ಅಬ್ಬಾ! ಕಂಗನಾ ರಾಣಾವತ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಒಂದು ಚಿತ್ರಕ್ಕೆ ಪಡೆಯುತ್ತಾರೆ ‘ಇಷ್ಟು’ ಕೋಟಿ!

ಬಾಲಿವುಡ್ ನ ಬೋಲ್ಡ್ ಗರ್ಲ್, ಬಾಲಿವುಡ್ ಕ್ವೀನ್ ಎಂದೆಲ್ಲಾ ಹೆಸರನ್ನು ಪಡೆದಿರುವ ನಟಿ ಕಂಗನಾ. ಪ್ರಸ್ತುತ ರಾಷ್ಟ್ರಮಟ್ಟದಲ್ಲಿ ಎಲ್ಲೆಡೆ ಕೂಡಾ ನಟಿ ಕಂಗನಾ ಸುದ್ದಿಗಳೇ ತುಂಬಿದೆ. ಬಾಲಿವುಡ್ ನಲ್ಲಿ ನೆಪೋಟೀಸಂ ಅಥವಾ ಸ್ವಜನ ಪಕ್ಷಪಾತವನ್ನು ನೇರವಾಗಿ, ದಿಟ್ಟವಾಗಿ ಖಂಡಿಸಿ ಎಲ್ಲರನ್ನೂ ಎದುರು ಹಾಕಿಕೊಂಡ ನಟಿಯ ದಿಟ್ಟ ಮಾತುಗಳಿಂದ ಪ್ರಸ್ತುತ ಮಹಾರಾಷ್ಟ್ರದ ಸರ್ಕಾರವನ್ನು ಕೂಡಾ ಎದುರಿಸುತ್ತಿದ್ದಾರೆ‌. ಈ ವಿಷಯವನ್ನು ಪಕ್ಕಕ್ಕಿರಿಸಿ ನೋಡಿದರೆ ನಟಿ ಕಂಗನಾ ಬಾಲಿವುಡ್ ನ ಪ್ರತಿಭಾವಂತ ನಟಿ, ಮೂರು ಫಿಲ್ಮ್ ಫೇರ್ ಹಾಗೂ ಪದ್ಮಶ್ರೀ ಕೂಡಾ ಪಡೆದಿರುವುದು ನಟಿಯ ಅಭಿನಯಕ್ಕೆ ಹಿಡಿದ ಕನ್ನಡಿಯಾಗಿದೆ.

ಇನ್ನು ನಟಿ ಕಂಗನಾ ಅವರ ಆದಾಯದ ಪ್ರಮುಖ ಮೂಲ ಎಂದರೆ ಅದು ಆಕೆಯ ಸಿನಿಮಾಗಳು ಮತ್ತು ವಿವಿಧ ಸುಪ್ರಸಿದ್ಧ ಬ್ರಾಂಡ್ ಗಳಿಗೆ ರಾಯಭಾರಿಯಾಗಿರುವುದರಿಂದ ಎಂಬುದು ಕೂಡಾ ನಿಜ. ಹದಿನೈದು ವರ್ಷಗಳ ಸಿನಿ ಪಯಣದಲ್ಲಿ ನಟಿಯಾಗಿ ಬಾಲಿವುಡ್ ಪ್ರವೇಶಿಸಿದ ಕಂಗನಾ ಇಂದು ಸಿನಿಮಾ ನಿರ್ಮಾಪಕಿಯಾಗಿ ಬೆಳೆದಿದ್ದಾರೆ. ಬಾಲಿವುಡ್ ನ ದುಬಾರಿ ಮೊತ್ತದ ಸಂಭಾವನೆ ಪಡೆಯುವ ನಟಿಯರ ಸಾಲಲ್ಲಿ ಕಂಗನಾ ಕೂಡಾ ಒಬ್ಬರು ಎನ್ನುವುದು ನಿಜ. ಅದಕ್ಕೆ ಸಾಕ್ಷಿ ಎನ್ನುವಂತೆ ಇವೆ ಆಕೆ ಇದುವರೆಗೂ ನಟಿಸಿರುವ ಬಹುತೇಕ ಯಶಸ್ವಿ ಸಿನಿಮಾಗಳ ಪಟ್ಟಿ.

ಕಂಗನಾ ಸಿನಿಮಾ ಒಂದಕ್ಕೆ ಪಡೆಯುವ ಸಂಭಾವನೆಯ ಮೊತ್ತ 11 ಕೋಟಿ ರೂಪಾಯಿಗಳು. ಅದಲ್ಲದೇ ಜಾಹೀರಾತುಗಳಲ್ಲಿ ನಟಿಸುವ ಕಂಗನಾ ಅದಕ್ಕೆ ಒಂದರಿಂದ ಎರಡು ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.
ಕೆಲವು ಮೂಲಗಳ ಪ್ರಕಾರ ಕಂಗನಾ ರಣಾವತ್ ಅವರ ಆಸ್ತಿಯ ಒಟ್ಟು ಮೌಲ್ಯ ಸುಮಾರು 13 ಮಿಲಿಯನ್ ರೂಪಾಯಿಗಳು ಎನ್ನಲಾಗಿದೆ. ಅಂದರೆ ಭಾರತೀಯ ಕರೆನ್ಸಿಯ ಪ್ರಕಾರ ಸುಮಾರು 93 ಕೋಟಿ ರೂಪಾಯಿಗಳ ಮೊತ್ತದ ಆಸ್ತಿಯನ್ನು ಕಂಗನಾ ಹೊಂದಿದ್ದಾರೆ. ಮುಂಬೈನಲ್ಲಿ ಮಾತ್ರವಲ್ಲದೇ ಕಂಗನಾ ಹಿಮಾಚಲ ಪ್ರದೇಶದಲ್ಲಿ ಒಂದು ಐಶಾರಾಮೀ ಬಂಗಲೆಯ ಒಡತಿಯಾಗಿದ್ದಾರೆ.

ಕಂಗನಾ ಮೂಲತಃ ಹಿಮಾಚಲ ಪ್ರದೇಶದವರೇ ಆಗಿದ್ದು, ಅಲ್ಲಿ ಕಂಗನಾ ಹೊಂದಿರುವ ಬಂಗಲೆಯ ಬೆಲೆ ಸುಮಾರು 20 ಕೋಟಿ ರೂಪಾಯಿಗಳದ್ದಾಗಿದೆ.
ಬಾಲಿವುಡ್ ನಲ್ಲಿ ಅತಿ ಹೆಚ್ಚು ಆದಾಯ ತೆರಿಗೆಯನ್ನು ಪಾವತಿಸುವ ನಟರಲ್ಲಿ ಒಬ್ಬರಾಗಿದ್ದು, ರಿಯಲ್ ಎಸ್ಟೇಟ್ ಕೂಡಾ ಅವರ ವ್ಯವಹಾರಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಕಂಗನಾ ಬಳಿ ಒಂದು ಬಿಎಂಡಬ್ಲ್ಯೂ 7 ಸಿರೀಸ್ ನ ಕಾರು, ಒಂದು ಮರ್ಸಿಡೀಸ್ ಬೆನ್ಜ್ GLE SUV ಇದ್ದು ಕಂಗನಾಗೆ ದುಬಾರಿ ಹಾಗೂ ಐಶಾರಾಮೀ ಕಾರುಗಳನ್ನು ಬಳಸುವ ಹವ್ಯಾಸ ಇದೆ ಎನ್ನಲಾಗಿದೆ. ಕಂಗನಾ ಬಾಲಿವುಡ್ ನಲ್ಲಿ ಪ್ರಸ್ತುತ ಬಹು ಚರ್ಚಿತ ನಟಿಯಾಗಿದ್ದು ತನ್ನ ವಿಚಾರಗಳನ್ನು ಅಭಿವ್ಯಕ್ತ ಪಡಿಸಲು ಅವರು ಯಾವುದೇ ಭಯ ಇಲ್ಲದೇ ದಿಟ್ಟತನದಿಂದ ಮಾತನಾಡುವುದು ಅವರ ವಿಶೇಷತೆ ಆಗಿದೆ.