ಇದ್ದಕಿದ್ದಂತೆ ಜಗಳ ಮಾಡಲು ಶುರು ಮಾಡಿದ ಕುರಿಗಳು; ಇನ್ನೇನು ಭೀಕರ ಜಗಳವಾಗಬಹುದೆಂದು ತಿಳಿದು ನಾಯಿ ಮಾಡಿದ್ದೇನು? ನೋಡಿ ಈ Video

ಕೆಲವೊಂದು ವೀಡಿಯೋಗಳನ್ನು ನೋಡಿದಾಗ ಅದರಲ್ಲೇನೋ ವಿಶೇಷ ಎನಿಸಿ ನಾವು ಆ ವೀಡಿಯೋಗಳನ್ನು ಮತ್ತೆ ಮತ್ತೆ ನೋಡುತ್ತೇವೆ, ಅದನ್ನು ನಮ್ಮ ಆಪ್ತರಿಗೆ ಶೇರ್ ಕೂಡಾ ಮಾಡುತ್ತೇವ. ಅದರಲ್ಲೂ ವಿಶೇಷವಾಗಿ ಪ್ರಾಣಿಗಳ ತುಂಟಾಟ ಅವುಗಳ ಓಡಾಟ, ಅವುಗಳ ಆಟ ಇವೆಲ್ಲವುಗಳನ್ನು ನೋಡಿದರೆ ಮನಸ್ಸಿಗೆ ಒಂದು ಸಂತಸ ದೊರಕುತ್ತದೆ. ಏಕೆಂದರೆ ಪ್ರತಿ ದಿನ ನೋಡಿದ್ದನ್ನೇ ನೋಡುವ ನಮಗೆ ಈ ಪ್ರಾಣಿಗಳ ಆಟ ಅಥವಾ ತುಂಟಾಟಗಳು ಕೆಲವೊಮ್ಮೆ ಅವು ತೋರಿಸುವ ಬುದ್ಧಿವಂತಿಕೆ ಹೀಗೆ ಹಲವು ವಿಷಯಗಳು ಗಮನ ಸೆಳೆಯುತ್ತವೆ. ಅದರಲ್ಲೂ ನಾವು ಸಾಕಿರುವ ಪ್ರಾಣಿಗಳ ಆಟ ನಮಗೆ ಇನ್ನಷ್ಟು ಖುಷಿಯನ್ನು ಕೂಡಾ ನೀಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.‌

ಸಾಕು ಪ್ರಾಣಿಗಳಿಗೆ ಬುದ್ಧಿಯನ್ನು ಕಲಿಸುವುದು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಅವುಗಳಿಗೆ ನಾವು ಸಣ್ಣ ಪುಟ್ಟ ವಿಷಯಗಳ ಬಗ್ಗೆ ತರಬೇತಿಯನ್ನು ನೀಡುತ್ತೇವೆ, ನಾವು ಕೊಟ್ಟ ತರಬೇತಿಯ ಪ್ರಕಾರ ಅವು ನಡೆದುಕೊಂಡಾಗ ನಮಗೆ ಎಲ್ಲಿಲ್ಲದ ಖುಷಿ ಎನಿಸುತ್ತದೆ‌ ಹಾಗೂ ನಾವು ಅವುಗಳಿಗೆ ಇನ್ನೂ ಹೊಸ ಹೊಸ ತರಬೇತಿಯನ್ನು ನೀಡಲು ಪ್ರಯತ್ನ ಕೂಡಾ ಪಡುತ್ತೇವೆ. ಇನ್ನು ವಿದೇಶಗಳಲ್ಲಿ ನಾಯಿಗಳನ್ನು ವಿಶೇಷವಾಗಿ ತರಬೇತುಗೊಳಿಸಲಾಗುತ್ತದೆ. ಅವುಗಳ ಮೂಲಕ ಕೆಲಸಗಳನ್ನು ಕೂಡಾ ಮಾಡಿಸಲಾಗುತ್ತದೆ. ಅವು ತರಬೇತಿ ಪಡೆದು ಮಾಡುವ ಕೆಲಸಗಳನ್ನು ನೋಡಿದಾಗ ಆಶ್ಚರ್ಯ ಎನಿಸುತ್ತದೆ.

ಸೋಶಿಯಲ್ ಮೀಡಿಯಾ ದಲ್ಲಿ ಕೂಡಾ ಇಂತಹ ವಿಶೇಷ ವೀಡಿಯೋಗಳು ಶೇರ್ ಆದಾಗ ನೋಡಲು ಬಹಳ ಕುತೂಹಲ ಹಾಗೂ ಆಸಕ್ತಿಕರವಾಗಿ ನಮಗೆ ಕಾಣುತ್ತದೆ. ಇಂತಹುದೇ ಒಂದು ವೀಡಿಯೋ ಒಂದು ಈಗ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ಇದರಲ್ಲಿ ಎರಡು ಬಲಿಷ್ಠವಾದ ಕುರಿಗಳು ಒಂದನ್ನೊಂದು ಕಾಳಗಕ್ಕೆ ಆಹ್ವಾನವನ್ನು ನೀಡಿದಂತೆ ಕಂಡು ಬಂದಿದೆ. ಆಹ್ವಾನದ ನಂತರ ಒಂದನ್ನೊಂದು ತಲೆಗೆ ತಲೆಗೆ ಬಲವಾಗಿ ಗುದ್ದಿಕೊಂಡಿವೆ‌. ಅವುಗಳನ್ನು ಹಾಗೇ ಬಿಟ್ಟಿದ್ದರೆ ಬಹುಶಃ ಅವರೆಡರ ನಡುವೆ ಒಂದು ಭೀಕರ ಕುಸ್ತಿ ನಡೆಯುವ ಎಲ್ಲಾ ಅವಕಾಶಗಳು ಕೂಡಾ ಇರುವಂತೆ ಕಾಣುತ್ತಿದೆ.

ಆದರೆ ಅವರೆಡೂ ಹಾಗೆ ಒಂದರ ಮೇಲೊಂದು ಧಾಳಿ ಮಾಡಿದ್ದನ್ನು ಗಮನಿಸಿದ ನಾಯಿ ಕೂಡಲೇ ಅವುಗಳ ಮಧ್ಯೆ ಬಂದು ಅವುಗಳ ಆ ಜಗಳವನ್ನು ನಿಲ್ಲಿಸಿದೆ. ಆ ಸಮಯದಲ್ಲಿ ನಾಯಿ ಅಷ್ಟು ಬೇಗ ಅಲ್ಲಿನ ಸನ್ನಿವೇಶವನ್ನು ಅರಿತು ಅಲ್ಲಿಗೆ ಬಂದು ಕುರಿಗಳನ್ನು ತಡೆದಿದ್ದು ನೋಡುವರಿಗೆ ಖಚಿತವಾಗಿ ಆಶ್ಚರ್ಯ ಬನ್ನು ಉಂಟು ಮಾಡುತ್ತದೆ. ಈ ವೀಡಿಯೋವನ್ನು ಈಗಾಗಲೇ 76 ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, ಆರು ಸಾವಿರದ ಹತ್ತಿರಕ್ಕೆ ಲೈಕ್ ಗಳು ತಲುಪುತ್ತಿದ್ದು, ಈಗಾಗಲೇ ಸಾವಿರಕ್ಕಿಂತ ಅಧಿಕ ಮಂದಿ ಕಾಮೆಂಟ್ ಹಾಗೂ ರೀಟ್ವೀಟ್ ಮಾಡಿದ್ದಾರೆ.

ವಿಡಿಯೋ ನೋಡಿ….

ವೀಡಿಯೋ ನೀಡಿದ ಟ್ವಿಟರ್ ಬಳಕೆದಾರರಲ್ಲಿ ಅನೇಕರು ನಾಯಿಯ ಆ ಬುದ್ಧಿವಂತಿಕೆಯನ್ನು ಮೆಚ್ಚಿದ್ದಾರೆ. ಕೆಲವರು ಹಾಸ್ಯ ಭರಿತವಾಗಿ ನಾಯಿ ಏನಾದರೂ ಆ ಕುರಿಗಳು ಒಂದರ ಮೇಲೊಂದು ಧಾಳಿ ಮಾಡುವಾಗ ಅವುಗಳ ಮಧ್ಯೆ ಬಂದಿದ್ದರೇ ಪಾಪ ಅದರ ಗತಿ ಏನಾಗುತ್ತಿತ್ತು ಎಂದಿದ್ದಾರೆ. ಕೆಲವರು ಬಹಳ ಒಳ್ಳೆಯ ನಾಯಿ ಎಂದರೆ, ಮತ್ತೆ ಕೆಲವರು ಅದೇನು ಅವರೆಡು ತಲೆ ಬಡಿದುಕೊಳ್ಳಲಿ ಎಂದು ಕಾಯುತ್ತಿತ್ತಾ ಎಂದು ಕೂಡಾ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಟ್ಟಾರೆ ವೀಡಿಯೋ ಮಾತ್ರ ಭರ್ಜರಿಯಾಗಿ ವೀಕ್ಷಿಸಲ್ಪಟ್ಟು ಜನರ ಮೆಚ್ಚುಗೆ ಪಡೆಯುತ್ತಿದೆ.‌