ಈ ಬಾರಿಯ IPL 2020 ಯಾರು ಗೆಲ್ಲುವರು? ಬೆಟಿಂಗ್ ಕಂಪನಿಗಳ ಫೇವರಿಟ್ ‘ಈ’ ಟೀಮ್! ನಿಮ್ಮ ಟೀಮ್ ಯಾವ ಸ್ಥಾನದಲ್ಲಿ?

ಐಪಿಲ್ ಸಮರಕ್ಕೆ ರಣಾಂಗಣ ಸಜ್ಜಾಗಿದೆ. ಐಪಿಲ್ ದ ಈ 13 ನೆ ಪರ್ವ ತನ್ನ ಉತ್ತುಂಗದ ಶಿಖರದ ಮೇಲಿದೆ ಎಂದರೆ ತಪ್ಪಾಗಲಾರದು. ಕಾರಣ ಅನೇಕ ದಿನಗಳಿಂದ ಯಾವುದೇ ಮಹತ್ವದ ಆಟಗಳು ನಡೆದಿಲ್ಲ. ಅದರಲ್ಲಿ ಕ್ರಿಕೆಟ್ ಮತ್ತದರಲ್ಲಿ ಐಪಿಲ್ ಹಣಾಹಣಿ ಎಂದರೆ ಕೇಳಬೇಕೆ. ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. IPL ದ ಸಮಯ ಸಾರಿಣಿಯು ಸಹಿತ ಜಾಹೀರಾಗಿದೆ. ಮೊದಲ ಪಂದ್ಯ ಮುಂಬಯಿ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಈ ಎರಡರ ಮಧ್ಯದಲ್ಲಿ ನಡೆಯಲಿದೆ. ಈಗಾಗಲೇ ನಿಮಗೆಲ್ಲ ಗೊತ್ತಿದ್ದಂತೆ ಕೊರೊನ ಕಾರಣದಿಂದ ಪ್ರಸಕ್ತ ವರ್ಷದ IPL ಪಂದ್ಯಗಳು ದೇಶ ಬಿಟ್ಟು ಹೊರಗೆ ಆಡಿಸಲಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಎಲ್ಲ ತಯಾರಿಯೂ ಆಗಿದೆ.

ಇಲ್ಲಿ ‘ಈ ಸಲ ಕಪ್ ನಮ್ದೇ’ ಎನ್ನುವ ನಮ್ಮಂಥ ಅಭಿಮಾನಿ ಬಳಗದವರಿಗೆ ನಿಜಕ್ಕೂ ಒಂದು ಸಿಹಿ ಸುದ್ದಿ ಇದೆ. ಈ 2020 ರ IPL ನಲ್ಲಿ RCB ಗೆಲ್ಲುವ ವಿಶ್ವಾಸ ಅನೇಕ ಬೆಟ್ಟಿಂಗ್ ಕಂಪೆನಿಗಳು ವ್ಯಕ್ತ ಮಾಡಿದ್ದಾರೆ.

ಭಾರತದಲ್ಲಿ ಬೆಟ್ಟಿಂಗ್ ಆಡುವದು ನಿಷೇಧವಿದೆ. ಬೆಟ್ಟಿಂಗ್ ಗೆ ಮಾನ್ಯತೆ ಇರುವ ಯುಎಇ ಯಲ್ಲಿ ಆಗುತ್ತಿರುವ ಈ ಸ್ಪರ್ಧೆಗಳಲ್ಲಿ ಈಗಾಗಲೇ ಮಿಲಿಯನ್ ಡಾಲರ್ ಗಳ ಬಾಜಿ ಕಟ್ಟಲಾಗಿದೆ ಎಂದು ಇನ್ ಸೈಡ್ ಪೋಸ್ಟ್ ವರದಿ ಮಾಡಿದೆ.

Bet365, Betway, William Hills, Betfair ಈ ಬೆಟ್ಟಿಂಗ್ ಮಾಡುವ ಕಂಪನಿಗಳ ಪ್ರಕಾರ ಮುಂಬಯಿ ಇಂಡಿಯನ್ಸ್ 2020 ರ IPL ಚಾಂಪಿಯನ್ ಆಗುವ ಬಗ್ಗೆ ಅಂದಾಜಿಸಲಾಗುತ್ತಿದೆ. ಹೀಗಾಗಿ ಈ ತಂಡಕ್ಕೆ ಎಲ್ಲಕ್ಕೂ ಹೆಚ್ಚು 16.9 % ಚಾನ್ಸ್ ಇದೆ. ಈ ಬೆಟ್ಟಿಂಗ್ ಕಂಪನಿಗಳ ಪ್ರಕಾರ ಈಗಾಗಲೇ ನಾಲ್ಕು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮುಂಬಯಿ ಇಂಡಿಯನ್ಸ್ ಮತ್ತೆ ಈ ಸಲವು IPL ಪಟ್ಟ ಗೆದ್ದು ಕಿರೀಟವನ್ನು ಧರಿಸಲಿದೆ ಎಂಬ ಅನುಮಾನ ವ್ಯಕ್ತ ಪಡಿಸಲಾಗಿದೆ.

ಇದಕ್ಕೆ ಇನ್ನು ಒಂದು ಮಹತ್ವದ ಕಾರಣ CSK ತಂಡದಲ್ಲಿ ಸುರೇಶ್ ರೈನಾ ಮತ್ತು ಹರಭಜನ್ ಸಿಂಗ್ ಇಲ್ಲದಿರುವದು. ಹೀಗಾಗಿ ಫೇವರಿಟ್ ತಂಡದ ಪಟ್ಟಿಯಲ್ಲಿ CSK ತಂಡವು ಕೆಳಗಿನ ನಂಬರ್ ಮೇಲೇ ಜಾರಿದೆ. ಮೊದಲು 2 ರ ಮೇಲಿದ್ದ CSK ತಂಡ ಸದ್ಯ ಮೂರರ ಮೇಲೆ ಹೋಗಿದೆ. ಸನ್ ರೈಜರ್ಸ್ ಹೈದ್ರಾಬಾದ್ ತಂಡ ಎರಡನೆಯ ನಂಬರ್ ಮೇಲೆ ಏರಿದೆ.