ಈ 2 ರೂಪಾಯಿ ಸ್ಫಟಿಕ ನಿಮ್ಮ ಬಿಳಿ ಕೂದಲುಗಳನ್ನು ಎಷ್ಟು ಕಪ್ಪು ಮಾಡುತ್ತೆ ಎಂದರೆ ಸ್ನೇಹಿತರಿಗೂ ನಿಮ್ಮನ್ನು ಗುರುತಿಸುವದು ಕಷ್ಟ!
ಆಧುನಿಕ ಜಗತ್ತಿನಲ್ಲಿ ಮನುಷ್ಯನ ಜೀವನ ಶೈಲಿ ನಾಗಾಲೋಟದಲ್ಲಿ ಓಡುತ್ತಿದೆ. ಮನುಷ್ಯ ಹೀಗೆ ಓಡುವಾಗ ತನ್ನ ಆರೋಗ್ಯದ ಕಡೆಗೆ ಸಂಪೂರ್ಣವಾಗಿ ನಿರ್ಲಕ್ಷ ಮಾಡುತ್ತಿದ್ದಾನೆ. ಜೊತೆಗೆ ದೇಹಕ್ಕೆ ತೆಗೆದುಕೊಳ್ಳುವ ಆಹಾರ ಸಹಿತ ಆರೋಗ್ಯಕ್ಕೆ ಅನೇಕ ರೀತಿಯ ಅಪಾಯವನ್ನುಂಟು ಮಾಡುವ ಕೆಮಿಕಲ್ಸ್ ಗಳಿಂದ ಕೂಡಿದೆ. ಇಂತಹ ಆಹಾರ ಮನುಷ್ಯನ ದೇಹದ ಮೇಲೆ ಪ್ರತಿಕೂಲವಾದ ಪರಿಣಾಮವನ್ನು ಬೀರಿ ಮನುಷ್ಯನಿಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತಿವೆ.
ಇದೆಲ್ಲದರ ಪರಿಣಾಮ ನಮ್ಮ ತ್ವಚೆ ಮತ್ತು ಕೂದಲುಗಳ ಮೇಲೆ ಸಹಿತ ಆಗುತ್ತದೆ. ತ್ವಚೆಯು ಒಣಗುವುದು ಅಥವಾ ತನ್ನ ಕಾಂತಿಯನ್ನು ಕಳೆದುಕೊಳ್ಳುವುದು ಮತ್ತು ತಲೆಗೂದಲು ಬೇಗನೆ ಬಿಳಿಯ ಬಣ್ಣಕ್ಕೆ ತಿರುಗುವುದು ಇವೆಲ್ಲ ಸಮಸ್ಯೆಗಳು ಎದುರಾಗುವವು. ಸದ್ಯದ ಸಮಯದಲ್ಲಿ ಕೂದಲುಗಳು ಬಿಳಿಯ ಬಣ್ಣಕ್ಕೆ ತಿರುಗುವುದು ಸಾಮಾನ್ಯವಾದ ವಿಷಯವಾಗಿದೆ. ಆದರೆ ಕೂದಲುಗಳು ಬೇಗನೆ ತಮ್ಮ ನೈಸರ್ಗಿಕವಾದ ಕಪ್ಪು ಬಣ್ಣನ್ನು ಕಳೆದುಕೊಳ್ಳುವುದರಿಂದ ವ್ಯಕ್ತಿ ತುಂಬಾ ವಯಸ್ಕರ ನಂತೆ ಅಥವಾ ಮುದುಕನಂತೆ ಕಾಣುತ್ತಾನೆ.
ನಾವು ನಮ್ಮ ಕೆಲಸ ನಮ್ಮ ಮನೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವಾಗ ನಮ್ಮ ಶರೀರದ ಕಡೆಗೆ ಅಥವಾ ದೇಹದ ಆರೋಗ್ಯದ ಕಡೆಗೆ ಹೆಚ್ಚಾಗಿ ಗಮನವನ್ನು ಕೊಡುವುದಿಲ್ಲ. ಇದರಿಂದ ಜೀವನದಲ್ಲಿ ನಿರುತ್ಸಾಹವು ಉಂಟಾಗಬಹುದು. ಅನೇಕರು ತಮ್ಮ ಏರುತ್ತಿರುವ ವಯಸ್ಸನ್ನು ಇಳಿದಂತೆ ಕಾಣಿಸಲು ಇಲ್ಲ ಚಿಕ್ಕವರಂತೆ ಕಾಣಲು ತುಂಬಾ ಪ್ರಯತ್ನ ಪಡುತ್ತಿರುತ್ತಾರೆ. ಇದರಲ್ಲಿ ಮುಖ್ಯವಾಗಿ ನೆರೆದ ತಲೆಕೂದಲಿನ ಸಮಸ್ಯೆಗೆ ಪರಿಹಾರವನ್ನು ಹುಡುಕುವ ಸಲುವಾಗಿ ಪ್ರಯತ್ನ ಪಟ್ಟೆ ಪಡುತ್ತಿರುತ್ತಾರೆ. ಇದಕ್ಕಾಗಿ ಕೆಲವರು ಹೇರ್ ಡೈ ಮಾಡಿಕೊಂಡರೆ ಇನ್ನು ಕೆಲವರು ತಲೆಗೆ ಮೆಹಂದಿ ಹಚ್ಚಿಕೊಳ್ಳುತ್ತಾರೆ, ಮತ್ತೊಬ್ಬರು ವಿವಿಧ ರೀತಿಯ ಎಣ್ಣೆಗಳನ್ನು ಉಪಯೋಗಿಸುತ್ತಾರೆ. ಆದರೆ ನಾವು ಹೇಳುವ ಪ್ರಕಾರ ಇದನ್ನೆಲ್ಲ ಬಿಟ್ಟುಬಿಡಿ. ಅತಿ ಕಡಿಮೆ ಖರ್ಚಿನಲ್ಲಿ ಕಡಿಮೆ ಸಮಯದಲ್ಲಿ ವರ್ಕೌಟ್ ಆಗುವ ಈ ಉಪಾಯವನ್ನು ಒಮ್ಮೆ ಮಾಡಿ ನೋಡಿ.
ಪಟಿಕ ಎಲ್ಲರಿಗೂ ಗೊತ್ತು. ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದರಲ್ಲಿ ಮೆಗ್ನೇಶಿಯಂ ಸಲ್ಫೇಟ್ ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಮ್ಯಾಗ್ನಿಷಿಯಂ ಸಲ್ಫೇಟ್ ನಮ್ಮ ಶರೀರದಲ್ಲಿರುವ 300 ಕ್ಕೂ ಹೆಚ್ಚು ಎಂಜಾಯಲ್ ಗಳನ್ನು ನಿಯಂತ್ರಿಸುತ್ತದೆ. ಇದನ್ನು ಉಪಯೋಗ ಮಾಡುವ ಸಲುವಾಗಿ ಪಟಿಕದ ಜೊತೆಗೆ ಗುಲಾಬಿ ನೀರಿನ ಅವಶ್ಯಕತೆ ಇದೆ. ಇವೆರಡನ್ನು ಕೂಡಿಸಿ ಯಾವ ರೀತಿಯಾಗಿ ಉಪಯೋಗ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಮೊದಲು ಪಟಿಕದ ಪೌಡರ್ ತಯಾರಿಸಿಕೊಳ್ಳಿ. ಆನಂತರ ಅದನ್ನು ಗುಲಾಬಿ ನೀರಲ್ಲಿ ಕೂಡಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಹೀಗೆ ತಯಾರಾದ ಪೇಸ್ಟನ್ನು ನೆರೆದ ಕೂದಲುಗಳಿಗೆ ಹಚ್ಚಿರಿ. ಈ ಪ್ರಕಾರ ವಾರದಲ್ಲಿ 2 ರಿಂದ 3 ಸಲ ಮಾಡಿದರೆ ನಿಮ್ಮ ಬಿಳಿಯ ಕೂದಲುಗಳು ನಿಧಾನವಾಗಿ ನೈಸರ್ಗಿಕವಾದ ಕಪ್ಪುಬಣ್ಣಕ್ಕೆ ತಿರುಗಲು ಪ್ರಾರಂಭವಾಗುತ್ತವೆ.
ಮಿತ್ರರೇ ಈ ಮೇಲಿನ ಮಾಹಿತಿಯನ್ನು ಮೀಡಿಯಾಗಳ ಮತ್ತು ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಿ ಬರೆಯಲಾಗಿದೆ. ಆದ್ದರಿಂದ ಯಾವುದೇ ರೀತಿಯ ಇಂಥ ಪ್ರಯೋಗಗಳನ್ನು ಮಾಡುವ ಮೊದಲು ಒಂದು ಸಲ ಸಂಬಂಧಪಟ್ಟ ತಜ್ಞರು ಅಥವಾ ಡಾಕ್ಟರ್ ಸಲಹೆಯನ್ನು ಪಡೆದುಕೊಳ್ಳುವುದು ತುಂಬಾ ಉತ್ತಮವೆಂದು ಹೇಳಲು ಇಚ್ಚಿಸುತ್ತೇವೆ.