ಮೇಲಿಂದ ಸಾಮಾನ್ಯವಾಗಿ ಕಾಣುವ ಸೋರೆಕಾಯಿಯಲ್ಲಿ 25 ಲಕ್ಷದ ಗಾಂ-ಜಾ ಪತ್ತೆ! ಕಳ್ಳರ ಪ್ಲಾನ್ ನೋಡಿ ಪೊಲೀಸ…

ಇಂದೋರ್ ನ ನಾರ್ಕೊಟಿಕ್ಸ್ ವಿಂಗ್ ಪಡೆಯು ಕಳೆದ ಶುಕ್ರವಾರದಂದು ಅಂತರರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಪೋಲಿಸರ ವಶಕ್ಕೆ ಸಿಕ್ಕಿರುವ ನಾಲ್ಕು ಜನ ಅಂತರರಾಜ್ಯ ಕಳ್ಳರಿಂದ ಪೋಲಿಸರು ಬರೋಬ್ಬರಿ 20 ಲಕ್ಷ ರೂಪಾಯಿಗಳ ಗಾಂ-ಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಗಳು ತರಕಾರಿಗಳ ಸಾಗಾಣಿಕೆಯ ಹೆಸರಿನಲ್ಲಿ ಸುಮಾರು 80 ಕಿಲೋ ಗ್ರಾಂ ಗಳ ಗಾಂ-ಜಾವನ್ನು ರಹಸ್ಯವಾಗಿ ಸಾಗಾಣೆ ಮಾಡುತ್ತಾ ಇಂದೋರ್ ನಲ್ಲಿ ಅದರ ಡೆಲಿವರಿಯನ್ನು ನೀಡಲು ಬರುತ್ತಿದ್ದರು ಎನ್ನಲಾಗಿದೆ. ಈ ಕಳ್ಳರಿಗೆ ಬೇರೆ ಬೇರೆ ರಾಜ್ಯದ ಕಳ್ಳರ ಜೊತೆಗೆ ಸಂಪರ್ಕ ಇದೆ ಎನ್ನಲಾಗಿದ್ದು, ಪ್ರಸ್ತುತ ಪೋಲಿಸರು ಅವರ ವಿಚಾರಣೆಯನ್ನು ನಡೆಸುತ್ತಿದ್ದು, ಇನ್ನಷ್ಟು ಮಾಹಿತಿಯನ್ನು ಹೊರ ತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ.

ನಾರ್ಕೊಟಿಕ್ಸ್ ವಿಂಗ್ ನ ಅಧಿಕಾರಿಗಳಿಗೆ ಮುಖಾಬಿರ್ ನಿಂದ ಕಳ್ಳರ ಬಗ್ಗೆ ಮಾಹಿತಿ ದೊರೆತಿತ್ತು ಎನ್ನಲಾಗಿದೆ. ಮಾಹಿತಿಯ ಪ್ರಕಾರ ಪಿಕ್ ಅಪ್ ವಾಹನದಲ್ಲಿ ( ಎಂಪಿ 45 ಎಎಲ್ಎ 0778 ) ಸೋರೆಕಾಯಿಗಳ ನಡುವೆ ಗಾಂ-ಜಾವನ್ನು ರಹಸ್ಯವಾಗಿ ಇಟ್ಟುಕೊಂಡು ಸಾಗಿಸುತ್ತಿದ್ದಾರೆ ಎಂದು ತಿಳಿದು ಬಂದಿತ್ತು. ಕಳ್ಳರು ಇಂದೋರ್-ಮುಂಬೈ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಾದು ಅಲ್ಲೊಂದು ಬೈಪಾಸ್ ಬಳಿ ಯಾರಿಗೂ ಮಾಲನ್ನು ತಲುಪಿಸಲು ಯೋಜನೆಯನ್ನು ರೂಪಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಮಾಹಿತಿ ತಿಳಿದ ಕೂಡಲೇ ಅಧಿಕಾರಿಗಳು ಅಲ್ಲಿ ಮುತ್ತಿಗೆ ಹಾಕಿ ಹೋಗಿ ಬರುವ ವಾಹನಗಳನ್ನು ತಡೆದು ಅವುಗಳ ಪರಿಶೀಲನೆಯನ್ನು ನಡೆಸಿದ್ದಾರೆ.‌

ಹೀಗೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಸೋರೆಕಾಯಿ ಸಾಗಿಸುತ್ತಿದ್ದ ವಾಹನ ಕೂಡಾ ಸಿಕ್ಕಿ ಬಿದ್ದಿದೆ. ಕಾಸಿಂ, ಆಶಿಫ್, ಪ್ರಕಾಶ್, ಲೀಲಾ ಸಿಂಗ್ , ಸುಲ್ಲಾ ಮಹುಡಾ ಜಾಬುವ ಎನ್ನುವವರು ಈ ವಾಹನದಲ್ಲಿ ಇದ್ದರು ಎನ್ನಲಾಗಿದೆ. ಸೋರೆಕಾಯಿಗಳನ್ನು ಪ್ಯಾಕ್ ಮಾಡಿರುವ ಪ್ಯಾಕೆಟ್ ಗಳನ್ನು ಓಪನ್ ಮಾಡಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಗಾಂ-ಜಾ ಸಾಗಾಣಿಕೆ ಮಾಡುತ್ತಿರುವುದು ಕಂಡು ಬಂದಿದೆ. ಹಾಗೆ ಸಾಗಿಸುತ್ತಿದ್ದ ಗಾಂ-ಜಾ ಒಟ್ಟು 80 ಕಿಲೋ ಗ್ರಾಂ ಇದೆ ಎಂದು ಹೇಳಲಾಗಿದೆ. ಸೋರೆಕಾಯಿಯಲ್ಲಿ ಇಟ್ಟು ಗಾಂ-ಜಾ ಸಾಗಾಣಿಕೆ ಮಾಡುತ್ತಿದ್ದವರು ಈಗ ಪೋಲಿಸರ ಅತಿಥಿಗಳಾಗಿದ್ದಾರೆ.

ಪೋಲಿಸರು ನೀಡಿರುವ ಹೇಳಿಕೆಯ ಪ್ರಕಾರ 20 ಲಕ್ಷ ರೂಪಾಯಿಗಳು ಎನ್ನಲಾಗಿದ್ದು, ಪೋಲಿಸರು ಗಾಂ-ಜಾ, ಪಿಕ್ ಅಪ್ ವಾಹನ ಮತ್ತು ಕಳ್ಳರನ್ನು ಕೂಡಾ ತಮ್ಮ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ತಾವು ಅನ್ಯ ರಾಜ್ಯಗಳ ಕಳ್ಳರಿಗೆ ತರಕಾರಿಯ ವಾಹನದಲ್ಲಿ ತರಕಾರಿಗಳೊಂದಿಗೆ ಗಾಂ-ಜಾ ಸಾಗಾಣಿಕೆ ಮಾಡುವ ಮೂಲಕ ಗಾಂ-ಜಾ ಕೊಳ್ಳುವಿಕೆ ಹಾಗೂ ಮಾರಾಟವನ್ನು ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಅವರಿಗೆ ಅನ್ಯ ರಾಜ್ಯಗಳ ಕಳ್ಳರೊಂದಿಗೆ ಸಂಬಂಧ ಇರುವುದು ವಿಚಾರಣೆ ವೇಳೆ ಸಾಬೀತಾಗಿದೆ ಎನ್ನಲಾಗಿದೆ.