ಸಿಮ್ ಕಾರ್ಡ್ ಮೇಲೆ ಸೋನು ಸೂದ್ ಫೋಟೋ ಪೇಂಟ್ ಮಾಡಿದ ಅಭಿಮಾನಿ; ಫನ್ನಿ ಪ್ರತಿಕ್ರಿಯೆ ಕೊಟ್ಟ ಸೋನು ಸೂದ್!
ಚಲನಚಿತ್ರಗಳಲ್ಲಿ ವಿಲನ್ ಪಾತ್ರಗಳನ್ನು ಮಾಡಿ ರಂಜಿಸಿದ ನಟ ಸೋನು ಸೂದ್ ಕೊರೋನಾದ ಕಾಲದಲ್ಲಿ ಜನಮೆಚ್ಚಿದ ನಿಜವಾದ ನಾಯಕರಾದರು. ಸೋನು ಸೂದ್ ಅವರು ಕೋರೋನದ ಈ ಸಂಕಟ ಸಮಯದಲ್ಲಿ ಎಲ್ಲ ಸರಕಾರ ಸಂಚಾರದ ಎಲ್ಲ ವ್ಯವಸ್ಥೆ ಸ್ತಬ್ಧ ಮಾಡಿದಾಗ ಜನರಿಗೆ ಅವರ ಮನೆ ತಲುಪಿಸುವ ಮಹತ್ವದ ಕೆಲಸ ಮಾಡಿದರು. ಸೋನು ಸೂದ್ ಅವರ ಟೀಮ್ ಇಷ್ಟಕ್ಕೆ ನಿಲ್ಲದೆ ಸಹಾಯ ಕೋರಿ ಬಂದ ಜನರ ಇನ್ನಿತರ ಅವಶ್ಯಕತೆ ಗಳನ್ನು ಸಹಿತ ಪೂರೈಸಿದರು. ಅವರ ಈ ಸಮಾಜಸೇವೆ ಎಲ್ಲರಿಗೂ ತುಂಬಾ ಇಷ್ಟವಾಯಿತು. ನೆಟ್ಟಿಗರಂತೂ ಸೋಶಿಯಲ್ ಮೀಡಿಯಾಗಳಲ್ಲಿ ಅವರಿಗೆ ಹೊಗಳಿದ್ದೇ ಹೊಗಳಿದ್ದು.
@SonuSood sir aapki photo maine sim card pe paint ki hai
— somin 🇮🇳 (@sominz_artworkz) September 8, 2020
Aapko kaisi lagi ?
Ur doing great work sir
Proud of u sir 😊😊#SonuSood pic.twitter.com/J8Mlwc24yw
ಸೋನು ಸೂದ್ ಅವರ ಈ ಕೆಲಸದಿಂದ ಪ್ರಭಾವಿತರಾಗಿ ಅವರ ಫಾಲೋಅರ್ಸ್ ಗಳು ಸೋನು ಅವರಿಗೆ ಅನೇಕ ರೀತಿಯಲ್ಲಿ ತಮ್ಮ ಅಭಿಮಾನ, ಕೃತಜ್ಞತೆ ತಮ್ಮದೇ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಟ್ವಿಟರ್ ನಲ್ಲಿ ಹೀಗೆ ಒಬ್ಬ ಅಭಿಮಾನಿಯು ಹಳೆಯ ಸಿಮ್ ಕಾರ್ಡ್ ಮೇಲೆ ಅವರ ಭಾವಚಿತ್ರ ಪೇಂಟಿಂಗ್ ಮಾಡಿದ್ದಾನೆ. ತಾನು ತೆಗೆದ ಈ ಸಿಮ್ ಕಾರ್ಡ್ ಮೇಲಿನ ಫೋಟೋವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದಾಗ ಅದು ತುಂಬಾ ವೈರಲ್ ಆಗಿದೆ. ಅಭಿಮಾನಿಯು ಫೋಟೋ ಶೇರ್ ಮಾಡುವುದರ ಜೊತೆಗೆ ಸೋನು ಸರ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದ್ದಾನೆ. ಸೋನು ಸರ್ ಅವರೇ, ನಾನು ನಿಮ್ಮ ಫೋಟೋವನ್ನು ಪೇಂಟ್ ಮಾಡಿದ್ದೇನೆ ನಿಮಗೆ ಹೇಗನಿಸಿತು ಹೇಳಿ, ಮತ್ತು ನೀವು ತುಂಬಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ ಎಂದು ಹೇಳಿದ್ದಾನೆ. ಅದನ್ನು ನೋಡಿ ಸೋನು ಸೂದ್ ಅವರು ತಕ್ಷಣ “10G network” ಎಂದು ಕಾಮೆಂಟ್ ಮಾಡಿದ್ದಾರೆ.
10G network 😜 https://t.co/dEX1WZfsHQ
— sonu sood (@SonuSood) September 8, 2020
ಸೋನು ಸೂದ್ ಅವರು ಕಳೆದ ಮೂರ್ನಾಲ್ಕು ತಿಂಗಳಲ್ಲಿ ಅನೇಕ ಜನಪರ, ಸಮಾಜಹಿತ, ಸಹಾಯೋಚಿತ ಕೆಲಸಗಳನ್ನು ಲೆಕ್ಕವಿಲ್ಲದಷ್ಟು ಮಾಡಿದ್ದಾರೆ. ವಲಸಿಗರನ್ನು ಮನೆ ತಲುಪಿಸುವದರ ಜೊತೆಗೆ ಹಳ್ಳಿಗೆ ರಸ್ತೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬಡ ಕುಟುಂಬ ಒಂದಕ್ಕೆ ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಜನರ ಜೊತೆಗೆ ಪೊಲೀಸ್ ರಿಗೂ ಕೊರೊನದಿಂದ ಬಚಾವ್ ಮಾಡಿಕೊಳ್ಳುವ ವಿವಿಧ ಸಂರಕ್ಷಣಾ ಪರಿಕರಗಳ ವ್ಯವಸ್ಥೆಯನ್ನು ಮಾಡಿದ್ದಾರೆ.
ಹೀಗೆ ಸೋನು ಅವರು ಚಲನಚಿತ್ರಗಳಲ್ಲಿ ವಿಲೆನ್ ಆದರೂ ನಿಜ ಜೀವನದಲ್ಲಿ ಎಲ್ಲರಿಗೂ ನಾಯಕನಾಗಿ ಕಂಡು ಬಂದರು.