ಮಹೇಂದ್ರ ಸಿಂಗ್ ಧೋನಿಯವರು ಹೊಡೆದ ಸಿಕ್ಸ್ ಡೈರೆಕ್ಟ ಸ್ಟೇಡಿಯಂ ಹೊರಗೆ, ಫೀಲ್ಡರ್ ಹೇಳಿದ ‘ಬಾಲ್ ಕಳೆದುಹೋಯಿತು’, ನೋಡಿ ವಿಡಿಯೋ.
ಅಂತೂ ಇಂತೂ ಐಪಿಎಲ್ ಮ್ಯಾಚ್ ಗಳ ಕ್ಷಣಗಣನೆ ಆರಂಭವಾಗಿದೆ.ಬಹಳ ದಿನಗಳ ನಂತರ ಕ್ರಿಕೆಟ್ ಫ್ಯಾನ್ಸ್ ಗಳಿಗೆ ರಸದೌತಣ ದೊರೆಯಲಿದೆ. ಐಪಿಎಲ್ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಗಳ ನಡುವೆ ನಡೆಯಲಿದೆ. ಐಪಿಎಲ್ ಸಮರಕ್ಕಾಗಿ ಎಲ್ಲಾ ಟೀಮ್ ಗಳು ಜಬರ್ದಸ್ತ್ ತಯಾರಿಯಲ್ಲಿ ತೊಡಗಿವೆ. ಚೆನ್ನೈ ಮತ್ತು ಮುಂಬೈ ತಂಡಗಳ ಮಧ್ಯ ನಡೆಯಲಿರುವ ಮೊದಲ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಇವರಿಬ್ಬರು ಹೊಡೆದ ಸಿಕ್ಸ್ ಗಳ ಚರ್ಚೆ ಸದ್ಯಕ್ಕೆ ಜೋರಾಗಿ ನಡೆದಿದೆ. ಮೊನ್ನೆ ಪ್ರಾಕ್ಟೀಸ್ ಮ್ಯಾಚ್ ಒಂದರಲ್ಲಿ ರೋಹಿತ್ ಶರ್ಮಾ ಅವರು ಹೊಡೆದ ಸಿಕ್ಸ್ ನಿಂದ ಬಾಲ್ ಸ್ಟೇಡಿಯಂ ಸಮೀಪದಿಂದ ಹೋಗುತ್ತಿರುವ ಬಸ್ಸಿಗೆ ಬಡಿದಿತ್ತು. ಈಗ ಧೋನಿ ಅವರು ಹೊಡೆದ ಸಿಕ್ಸರ್ ನಿಂದ ಬಾಲ್ ಸ್ಟೇಡಿಯಂ ಹೊರಗೆ ಪಾಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
ವಿಡಿಯೋ ನೋಡಿ….
ಧೋನಿಯವರು ಈ ಶಾಟ್ ಹೊಡೆದಾಗ ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಮುರಳಿ ವಿಜಯ್ ಅವರು ‘ಇದು ಪವರ್ ಅಲ್ಲ ಇದರಲ್ಲಿ ಪರ್ಫೆಕ್ಟ್ ಟೈಮಿಂಗ್ ಇದೆ, ಇಲ್ಲಿ ಬೌಲರ್ ಸಹ ಏನೂ ಮಾಡಲಿಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನು ಹೇಳಿದ್ದು ಕೇಳಿಸುತ್ತದೆ’. ಧೋನಿಯವರು ಕುಳಿತುಕೊಂಡು ಹೊಡೆದ ಈ ಸುಂದರ ಸಿಕ್ಸ್ ನೋಡಿ ಮುರಳಿ ವಿಜಯ್ ಅವರ ಬಾಯಿಯಿಂದ ಮೇಲಿನ ಮಾತುಗಳು ಹೊರಬಿದ್ದಿವೆ. ಅದರೊಂದಿಗೆ ಬಾಲ್ ಸಹ ಕಳೆದುಹೋಯಿತು ಎಂದು ಉಚ್ಚರಿಸಿದ್ದಾರೆ.
ಸಿಎಸ್ಕೆ ತಂಡ 2010, 2011 ಮತ್ತು 2018 ರಲ್ಲಿ ಐಪಿಎಲ್ ಮುಕುಟ ತನ್ನ ಮುಡಿಗೇರಿಸಿಕೊಂಡಿದೆ. ಅದೇ ರೀತಿ ಮುಂಬೈ ತಂಡವು ಸಹಿತ ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿದೆ. ಇದು 2013, 2015, 2017 ಮತ್ತು 2019 ಹೀಗೆ ನಾಲ್ಕು ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
2020 ರ ಐಪಿಎಲ್ ಉದ್ಘಾಟನೆಯ ಪಂದ್ಯ ಈ 2 ದೈತ್ಯ ತಂಡಗಳ ಮಧ್ಯದಲ್ಲಿ ನಡೆಯಲಿದೆ. ನೋಡುವಾ ಈ ಬಾರಿಯ 2020 ರ ಐಪಿಎಲ್ ಮ್ಯಾಚು ಗಳ ಫೈನಲ್ ಯಾರು ತಲುಪುತ್ತಾರೆ? ಮತ್ತು ಕಿರೀಟವನ್ನು ಯಾರು ಮುಡಿಗೇರಿಸಿತ್ತಾರೆ?