Viral Video: ಬೆಕ್ಕುಗಳ ಜಗಳ ಬಿಡಿಸಲು ಆಟಿಗೆ ಯಂತ್ರವೊಂದನ್ನು ಅವುಗಳ ಕಡೆಗೆ ಬಿಟ್ಟ ಮಾಲೀಕ; ಬೆಕ್ಕಿನ ರಿಯಾಕ್ಷನ್ ನೋಡಿದರೆ ಶಾಕ್!

ಬೆಕ್ಕುಗಳು ಮಾನವರು ಇಷ್ಟಪಡುವ ಸಾಕು ಪ್ರಾಣಿಗಳಲ್ಲಿ ಬಹಳ ಪ್ರಮುಖವಾದ ಪ್ರಾಣಿ‌ ಕೂಡಾ ಇದಾಗಿದ್ದು ಬೆಕ್ಕುಗಳನ್ನು ಸಾಕುವುದು ಎಂದರೆ ಹಲವರಿಗೆ ಬಹಳ ಪ್ರಿಯವಾದುದು. ಅದೂ ಅಲ್ಲದೇ ವಿದೇಶಗಳಲ್ಲಿ ಕೂಡಾ ಬೆಕ್ಕುಗಳನ್ನು ಸಾಕುವವರು ಹೆಚ್ಚು‌. ಬೇರೆ ಸಾಕು ಪ್ರಾಣಿಗಳಿಗೆ ಹೋಲಿಕೆ ಮಾಡಿದರೆ ಬೆಕ್ಕನ್ನು ಸಾಕುವುದು ಕಷ್ಟ ಎನಿಸುವುದಿಲ್ಲ. ಏಕೆಂದರೆ ಅವುಗಳಿಗೆ ಆಹಾರ ನೀಡಿದರೆ ಸಾಕು, ಇನ್ನುಳಿದ ಕೆಲಸಗಳನ್ನು ಅದು ತನ್ನ ಪಾಡಿಗೆ ತಾನು ಮಾಡಿಕೊಳ್ಳುವುದು ಮಾತ್ರವೇ ಅಲ್ಲದೇ ಮನೆಯಲ್ಲಿ ಒಂದು ಮೂಲೆಯಲ್ಲಿ ಆರಾಮಾಗಿ ಸೋಂಬೇರಿಯಂತೆ ನಿದ್ರೆ ಮಾಡುತ್ತಾ ಇರುತ್ತದೆ‌. ಆದರೆ ಬೆಕ್ಕುಗಳು ಚಟುವಟಿಕೆಯಲ್ಲಿರುವಾಗ ಮಾತ್ರ ಬಹಳ ಚುರುಕಾಗಿರುತ್ತವೆ, ಹೆಚ್ಚು ಸಕ್ತಿಯವಾಗಿ ಇರುತ್ತದೆ ಎಂಬುದು ಕೂಡಾ ಸುಳ್ಳಲ್ಲ.

ಇನ್ನು ಟಾಮ್ ಅಂಡ್ ಜೆರ್ರಿ ಸಿರೀಸ್ ನೋಡಿರುವವರಿಗೆ ಬೆಕ್ಕು ಇಲಿಯ ಆಟ ನೋಡಿದಾಗ ಅದೊಂದು ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಕೊಡುವ ಶೋ ಆಗಿ ಕಾಣುವುದು ಮಾತ್ರವೇ ಅಲ್ಲದೇ ಬೆಕ್ಕಿನ ಜಾಣತನ ನೋಡಿದಾಗ ಇದೆಲ್ಲಾ ಸಿನಿಮಾ ಅಥವಾ ಕಾರ್ಟೂನ್ ಗಳಲ್ಲಿ ಮಾತ್ರವೇ ಸಾಧ್ಯ ಎಂದು ನಾವು ಅಂದುಕೊಳ್ಳುತ್ತೇವೆ. ಏಕೆಂದರೆ ಅಂತಹ ಜಾಣ್ಮೆ ಯನ್ನು ನಾವು ಕಣ್ಣೆದುರಿಗೆ ಎಂದೂ ನೋಡಿರುವುದಿಲ್ಲ. ಆದರೆ ಈಗ ಅಂತಹ ಒಂದು ಸನ್ನಿವೇಶವನ್ನು ತೋರಿಸುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಜಬರ್ದಸ್ತ್ ಆಗಿ ವೈರಲ್ ಆಗುತ್ತಿದ್ದು ಕೆಲವೇ ಸೆಕೆಂಡ್ ಗಳ ವೀಡಿಯೋ ಆದರೂ ಕೂಡಾ ನೋಡುಗನನ್ನು ಬಾಯ್ಬಿಡುವಂತೆ ಮಾಡುವ ಹಾಗಿದೆ ವೀಡಿಯೋ.

ಟ್ವಿಟರ್ ನಲ್ಲಿ ಸೆಪ್ಟೆಂಬರ್ 13 ರಿಂದ ಒಂದು ವೀಡಿಯೋ ಶೇರ್ ಆಗಿದೆ. ಈಗಾಗಲೇ ಒಂದು ಲಕ್ಷ ದಾಟಿದ ವೀಕ್ಷಣೆಗಳನ್ನು ಪಡೆದಿದೆ ಈ ವೀಡಿಯೋ. ಇದರಲ್ಲಿ ಎರಡು ಬೆಕ್ಕುಗಳು ಜಗಳ ಮಾಡುತ್ತಿವೆ. ಅದರಲ್ಲಿ ಕಪ್ಪು ಬೆಕ್ಕು ತನ್ನ ಎದುರಾಳಿ ಮೇಲೆ ಮಾಡಿರುವ ಅಟ್ಯಾಕ್ ನಿಂದ ಪಾಪ ಅದು ನೆಲದ ಮೇಲೆ ಮಲಗಿದೆ, ಅಲ್ಲದೇ ಅದರ ಮೇಲೆ ದರ್ಪ ತೋರುತ್ತಿರುವ ಬೆಕ್ಕು ಕೂಡಾ ಅಲ್ಲಿಂದ ಪಕ್ಕಕ್ಕೆ ಹೋಗಲು ಸಿದ್ಧವಿಲ್ಲ‌‌ದೇ ಭಯ ಹುಟ್ಟಿಸಿತ್ತಾ ನಿಂತಿದೆ. ಆಗ ಒಂದು ಆಟಿಕೆ ಸಾಮಾನು, ಎಲೆಕ್ಟ್ರಾನಿಕ್ ಆಟಿಕೆಯು ಅದರ ಕಡೆಗೆ ಬಂದಿದೆ. ಆಗ ಬೆಕ್ಕು ಮಾಡಿದ ಕೆಲಸ ನಿಜಕ್ಕೂ ಶಾಕ್ ಎನಿಸುತ್ತದೆ.

ತನ್ನ ದೃಷ್ಟಿಯನ್ನು ತನ್ನ ಮುಂದೆ ಇದ್ದ ಬೆಕ್ಕಿನ ಮೇಲೆ ಇಟ್ಟಿದ್ದ ಬೆಕ್ಕು, ಆಟಿಕೆ ತನ್ನ ಕಡೆಗೆ ಬರುವುದನ್ನು ನೋಡದೇ, ಅದು ಕಾಲಿಗೆ ತಾಕಿದ ಕೂಡಲೇ ತನ್ನ ಒಂದು ಕಾಲಿನಿಂದ ಅದನ್ನು ಪಕ್ಕಕ್ಕೆ ತಿರುಗಿಸಿ ದಿಕ್ಕನ್ನು ಬದಲಿಸಿ ಮುಂದೆ ಹೋಗುವಂತೆ ಮಾಡಿದೆ. ಆ ಒಂದು ಕ್ಷಣ ಬೆಕ್ಕಿನ ಆ ಒಂದು ಕೆಲಸ ನೋಡವವರನ್ನು ವಾವ್ ಏನ್ ಬುದ್ಧಿವಂತಿಕೆ ಈ ಬೆಕ್ಕಿಂದು ಎಂದು ಉದ್ಗಾರ ತೆಗೆಯೋ ತರ ಮಾಡೋದ್ರಲ್ಲಿ ನಿಜಕ್ಕೂ ಕೂಡಾ ಎರಡು ಮಾತಿಲ್ಲ. ಆ ಆಟಿಕೆ ಅದರ ಹತ್ತಿರ ಬಂದಾಗ ಬಹುಶಃ ಬೆಕ್ಕು ಅಲ್ಲಿಂದ ಓಡಬಹುದು ಅನ್ಕೊಂಡು ನೋಡೋರಿಗೆ ಬೆಕ್ಕು ಸೂಪರ್ ಶಾಕ್ ಅಂತೂ ನೀಡಿದೆ.

ವಿಡಿಯೋ ನೋಡಿ….

ಈ ವೀಡಿಯೋ ನೋಡಿದ ಟ್ವಿಟರ್ ಬಳಕೆದಾರರು ಕೂಡಾ ತಮ್ಮ ಪ್ರತಿಕ್ರಿಯೆಗಳ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.ಕೆಲವರು ಪಾಪಾ ಅದು ತನ್ನ ಡೇಟ್ ಜೊತೆ ಮಾತನಾಡುವಾಗ ಡಿಸ್ಟರ್ಬ್ ಮಾಡಬೇಡಿ ಎಂದರೆ, ಒಬ್ಬ ಟ್ವಿಟರ್ ಬಳಕೆದಾರರು ಬಹುಶಃ ಕಳೆದ ರಾತ್ರಿಯ ವಿಚಾರವನ್ನು ಅದು ಸೀರಿಯಸ್ಸಾಗಿ ಚರ್ಚೆ ಮಾಡ್ತಾ ಇರಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮತ್ತೊಬ್ಬರು ನಾನು ಬ್ಯುಸಿ ಇರೋವಾಗ ನನಗೆ ತೊಂದರೆ ಕೊಡಬೇಡಿ ಅನ್ನೋತರ ಬೆಕ್ಕಿನ ವರ್ತನೆ ಇದೆ ಎಂದಿದ್ದಾರೆ‌. ಒಟ್ಟಾರೆ ಬೆಕ್ಕಿನ ಚಮತ್ಕಾರ ಮಾತ್ರ ಸೂಪರ್ ಆಗಿದೆ.