ಹಕ್ಕಿಯ ಬೇಟೆಯಾಡಲು ಹೊಂಚು ಹಾಕಿ ಕುಳಿತ ಬೆಕ್ಕಿನ ಮರಿ; ಅದೇ ಸಮಯಕ್ಕೆ ಇನ್ನೊಂದು ಬೆಕ್ಕು ಬಂದು ಮಾಡಿತು ಎಡವಟ್ಟು! Viral Video
ಸಾಕು ಪ್ರಾಣಿಗಳನ್ನು ಇಷ್ಟ ಪಡುವವರು ಅಸಂಖ್ಯಾತ ಜನರಿದ್ದಾರೆ. ಆದರೆ ಕೆಲವರಿಗೆ ಮಾತ್ರ ಅವುಗಳನ್ನು ಸಾಕುವುದು ಹಿಡಿಸುವುದಿಲ್ಲ. ಆದರೆ ಸಾಕು ಪ್ರಾಣಿಗಳನ್ನು ಕೂಡಾ ಮನೆ ಮಕ್ಕಳಂತೆ ಸಾಕಿ ಸಲಹಿ ಪ್ರೀತಿ ತೋರಿಸುವ ಜನರಿಗೆ ಅವರ ಸಾಕು ಪ್ರಾಣಿಗಳ ಆಟಗಳು ನೋಡಲು ಬಲು ಹಿತ. ಸಾಕುಪ್ರಾಣಿಗಳಲ್ಲಿ ಮಾನವರಿಗೆ ಬಹಳ ಹತ್ತಿರವಾದ ಪ್ರಾಣಿಗಳು ಎಂದರೆ ನಾಯಿ ಮತ್ತು ಬೆಕ್ಕು. ಅದರಲ್ಲೂ ಬೆಕ್ಕಂತೂ ಸಾಕಿದವರ ಬಳಿ ಬಹಳ ಸಲುಗೆಯಿಂದ ಇರುತ್ತದೆ. ಬೆಕ್ಕು ಆಡುವ ಆಟಗಳು ಕೂಡಾ ತುಂಬಾ ಆಸಕ್ತಿಕರ ಹಾಗೂ ಒಳ್ಳೆ ಎಂಟರ್ಟೈನ್ಮೆಂಟ್ ಕೂಡಾ ಎಂಬುದರಲ್ಲಿ ಎರಡು ಮಾತಿಲ್ಲ. ಬೆಕ್ಕಿನ ತುಂಟಾಟವು ಕೇವಲ ನಾವು ಸಾಕಿದ ಬೆಕ್ಕುಗಳಲ್ಲಿ ಮಾತ್ರವೇ ಅಲ್ಲ, ಕಾಡಿನಲ್ಲಿ ವಾಸಿಸುವ ಬೆಕ್ಕುಗಳಲ್ಲಿ ಕೂಡಾ ಕಂಡು ಬರುತ್ತದೆ.
ಬೆಕ್ಕುಗಳು ಬೇಟೆಯಾಡುವುದನ್ನು ನಾವು ಕೂಡಾ ನೋಡಿರುತ್ತೇವೆ. ಇಲ್ಲಿಯನ್ನೋ , ಹೊರಗೆ ಸಣ್ಣ ಪುಟ್ಟ ಹಕ್ಕಿಗಳನ್ನೋ ಹಿಡಿಯುವುದರಲ್ಲಿ ಬೆಕ್ಕಿ ಬಲು ಜಾಣ. ಮೊದಲು ಹೊಂಚು ಹಾಕಿ, ಅನಂತರ ಹೆಜ್ಜೆಯ ಸದ್ದು ಕೂಡಾ ಆಗದ ಹಾಗೆ ಕಳ್ಳ ಹೆಜ್ಜೆಗಳನ್ನು ಹಾಕಿ ತನ್ನ ಭೇಟೆಯನ್ನು ಹಿಡಿಯುವ ಕಲೆ ಬೆಕ್ಕುಗಳಿಗೆ ಕರಗತವಾಗಿರುತ್ತದೆ. ಸೋಶಿಯಲ್ ಮೀಡಿಯಾ ದಲ್ಲಿ ಇಂತಹುದೇ ಒಂದು ವೀಡಿಯೋ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಆದರೆ ಇಲ್ಲಿ ಇರುವುದು ಸಾಲು ಬೆಕ್ಕಲ್ಲ. ಬದಲಿಗೆ ಕಾಡಿನಲ್ಲಿ ವಾಸಿಸುವ ಒಂದು ವಿಶೇಷ ಜಾತಿಯ ಬೆಕ್ಕು. ಆಂಗ ಭಾಷೆಯಲ್ಲಿ ಈ ಬೆನ್ನನ್ನು ಪಲ್ಲಾಸ್ ಕಿಟನ್ ಎನ್ನುವ ಹೆಸರಿನಿಂದ ಗುರುತಿಸಲಾಗಿದೆ.
ಈ ಬೆಕ್ಕುಗಳು ಕೂಡಾ ತಮ್ಮ ಬೇಟೆಯನ್ನು ಹಿಡಿಯುವ ಮೊದಲು ಬಹಳ ನಿಶ್ಯಬ್ಧವಾಗಿ ಹೊಂಚನ್ನು ಹಾಕುತ್ತವೆ. ಹೇಗೆ ಅವು ಹೊಂಚು ಹಾಕುತ್ತಾ ಕೂರುತ್ತದೆ ಎನ್ನುವುದಕ್ಕೆ ಉದಾಹರಣೆ ಈಗ ವೈರಲ್ ಆಗುತ್ತಿರುವ ವೀಡಿಯೋ. ವೀಡಿಯೋದಲ್ಲಿ ಬೆಕ್ಕು ತನಗಿಂತ ಸ್ವಲ್ಪವೇ ದೂರದಲ್ಲಿ ಒಂದು ಬಂಡೆಯ ಮೇಲೆ ಕುಳಿತ ಹಕ್ಕಿಯೊಂದನ್ನು ಹಿಡಿಯಲು ತಾನು ಇನ್ನೊಂದು ಬಂಡೆಯ ಮರೆಯಿಂದ ಹೊಂಚು ಹಾಕುತ್ತಿರುವುದು ಕಾಣುತ್ತದೆ. ಬೆಕ್ಕು ಅಲ್ಲಿರುವ ಸುಳಿವು ಕೂಡಾ ಇಲ್ಲದ ಹಕ್ಕಿ ತನ್ನ ಪಾಡಿಗೆ ತಾನು ಆರಾಮವಾಗಿ ಕುಳಿತಿರುವುದನ್ನು ನಾವು ಗಮನಿಸಬಹುದು.
ಹೊಂಚು ಹಾಕಿ, ಸಂಚು ನಡೆಸಿ ಹಕ್ಕಿಯನ್ನು ಭೇಟೆಯಾಡಲು ಸಿದ್ಧ ವಾಗಿದ್ದ ಆ ರಣ ಬೇಟೆಗಾರ ಬೆಕ್ಕು ಬೇಟೆಯನ್ನು ತನ್ನದಾಗಿಸಿಕೊಳ್ಳುವ ಮೊದಲೇ ಆ ಹಕ್ಕಿ ಅಲ್ಲಿಂದ ಪುರ್ರ್…. ಎಂದು ಹಾರಿ ಹೋಗಿದೆ. ಪಾಪಾ ಬೆಕ್ಕು ಅಷ್ಟು ಹೊತ್ತು ಮಾಡಿದ ಯೋಜನೆ ವ್ಯರ್ಥವಾಗಿ ಹೋಗಿದ್ದು ಮಾತ್ರ ಇನ್ನೊಂದು ಬೆಕ್ಕು ಅಲ್ಲಿಗೆ ಬಂದಿದ್ದು. ಅದು ಬಂದ ಕೂಡಲೇ ಹಕ್ಕಿಗೆ ಹೇಗೆ ತಿಳಿಯಿತೋ ಒಟ್ಟಾರೆ ಅದು ತನ್ನ ಪ್ರಾಣವನ್ನು ಉಳಿಸಿಕೊಂಡು ಅಲ್ಲಿಂದ ಹಾರಿ ಹೋಗಿದೆ. ಬಹುಶಃ ಆ ಹಕ್ಕಿಯ ಆಯುಷ್ಯ ಬಹಳ ಗಟ್ಟಿಯಾಗಿತ್ತೇನೋ ಎನ್ನುವಂತೆ ನಮಗೆ ಭಾಸವಾಗುತ್ತದೆ. ಅಲ್ಲದೇ ಬೆಕ್ಕಿನ ಬೇಟೆಯನ್ನು ಹಾಳು ಮಾಡಿದ ಮತ್ತೊಂದು ಬೆಕ್ಕು ಮೊದಲಿನ ಬೆಕ್ಕಿನ ಮೇಲೆ ಬಿದ್ದು ತುಂಟಾಟ ನಡೆಸಿದೆ.
ವಿಡಿಯೋ ನೋಡಿ…
A Pallas kitten getting ambushed during their hunt pic.twitter.com/uIR8HZc4QB
— Back To Nature (@backt0nature) September 15, 2020
ಬಹುಶಃ ಅದು ತಾನು ಮಾಡಿದ ತಪ್ಪಿಗೆ ಇನ್ನೊಂದು ಬೆಕ್ಕನ್ನು ಮುದ್ದಾಡಿ ಸಮಾಧಾನ ಮಾಡುವಂತೆ ಕಾಣುತ್ತಿದೆ ವೀಡಿಯೋ. ಈ ವೀಡಿಯೋವನ್ನು ಈಗಾಗಲೇ ಹನ್ನೆರಡು ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದು, ಕೆಲವರು ನೋಡಲು ಭಯ ಎನಿಸಿದರೂ, ತುಂಬಾ ಕ್ಯೂಟ್ ಆಗಿದೆ, ಬೆಕ್ಕುಗಳು ಸದಾ ಕೂಡಾ ಕ್ಯೂಟ್ ಆಗಿರುವ ಪ್ರಾಣಿಗಳು ಎಂದು ತಮ್ಮ ಮೆಚ್ಚುಗೆಯನ್ನು ಹೊರಹಾಕಿದ್ದಾರೆ. ಇತರರ ಮಾತು ಏನೇ ಆದರೂ ಒಮ್ಮೆ ವೀಡಿಯೋ ನೋಡಿದರೆ ನಮಗೂ ಕೂಡಾ ಖಂಡಿತ ಈ ವೀಡಿಯೋ ಇಷ್ಟವಾಗುತ್ತದೆ.