ಅಬ್ಬಾ! ಈ ನಟನ ಬಳಿ ಇವೆ ಬರೋಬ್ಬರಿ 369 ಕಾರುಗಳು; ಒಮ್ಮೆ ಬಳಸಿದ ಕಾರಿನ ನಂಬರ್ ಮತ್ತೆ ಬರೋದು ಮುಂದಿನ ವರ್ಷಾನೆ!

ಮಮ್ಮುಟ್ಟಿ ದಕ್ಷಿಣ ಭಾರತದ ಸಿನಿ ಚಿತ್ರರಂಗದಲ್ಲಿಯ ಕೆಲವೇ ದೊಡ್ಡ ಹೆಸರುಗಳಲ್ಲಿ ಇವರು ಒಬ್ಬರು. ಮಲಯಾಳಂ ಚಿತ್ರರಂಗದಲ್ಲಿ ಜನಪ್ರಿಯ ನಟರಾದ ಇವರು ಈಗಷ್ಟೇ 69 ನೇಯ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಧ್ಯಮ ವರ್ಗದ ರೈತ ಕುಟುಂಬದಿಂದ ಮೇಲೆ ಬಂದವರಾದ ಇವರು ತುಂಬಾ ಸಂಘರ್ಷದಿಂದ ಈ ಸ್ಥಾನಕ್ಕೆ ಮುಟ್ಟಿದ್ದಾರೆ. ಸುಮಾರು ಮೂರುವರೆ ದಶಕಗಳ ಚಿತ್ರರಂಗದಲ್ಲಿಯ ಕಾಲಖಂಡದಲ್ಲಿ ಒಟ್ಟು 300 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಮ್ ಬಳಿಯ ಚೆಂಪುವಿನಲ್ಲಿ ಹುಟ್ಟಿ ಬೆಳೆದವರು. ಅನೇಕ ಸಾಮಾಜ ಹಿತ ಕಾರ್ಯಗಳೊಂದಿಗೆ ಜೋಡಿ ಸಿಕೊಂಡಿರುವ ಮಮ್ಮುಟ್ಟಿಯವರಿಗೆ ಕಾರು ಸಂಗ್ರಹಗಳ ವಿಶೇಷ ಹುಚ್ಚು ಇದೆ. ಸದ್ಯಕ್ಕೆ ಇವರ ಹತ್ತಿರ ಒಂದಕ್ಕಿಂತ ಒಂದು ಸುಂದರವಾದ ನೂರಾರು ಕಾರುಗಳ ಕಲೆಕ್ಷನ್ ಗಳಿವೆ.

ಈ ಲೇಖನದಲ್ಲಿ ಮಮ್ಮುಟ್ಟಿ ಅವರ ಹತ್ತಿರವಿರುವ ಕಾರುಗಳ ಸಂಗ್ರಹಗಳ ಬಗ್ಗೆ ತಿಳಿಯುವ. ಇವರು ದಿನಕ್ಕೊಂದು ಕಾರನ್ನು ಉಪಯೋಗಿಸುತ್ತಾರೆ. ಈ ಮೇರು ನಟನ ಗ್ಯಾರೇಜಿನಲ್ಲಿ ಒಟ್ಟು 369 ಕಾರುಗಳಿವೆ. ಇಷ್ಟೊಂದು ಕಾರುಗಳು ಇರುವ ಕಾರಣದಿಂದಾಗಿ ಮಮ್ಮುಟ್ಟಿಯವರು ತಮ್ಮದೆ ಆದ ಸ್ವತಂತ್ರ ಒಂದು ಗ್ಯಾರೇಜ್ ನ್ನೇ ತೆಗೆದಿದ್ದಾರೆ.

ಮಮ್ಮುಟ್ಟಿ ಅವರು ಮಲಯಾಳಂ ಸಹಿತ ದಕ್ಷಿಣ ಭಾರತದ ಭಾಷೆಗಳಾದ ಕನ್ನಡ ತಮಿಳು ತೆಲುಗು ಸೇರಿ ಹಿಂದಿ ಹಾಗೂ ಇಂಗ್ಲಿಷ್ ಗಳಲ್ಲಿಯೂ ನಟಿಸಿದ್ದಾರೆ. ಇವರ ಪೂರ್ಣ ಹೆಸರು ಮೊಹಮ್ಮದ್ ಕುಟ್ಟಿ ಇಸ್ಮಾಯಿಲ್ ಪಾನಿ ಪರಂಬಿಲ್ ಇದೆ. ಆದರೆ ಸಿನಿರಂಗದಲ್ಲಿ ಮಮ್ಮುಟ್ಟಿ ಹೆಸರಿನಿಂದಲೇ ಪ್ರಸಿದ್ಧವಾಗಿದ್ದಾರೆ.

ನಮ್ಮ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ Audi ಕಾರನ್ನು ಮೊಟ್ಟಮೊದಲ ಬಾರಿಗೆ ಖರೀದಿಸಿದ ಹೆಗ್ಗಳಿಕೆ ಮಮ್ಮುಟ್ಟಿ ಅವರಿಗೆ ಸೇರುತ್ತದೆ. ಅವರ ಮೊದಲ ಕಾರು ಮಾರುತಿಯಾಗಿತ್ತು.

ಅವರ ಕಲೆಕ್ಷನ್ ಗಳಲ್ಲಿ Ferrari Mercedes ಮತ್ತು Audi, Porsche, Mini Cooper S, F10 BMW 530d ಹಾಗೂ 525d, E46 BMW M3, Volkswagen Passat X2, Mitsubishi Pajero Sport, Toyota, Toyota ಲ್ಯಾಂಡ್ ಕ್ರೂಸರ್ LC 200 ಹೀಗೆ ಅನೇಕ SUV ಕಾರುಗಳಿವೆ. ಮಮ್ಮುಟ್ಟಿಯವರ ಕಡೆಗೆ Eicher ದ ಕಸ್ಟಮೈಸ್ಡ್ ಕ್ಯಾರವಾನ್ ಸಹಿತ ಉಪಲಬ್ಧವಿದೆ.

ಅವರ ಹತ್ತಿರ Mini Cooper S, F10 BMW 530d ಹಾಗೂ 525d, E46 BMW M3, Volkswagen Passat X2 ಈ ಕಾರ್ಯಗಳು ಸಹಿತ ಹೊಂದಿದ್ದಾರೆ.

ಮಮ್ಮುಟ್ಟಿ ಅವರ ಗ್ಯಾರೇಜಿನಲ್ಲಿ ಹೊಸ ಅತಿಥಿ Jaguar XJ-L Caviar ದಾಖಲಾಗಿದೆ. ಈ ಕಾರು ಅವರಿಗೆ ತುಂಬಾ ಇಷ್ಟವಾದ ಕಾರಣ ಈ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾಡೆಲ್ಗಳನ್ನು ಖರೀದಿಸಿದ್ದಾರೆ. ವಿಶೇಷವೆಂದರೆ ಕಾರಿನ ನಂಬರ್ (KL 7BT 369) ಹೀಗಿದೆ. ಅವರ ಹತ್ತಿರವಿರುವ ಒಟ್ಟು ಕಾರುಗಳ ಕಲೆಕ್ಷನ್ ಸಂಖ್ಯೆ 369 ಇರುವುದರಿಂದಲೇ ಈ ಕಾರಿನ ನಂಬರ್ 369 ಇಡಲಾಗಿದೆ.