ಹೀಗೆ ಹಲ್ಲುಗಳ ಮಧ್ಯೆ ಅಂತರವಿರುವ ವ್ಯಕ್ತಿಗಳಲ್ಲಿ ಇರುತ್ತವೆ ‘ಈ’ 3 ವಿಶೇಷ ಗುಣಗಳು! ನಿಮ್ಮಲ್ಲಿ ಇವೆಯ ನೋಡಿ!

ನಮ್ಮ ಶಾಸ್ತ್ರಗಳು ವ್ಯಕ್ತಿಯ ದೇಹರಚನೆಯ ಮೇಲಿಂದ ಅಥವಾ ಶರೀರದ ಅಂಗಾಂಗಗಳ ಮೇಲಿಂದ ವ್ಯಕ್ತಿಯ ಬಗ್ಗೆ, ಆತನ ಗುಣಗಳ ಬಗ್ಗೆ ಮತ್ತು ಚರಿತ್ರೆಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಈ ಶಾಸ್ತ್ರಗಳನ್ನು ಬಲ್ಲವರು ಯಾವುದೇ ವ್ಯಕ್ತಿಯ ಬಗ್ಗೆ ಆತನ ಭೂತ, ಭವಿಷ್ಯ, ಮತ್ತು ವರ್ತಮಾನದ ಬಗ್ಗೆ ಸರಿಯಾಗಿ ಹೇಳುತ್ತಾರೆ.

ನಮ್ಮ ಶರೀರದ ಮೇಲೆ ಕಂಡುಬರುವ ಅನೇಕ ರೀತಿಯ ಗುರುತುಗಳು ಸಹಿತ ಕೆಲವೊಂದು ಸಂಕೇತಗಳನ್ನು ತೋರಿಸುತ್ತಿರುತ್ತವೆ. ಅವುಗಳ ಬಗ್ಗೆ ಅಭ್ಯಾಸ ಮಾಡಿದವರಿಗೆ ಆ ಗುರುತುಗಳ ವಿಶೇಷತೆಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಯಾವ ವ್ಯಕ್ತಿಯ ಎರಡು ಹಲ್ಲುಗಳಲ್ಲಿ ಅಂತರ ಇರುತ್ತೋ ಆ ವ್ಯಕ್ತಿಯಲ್ಲಿ ಕಂಡುಬರುವ ವಿಶೇಷವಾದ ಗುಣಗಳು ಯಾವವು ನೋಡುವ.

ಶಾಸ್ತ್ರಗಳ ಪ್ರಕಾರ ಯಾವ ವ್ಯಕ್ತಿಯ ಹಲ್ಲುಗಳ ಮಧ್ಯದಲ್ಲಿ ಅಂತರವಿರುತ್ತದೆಯೋ ಆ ವ್ಯಕ್ತಿಯು ತುಂಬಾ ಜಾಣ ಮತ್ತು ಚತುರನಾಗಿರುತ್ತಾನೆ. ಜೊತೆಗೆ ತುಂಬಾ ತಿಳುವಳಿಕೆಯುಳ್ಳ ವ್ಯಕ್ತಿಯಾಗಿರುತ್ತಾನೆ. ಇಂಥ ವ್ಯಕ್ತಿ ಹಣದ ವ್ಯವಹಾರದಲ್ಲಿ ಎಂದಿಗೂ ಮೋಸ ಹೋಗುವುದಿಲ್ಲ ಮತ್ತು ಇನ್ನೊಬ್ಬರಿಗೆ ಮೋಸ ಮಾಡುವುದಿಲ್ಲ. ಇನ್ನೊಂದು ವಿಶೇಷವೆಂದರೆ ಇಂಥವರು ಮನಸ್ಸಿನಲ್ಲಿಯ ಮಾತುಗಳನ್ನು ಎದುರಿನವರ ಮುಂದೆ ನೇರವಾಗಿ ಹೇಳಿಕೊಳ್ಳುವಂತಹ ಜಾಯಮಾನದವರಾಗಿರುತ್ತಾರೆ. ಅದನ್ನು ಹೇಳುವಾಗ ಎದುರಿನ ವ್ಯಕ್ತಿಯ ಮನಸ್ಸಿನ ಮೇಲೆ ಯಾವ ಪರಿಣಾಮವಾಗುತ್ತದೆ ಎಂಬ ವಿಚಾರವನ್ನು ಅವರು ಮಾಡುವುದಿಲ್ಲ.

ಈ ರೀತಿಯ ಜನರು ತುಂಬಾ ಮಹತ್ವಾಕಾಂಕ್ಷಿಗಳಾಗಿರುತ್ತಾರೆ.
ಈ ರೀತಿಯ ಹಲ್ಲುಗಳನ್ನು ಹೊಂದಿರುವ ವ್ಯಕ್ತಿಗಳು ತುಂಬಾ ಒಳ್ಳೆಯ ಸ್ವಭಾವದಿಂದ ಕೂಡಿರುತ್ತಾರೆ. ಇಂಥವರಿಗೆ ತಿಂಡಿಯ ಹವ್ಯಾಸವಿರುತ್ತದೆ. ಯಾವುದೇ ರೀತಿಯ ತಿಂಡಿಗಳನ್ನು ತುಂಬಾ ಆನಂದದಿಂದ ಸೇವನೆ ಮಾಡುತ್ತಾರೆ. ಸಮಾಜದಲ್ಲಿ ಈ ವ್ಯಕ್ತಿಗಳು ತಮ್ಮದೇಯಾದ ಒಂದು ಸ್ಥಾನವನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ. ಹೀಗಾಗಿ ಸಮಾಜದಲ್ಲಿ ಇವರಿಗೆ ವಿಶೇಷವಾದ ಗೌರವ ವಿರುತ್ತದೆ.

ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಬಂದಾಗ ಅದನ್ನು ಮೆಟ್ಟಿ ನಿಲ್ಲುವಂತಹ ಧೈರ್ಯ ಇವರಲ್ಲಿರುತ್ತದೆ. ಶಿಕ್ಷಣದಲ್ಲಿಯೂ ಇವರು ಮೇಲಿನ ಸ್ತರದಲ್ಲಿ ಇರುತ್ತಾರೆ. ಗೆಳೆತನದಲ್ಲಿ ಮಿತ್ರರಿಗೆ ಸಹಾಯಮಾಡುವಲ್ಲಿ ಯಾವತ್ತೂ ಮುಂದೆ ಇರುತ್ತಾರೆ.

ಈ ರೀತಿಯ ವ್ಯಕ್ತಿಗಳು ಜೀವನದಲ್ಲಿ ಅತಿ ಕಡಿಮೆ ಸಮಯದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಾರೆ. ಯಾರು ಏನೇ ಅಂದರು ಅವರಿಗೆ ಬಾಯಿಮಾತಿನಿಂದ ಉತ್ತರ ಕೊಡಲು ಹೋಗದ ಇವರು ತಮ್ಮ ಕೆಲಸದಿಂದ ಉತ್ತರವನ್ನು ಕೊಡುತ್ತಾರೆ. ಮನಸ್ಸಿನಲ್ಲಿ ಯಾವುದೇ ವಿಷಯದ ಸಂದರ್ಭವಾಗಿ ಹಠವನ್ನು ಹೊಂದಿರುತ್ತಾರೆ. ಆದರೆ ಅದನ್ನು ಯಾರಿಗೂ ಯಾವತ್ತೂ ಹೊರಗೆ ತೋರುವುದಿಲ್ಲ. ಇನ್ನೊಬ್ಬರ ಮಾತುಗಳನ್ನು ಸರಿಯಾಗಿ ಕೇಳುವಂತ ಸಂಯಮವನ್ನು ಹೊಂದಿರುತ್ತಾರೆ. ಜೀವನದಲ್ಲಿ ಇದೇ ರೀತಿಯ ವ್ಯಕ್ತಿಗಳು ಯಶಸ್ಸನ್ನು ಹೊಂದುತ್ತಾರೆ.