ಅಂದು ಕೆಬಿಸಿ ಯಲ್ಲಿ 5 ಕೋಟಿ ಗೆದ್ದ ಸುಶೀಲ್ ಕುಮಾರ್ ಇಂದು ಬೀದಿಗೆ ಬಂದಿದ್ದು ಹೇಗೆ? ಇಂಥ ತಪ್ಪುಗಳು ನೀವೆಂದು ಮಾಡದಿರಿ!
ಜೀವನದಲ್ಲಿ ಸಿಗುವ ಗೆಲುವುಗಳು ಯಾವಾಗಲೂ ಸಂತೋಷವನ್ನು ನೀಡುತ್ತದೆ ಎಂದರೆ ಕೆಲವೊಮ್ಮೆ ಅದು ನಿಜವಲ್ಲ. ಅಂತಹುದೇ ಒಂದು ಕಥೆಯನ್ನು ನಾವು ಹೇಳಲು ಹೊರಟಿದ್ದೇವೆ. ಹಿಂದಿ ಕಿರುತೆರೆ ಮಾತ್ರವಲ್ಲದೇ ಇಡೀ ಭಾರತದಲ್ಲೇ ಹೆಸರಾಗಿರುವ ಟಿವಿ ಶೋ ಅಮಿತಾಬ್ ಬಚ್ಚನ್ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ. 2011 ರಲ್ಲಿ ಈ ಶೋನಲ್ಲಿ ಭಾಗವಹಿಸಿದ್ದ ಸ್ಪರ್ಧಿ ಸುಶೀಲ್ ಕುಮಾರ್ ಆಗ ಶೋ ನ ಪೂರ್ತಿ ಬಹುಮಾನದ ಮೊತ್ತವಾದ ಐದು ಕೋಟಿ ರೂಗಳನ್ನು ಗೆದ್ದು ವಿಜಯ ಪತಾಕೆ ಹಾರಿಸಿದ್ದರು. ಸುಶೀಲ್ ಕುಮಾರ್ ಐದು ಕೋಟಿ ಗೆದ್ದ ವಿಷಯ ಎಲ್ಲೆಡೆ ಸುದ್ದಿಯಾಗಿತ್ತು, ಸುಶೀಲ್ ಕುಮಾರ್ ಹೆಸರು ಎಲ್ಲಾ ಕಡೆ ಸದ್ದು ಮಾಡಿತ್ತು.
ಬಿಹಾರದ ಹೆಚ್ಚು ಪ್ರಗತಿಯೇನೂ ಸಾಧಿಸದ ಕಡೆಯಿಂದ, ಒಂದು ಸಾಮಾನ್ಯ ಕುಟುಂಬದಿಂದ ಬಂದ ಸುಶೀಲ್ ಕುಮಾರ್ ತನ್ನ ಬುದ್ಧಿವಂತಿಕೆಯಿಂದ ಐದು ಕೋಟಿ ಗೆದ್ದಿದ್ದು ಅವರನ್ನು ಬಿಹಾರದಲ್ಲಿ ಒಬ್ಬ ಸೆಲೆಬ್ರಿಟಿಯನ್ನಾಗಿ ಮಾಡಿ ಬಿಟ್ಟಿತು. ಮುಂಬೈಯಿಂದ ಮರಳಿದ ಸುಶೀಲ್ ಅವರಿಗೆ ಭರ್ಜರಿ ಸ್ವಾಗತ ದೊರೆಯಿತು. ಅಲ್ಲದೇ ಬಿಹಾರದ ಮೂಲೆ ಮೂಲೆಗಳಲ್ಲಿ ಸುಶೀಲ್ ಕುಮಾರ್ ಅವರನ್ನು ಕಾರ್ಯಕ್ರಮಗಳಿಗೆ ಅತಿಥಿಯನ್ನಾಗಿ ಕರೆಸಲು ಆರಂಭಿಸಿದರು. ಹೀಗೆ ಕಾರ್ಯಕ್ರಮಗಳಿಗೆ ಹೋಗಲು ಆರಂಭಿಸಿದ ಸುಶೀಲ್ ತನ್ನ ಶಿಕ್ಷಣದ ಕಡೆಗೆ ಗಮನ ಕೊಡುವುದು ಸಾಧ್ಯವೇ ಆಗಲಿಲ್ಲ.
ಅಲ್ಲದೇ ಸೆಲೆಬ್ರಿಟಿ ಎಂಬ ಭಾವನೆ ಅವರಲ್ಲಿ ಹೆಚ್ಚು ಮೈಕ್ ಗಳ ಮುಂದೆ ಮಾತನಾಡುವ ಹವ್ಯಾಸವನ್ನು ಬೆಳೆಸಿಕೊಂಡರು. ತಿಂಗಳ ಹದಿನೈದು ದಿನ ಕಾರ್ಯಕ್ರಮಗಳು ಎಂದು ಓಡಾಡುವುದರಲ್ಲೇ ಕಳೆದ ಸುಶೀಲ್ ತನ್ನ ಶಿಕ್ಷಣವನ್ನು ಕಡೆಗಣಿಸಿದರು. ಬಹುಮಾನವಾಗಿ ಬಂದಿದ್ದ ಹಣವನ್ನು ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡರು. ಕಡೆಗೆ ಅಲ್ಲಿ ಕೂಡಾ ನಷ್ಟವನ್ನು ಅನುಭವಿಸಿ ಕೈ ಸುಟ್ಟುಕೊಂಡರು. ಅದು ಸಾಲದು ಎನ್ನವಂತೆ ದಾನ ಧರ್ಮ ಎಂದು ತಿಂಗಳಿಗೆ 50 ಸಾವಿರ ರೂಪಾಯಿಗಳನ್ನು ನೀಡಬೇಕಾದ ಅನಿವಾರ್ಯತೆ ಕೂಡಾ ಎದುರಾಗಿತ್ತು. ಅವರ ಪತ್ನಿ ಇದಕ್ಕೆ ಬೇಸರ ಪಡುವ ಪರಿಸ್ಥಿತಿ ಉಂಟಾಯಿತು.
ಆಕೆ ಸುಶೀಲ್ ಅವರಿಗೆ ಬುದ್ಧಿ ಹೇಳಿದರು. ಗಂಡನಿಗೆ ಭವಿಷ್ಯದ ಬಗ್ಗೆ ಚಿಂತೆಯಿಲ್ಲ, ಮಾಡುತ್ತಿರುವ ಕೆಲಸಗಳು ತಪ್ಪು ಎಂದಾಗ ಗಂಡ ಹೆಂಡತಿ ಮಧ್ಯೆ ವೈಮನಸ್ಸಿಗೆ ಕಾರಣವಾಗಿ ಇಬ್ಬರ ನಡುವಿನ ಸಂಬಂಧ ಹದಗೆಡತೊಡಗಿತು. ಆಗಲೇ ಸುಶೀಲ್ ಮಧ್ಯ ಪಾನ ಮಾಡಲು ಆರಂಭಿಸಿದರು, ಸಿಗರೇಟು ಅಭ್ಯಾಸ ಕೂಡಾ ಆಯಿತು. ಇದು ಮತ್ತಷ್ಟು ಅಸಮಾಧಾನವನ್ನು ಅವರ ಕುಟುಂಬದಲ್ಲಿ ಹುಟ್ಟು ಹಾಕಿತು. ಅನಂತರ ಮುಂಬೈಗೆ ಸಿನಿಮಾ ನಿರ್ದೇಶಕನಾಗುವ ಆಸೆಯಿಂದ ಬಂದರು. ಆಗ ಕೆಲವರು ಮೊದಲು ಕಿರುತೆರೆಯಲ್ಲಿ ಕೆಲಸ ಮಾಡುವಂತೆ ಸಲಹೆ ನೀಡಿದರಂತೆ.
ಮುಂಬೈನಲ್ಲಿ ಇರುವಾಗ ಅನೇಕ ಸಿನಿಮಾಗಳನ್ನು ನೋಡಿದರು, ಅನೇಕ ಪುಸ್ತಕಗಳನ್ನು ಓದಿದರು ತನ್ನನ್ನು ತಾನು ಅರಿತುಕೊಳ್ಳುವ ಮನಸ್ಸು ಮಾಡಿದರು. ಈಗ ಸುಶೀಲ್ ಕುಮಾರ್ ತಮ್ಮ ಮದ್ಯ ಪಾನ, ಧೂಮ ಪಾನ ಚಟಗಳನ್ನು ದೂರ ಮಾಡಿದ್ದಾರೆ. ಒಬ್ಬ ಶಿಕ್ಷಕನಾಗಿ ಶಾಲೆಯೊಂದರಲ್ಲಿ ಅವರು ಕೆಲಸವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕೌನ್ ಬನೇಗಾ ಕರೋಡ್ ಪತಿಯಂತ ದೊಡ್ಡ ಶೋ ಗೆದ್ದ ಸುಶೀಲ್ ಅವರ ಜೀವನ ಯಾವುದ್ಯಾವುದೊ ದಿಕ್ಕಿನಲ್ಲಿ ಸಾಗಿ ಈಗ ಒಂದು ಹಂತಕ್ಕೆ ಬಂದು ತಲುಪಿದೆ.