ತನ್ನ ಬೆಡ್ರೂಮ್ ನಲ್ಲಿ ‘ಈ’ ವಿವಾಹಿತ ಮಹಿಳೆಯ ಫೋಟೋ ಇಟ್ಟಿದ್ದಾರೆ ಕರಣ್ ಜೋಹರ್!

ಬಾಲಿವುಡ್ ಅಥವಾ ಯಾವುದೇ ಸಿನೇರಂಗ ಯಾವತ್ತೂ ರಸಿಕರ ಕೂತೂಹಲ ಮತ್ತು ಜಿಜ್ಞಾಸೆಗೆ ಮೊದಲಿನಿಂದಲೂ ಕಾರಣವಾಗಿದೆ. ತಮ್ಮ ನೆಚ್ಚಿನ ನಾಯಕ ನಟರ ಬಗ್ಗೆ ಅವರ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವ ಆಸೆ ಹವ್ಯಾಸ ಅಥವಾ ಕೂತೂಹಲ ಸಿನೆ ಪ್ರಿಯರಿಗೆ ಇದ್ದೇ ಇರುತ್ತದೆ. ಇದೇ ಕಾರಣದಿಂದ ಮಾಧ್ಯಮಗಳು ಸಹಿತ ಹೆಚ್ಚಾಗಿ ನಟ ನಟಿಯರ ಬದುಕಿಗೆ ಸಂಬಂಧಪಟ್ಟ ವಿಶೇಷ ಸುದ್ದಿಗಳನ್ನೇ ಹೆಚ್ಚು ಬಿತ್ತರಿಸುತ್ತವೆ.

ಹಾಗೆ ನೋಡಲಾಗಿ ಬಾಲಿವುಡ್ ನಲ್ಲಿ ಎಲ್ಲರ ಜೊತೆಗೆ ಕರಣ್ ಅವರ ನಂಟು ತುಂಬಾ ಚೆನ್ನಾಗಿದೆ. ತಮ್ಮ ಬಾಲಿವುಡ್ ಸಹವರ್ತಿಗಳಲ್ಲಿ ತುಂಬಾ ಒಳ್ಳೆಯ ಮೈತ್ರಿಯನ್ನು ನಿಭಾಯಿಸಿಕೊಂಡು ಬಂದಿದ್ದಾರೆ.

ಬಾಲಿವುಡ್ ನಲ್ಲಿ ಹೀಗೂ ಒಬ್ಬಳು ಮಹಿಳೆ ಇದ್ದಾಳೆ, ಆಕೆಯ ಭಾವಚಿತ್ರವನ್ನು ಕರಣ್ ಜೋಹರ್ ತಮ್ಮ ಬೆಡ್ ರೂಮಿನಲ್ಲಿ ತಗುಲಿಸಿದ್ದಾರೆ. ಅದು ಯಾರ ಫೋಟೋ ಎಂದರೆ ಬಾಲಿವುಡ್ ಬಾದಶಹ ಶಾರುಕ್ ಖಾನ್ ಅವರ ಪತ್ನಿಯಾದ ಗೌರಿ ಖಾನ್ ಅವರದು.

ಗೌರಿ ಖಾನ್ ನಟಿಯಂತೂ ಅಲ್ಲ, ಆದರೂ ಈಕೆಯ ಫೋಟೋ ತಮ್ಮ ಬೆಡ್ ರೂಮಿನಲ್ಲಿ ಇಡುವ ಕಾರಣವೇನು ಎನ್ನುತ್ತೀರಾ? ಹಾಗಾದರೆ ಓದಿ. ಶಾರುಕ್ ಖಾನ್, ಗೌರಿ ಮತ್ತು ಕರಣ್ ಈ ಮೂವರು ಕಾಲೇಜಿನ ಮಿತ್ರರು. ಇಷ್ಟೇ ಕಾರಣವಲ್ಲ, ಈ ಮಹಿಳೆಯು ಕರಣ್ ಜೋಹರ್ ಅವರಿಗೆ ತುಂಬಾ ಸಪೋರ್ಟ್ ಮಾಡುತ್ತಾರಂತೆ. ಇವರಿಂದ ಒಂದು ಧನಾತ್ಮಕವಾದ ಶಕ್ತಿ, ಊರ್ಜೇ ಕರಣ್ ಅವರಿಗೆ ಸಿಗುತ್ತದಂತೆ. ಒಂದು ಕಾರ್ಯಕ್ರಮದಲ್ಲಿ ಸ್ವತಃ ಕರಣ್ ಜೋಹರ್ ಅವರೇ ತಮ್ಮ ಮೂವರ ಘನಿಷ್ಟವಾದ ಮೈತ್ರಿಯ ಬಗ್ಗೆ ಹೀಗೆ ಹೇಳುತ್ತಾರೆ. ಗೌರಿ ಮತ್ತು ಶಾರುಕ್ ಖಾನ್ ಇವರಿಬ್ಬರು ನನ್ನ ಜೀವನದಲ್ಲಿಯ ಮಹತ್ವದ ಭಾಗವಾಗಿದ್ದಾರೆ.

ಕರಣ್ ಅವರಿಗೆ ಗೌರಿ ತುಂಬಾ ಪ್ರಿಯವಾಗಿದ್ದಾರಂತೆ. ಕರಣ್ ಅವರು ಹೇಳುವ ಹಾಗೆ ತಮ್ಮ ಶಯನ ಕಕ್ಷೆಯಲ್ಲಿ ಇವರಿಬ್ಬರ ಫೋಟೋವನ್ನು ಯಾವತ್ತೂ ನೋಡುತ್ತಿರುತ್ತಾರಂತೆ. ಇದರಿಂದ ಅವರಿಗೆ ಎಲ್ಲಿಲ್ಲದ ಶಕ್ತಿ ಉತ್ಸಾಹ ದೊರೆಯುತ್ತದೆ ಎಂದು ಹೇಳುತ್ತಾರೆ. ವಿಶೇಷವಾಗಿ ಗೌರಿಯ ಬಗ್ಗೆ ಹೇಳುವಾಗ ಕರಣ್ ಅವರು ತುಂಬಾ ಭಾವುಕರಾಗುತ್ತಾರೆ. ಅವರ ಅನಿಸಿಕೆಯ ಪ್ರಕಾರ ಗೌರಿ ತನ್ನ ಕುಟುಂಬವನ್ನು ಯಾವ ರೀತಿ ಮೆಂಟೇನ್ ಮಾಡುತ್ತಾರೆ ಅದು ತುಂಬಾ ಅದ್ಭುತವಾಗಿದೆ ಎನ್ನುತ್ತಾರೆ. ಅದೇ ಕಾರಣದಿಂದ ನನ್ನ ಬೆಡ್ ರೂಮಿನಲ್ಲಿ ತಂದೆ ತಾಯಿಯರ ಹೊರತಾಗಿ ಗೌರಿ ಮತ್ತು ಶಾರುಕ್ ಖಾನ್ ಇವರ ಪ್ರತಿಮೆಗಳನ್ನು ಇಟ್ಟಿದ್ದೇನೆ ಎನ್ನುತ್ತಾರೆ.