‘ದಸ್ ಬಹಾನೆ’ ಹಾಡಿನ ಮೇಲೆ ಫುಲ್ ಜೋಶ್ ಡಾನ್ಸ್ ಮಾಡಿದ ಚಹಲ್ ಭಾವಿ ಪತ್ನಿ ಧನಶ್ರೀ; ‘ಬೆಂಕಿ ಡಾನ್ಸ್’ ಎಂದ ನೆಟ್ಟಿಗರು!
ಯುಎಇ ನಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಲಿರುವ ಆಟಗಾರ ಯಜ್ವೇಂದ್ರ ಚಹಲ್ ಅವರು ತಮ್ಮ ಪ್ರದರ್ಶನದ ಮೂಲಕ ತಂಡವನ್ನು ಯಾವ ಮಟ್ಟಕ್ಕೆ ಮೇಲೇರುವಂತೆ ಮಾಡಲಿದ್ದಾರೆ ಅಥವಾ ತನ್ನ ಸಾಧನೆಯನ್ನು ಯಾವ ಎತ್ತರಕ್ಕೆ ಕರೆದೊಯ್ಯುವರೋ ನಮಗಿನ್ನೂ ತಿಳಿದಿಲ್ಲವಾದರೂ ಅವರ ಭಾವೀ ಪತ್ನಿ ಧನಾಶ್ರೀ ವರ್ಮಾ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಎತ್ತರಕ್ಕೆ ಏರುತ್ತಲೇ ಇದ್ದಾರೆ, ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಬ್ಯಾಕ್ ಟು ಬ್ಯಾಕ್ ಧನಾಶ್ರೀ ವರ್ಮಾ ಅವರ ಡಾನ್ಸ್ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಂಚಲನವನ್ನು ಹುಟ್ಟು ಹಾಕುತ್ತಿವೆ.
ಐಪಿಎಲ್ ಪಂದ್ಯಾವಳಿಗಳು ಮುಗಿಯುವ ವೇಳೆಗೆ ಧನಾಶ್ರೀ ವರ್ಮಾ ಕೀರ್ತಿ ಮತ್ತಷ್ಟು ಹೆಚ್ಚುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಧನಾಶ್ರೀ ಅವರು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ವೀಡಿಯೋ ಒಂದು ಈಗ ಮತ್ತೊಮ್ಮೆ ಅವರ ಅಭಿಮಾನಿಗಳನ್ನು ಹಾಗೂ ಡಾನ್ಸ್ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಸುತ್ತಿದೆ. ಧನಾಶ್ರೀ ವರ್ಮಾ ಮಾಡಿರುವ ಕಾಮೆಂಟ್ ನೋಡಿದಾಗ ಇದು ಹಳೆಯ ವೀಡಿಯೋ ಎನ್ನುವುದು ಗೊತ್ತಾಗುತ್ತದೆ. ಧನಾಶ್ರೀ ಅವರು ಹಿಂದಿ ಹಾಡಾದ ದಸ್ ಬಹಾನೆ ಕರ್ ಕೆ ಲೇಗಲಿ ದಿಲ್ ಎಂದು ಬರೆದುಕೊಂಡು ಹತ್ತು ಕಾರಣಗಳಿಂದ ನಾನು ನನ್ನ ಕ್ಲಾಸ್ ನ ಎನರ್ಜಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಧನಾಶ್ರೀ ವರ್ಮಾ ಈ ಹಿಂದೆ ಶೇರ್ ಮಾಡಿರುವ ವೀಡಿಯೋಗಳಿಗೆ ಇದನ್ನು ಹೋಲಿಕೆ ಮಾಡಿದರೆ ಇದು ಅವೆಲ್ಲವುಗಳಿಗಿಂದ ಸ್ವಲ್ಪ ಹೆಚ್ಚು ಸಮಯದ ವೀಡಿಯೋ ಆಗಿದೆ. ಈ ವೀಡಿಯೋದಲ್ಲಿ ಧನಾಶ್ರೀ ದಸ್ ಬಹಾನೇ ಕರ್ ಕೇ ಲೇಗಯಿ ದಿಲ್ ಎಂಬ ಬಾಲಿವುಡ್ ಟ್ರಾಕ್ ಗೆ ಜನರ್ದಸ್ತ್ ಡಾನ್ಸ್ ಮಾಡಿದ್ದಾರೆ. ಡಾನ್ಸ್ ನಲ್ಲಿ ಧನಾಶ್ರೀ ಅವರ ಎನರ್ಜಿ ಹಾಗೂ ಅವರ ಕೌಶಲ್ಯ ನೋಡಿದರೆ ಡಾನ್ಸ್ ಕುರಿತಾದ ಆಕೆಯ ಆಸಕ್ತಿ ಹಾಗೂ ಡೆಡಿಕೇಷನ್ ಗೆ ಸಾಕ್ಷಿಯಾಗಿದೆ ಎನ್ನಬಹುದು. ಕೆಲವು ದಿನಗಳ ಹಿಂದೆ ಧನಾಶ್ರೀ ವರ್ಮಾ ಯಜ್ವೇಂದ್ರ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ವೀಡಿಯೋ ಒಂದನ್ನು ಹಾಕಿದ್ದರು.
ವಿಡಿಯೋ ನೋಡಿ…..