ವಿಮಾನಿನ ಎಮರ್ಜೆನ್ಸಿ ಬಾಗಿಲು ತೆರೆದು ಹೊರಗಡೆ ಬಂದು ಕುಳಿತ ಮಹಿಳೆ! ಅಂತಾಳೆ – “ಒಳಗಡೆ ತುಂಬಾ ಶಕೆ!” ನೋಡಿ Viral Video

ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಕೆಲವರು ಒಂದು ರೀತಿಯ ವಿಚಿತ್ರ ವ್ಯಕ್ತಿತ್ವವನ್ನು ಉಳ್ಳವರಾಗಿರುತ್ತಾರೆ. ಅವರ ವರ್ತನೆ ಯಾವ ಸಂದರ್ಭದಲ್ಲಿ ಹೇಗೆ ಇರುತ್ತದೆ ಎನ್ನುವುದು ಅರ್ಥವಾಗುವುದೇ ಇಲ್ಲ. ಇನ್ನೂ ಕೆಲವರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಏನಾದರೊಂದು ಮಾಡಿ ವೈರಲ್ ಆಗುವ ಹುಚ್ಚಿನಿಂದ ಕೂಡಾ ಕೆಲವೊಮ್ಮೆ ಕೆಲವು ವಿಚಿತ್ರ ವರ್ತನೆಗಳನ್ನು ತೋರುವ ಮೂಲಕ ಸುದ್ದಿಯಾಗುವುದು ಮಾತ್ರವೇ ಅಲ್ಲದೇ ಹಲವು ಸಲ ಪೋಲಿಸರಿಗೆ ಅತಿಥಿಗಳಾಗಿ, ಕಾನೂ‌ನಿನ ಮೂಲಕ ಶಿಕ್ಷೆಗೆ ಗುರಿಯಾಗುವುದೂ ಉಂಟು. ಇಂತಹ ಸುದ್ದಿಗಳು ಆಗಾಗ ಮಾದ್ಯಮಗಳಲ್ಲಿ ಪ್ರಕಟ ಆದಾಗಾ ಇಂತಹವರು ಇದ್ದಾರೆಯೇ ಎನಿಸದೇ ಇರಲಾರದು.

ಪ್ರಸ್ತುತ ಮಾದ್ಯಮಗಳಲ್ಲಿ ಒಂದು ವೀಡಿಯೋ ಸಹಿತ ಸುದ್ದಿ ಎಲ್ಲೆಡೆ ಕೂಡಾ ಭಾರೀ ಸದ್ದು ಮಾಡಿದೆ. ಈ ಘಟನೆ ಕೂಡಾ ಒಂದು ವಿಚಿತ್ರ ವರ್ತನೆಯನ್ನು ಕುರಿತಾದ ಘಟನೆ ಆಗಿದ್ದು, ಮಹಿಳೆಯೊಬ್ಬರ ಹುಚ್ಚಾಟವೋ ಅಥವಾ ಆಕೆಯ ಸಮಸ್ಯೆ ನಿಜವೋ ಒಟ್ಟಿನಲ್ಲಿ ಆಕೆ ಮಾಡಿದ ಕಾರ್ಯದಿಂದ ಆಕೆ ಒಂದೆಡೆ ಸುದ್ದಿಯಾಗಿರುವುದು ಮಾತ್ರವೇ ಅಲ್ಲದೇ ಆಕೆ ಈಗ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪವನ್ನು ಕೂಡಾ ಎದುರಿಸಬೇಕಾಗಿ ಬಂದಿದೆ. ಹಾಗಾದರೆ ಏನೀ ಘಟನೆ? ಆ‌ ಮಹಿಳೆ ಮಾಡಿದ್ದಾದರೂ ಏನು? ಈ ಘಟನೆ ಎಲ್ಲಿ ನಡೆದಿದ್ದು ಎನ್ನುವುದಾದರೆ ಅದನ್ನು ನಾವು ಕೂಡಾ ತಿಳಿಯೋಣ ಬನ್ನಿ.‌

ಉಕ್ರೇನ್ ನಲ್ಲಿ ನಡೆದ ಘಟನೆಯೊಂದರಲ್ಲಿ ಮಹಿಳೆ ಮಾಡಿದ ಕೆಲಸ ಪ್ರತಿಯೊಬ್ಬರನ್ನು ಕೂಡಾ ಚಕಿತಗೊಳಿಸಿದ್ದು ಮಾತ್ರವಲ್ಲದೇ ಅದು ಅನಿರೀಕ್ಷಿತ ಕೂಡಾ ಆಗಿತ್ತು ಎಂದರೆ ತಪ್ಪಾಗಲಾರದು. ಉಕ್ರೇನ್ ನ ವಿಮಾನ ನಿಲ್ದಾಣದಲ್ಲಿ ವಿಮಾನವು ನಿಂತಿರುವಾಗ ವಿಮಾನದೊಳಗೆ ತನಗೆ ಶೆಕೆ ಆಗುತ್ತಿದೆ ಎಂದು ಎದ್ದು ಬಂದ ಮಹಿಳೆ ವಿಮಾನದ ಎಮೆರ್ಜೆನ್ಸಿ ಎಕ್ಸಿಟ್ ಅಥವಾ ಆಪತ್ಕಾಲದಲ್ಲಿ ತುರ್ತು ನಿರ್ಗಮನಕ್ಕಾಗಿ ಬಳಸುವ ವಿಮಾನದ ಬಾಗಿಲನ್ನು ತೆರೆದು ವಿಮಾನದ ವಿಂಗ್ ಮೇಲೆ ಓಡಾಡಿದ್ದಾಳೆ, ಆಕೆ ವಿಂಗ್ ಮೇಲೆ ಓಡಾಡುವುದು ಅಲ್ಲಿನ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದ್ದು, ಅಲ್ಲಿನ ಜನರು ಕೂಡಾ ಇದನ್ನು ನೋಡಿದ್ದಾರೆ.

ಸ್ಥಳೀಯ ಮಾದ್ಯಮಗಳ ಪ್ರಕಾರ ಉಕ್ರೇನ್ ನ‌ ಕೀವಿ ನಗರದಲ್ಲಿ ವಿಮಾನ ಟರ್ಕಿಯಿಂದ ಬಂದು ಲ್ಯಾಂಡ್ ಆಗಿತ್ತು ಎನ್ನಲಾಗಿದೆ. ಆಗ ಬೋಯಿಂಗ್ 737-86 N ವಿಮಾನದಲ್ಲಿ ಇದ್ದ ಈ ಮಹಿಳೆ ಪ್ರಯಾಣಿಕರೆಲ್ಲಾ ವಿಮಾನ ಇಳಿಯುತ್ತಿರುವಾಗಲೇ ಹಿಂದೆ ಬರುತ್ತಿದ್ದವಳು ತನಗೆ ಶೆಕೆ ಯಾಗುತ್ತಿದೆ ಎಂದು ದೂರುತ್ತಾ, ಆಕೆ ತುರ್ತು ನಿರ್ಗಮನದ ಬಾಗಿಲನ್ನು ತೆರೆದು ವಿಂಗ್ ಮೇಲೆ ಹೊರಗೆ ಬಂದು ಉದ್ದಟತವನ್ನು ಮೆರೆದಿದ್ದು ಇದು ವೀಡಿಯೋಗಳಲ್ಲಿ ರೆಕಾರ್ಡ್ ಆಗಿರುವುದು ಮಾತ್ರವೇ ಅಲ್ಲದೇ ಸೋಶಿಯಲ್ ಮೀಡಿಯಾಗಳಲ್ಲಿ ಕೂಡಾ ಸಾಕಷ್ಟು ವೈರಲ್ ಆಗಿ ಮಹಿಳೆಯ ವರ್ತನೆಯನ್ನು ಅನೇಕರು ಖಂಡಿಸಿದ್ದಾರೆ.

ವಿಡಿಯೋ ನೋಡಿ…

ಸಹ ಪ್ರಯಾಣಿಕರು ಕೂಡಾ ಎಲ್ಲರೂ ಕೂಡಾ ಇಳಿಯುವಾಗ ಆ ಮಹಿಳೆ ಇಂತಹ ವರ್ತನೆ ತೋರಿದ್ದಾರೆ ಎಂದು, ಅಲ್ಲದೇ ಆಕೆಯ ಇಬ್ಬರು ಮಕ್ಕಳು ವಿಮಾನ ಇಳಿದಿದ್ದರು, ಮಹಿಳೆ ಬೇಜವಾಬ್ದಾರಿಯಿಂದ ವಿಂಗ್ ಮೇಲೆ ನಡೆದಾಡುವಾಗ ಆಕೆಯ ಮಕ್ಕಳು ಅವರು ತಮ್ಮ ತಾಯಿ ಎಂದು ಕೂಗಿ ಹೇಳುತ್ತಿದ್ದರೆಂದು ತಿಳಿಸಿದ್ದಾರೆ. ವಿಮಾನ ಸಂಸ್ಥೆಯು ಮಹಿಳೆಯ ಈ ವರ್ತನೆಗೆ ಆಕೆಯ ಹೆಸರನ್ನು ಬ್ಲಾಕ್ ಲಿಸ್ಟ್ ನಲ್ಲಿ ನಮೂದು ಮಾಡಿದೆ. ‌