ಹೌದು! ವಾಟ್ಸಾಪ್ ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಸುಲಭವಾಗಿ ಓದಬಹುದು! ಹೇಗೆ ತಿಳಿದುಕೊಳ್ಳಿ

ಪ್ರತಿಯೊಬ್ಬರ ಮೊಬೈಲ್ ನಲ್ಲಿ ವಾಟ್ಸಾಪ್ ಆಪ್ ಇಲ್ಲ ಅನ್ನಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಜಗತ್ತಿನ ಎಲ್ಲಕ್ಕೂ ಹೆಚ್ಚು ಜನರು ಉಪಯೋಗ ಮಾಡುವ ಮೆಸೇಜಿಂಗ್ ಇದಾಗಿದೆ.

ಪ್ರತಿಯೊಂದು ಆಪ್ ಗಳಲ್ಲಿ ಸಮಯ ಸಮಯಕ್ಕೆ ವಿವಿಧ ಬದಲಾವಣೆಗಳನ್ನು ಫೀಚರ್ಸ್ ಗಳಲ್ಲಿ ವಿಶೇಷತೆಗಳನ್ನು ತರುತ್ತಿರುತ್ತಾರೆ. ಹಾಗೆ ವಾಟ್ಸಪ್ನಲ್ಲಿ ಈಗ ಡಿಲೀಟ್ ಫಾರ್ ಎವರಿ ವನ್ ಆಪ್ಶನ್ ತಂದಿದ್ದಾರೆ.

ಡಿಲೀಟ್ ಫಾರ್ ಎವರಿ ವನ್ ಈ ಫೀಚರ್ ತುಂಬಾ ಪರಿಣಾಮಕಾರಕ ವಿದೆ. ಕಾರಣ ನಮ್ಮಿಂದ ಯಾವುದೇ ಒಂದು ವ್ಯಕ್ತಿಗೆ ಅಥವಾ ಯಾವುದೇ ಒಂದು ಗ್ರೂಪಿಗೆ ತಪ್ಪಾಗಿ ಮೆಸೇಜ್ ಫಾರ್ವರ್ಡ್ ಆಗಿದ್ದರೆ ಆ ಮೆಸೇಜನ್ನು ಆಗಿಂದಾಗ ನಮಗೆ ಡಿಲೀಟ್ ಮಾಡುವ ವ್ಯವಸ್ಥೆ ಇದಾಗಿದೆ. ಮೊದಲು ವಾಟ್ಸಪ್ನಲ್ಲಿ ಈ ಸೌಲಭ್ಯ ಇರಲಿಲ್ಲ. ಹೀಗಾಗಿ ನಮ್ಮಿಂದ ತಪ್ಪಾದ ಮೆಸೇಜ್ ಗಳು ಫಾರ್ವರ್ಡ್ ಆಗಿದ್ದಾಗ ನಾವು ತುಂಬಾ ಮುಜುಗರಕ್ಕೆ ಒಳಗಾಗಬೇಕಾಗುತ್ತಿತ್ತು. ಡಿಲೀಟ್ ಫಾರ್ ಎವರಿ ವನ್ ಈ ಸೌಲಭ್ಯದಿಂದ ಮುಜುಗರಕ್ಕೆ ಒಳಗಾಗುವ ಪ್ರಶ್ನೆ ಬರುವುದಿಲ್ಲ. ಆದರೆ ಈ ಸೌಲಭ್ಯ ಮೊದಲು 7 ನಿಮಿಷಗಳವರೆಗೆ ಇತ್ತು. ಈಗ ಅದರಲ್ಲಿ ಸಮಯದ ಕಾಲಾವಕಾಶ 68 ನಿಮಿಷ ಹಾಗೂ 16 ಸೆಕೆಂಡುಗಳವರೆಗೆ ಇದೆ. ಇದು ಒಂದು ರೀತಿಯಲ್ಲಿ ಒಳ್ಳೆಯದಿದೆ ಒಂದು ರೀತಿಯಾಗಿ ಸರಿಯಿಲ್ಲ. ಹೇಗೆಂದರೆ ಕಳಿಸಿದ ತಪ್ಪು ಸಂದೇಶವನ್ನು ಅಳಿಸಿಹಾಕಲು 68 ನಿಮಿಷಗಳ ಕಾಲಾವಕಾಶ ಸಿಕ್ಕರೆ ಓದುವವರಿಗೂ ಸಹಿತ ಓದಲು 68 ನಿಮಿಷಗಳ ಕಾಲದ ಹೆಚ್ಚಿನ ಅವಕಾಶ ಸಿಗುತ್ತದೆ.

ವಾಟ್ಸಪ್ ನಲ್ಲಿ ನಿಮಗೆ ಬಂದ ಮೆಸೇಜ್ ನಿರ್ಧಾರಿತ ಸಮಯದಲ್ಲಿ ನೋಡದೆ ಇದ್ದಾಗ ಒಂದು ವೇಳೆ ಆ ಮೆಸೇಜ್ ಡಿಲೀಟ್ ಆಗಿದ್ದರೆ ಅದನ್ನು ಹೇಗೆ ಓದಬೇಕು ಎಂಬ ಟ್ರಿಕ್ ಅಥವಾ ಟೆಕ್ನಿಕ್ ಇಲ್ಲಿ ನಾವು ನಿಮಗೆ ಹೇಳಲಿದ್ದೇವೆ.

ಸ್ಪೇನಿಸ್ ಆಂಡ್ರಾಯ್ಡ್ ಬ್ಲಾಗ್ ಅಂಡ್ರಾಯ್ಡ್ ಜೆಫ್ ಮಾಡಿದ ದಾವೆಯ ಪ್ರಕಾರ ಡಿಲೀಟ್ ಮಾಡಿದ ಮೆಸೇಜ್ ಗಳು ಫೋನಿನ ಲಾಗ್ ನಲ್ಲಿ ಸೇವ್ ಆಗಿರುತ್ತವೆ.

ಹೀಗಾಗಿ ಸಂದೇಶವನ್ನು ಕಳುಹಿಸಿದ ವ್ಯಕ್ತಿ ಆ ಸಂದೇಶ ಡಿಲೀಟ್ ಮಾಡಿದರೂ ಸಹಿತ ಆಂಡ್ರಾಯ್ಡ್ ಸಿಸ್ಟಮ್ ದ ನೋಟಿಫಿಕೇಶನ್ ರೆಜಿಸ್ಟರ್ ನಲ್ಲಿ ಆ ಮೆಸೇಜ್ ಗಳು ಸೇವ್ ಆಗಿರುತ್ತವೆ. ಆದ್ದರಿಂದ ಆ ರೆಕಾರ್ಡ್ಸ್ ಗಳನ್ನು ಚೆಕ್ ಮಾಡಿದ ನಂತರ ನಮಗೆ ಡಿಲೀಟ್ ಮಾಡಿದ ಮೆಸೇಜ್ ಗಳನ್ನು ಸಹಜವಾಗಿ ಓದಲು ಸಾಧ್ಯವಿದೆ.

ತಿಳಿದುಕೊಳ್ಳಿ ಹೇಗೆ ಓದುವುದು.

ಆ ಬ್ಲಾಗ್ ಹೇಳುವ ಪ್ರಕಾರ ನೋಟಿಫಿಕೇಶನ್ ಹಿಸ್ಟರಿ ಹೆಸರಿನ ಒಂದು ಥರ್ಡ್ ಪಾರ್ಟಿ ಆಪ್ ಸಹಾಯದಿಂದ ಯಾರು ಬೇಕಾದರೂ ಡಿಲೀಟ್ ಮಾಡಿದ ಸಂದೇಶವನ್ನು ಸಹಜವಾಗಿ ಓಪನ್ ಮಾಡಬಹುದು. ಈ ಆಪ್ ಪ್ಲೇ ಸ್ಟೋರ್ ನಲ್ಲಿ ಉಪಲಬ್ಧವಿದೆ.

ಈ ಆಪನ್ನು ಡೌನ್ಲೋಡ್ ಮಾಡಿದ ನಂತರ ಉಪಯೋಗಿಸುವ ವ್ಯಕ್ತಿ ನೋಟಿಫಿಕೇಶನ್ ಲಾಗ್ ನಲ್ಲಿ ಹೋಗಿ ಸಂದೇಶಗಳನ್ನು ಶೋಧಿಸ ಬೇಕಾಗುವುದು. ನೋವಾ ಲಾಂಚರ್ ಹೆಸರಿನ ಆಪ್ ಉಪಯೋಗಿಸುವ ವ್ಯಕ್ತಿಗಳಿಗೆ ಇದು ತುಂಬಾ ಸರಳವಾಗಿದೆ.

ಯಾವುದೇ ಆಪ್ ಗಳನ್ನು ಉಪಯೋಗಿಸದೆ ನೋಟಿಫಿಕೇಶನ್ ಲಾಗ್ ಯೂಸ್ ಮಾಡಲು ಒಂದು ಪದ್ಧತಿ ಇದೆ.

ಹೋಂ ಸ್ಕ್ರೀನ್ ಅನ್ನು ಒತ್ತಿಹಿಡಿದು ಅದರಲ್ಲಿಯ ವಿಜೆಟ್ಸ್ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ ಆಕ್ಟಿವಿಟೀಸ್ ಮತ್ತು ಸೆಟ್ಟಿಂಗ್ ಹಾಗೂ ಅದರಲ್ಲಿ ನೋಟಿಫಿಕೇಶನ್ ಲಾಗ್ ನಲ್ಲಿ ಹೋಗಿ.

ಕೆಲವು ಆಂಡ್ರಾಯ್ಡ್ ಫೋನ್ಗಳಲ್ಲಿ ನೋಟಿಫಿಕೇಶನ್ ಲಾಗ್ ನಲ್ಲಿ ಹೋಗಲು ವಿಜೇಟ್ ದ ಸೌಲಭ್ಯವಿರುತ್ತದೆ.

ಥರ್ಡ್ ಪಾರ್ಟಿ ಮತ್ತು ಮೇಲಿನ ಆಕ್ಟಿವಿಟಿ ಪ್ರತ್ಯಕ್ಷ ಮಾಡಿ ನೋಡಿದಾಗ ಅನೇಕರಿಗೆ ಡಿಲೀಟ್ ಮಾಡಿದ ಸಂದೇಶಗಳನ್ನು ಓದಲು ಸಾಧ್ಯವಾಗಿದೆ. ಅದರಲ್ಲಿ ಫೋನ್ ಗಳ ನೋಟಿಫಿಕೇಶನ್ ನಲ್ಲಿ ಕಂಡುಬಂದ ಸಂದೇಶಗಳೇ ಅದರಲ್ಲಿಯೂ ಇದ್ದವು.

ಇನ್ನು ಒಂದು ಮಹತ್ವದ ವಿಷಯವೆಂದರೆ ಒಂದು ವೇಳೆ ನೀವು ಮೊಬೈಲ್ ರೀಸ್ಟಾರ್ಟ್ ಮಾಡಿದ್ದಲ್ಲಿ ನೋಟಿಫಿಕೇಶನ್ ಲಾಗ್ ಮಾತ್ರ ಕ್ಲಿಯರ್ ಆಗುತ್ತದೆ. ಆದ್ದರಿಂದ ನೋಟಿಫಿಕೇಶನ್ ಲಾಗ್ ನಲ್ಲಿ ಕಾಣುವ ಮೆಸೇಜುಗಳು ಎಷ್ಟಿರುತ್ತವೆಯೋ ಅಷ್ಟೇ ಮೆಸೇಜ್ಗಳು ನೋಟಿಫಿಕೇಶನ್ ಬಾರ್ ನಲ್ಲಿ ಇರುತ್ತವೆ.

ಇಲ್ಲಿ ಹೇಳುತ್ತಿರುವ ಈ ಟ್ರಿಕ್ ನಲ್ಲಿ ಒಂದು ಲಿಮಿಟ್ ಇದೆ. ಅದೇನೆಂದರೆ ಅಲ್ಲಿ ಬರೀ 100 ಅಕ್ಷರಗಳಷ್ಟೇ ಕಾಣಬಹುದು. ಅದಕ್ಕಿಂತ ಹೆಚ್ಚಿನ ಸಂದೇಶಗಳನ್ನು ನೋಡಲು ಸಾಧ್ಯವಿಲ್ಲ.

ಈ ಫೀಚರ್ ಬರೀ ಆಂಡ್ರಾಯ್ಡ್ 7.0 ಮತ್ತು ಇದಕ್ಕಿಂತ ಮೇಲಿನ ಅಂಡ್ರಾಯ್ಡ್ ಫೋನ್ಗಳಲ್ಲಿ ಇರುತ್ತೆ. ಮೀಡಿಯಾ ಫೈಲ್ ಮಾತ್ರ ಮತ್ತೊಮ್ಮೆ ನೋಡಲು ಸಾಧ್ಯವಿಲ್ಲ.

ಹೀಗೆ ನೋಡಬಹುದಾದ ಮೆಸೇಜ್ ಗಳ ಐಡಿಯಾ ಇದೆ ಮೊದಲಲ್ಲ. ಇದಕ್ಕೂ ಮೊದಲು ಜೊನಾಥನ್ ಜದೀರ್ಸಕಿ ಹೆಸರಿನ iOS ಎಕ್ಸ್ಪರ್ಟ್ ಮಾಡಿದ ಸಾವೆಯ ಪ್ರಕಾರ ವಾಟ್ಸಾಪ್ ಡಿಲೀಟ್ ಮಾಡಿದ ಡೇಟಾ ಸಹಿತ ಡಿವಾಯ್ಸ್ ನಲ್ಲಿ ಸೇವ್ ಆಗಿರುತ್ತೆ ಆದ್ದರಿಂದ ಡಿಲೀಟ್ ಮಾಡಿದ ಸಂದೇಶಗಳನ್ನು ಸಹಜವಾಗಿ ನೋಡಲು ಸಾಧ್ಯವಿದೆ ಎನ್ನುತ್ತಾರೆ.

ಈ ರೀತಿಯಲ್ಲಿ ನೀವು ಇನ್ನೊಬ್ಬರ ಡಿಲೀಟ್ ಮಾಡಿದ ಅಥವಾ ಸ್ವೈಪ್ ಮಾಡಿದ ಮೆಸೇಜ್ ಗಳನ್ನು ನೋಡಿ ಓದಲು ಸಾಧ್ಯವಿದೆ.