Video: ರಸ್ತೆಯ ಮೂಲಕ ಹಾದುಹೋಗುವ ಪ್ರವಾಸಿಗರ ಮುಂದೆ ಕಾಣಿಸಿಕೊಂಡ ಭೂತ!

ಭೂತ ಪ್ರೇತಗಳ ಬಗ್ಗೆ ನಿಮಗೆ ನಂಬಿಕೆ ಇಲ್ಲ ಎನ್ನುವುದಾದರೆ ನಿಮ್ಮ ಈ ಆಲೋಚನೆಯನ್ನು ಬದಲಿಸುವಂತಹ ಒಂದು ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ರೆಕಾರ್ಡ್ ಆಗಿರುವುದು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ. ಇಲ್ಲಿ ಪರ್ಯಟನೆ ಮಾಡಲು ಬಂದವರ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ಕೆಲವು ದೃಶ್ಯಗಳನ್ನು ನೋಡಿದವರು ವಿಸ್ಮಯ ವನ್ನು ವ್ಯಕ್ತಪಡಿಸುವಂತೆ ಮಾತ್ರವೇ ಅಲ್ಲದೇ ಗಾಬರಿಯನ್ನುಂಟು ಮಾಡುವ ಹಾಗೆ ಕೂಡಾ ಇದೆ. ಗೆಟಿಸ್ ಬರ್ಗ್ ನಿಂದ ಹೊರಬಂದಿರುವ ಈ ವೀಡಿಯೋದಲ್ಲಿ ವಿಸ್ಮಯ ಎನ್ನುವಂತೆ ಭೂತದ ಅಸ್ತಿತ್ವವು ಕಂಡು ಬಂದಿದ್ದು, ಇಂತಹ ವಿಚಾರಗಳ ಬಗ್ಗೆ ನಂಬಿಕೆ ಇಲ್ಲದವರು ಮತ್ತೊಮ್ಮೆ ಆಲೋಚನೆ ಮಾಡುವಂತೆ ಆಗಿದೆ.‌

ಲಭ್ಯವಿರುವ ಮಾಹಿತಿಗಳ ಪ್ರಕಾರ ಪರಿವಾರವೊಂದು ಕೆಲವು ದಿನಗಳ ಹಿಂದೆ ಸಿವಿಲ್ ವಾ ರ್ ಸೈಟ್ ಕಡೆಯಿಂದ ತಮ್ಮ ಕಾರಿನಲ್ಲಿ ಸಾಗುವಾಗ ಅವರಿಗೆ ಎರಡು ಭೂತದ ಛಾಯೆಗಳು ಅಥವಾ ನೆರಳುಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ.‌ ಕಾರಿನಲ್ಲಿ ಇದ್ದವರು ಹೇಗೋ ಆ ಭೂತದ ಛಾಯೆಗಳನ್ನು ತಮ್ಮ ಕ್ಯಾಮೆರಾಗಳ ಮೂಲಕ ಸೆ ರೆ ಹಿಡಿಯುವಲ್ಲಿ ಸಫಲರಾಗಿದ್ದಾರೆ, ಅವರು ಹಾಗೆ ಸೆ ರೆ ಹಿಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದ್ದು, ನೋಡಿದವರು ಅದನ್ನು ನಂಬುವುದೋ ಬಿಡುವುದೋ ಎನ್ನುವ ಗೊಂದಲದಲ್ಲಿ ಇದ್ದರೆ, ಇಂತಹ ವಿಷಯಗಳನ್ನು ನಂಬುವವರಿಗೆ ಮಾತ್ರ ವೀಡಿಯೋ ಭ ಯ ವನ್ನು ಹುಟ್ಟಿಸಿದೆ.

ಆ ಸ್ಥಳದಲ್ಲಿ ಬಹಳ ವರ್ಷಗಳ ಹಿಂದೆ ಆಂತರಿಕ ಯು ದ್ಧ ನಡೆದ ಸಂದರ್ಭದಲ್ಲಿ ಅಲ್ಲಿ ಸಾವಿರಾರು ಜನ ಯೋಧರು ತಮ್ಮ ಜೀವವನ್ನು ಕಳೆದುಕೊಂಡಿದ್ದರು ಎನ್ನಲಾಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಇದೇ ಜಾಗದಲ್ಲಿ ಎರಡು ಆ ತ್ಮ ಗಳು ಆ ಪ್ರದೇಶದಲ್ಲೆಲ್ಲಾ ಸುತ್ತಾಡುತ್ತಾ ಇರುವುದನ್ನ ನೋಡಬಹುದಾಗಿದೆ‌. ಈ ಸನ್ನಿವೇಶಕ್ಕೆ ಸಾಕ್ಷಿಯಾದ ಕುಟುಂಬದ ಯುಲಿಂಗ್ ಎನ್ನುವವರು ಮಾತನಾಡುತ್ತಾ ಅಂದು ರಾತ್ರಿ ಕಾರಿನಲ್ಲಿ ಹೋಗುವಾಗ ಆ ಸ್ಥಳದಲ್ಲಿ ನನಗೆ ಬಲಗಡೆ ಏನೋ ಸದ್ದುಗಳು ಕೇಳಿಸಿತು, ನಮ್ಮ ಅಂಕಲ್ ಅವರಿಗೆ ಎಡಗಡೆ ಸದ್ದು ಕೇಳಿಸಿತ್ತು. ಆಗ ಹೊರಗೆ ಮಾನವರ ಆಕಾರಗಳಲ್ಲಿ ಕೆಲವರು ಓಡಾಡುತ್ತಿರುವ ಹಾಗೆ ಕಂಡಿತು.

ವಿಡಿಯೋ ನೋಡಿ….

ಆ ಜಾಗದಲ್ಲಿ ಇರಿಸಲಾಗಿರುವ ಫಿ ರಂಗಿಗಳ ಮುಂದೆ, ಅಕ್ಕ ಪಕ್ಕ ಅವು ಓಡಾಡುವುದು ಕಂಡಿತ್ತು. ಅವು ಖಚಿತವಾಗಿ ಮನುಷ್ಯರಾಗಿರಲಿಲ್ಲ‌. ಆ ದೃಶ್ಯ ನೋಡಿದ ಮೇಲೆ ನಾವು ಗಾಬರಿ ಹಾಗೂ ಭ ಯದಿಂದ ಅಲ್ಲಿಂದ ವಾಪಸ್ಸು ಬಂದು ಬಿಟ್ಟೆವು, ಅನಂತರ ರೆಕಾರ್ಡ್ ಆದ ವೀಡಿಯೋ ನೋಡಿದಾಗ ನಮಗೂ ಕೂಡಾ ಶಾ ಕ್ ಆಗಿತ್ತು ಎನ್ನುತ್ತಾರೆ. ಅವರು ತಾವು ಮಾಡಿದ ವೀಡಿಯೋವನ್ನು ಇಂಟರ್ನೆಟ್ ನಲ್ಲಿ ಶೇರ್ ಮಾಡಿದ ನಂತರ ಅದು ಎಲ್ಲೆಡೆ ವೈರಲ್ ಆಗುತ್ತಾ ಸಾಗಿದೆ. ಈ ವೀಡಿಯೋದಲ್ಲಿ ಭೂ ತಗಳು ಸ್ಪಷ್ಟವಾದ ರೀತಿಯಲ್ಲಿ ಕಾಣುತ್ತಿವೆ ಎಂದು ಅನೇಕರು ಆ ವೀಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೀಡಿಯೋ ಯಾವುದೇ ರೀತಿಯಲ್ಲಿ ಎಡಿಟ್ ಮಾಡಿರುವುದಲ್ಲ ಎಂದು ಸ್ಪಷ್ಟನೆ ಕೂಡಾ ನೀಡಲಾಗಿದೆ.