14 ಲಕ್ಷ ರೂಪಾಯಿಯ ಆನ್ಲೈನ್ ಬ್ಯಾಗ್ ಆರ್ಡರ್ ಮಾಡಿದ ಮಹಿಳೆ; ನೋಡುತ್ತಲೇ ನಷ್ಟ ಮಾಡಿದ ಅಧಿಕಾರಿಗಳು!
ವಿದೇಶಗಳಿಂದ ದುಬಾರಿ ವಸ್ತುಗಳನ್ನು ತರಿಸಿಕೊಂಡು ಅದನ್ನು ಬಳಸುವುದು ಕೆಲವರಿಗೊಂದು ಹವ್ಯಾಸ. ಜನರಿಗೆ ವಿದೇಶಿ ವಸ್ತುಗಳೆಂದರೆ ಒಂದು ರೀತಿಯ ಮೋಜು ಕೂಡಾ ಇದ್ದೇ ಇರುತ್ತದೆ. ಅದಕ್ಕೆ ಕೆಲವರು ವಸ್ತುವಿನ ಬೆಲೆ ಎಷ್ಟೇ ಆದರೂ ಕೂಡಾ ಅವುಗಳನ್ನು ಖರೀದಿ ಮಾಡಲು ಯೋಚಿಸುವುದಿಲ್ಲ. ಇನ್ನು ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ನಾವು ಎಂತಹುದೇ ವಸ್ತುವನ್ನಾದರೂ ಕೂಡಾ, ಎಲ್ಲಿಂದ ಬೇಕಾದರೂ ಕೂಡಾ ತರಿಸಿಕೊಳ್ಳಬಹುದಾಗಿದೆ. ಆದರೆ ಅದಕ್ಕೆ ಸರಿಯಾದ ಕ್ರಮಗಳು ಅಥವಾ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ. ಅಲ್ಲದೇ ಅದೂ ಕೂಡಾ ವಿದೇಶಗಳಿಂದ ವಸ್ತುಗಳನ್ನು ತೀರಿಸಿಕೊಳ್ಳುವ ಸಮಯದಲ್ಲಿ ಕೆಲವು ವಿಶೇದ ಹಾಗೂ ಕಠಿಣವಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ವಿದೇಶಗಳಿಂದ ನಾವು ವಸ್ತುಗಳನ್ನು ತರಿಸಿಕೊಳ್ಳುವಾಗ ನಿರ್ದಿಷ್ಟವಾದ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ. ಸರಿಯಾದ ದಾಖಲೆಗಳನ್ನು ಕೂಡಾ ನೀಡಬೇಕಾಗುತ್ತದೆ. ಆದರೆ ಆಸ್ಟ್ರೇಲಿಯಾದಲ್ಲಿ ಒಬ್ಬ ಮಹಿಳೆ ವಿದೇಶದಿಂದ ಒಂದು ದುಬಾರಿ ಬೆಲೆಯ ಬ್ಯಾಗ್ ಅನ್ನು ತರಿಸಿಕೊಂಡಿದ್ದರು. ಅದರ ಬೆಲೆ 19 ಸಾವಿರ ಡಾಲರ್ ಗಳ ಮೌಲ್ಯದ್ದು. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಈ ಬ್ಗಾಗ್ ನ ಬೆಲೆ 13.92 ಲಕ್ಷ ರೂಪಾಯಿಗಳಾಗಿದ್ದು, ಆಕೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣ ತನ್ನ ಈ ದುಬಾರಿ ಬೆಲೆಯ ಬ್ಯಾಗನ್ನು ಕಳೆದುಕೊಂಡಿದ್ದಾರೆ.
ಮಹಿಳೆಯು ವಿದೇಶದಿಂದ ಮೊಸಳೆಯ ಚರ್ಮದಿಂದ ತಯಾರಿಸಲಾದ ಒಂದು ದುಬಾರಿ ಬೆಲೆಯ ಸುಪ್ರಸಿದ್ಧ ಬ್ರಾಂಡ್ ನ ಬ್ಯಾಗ್ ಒಂದನ್ನು ಖರೀದಿ ಮಾಡಿ ತರಿಸಿಕೊಂಡಿದ್ದರು. ಆಸ್ಟ್ರೇಲಿಯಾದಲ್ಲಿ ಇಂತಹ ಹ್ಯಾಂಡ್ ಬ್ಯಾಗ್ ಗಳನ್ನು ಬಳಸಲು ಕಾನೂನಿನ ಪ್ರಕಾರ ಅನುಮತಿ ಇದೆಯಾದರೂ ಅದರ ಜೊತೆಗೆ ಪರಿಸರ ಸಂರಕ್ಷಣಾ ಸಂಸ್ಥೆಯ ಪರವಾನಗಿ ಪತ್ರವೂ ಕೂಡಾ ಅಗತ್ಯವಾಗಿರುತ್ತದೆ. ಆದರೆ ಮೊಸಳೆಯ ಚರ್ಮದ ಹ್ಯಾಂಡ್ ಬ್ಯಾಗ್ ಅನ್ನು ತರಿಸಿಕೊಂಡು ಈ ಮಹಿಳೆ ಪರಿಸರ ಸಂರಕ್ಷಣಾ ಸಂಸ್ಥೆಯ ಪರವಾನಗಿ ಪತ್ರವನ್ನು ಪಡೆದಿರಲಿಲ್ಲ. ಆದ ಕಾರಣ ಕಸ್ಟಮ್ಸ್ ನ ಅಧಿಕಾರಿಗಳು ಹ್ಯಾಂಡ್ ಬ್ಯಾಗ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಅದನ್ನು ನಷ್ಟಗೊಳಿಸಿದ್ದಾರೆ.

ಸಾಮಾನ್ಯವಾಗಿ ಕಸ್ಟಮ್ಸ್ ಅಧಿಕಾರಿಗಳು ಜಫ್ತಿ ಮಾಡಿಕೊಂಡ ವಸ್ತುಗಳನ್ನು ಅದರ ಖರೀದಿದಾರರು ಪೂರ್ಣ ಪ್ರಮಾಣದಲ್ಲಿ ದಂಡವನ್ನು ಪಾವತಿಸಿದ ನಂತರ ಮರಳಿ ನೀಡಲಾಗುವುದು. ಆದರೆ ಈ ಬಾರಿ ಕಾನೂನಿನ ಬಗ್ಗೆ ಜನರಿಗೆ ಇನ್ನೂ ಹೆಚ್ಚು ಶಿಸ್ತನ್ನು ಮೂಡಿಸುವ ಸಲುವಾಗಿ ಕಸ್ಟಮ್ಸ್ ಅಧಿಕಾರಿಗಳು ಬ್ಯಾಗನ್ನು ನಷ್ಟ ಮಾಡಬೇಕಾಯಿತು ಎಂದು ಹೇಳಿದ್ದಾರೆ. ಫ್ರಾನ್ಸ್ ನಿಂದ ತರಿಸಲಾಗಿದ್ದ ಆ ಬ್ಯಾಗ್ ಅನ್ನು ನಷ್ಟ ಮಾಡಿದ ಅಧಿಕಾರಿಗಳು ನಾವು ಅದನ್ನು ನಿಯಮಗಳನ್ನು ಪಾಲಿಸದೇ ತರಿಸಿಕೊಂಡ ಮಹಿಳೆಯ ಮೇಲೆ ಯಾವುದೇ ಕ್ರಮವನ್ನು ಜರುಗಿಸದೇ ಬಿಟ್ಟಿರುವುದು ಆಕೆಯ ಅದೃಷ್ಟ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ಪರಿಸರ ಖಾತೆಯ ಸಚಿವರು ಕೂಡಾ ಬ್ಯಾಗನ್ನು ನಿಯಮಗಳನ್ನು ಪಾಲನೆ ಮಾಡದೆ ತರಿಸಿಕೊಂದ ಮಹಿಳೆಯ ಬಗ್ಗೆ ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದಿದ್ದಾರೆ. ಆಸ್ಟ್ರೇಲಿಯಾದ ವೈಲ್ಡ್ ಲೈಫ್ ಆ್ಯಕ್ಟ್ ಪ್ರಕಾರ ಹೀಗೆ ಮಾಡುವವರಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಎರಡೂವರೆ ಲಕ್ಷ ದಂಡವನ್ನು ವಿಧಿಸಲಾಗುವುದು. ಆದರೆ ಈ ಪ್ರಕರಣದಲ್ಲಿನ ಮಹಿಳೆ ನಿಜವಾಗಿಯೂ ಅದೃಷ್ಟವನ್ನು ಮಾಡಿದ್ದರು ಎನ್ನಬಹುದು.