ಕರುಗೆ ಜನ್ಮ ಕೊಡದೆ ಹಾಲು ಕೊಡುತ್ತಿರುವ ಹಸು! ಅಚ್ಚರಿ ಪಡುತ್ತಿರುವ ಜನ!
ಗೋ ಮಾತೆ ಅಥವಾ ಹಸುವಿಗೆ ನಮ್ಮ ದೇಶದಲ್ಲಿ ಇರುವ ಪೂಜನೀಯ ಸ್ಥಾನವನ್ನು ಪ್ರಪಂಚದ ಯಾವುದೇ ದೇಶದಲ್ಲಿ ಕೂಡಾ ಇಲ್ಲ. ನಮ್ಮ ಪುರಾಣಗಳಲ್ಲಿ ಕೂಡಾ ಕಾಮಧೇನು ಹಾಗೂ ಆಕೆಯ ಸಂತಾನಗಳ ಬಗ್ಗೆ ಕಥೆಗಳು ಕೂಡಾ ಇವೆ. ಕಾಮಧೇನು ಬೇಡಿದ್ದನ್ನು ಕೊಡುವ ದೇವತಾ ಹಸುವಾಗಿತ್ತು. ಆದ್ದರಿಂದಲೇ ಇಂದಿಗೂ ನಮ್ಮಲ್ಲಿ ಹಸುಗಳಿಗೆ ಅದೇ ಸ್ಥಾನವನ್ನು ನೀಡಲಾಗಿದೆ. ಗೋವಿನ ಹಾಲನ್ನು ಅಮೃತ ಕ್ಕೆ ಸಮಾನ ಎನ್ನಲಾಗಿದ್ದು, ಗೋವಿನ ಹಾಲು ಒಂದು ಸಮತೋಲನ ಆಹಾರವಾಗಿದ್ದು, ನಮ್ಮೆಲ್ಲರ ಆರೋಗ್ಯಕ್ಕೆ ಇದು ಬಹಳ ಪ್ರಮುಖವಾಗಿದ್ದು, ಮಕ್ಕಳಿಗಿಂತೂ ಇದು ಅತಿ ಅವಶ್ಯಕತವಾದ ಪೋಷಕಾಂಶಗಳ ಮೂಲ ಕೂಡಾ ಆಗಿದೆ.
ಹೀಗೆ ಮಾನವರಿಗೆ ಸದಾ ತಂಪನ್ನು ನೀಡುವ ಹಸುವೊಂದು ಈಗ ಎಲ್ಲೆಡೆ ಸುದ್ದಿಯಾಗಿದ್ದು, ಆ ಹಸುವಿನ ಕುರಿತಾದ ಒಂದು ರೋಚಕ ಸಂಗತಿಯು ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಿಷಯ ಏನೆಂದರೆ ಈ ಹಸುವು ಇನ್ನೂ ಕರುವಿಗೆ ಜನ್ಮ ನೀಡಿಲ್ಲ, ಆದರೂ ಇದು ಬೆಳಿಗ್ಗೆ ಐದು ಲೀಟರ್ ಮತ್ತು ಸಂಜೆ ವೇಳೆಯಲ್ಲಿ ಮೂರು ಲೀಟರ್ ಹಾಲನ್ನು ಕೊಡುವ ಮೂಲಕ ಒಂದು ವಿಸ್ಮಯಕ್ಕೆ ಕಾರಣವಾಗಿದೆ. ಇನ್ನೂ ಕರುವಿಗೆ ಜನ್ಮ ನೀಡದೆ ಹಸು ಹಾಲು ನೀಡುತ್ತಿರುವ ವಿಸ್ಮಯವು ಜನರ ಗಮನವನ್ನು ಸೆಳೆದಿರುವುದು ಮಾತ್ರವೇ ಅಲ್ಲದೇ ಜನರಿಗೆ ಇದೊಂದು ಅದ್ಭುತ ಎನಿಸುವಂತೆ ಆಗಿದೆ.
ಹೀಗೆ ಎಲ್ಲರ ಗಮನವನ್ನು ಸೆಳೆದಿರುವ ಈ ಹಸು ಜಾರ್ಖಂಡ್ ಜಿಲ್ಲೆಯ ಲೋಹರ್ ದಾಗ ಜಿಲ್ಲೆಯ ಕುಡು ಬ್ಲಾಕ್ ನ ಸುಂದರು ಎನ್ನುವ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಮೊಹಮ್ಮದ್ ಅಬ್ದುಲ್ ಅಹಾದ್ ಎನ್ನುವವರ ಮನೆಯಲ್ಲಿದ್ದು, ಗ್ರಾಮದ ಜನರ ಕುತೂಹಲಕ್ಕೆ ಕಾರಣವಾಗಿದೆ. ಮೊಹಮ್ಮದ್ ಅವರು ಹೇಳುವಂತೆ ಈ ಹಸು ಅವರದೇ ಮನೆಯ ಹಸುವಿನ ಸಂತಾನವಾಗಿದ್ದು, ಇದು ಮೊದಲ ಬಾರಿಗೆ ಗರ್ಭವನ್ನು ಧರಿಸಿದೆ. ಈ ಹಸು ಗರ್ಭ ಧರಿಸಿ ಆರು ತಿಂಗಳಾಗಿದ್ದು, ಅದು ಕರುವಿಗೆ ಜನ್ಮ ನೀಡಲು ಇನ್ನೂ ನಾಲ್ಕು ತಿಂಗಳ ಕಾಲಾವಕಾಶವಿದೆ. ಅಲ್ಲದೇ ಕುಟುಂಬದಲ್ಲಿ ಎಲ್ಲರೂ ಕೂಡಾ ಮನೆಗೆ ಆಗಮಿಸಲಿರುವ ಕರುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಆದರೆ ಈ ಮಧ್ಯೆ ಹಸುವಿನ ಕೆಚ್ಚಲು ದಪ್ಪವಾಗುವುದನ್ನು ಗಮನಿಸಿದರಂತೆ. ಅನಂತರ ಒಂದು ದಿನ ಅದರಿಂದ ಹಾಲು ಸುರಿಯುವುದನ್ನು ಗಮನಿಸಿ ಆಶ್ಚರ್ಯ ಪಟ್ಟಿದ್ದಾರೆ. ಆಗ ಪಶು ವೈದ್ಯರನ್ನು ಕರೆದು ತೋರಿಸಿದಾಗ ಅವರು ಹಾಲನ್ನು ಕರೆಯುವಂತೆ ಸೂಚನೆ ನೀಡಿದಾಗ, ವೈದ್ಯರ ಸಲಹೆಯಂತೆ ಹಸುವಿನ ಹಾಲು ಕರೆದಿದ್ದಾರೆ. ಆಗ ಬಕೆಟ್ ತಂದು ಹಾಲನ್ನು ಕರೆದಾಗ ಬಂದ ಹಾಲಿನ ಪ್ರಮಾಣವನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಗಿದೆ.
ಅದಾದ ನಂತರ ಹೀಗೆ ಹಸು ಹಾಲನ್ನು ಕೊಡುವ ಪ್ರಕ್ರಿಯೆ ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಎನ್ನಲಾಗಿದೆ.
ಆರು ತಿಂಗಳ ಗರ್ಭಿಣಿ ಹಸುವು ದಿನಕ್ಕೆ ಎಂಟರಿಂದ ಒಂಬತ್ತು ಲೀಟರ್ ಹಾಲು ಕೊಡುವ ವಿಷಯ ಸುತ್ತ ಮುತ್ತಲ ಗ್ರಾಮಗಳ ಜನರಿಗೆ ಕೂಡಾ ತಿಳಿದು ಜನ ಹಸುವನ್ನು ನೋಡಲು ಮೊಹಮ್ಮದ್ ಅವರ ಮನೆಗೆ ಬರುತ್ತಿದ್ದಾರೆ. ಕೆಲವೊಮ್ಮೆ ಹಾರ್ಮೋನ್ ಗಳ ಪರಿಣಾಮದಿಂದ ಈ ರೀತಿ ಆಗುತ್ತದೆ ಎಂದು ಹೇಳಿರುವ ಪಶು ಚಿಕಿತ್ಸಕ ಡಾಕ್ಟರ್ ತನ್ವೀರ್ ಅಖ್ತರ್ ಅವರು ಹೇಳಿದ್ದು, ಹಸು ಈಗ ನೀಡುತ್ತಿರುವ ಹಾಲಿನಿಂದ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.