ ಹೇಳುವ 500 ಕಾರಣಗಳು ಇವೆ..
ಮಹಿಳೆ: ಈ ಪುಸ್ತಕ ನಾನು ತಗೋಳ್ತೀನಿ ಅಂತ ನಿಮಗೆ ನಂಬಿಕೆ ಇದ್ಯಾ?
ಸೇಲ್ಸ್ ಮ್ಯಾನ್: ಯಾಕಂದ್ರೆ ಬೆಳಿಗ್ಗೆ ತಾನೇ ನಿಮ್ಮ ಎಜಮಾನ್ರು ಈ ಪುಸ್ತಕ ಕೊಂಡುಕೊಂಡ್ರು…
ಜೋಕ್ ೮
ಗುಂಡನಿಗೆ ಮದುವೆ ಆಗಿ ಮೊದಲ ರಾತ್ರಿ ವ್ಯವಸ್ಥೆ ಅಗಿತ್ತು..
ಪತ್ನಿ ಗಾಬರಿಯಿಂದ ದಯವಿಟ್ಟು ನನಗೆ ಏನೂ ಮಾಡಬೇಡಿ ಎಂದು ಕಿರುಚಿದಳು
ಗುಂಡ: ಯಾಕೆ ಏನಾಯ್ತು ?
ಪತ್ನಿ: ಏನಿಲ್ಲಾ, ಮದುವೆ ಆದ್ಮೇಲೆ ಈ ಕೆಲಸಗಳನ್ನು ಮಾಡಲ್ಲ ಅಂತ ನಮ್ಮ ಅಮ್ಮನಿಗೆ ಮಾತು ಕೊಟ್ಟಿದ್ದೀನಿ….
ಅವಳ ಮಾತು ಕೇಳಿ ಗುಂಡ ಪ್ರಜ್ಞೆ ತಪ್ಪಿದ್ದ..