ಕಾಡಿನಲ್ಲಿ ನೀರಿನ ತೊರೆ ದಾಟುತ್ತಿರುವ ಗೋರಿಲ್ಲಾ; ಕಾಲುಗಳು ಒದ್ದೆಯಾಗಬಾರದೆಂದು ಮಾಡಿದ್ದೇನು? ಗೋರಿಲ್ಲಾ ಬುದ್ಧಿವಂತಿಕೆ ಮೆಚ್ಚಿದ ಜನ!
ಕೆಲವೊಂದು ವೀಡಿಯೋಗಳು ಹಾಗೂ ಕೆಲವು ದೃಶ್ಯಗಳನ್ನು ನೋಡಿದಾಗ ಅದನ್ನು ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ವಿಶೇಷವಾಗಿ ಪ್ರಾಣಿಗಳ ಮುಗ್ಧತೆಯನ್ನು ಬಿಂಬಿಸುವ ವೀಡಿಯೋಗಳು, ಫೋಟೋಗಳಾದರೆ ಅವುಗಳನ್ನು ನೋಡುವಾಗ ಅಬ್ಬಾ ಸೋ ಸ್ವೀಟ್ ಎನಿಸುವುದು ಮಾತ್ರವೇ ಅಲ್ಲದೇ ಪ್ರಾಣಿಗಳ ಇನ್ನೊಂದು ಮುಖ, ವಿಚಿತ್ರ ವರ್ತನೆ ನಮ್ಮ ಕಣ್ಮುಂದೆ ಬಂದಾಗ, ಅರೆ ಇಷ್ಟು ದಿನ ನಾವು ನೋಡುತ್ತಿದ್ದ ಪ್ರಾಣಿಗಳು ಇವೇನಾ? ಇವುಗಳಲ್ಲಿ ಇಂತಹ ವಿಶೇಷ ಗುಣಗಳು ಅಡಗಿವೆಯಾ? ಎನ್ನುವ ಆಶ್ಚರ್ಯ ಕೂಡಾ ಮೂಡುತ್ತದೆ. ಪ್ರತಿಯೊಂದು ಪ್ರಾಣಿಗೂ ಕೂಡಾ ಅದರದ್ದೇ ಆದ ಇಷ್ಟ ಗಳು , ವರ್ತನೆಗಳು, ಹಿಡಿಸದೇ ಇರುವ ವಿಷಯಗಳು ಕೂಡಾ ಇರುತ್ತವೆ ಎಂಬುದು ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲವಷ್ಟೇ. ಆದರೆ ತಿಳಿದರೆ ಆಶ್ಚರ್ಯ ಎನಿಸುವುದು ಮಾತ್ರ ಖಚಿತ.
ಸೋಶಿಯಲ್ ಮೀಡಿಯಾದಲ್ಲಿ ಗೊರಿಲ್ಲಾದ ಒಂದು ವೀಡಿಯೋ ನೆಟ್ಟಿಗರನ್ನು ಬಹಳವಾಗಿ ತನ್ನತ್ತ ಸೆಳೆಯುತ್ತಿದೆ. ಸೆಪ್ಟೆಂಬರ್ 14 ರಂದು ಟ್ವಿಟರ್ ನಲ್ಲಿ ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ 33ಸಾವಿರಕ್ಕಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೇ ಸಾವಿರಕ್ಕಿಂತ ಅಧಿಕ ಮಂದಿ ಇಷ್ಟ ಪಟ್ಟಿದ್ದು ವೀಡಿಯೋದಲ್ಲಿ ಗೊರಿಲ್ಲಾದ ವರ್ತನೆ ನೋಡಿದ ನೆಟ್ಟಿಗರು ಕೂಡಾ ಬೆರಗಾಗಿದ್ದಾರೆ, ಆಶ್ಚರ್ಯ ಪಟ್ಟಿದ್ದಾರೆ ಹಾಗೂ ಗೊರಿಲ್ಲಾ ಮಾಡಿದ ಕೆಲಸ ನೋಡಿ ಕೆಲವರು ಎಂತಹ ಬುದ್ಧಿವಂತಿಕೆ ಎಂದರೆ ಇನ್ನೂ ಕೆಲವರು ಅದನ್ನು ನೋಡಿ ನಕ್ಕಿದ್ದಾರೆ ಕೂಡಾ. ಹಾಗಾದರೆ ಆ ಗೊರಿಲ್ಲಾ ಅಂತಹ ವಿಚಿತ್ರ ಅಥವಾ ವಿಶೇಷವಾಗಿರುವುದೇನು ಮಾಡಿತು ಎನ್ನುವ ಪ್ರಶ್ನೆ ನಿಮ್ಮದಾದರೆ ಉತ್ತರ ಇಲ್ಲೇ ಇದೆ.
ಯಾವುದೋ ಒಂದು ಕಾಡಿನಲ್ಲಿ ರೆಕಾರ್ಡ್ ಆಗಿರುವ ಈ ವೀಡಿಯೋದಲ್ಲಿ ಒಂದು ಗೊರಿಲ್ಲಾ ಕಾಡಿನ ಹಾದಿಯಲ್ಲಿ ನಡೆದು ಬರುವುದನ್ನು ನಾವು ನೋಡಬಹುದು. ಹಾಗೆ ನಡೆದು ಬಂದ ಗೊರಿಲ್ಲಾ ಹಾದಿಯಲ್ಲಿ ಒಂದು ಸಣ್ಣ ನೀರಿನ ತೊರೆ ಅದರ ಮಾರ್ಗಕ್ಕೆ ಅಡ್ಡಲಾಗಿ ಹರಿಯುತ್ತಿದೆ. ಗೊರಿಲ್ಲಾ ತೊರೆಯನ್ನು ದಾಟಿ ಇನ್ನೊಂದು ಬದಿಗೆ ಹೋಗಬೇಕಾಗಿದೆ. ಪ್ರಾಣಿಯಾದ ಅದು ತೊರೆಯ ಬಳಿಗೆ ಬರುವಾಗ ನಾಲ್ಕು ಕಾಲುಗಳಲ್ಲಿ ನಡೆದು ಬಂದಿದೆ. ಆದರೆ ನೀರಿನ ತೊರೆಯನ್ನು ದಾಟಲು ಅದು ಮಾಡಿದ ಕಾರ್ಯ ಮಾತ್ರ ಯಾರೂ ಕೂಡಾ ಊಹಿಸಲು ಸಾಧ್ಯವಿಲ್ಲ ಎನ್ನುವಂತೆ ಇದೆ.
ವಿಡಿಯೋ ನೋಡಿ…
Gorilla doesn't want to get his knuckles wet pic.twitter.com/cKbZT6p7yG
— Nature & Animals 🌴 (@AnimalsWorId) September 13, 2020
ನೀರಿನ ಬಳಿ ಬಂದ ಗೊರಿಲ್ಲಾ ತನ್ನ ಮುಂದಿನ ಎರಡು ಕಾಲುಗಳು ತೇವ ಆಗಬಾರದೆಂದು ಮನುಷ್ಯನ ರೀತಿಯಲ್ಲಿ ಎದ್ದು ನಿಂತು, ತನ್ನ ಹಿಂಗಾಲುಗಳನ್ನು ಬಳಸಿಕೊಂಡು ಮನುಷ್ಯನಂತೆ ಎರಡು ಕಾಲುಗಳಲ್ಲಿ ನಡೆಯುತ್ತಾ ನೀರಿನ ತೊರೆಯನ್ನು ದಾಟಿದೆ. ತನ್ನ ಮುಂಗಾಲುಗಳಿಗೆ ಎಲ್ಲಿ ನೀರಿ ಅಂಟಿಬಿಡುತ್ತದೋ, ಎಲ್ಲಿ ಒದ್ದೆಯಾಗಿ ಬಿಡುತ್ತದೋ ಎಂದು ಎಚ್ಚರಿಕೆಯನ್ನು ವಹಿಸಿ ನೀರಿನ ಮೇಲೆ ನಡೆದು ತೊರೆಯನ್ನು ದಾಟುವ ಗೊರಿಲ್ಲಾ ವನ್ನು ನೋಡಿದ ನೆಟ್ಟಿಗರು ಕೂಡಾ ಬಹಳ ಖುಷಿ ಪಟ್ಟಿದ್ದಾರೆ. ಕೆಲವರು ಕಾಮೆಂಟ್ ಗಳಲ್ಲಿ ನಗುವಿನ ಸಿಂಬಲ್ ಗಳನ್ನು ಹಾಕಿದ್ದಾರೆ. ಮತ್ತೆ ಕೆಲವರು ಗೊರಿಲ್ಲಾಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.