OMG! ಸಮುದ್ರ ದಂಡೆಗೆ ಕಾಣಿಸಿತು ವಿಚಿತ್ರ ವಸ್ತು; ಗೂಗಲ್ ಮಾಡಿದಾಗ ಗೊತ್ತಾಯಿತು ಶಾ’ಕಿಂಗ್ ಮಾಹಿತಿ! ನೋಡಿ ಈ Video

ಬ್ರಿಟಿಷ್ ಸಮುದ್ರ ತೀರದಲ್ಲಿ ಅನಿರೀಕ್ಷಿತವಾಗಿ ವಿಚಿತ್ರ ಜೀವಿಗಳು ಕಾಣಿಸಿಕೊಂಡಿವೆ. 47 ವರ್ಷ ವಯಸ್ಸಿನ ಮಾರ್ಟಿನ್ ಗ್ರೀನ್ ಎನ್ನುವ ವ್ಯಕ್ತಿ ತಮ್ಮ ಕುಟುಂಬದೊಡನೆ ರಜೆಯನ್ನು ಸವಿಯುತ್ತಾ ಉತ್ತರ ವೇಲ್ಸ್ ನ ಕೆರ್ನಾರ್ ಫಾನ್ ತೀರದಲ್ಲಿ ಇದ್ದ ಸಮಯವದು. ಹಾಗೆ ಸಮುದ್ರ ತೀರದಲ್ಲಿ ಸಂತಸದ ಕ್ಷಣಗಳನ್ನು ಕಳೆಯುವಾಗ ಅವರ ಕಣ್ಣಿಗೆ ಒಂದು ಚಿತ್ರ ವಿಚಿತ್ರ ಎನಿಸುವ ವಸ್ತು ಕಂಡು ಬಂದಿದೆ. ಆಗ ಅವರು ಮತ್ತು ಅವರ ಕುಟುಂಬ ಸದಸ್ಯರು ಅದನ್ನು ನೋಡಿ ಬಹುಶಃ ಅದಾವುದೋ ವಿಚಿತ್ರ ವಾಗಿ ಕಾಣುವ ವಸ್ತುವಿನ ಒಂದು ತುಂಡು ಇರಬಹುದು ಎಂದು ಅಂದು ಕೊಂಡಿದ್ದಾರೆ. ಆದರೆ ಅವರು ಹತ್ತಿರಕ್ಕೆ ಹೋಗಿ ಅದನ್ನು ಸರಿಯಾಗಿ ಗಮನಿಸಿದಾಗ ಅವರಿಗೆ ಅಲ್ಲಿ ಕಂಡಿದ್ದು ನೋಡಿ ಅವರೆಲ್ಲರನ್ನೂ ಕೂಡಾ ಬೆರಗಾಗುವಂತೆ ಮಾಡಿತ್ತು.

ಸಾಗರ ತೀರದಲ್ಲಿ ಬಿದ್ದಿದ್ದ ಆ ವಿಚಿತ್ರ ವಸ್ತು ಡ್ರಿಫ್ಟ್ ವುಡ್ ನ ಒಂದು ತುಂಡಾಗಿತ್ತು. ಅದು ಸಾವಿರಾರು ಸಂಖ್ಯೆಯ ಸಮುದ್ರ ಜೀವಿಗಳಿಂದ ಸುತ್ತುವರೆದಿತ್ತು ಕೂಡಾ. ಅನಂತರ ಅವರು ಫೇಸ್ ಬುಕ್ ನಲ್ಲಿ ಭಯಾನಕ ಎನಿಸುವ ಆ ಸಮುದ್ರ ಜೀವಿಗಳನ್ನು ಅವು ಅಂಟಿಕೊಂಡಿದ್ದ ವಸ್ತುವಿನಿಂದ ಬಿಡಿಸುತ್ತಿರುವ ವೀಡಿಯೋ ನೋಡಿ ಜನರು ಆಶ್ಚರ್ಯ ಚಕಿತರಾಗಿದ್ದರು. ಮಿಸ್ಟರ್ ಗ್ರೀನ್ ಮಾದ್ಯಮಗಳ ಜೊತೆ ಮಾತನಾಡುತ್ತಾ ನನ್ನ ಪತ್ನಿ ಇದನ್ನು ಮೊದಲು ನೋಡಿದಳು. ನಾವೆಲ್ಲರೂ ಆ ವೇಳೆಗೆ ಬೀಚ್ ನಿಂದ ಹೊರ ಬಂದಿದ್ದೆವು. ಆಗ ಆಕೆ ಫೋನ್ ಕರೆ ಮಾಡಿ ಎಲ್ಲರನ್ನೂ ವಾಪಸ್ಸು ಬರುವಂತೆ ಹೇಳಿದಳು.

ನಾವೆಲ್ಲಾ ಮರಳಿ ಬಂದಾಗ ಆಕೆ ಆ ವಸ್ತುವನ್ನು ನಮಗೆ ತೋರಿಸಿದಳು. ಮೊದಲು ನಾವು ಇದು ಯಾವುದೋ ಅನ್ಯಗ್ರಹದಿಂದ ಬಂದ ವಸ್ತು ಇರಬೇಕು ಎಂದುಕೊಂಡೆವು. ಅನಂತರ ಗೂಗಲ್ ನಲ್ಲಿ ಗ್ರೀನ್ ಮತ್ತು ಅವರ ಮಗ ಇಬ್ಬರೂ ಸಮುದ್ರ ಜೀವಿಗಳ ಬಗ್ಗೆ ಸರ್ಚ್ ಮಾಡಿದರೆ ಅವರಿಗೆ ಇವು ಗೊಸೆನೆಕ್ ಬರೆನ್ ಕಲ್ಸ್ ಎಂಬುದಾಗಿ, ಅವು ಪೋರ್ಚುಗಲ್ ಮತ್ತು ಸ್ಪೈನ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವು ಬಹಳ ದುರ್ಲಭವಾದ ಸಮುದ್ರ ಜೀವಿಗಳು ಎಂಬ ಮಾಹಿತಿ ಅವರಿಗೆ ಸಿಕ್ಕಿದೆ. ಅಲ್ಲದೇ ಪ್ರತಿಯೊಂದು 25 ಪೌಂಡ್ ನ ಜೀವಿಯು ಬೆಲೆ ಎರಡು ಸಾವಿರ ರೂಪಾಯಿ ಎಂಬುದಾಗಿ ಕೂಡಾ‌ ಅವರಿಗೆ ಮಾಹಿತಿ ಗೂಗಲ್ ನಲ್ಲಿ ದೊರಕಿದೆ.

ವಿಡಿಯೋ ನೋಡಿ…

ಆಗ ಅವರಿಗೆ ತಮ್ಮ ಕಣ್ಣಿಗೆ ಕಂಡಿರುವುದು ದುಬಾರಿ ಬೆಲೆ ಬಾಳುವ ಸಮುದ್ರ ಜೀವಿಗಳ ಜಾತಿಗೆ ಸೇರಿದ ಜೀವಿಗಳು ಎಂದು ತಿಳಿದು ಬಂದಿದೆ. ಅದು ಮಾತ್ರವೇ ಅಲ್ಲದೇ ಅವರಿಗೆ ಸಿಕ್ಕ ಆ ಜೀವಿಗಳ ತೂಕ ಒಂದಲ್ಲಾ ಎರಡಲ್ಲಾ ಬರೋಬ್ಬರಿ 50,000 ಪೌಂಡ್ ಇದ್ದು ಅದರ ಬೆಲೆ ಸರಿಸುಮಾರು 48 ಲಕ್ಷ ರೂಪಾಯಿಗಳಾಗಲಿವೆ ಎಂದು ಅಂದಾಜು ಮಾಡಿದ್ದಾರೆ. ಗ್ರೀನ್ ಅವರು ತಾವು ಈ ವಿಚಿತ್ರ ಜೀವಿಗಳನ್ನು ನೋಡಿದ ಜಾಗದ ನಿಖರ ಮಾಹಿತಿಯನ್ನು ಮಾತ್ರ ಯಾರಿಗೂ ನೀಡಿಲ್ಲ ಎನ್ನಲಾಗಿದೆ. ಕಾರಣ ಎಲ್ಲರಿಗೂ ತಿಳಿದರೆ ಅಲ್ಲಿಗೆ ಹೋಗಿ ಆ ಜೀವಿಗಳನ್ನು ಏನಾದರೂ ಮಾಡಿದರೆ ಎನ್ನುವ ಆತಂಕ ಅವರಲ್ಲಿ ಇದೆ ಎಂದು ಅವರು ಹೇಳಿದ್ದಾರೆ.