ಅಬ್ಬಾ! ಒಂದು ಸೆಕೆಂಡ್ ಚಲಿಸಲು ವಿಮಾನಕ್ಕೆ ಬೇಕಾಗುತ್ತದೆ ‘ಇಷ್ಟೊಂದು’ ಲೀಟರ್ ಇಂಧನ! ಒಂದು ಸೆಕೆಂಡಿನ ಖರ್ಚು ಕೇಳಿದರೆ…

ದಿನದಿಂದ ದಿನಕ್ಕೆ ಮನುಷ್ಯನ ಪ್ರವಾಸ ಸುಖಕರ ವಾಗುತ್ತಿದೆ. ಮನುಷ್ಯನ ಎಲ್ಲ ಪ್ರವಾಸಗಳಲ್ಲಿ ವಿಮಾನ ಪ್ರವಾಸವು ತುಂಬಾ ವಿಶೇಷವಾದದ್ದು ಎಂದೇ ಹೇಳಬಹುದು. ಏಕೆಂದರೆ, ಮೊದಲು ಬರಿ ಶ್ರೀಮಂತರಷ್ಟೇ ಪ್ರವಾಸ ಮಾಡುತ್ತಿದ್ದ ವಿಮಾನದಲ್ಲಿ ಈಗ ಎಲ್ಲರೂ ಪ್ರವಾಸ ಮಾಡುವಂತಾಗಿದೆ. ನಿಮಾನ ಯಾತ್ರೆಯಲ್ಲಿ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಅಂತರವನ್ನು ಕ್ರಮಿಸಬಹುದು. ಯಾವುದೇ ವಾಹನ ಕ್ರಮಿಸಬೇಕಾದರೆ ಅಥವಾ ನಡೆಯಬೇಕಾದರೆ ಅದಕ್ಕೆ ಇಂಧನದ ಅವಶ್ಯಕತೆ ಇದೆ. ಇಂಧನವಿಲ್ಲದೆ ಯಾವುದೇ ವಾಹನ ಚಲಿಸಲು ಸಾಧ್ಯವಿಲ್ಲ. ಸಾಧಾರಣವಾಗಿ ಎಲ್ಲರಿಗೂ ಬೈಕ್ ಮತ್ತು ಕಾರುಗಳ ಚರ್ಚೆ ಮಾಡುವಾಗ ಪ್ರತಿ ಲೀಟರ್ ಎಷ್ಟು ಕಿಲೋಮೀಟರ್ ಓಡುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳುವ ಹವ್ಯಾಸವಿರುತ್ತದೆ. ಹಾಗೆಯೇ ವಿಮಾನಕ್ಕೂ ಸಹಿತ ಇಂಧನದ ಅವಶ್ಯಕತೆ ಇದೆ ಎಂದಾಗ ವಿಮಾನವು ಪ್ರತಿ ಲೀಟರ್ ಗೆ ಎಷ್ಟು ಕ್ರಮಿಸಬಹುದು ಎಂಬ ಪ್ರಶ್ನೆ ಏಳುವದು ಸಹಜ. ಆದ್ದರಿಂದ ವಿಮಾನಕ್ಕೆ ಇಂಧನವು ಯಾವ ರೀತಿ ಮತ್ತು ಎಷ್ಟು ಖರ್ಚಾಗುತ್ತದೆ ಎಂಬುವುದನ್ನು ಇಲ್ಲಿ ನೋಡುವ.

ಜಗತ್ತಿನಲ್ಲಿಯೇ ಅತೀ ಜನಪ್ರಿಯ ವಿಮಾನವಾದ ಬೋಯಿಂಗ್ 747 ಹೆಸರನ್ನು ಎಲ್ಲರೂ ಕೇಳಿಯೇ ಕೇಳಿದ್ದೇವೆ. ಇದಕ್ಕೆ ಜಂಬೊಜೆಟ್ ಅಂತಲೂ ಕರೆಯುತ್ತಾರೆ. ಇದು ಎಲ್ಲಕ್ಕೂ ದೊಡ್ಡದಾದ ವಿಮಾನವಾಗಿದೆ. ಇದರಲ್ಲಿ ಬೇರೆ ವಿಮಾನಗಳಿಗಿಂತ ವಿಶೇಷವಾದ ಇಂಧನವನ್ನು ಉಪಯೋಗಿಸುತ್ತಾರೆ. ಇದು ಸೆಕೆಂಡಿಗೆ 4 ಲೀಟರ್ ಇಂಧನವನ್ನು ತೆಗೆದುಕೊಳ್ಳುವದು. ಇದರ ಮೇಲಿಂದ ಈ ವಿಮಾನವು 10 ಗಂಟೆಗಳವರೆಗೆ ಹಾರಾಟ ಮಾಡಿದರೆ, ಅದಕ್ಕಾಗಿ 36 ಸಾವಿರ ಗ್ಯಾಲನ್ ಅಂದರೆ 150 ಲಕ್ಷ ಲೀಟರ್ ಇಂಧನದ ಅವಶ್ಯಕತೆ ಬೀಳುತ್ತದೆ. ಬೋಯಿಂಗ್ ನ ಅಧೀಕೃತವಾದ ವೆಬ್ ಸೈಟ್ ಪ್ರಕಾರ 1 ಕಿಲೋಮೀಟರ್ ಅಂತರವನ್ನು ಕ್ರಮಿಸಲು 12 ಲೀಟರ್ ಇಂಧನದ ಅವಶ್ಯಕತೆ ಬೀಳುವದು. ಈ ರೀತಿ ಬೋಯಿಂಗ್ 747 ವಿಮಾನವು ಪ್ರತಿ ಲೀಟರ್ ಇಂಧನಕ್ಕೆ 84 ಮೀಟರ್ ಅಂತರ ದೌಡಾಯಿಸುವದು. ಈ ವಿಮಾನಕ್ಕೆ ಬೇಕಾಗುವ ಇಂಧನದ ಸರಾಸರಿ ಬೆಲೆ ಪ್ರತಿ ಲೀಟರ್ 65-70 ರೂಪಾಯಿಗಳವರೆಗೆ ಇರುತ್ತದೆ.