21 ಮೇ ಭಾರತದಲ್ಲಿ ‘ಕೊರೊನಾ’ ಸರ್ವನಾಶ ಸಂಶೋಧಕರ ಮಹತ್ವದ ದಾವೆ.

ದೆಹಲಿ: 21 ಮೇ ವರೆಗೆ ಭಾರತದಲ್ಲಿ ಕೊರೊನಾ ನಾಶವಾಗುವದು ಎಂಬ ಹೇಳಿಕೆ ಅಥವಾ ದಾವೆ “ಸಿಂಗಾಪುರ ಯುನಿವರ್ಸಿಟಿ ಆಫ್ ಟೆಕ್ನಾಲಾಜಿ ಡಿಜಾಯಿನ್ ಮಾಡಿದೆ.ಈ ಹೇಳಿಕೆಯಿಂದ ಭಾರತೀಯರಿಗೆ ಸ್ವಲ್ಪ ಸಮಾಧಾನ ಸಿಕ್ಕಂತಾಗಿದೆ.

ಕೊರೊನಾದ ಅಪಾಯ ಕಡಿಮೆ ಮಾಡಲು ಸರಕಾರ ಅನೇಕ ಮಾರ್ಗೋಪಾಯಗಳಿಂದ ಒಂದೇ ಸಮನೆ ಹೆಣಗಾಡುತ್ತಿರುವದರಿಂದಲೇ ಕೊರೊನಾ ರೋಗಿಗಳು ದುಪ್ಪಟ್ಟು ಆಗುವ ವೇಗವೂ ಸಹಿತ ಕಡಿಮೆಯಾಗಿದೆ.

ಸಿಂಗಾಪುರ ಯುನಿವರ್ಸಿಟಿ ಆಫ್ ಟೆಕ್ನಾಲಾಜಿ ಡಿಜಾಯಿನ್ ನ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಅವರ ಸಹಾಯದಿಂದ ಕೊರೊನಾ ರೋಗಿಗಳ ಅಂಕಿಸಂಖ್ಯೆಗಳ ಬಗ್ಗೆ ಸಂಶೋಧಕರು ವಿಶ್ಲೇಷಿಸಿದ್ದಾರೆ.ಈ ಅಂಕಿ ಅಂಶಗಳ ಪ್ರಕಾರ 21 ಮೇ ವರೆಗೆ ಭಾರತದಲ್ಲಿ ಕೊರೊನಾ ನಾಶವಾಗುವದು,ಜೊತೆಗೆ ಜಗತ್ತಿನಲ್ಲೂ ಇದರ ಸೋಂಕು ಕಡಿಮೆಯಾಗುತ್ತಾ ಹೋಗುವದು.

ಹಾಗೆಯೇ ಲಾಕ್ ಡಾವುನ್ ಮಂತ್ರ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರಿಂದ ಇದರ ಹೆಚ್ಚುವರಿ ಪ್ರಸಾರಕ್ಕೆ ತಡೆಯುಂಟಾಗಿದೆ.