ತನ್ನಷ್ಟಕ್ಕೆ ತಾನು ಮರದ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿರುವ ಹಾವು; ಚುರುಕು ಮುಂಗುಸಿ ಮಾಡಿದ್ದೇನು? ನೋಡಿ ಈ Viral Video!

ಹಾವು ಮತ್ತು ಮುಂಗುಸಿ ಆ ಜನ್ಮ ಶತೃಗಳು ಎಂಬುದನ್ನು ನಾವೆಲ್ಲರೂ ಕೇಳುತ್ತಲೇ ಬಂದಿವೆ. ಸಿನಿಮಾ, ಧಾರಾವಾಹಿ ಗಳಲ್ಲಿ ಕೂಡಾ ಹಾವನ್ನು ಹಿಡಿಯಲು ಮುಂಗುಸಿಗಳನ್ನು ಬಳಸುವುದು, ಹಾವು ಮುಂಗಿಸಿಯ ಹೋರಾಟದ ದೃಶ್ಯಗಳನ್ನು ನಾವು ನೋಡಿರುತ್ತೇವೆ. ಕೆಲವರು ನಿಜ ಜೀವನದಲ್ಲಿ ಕೂಡಾ ಇಂತಹ ರೋಚಕ ದೃಶ್ಯವನ್ನು ನೋಡಿರಲೂ ಬಹುದು. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಕೂಡಾ ಹಾವು ಮುಂಗಿಸಿಯ ಹೋರಾಟದ ಅನೇಕ ವೀಡಿಯೋಗಳು ಶೇರ್ ಆಗುತ್ತಲೇ ಇರುವುದು ಮಾತ್ರವಲ್ಲದೇ ಅವು ಸಿಕ್ಕಾಪಟ್ಟೆ ವೈರಲ್ ಕೂಡಾ ಆಗುವುದು ನೋಡಿದಾಗ ಹಾವು ಮುಂಗುಸಿಯ ನಡುವಿನ ಹೋರಾಟವನ್ನು ನೋಡಲು ಜನರು ಕೂಡಾ ಎಷ್ಟು ಕಾತರರಾಗಿದ್ದಾರೆ ಎನ್ನುವುದು ತಿಳಿಯುತ್ತದೆ. .

ಈಗ ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇದರಲ್ಲಿ ಕೂಡಾ ಒಂದು ಹಾವು ಮುಂಗಿಸಿಯ ಹೋರಾಟವನ್ನು ನಾವು ನೋಡಬಹುದಾಗಿದೆ. ಆದರೆ ಈ ವೀಡಿಯೋ ಮಾತ್ರ ಸಾಮಾನ್ಯವಾದ ಹಾವು ಮುಂಗುಸಿಯ ಹೋರಾಟದಂತೆ ಮಾತ್ರ ಇಲ್ಲ ಎನ್ನುವುದು ಖಚಿತ. ಏಕೆಂದರೆ ಇಲ್ಲಿ ಹಾವು ಮುಂಗುಸಿ ಏಕಾಏಕೀ ಎದುರು ಬದುರಾಗಿ ಬಂದಿಲ್ಲ, ಬದಲಿಗೆ ಮುಂಗುಸಿ ಸಂಚು ಮಾಡಿ, ಹೊಂಚು ಹಾಕಿ ಹಾವನ್ನು ಹಿಡಿದಿರುವ ರೋಚಕ ವೀಡಿಯೋ ಇದಾಗಿದೆ. ಈ ವೀಡಿಯೋವನ್ನು ಪಶ್ಚಿಮ ನಾಸಿಕ ಡಿವಿಶನ್ ನ ಉಪ ಸಂರಕ್ಷಕರ ಕಛೇರಿಯ ಅಧಿಕೃತ ಟ್ವಿಟರ್ ಖಾತೆಯಿಂದ ಶೇರ್ ಮಾಡಲಾಗಿದೆ.

ಈ ವೀಡಿಯೋ ಗಮನಿಸಿದಾಗ ಹಾವೊಂದು ಮರದ ಮೇಲೆ ನೇತಾಡುತ್ತಾ ಆರಾಮವಾಗಿ ವಿಶ್ರಾಂತಿಯನ್ನು ಪಡೆಯುತ್ತಾ ತನ್ನದೇ ಲೋಕದಲ್ಲಿ ಅದು ಆಹ್ಲಾದಕರ ವಾತಾವರಣದಲ್ಲಿ ಸುಖ ಪಡುತ್ತಿರುವಾಗಲೇ ಮುಂಗುಸಿಯೊಂದು ಆ ಹಾವನ್ನು ಗಮನಿಸಿದೆ. ಆದರೆ ಅದು ಏಕಾಏಕೀ ಅದರ ಮೇಲೆ ಧಾಳಿ ಇಟ್ಟಿಲ್ಲ. ಬದಲಿಗೆ ಸ್ವಲ್ಪ ಹೊತ್ತು ಹಾವಿನ ಚಲನ ವಲನಗಳನ್ನು ಗಮನಿಸಿ ತಾನು ಸಂಪೂರ್ಣವಾಗಿ ಸಿದ್ಧವಾದ ನಂತರ ಮರಕ್ಕೆ ತೂಗಿ ಹಾಕಿಕೊಂಡು ವಿಶ್ರಾಂತಿ ಪಡುತ್ತಿದ್ದ ಹಾವಿನ ಮೇಲೆ ಮುಂಗುಸಿ ಧಾಳಿಯನ್ನು ಇಟ್ಟಿದೆ. ಮುಂಗುಸಿ ಓಡಿ ಬಂದು ಮೇಲಕ್ಕೆ ಹಾರಿ ಹಾವನ್ನು ಹಿಡಿದು ಕೆಳಕ್ಕೆ ಎಳೆದುಕೊಂಡಿದೆ.

ಹಾವು ಕೂಡಾ ನಿಜಕ್ಕೂ ಇಂತಹುದೊಂದು ಆಕ್ರಮಣವನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನಬಹುದು. ಆದರೆ ಸಂಪೂರ್ಣವಾಗಿ ಹಾವನ್ನು ಹಿಡಿಯಲು ಸಿದ್ಧಗೊಂಡಿದ್ದ ಮುಂಗುಸಿ ಹಾವನ್ನು ತಪ್ಪಿಸಿಕೊಳ್ಳದಂತೆ ಹಿಡಿದಿದೆ. ಹಾವು ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳುವ ಪ್ರಯತ್ನವನ್ನು ಸಾಧ್ಯವಾದಷ್ಟು ಮಾಡಿದೆ. ಆದರೆ ಮುಂಗುಸಿಗಳು ಹಾವುಗಳ ವಿರುದ್ಧ ಹೋರಾಡಿ ಅವುಗಳನ್ನು ಕೊಲ್ಲುವುದರಲ್ಲಿ ಹೆಸರುವಾಸಿ. ಅದರಲ್ಲೂ ವಿಶೇಷವಾಗಿ ನಾಗರಹಾವುಗಳನ್ನು ಹಿಡಿಯುವುದರಲ್ಲಿ ಅವು ಬಹಳ ಚುರುಕು. ಮುಂಗುಸಿಗಳ ದೇಹದಲ್ಲಿ ಇರುವ ವಿಶೇಷ ಅಸೆಟೈಲ್ಕೋಲಿನ್ ಗ್ರಾಹಕಗಳು ಹಾವಿನ ವಿಷಕ್ಕೆ ಪ್ರತಿಕಾಯಗಳನ್ನು ಸೃಷ್ಟಿಸುತ್ತವೆ.

ವಿಡಿಯೋ ನೋಡಿ….

ಅಲ್ಲದೆ ಮುಂಗುಸಿಗಳ ದಪ್ಪವಾದ ಚರ್ಮ ಮತ್ತು ಚುರುಕಾದ ಅವುಗಳ ಚಲನೆಯು ಹಾವನ್ನು ಹಿಡಿಯುವಲ್ಲಿ ಅವಕ್ಕೆ ಪ್ಲಸ್ ಪಾಯಿಂಟ್ ಆಗಿರುತ್ತದೆ.
45 ಸೆಕೆಂಡ್ ಗಳ ಈ ವೀಡಿಯೋವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಅಂಗುಸಾಮಿ ಅವರು ರೀ ಪೋಸ್ಟ್ ಮಾಡಿದ್ದು, ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವೀಡಿಯೋವನ್ನು ಶೇರ್ ಮಾಡಿದಾಗಿನಿಂದಲೂ ಇದನ್ನು ಅಸಂಖ್ಯಾತ ಜನರನ್ನು ಮೆಚ್ಚಿಸಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಈ ಹಾವು ಮುಂಗಿಸಿ ಹೋರಾಟವನ್ನು “ಕ್ರೂರ” ಎಂದೂ ಮತ್ತೆ ಕೆಲವರು “ಭಯಾನಕ” ಎಂದು ಈ ವೀಡಿಯೋವನ್ನು ವರ್ಣಿಸಿದ್ದಾರೆ.