ಸೊಳ್ಳೆಗಳೇ ಇಲ್ಲದ ಜಗತ್ತಿನ ಏಕೈಕ ದೇಶ ‘ಇದೇ’ ನೋಡಿ! ಇದರ ಹಿಂದಿನ ಕಾರಣವೂ ಅಷ್ಟೇ ರೋಚಕವಿದೆ!

ಜಗತ್ತಿನಲ್ಲಿ ನಾವು ಅರಿಯದ ಅನೇಕ ಸಂಗತಿಗಳಿವೆ. ಅವುಗಳ ಬಗ್ಗೆ ಗೊತ್ತಾದಾಗ ನಿಜಕ್ಕೂ ವಿಸ್ಮಯವೆನಿಸುತ್ತಿದೆ. ಮತ್ತು ಆ ವಿಸ್ಮಯಗಳ ಬಗ್ಗೆ ತಿಳಿದುಕೊಳ್ಳುವ ಹಾಗೂ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಿತ ಮನದಲ್ಲಿ ಉದ್ಭವಿಸದೇ ಇರಲಾರದು.

ನಮ್ಮ ಭಾರತ ದೇಶದ ವಿಚಾರ ಮಾಡಿದರೆ ಇಲ್ಲಿ ಎಲ್ಲಿ ಬೇಕಾದರೂ ಸೊಳ್ಳೆಗಳು ತುಂಬಾ ಕಂಡುಬರುತ್ತವೆ. ಸೊಳ್ಳೆಗಳ ಬರೀ ನೆನಪೇ ಸಾಕು ಎಷ್ಟೋ ಜನರಿಗೆ ನಿದ್ರೆ ಬರುವುದಿಲ್ಲ. ಸೊಳ್ಳೆಗಳು ಕಡಿಯುವುದರಿಂದ ನಿರ್ಮಾಣವಾಗುವ ದೇಹದಲ್ಲಿ ತುರಿಕೆ ಯಾರಿಗೂ ಬೇಡವೆನಿಸುತ್ತದೆ. ಸೊಳ್ಳೆಗಳ ಕಾರಣದಿಂದ ಭಾರತದಲ್ಲಿ ವರ್ಷಕ್ಕೆ ಮಲೇರಿಯಾ ಮತ್ತು ಡೆಂಗ್ಯೂ ಜ್ವರದಿಂದ ಸಾಯುವವರ ಸಂಖ್ಯೆ ಲಕ್ಷದಲ್ಲಿದೆ. ಹೀಗಾಗಿ ಸೊಳ್ಳೆಗಳ ಕಾಟ ತಡೆಗಟ್ಟುವ ಸಲುವಾಗಿ ಅನೇಕ ಉಪಾಯಗಳನ್ನು ಸರಕಾರ ಮತ್ತು ಜನರು ಮಾಡುವುದನ್ನು ನೋಡುತ್ತೇವೆ.

ಈ ಲೇಖನದಲ್ಲಿ ನಾವು ತಿಳಿದುಕೊಳ್ಳುವ ವಿಷಯವೆಂದರೆ, ಜಗತ್ತಿನ ಈ ಒಂದೆ ದೇಶದಲ್ಲಿ ಹುಡುಕಿದರೆ ಒಂದು ಸೊಳ್ಳೆಯು ದೊರೆಯುವುದಿಲ್ಲ ಎಂದರೆ ಯಾರಿಗೂ ನಿಜವೆನಿವದಿಲ್ಲ. ಆ ದೇಶದ ಹೆಸರು ಐಸ್ಲ್ಯಾಂಡ್. ಇದು ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಬರುತ್ತದೆ. ಇದು ಸೊಳ್ಳೆ ಮುಕ್ತ ದೇಶ ಅಥವಾ ದ್ವೀಪ ಎಂದು ಪರಿಚಿತವಾಗಿದೆ.

ಇಲ್ಲಿ ಸೊಳ್ಳೆಗಳು ಕಾಣದಿರುವುದಕ್ಕೆ ಶಾಸ್ತ್ರಜ್ಞರು ಅನೇಕ ಕಾರಣಗಳನ್ನು ಹೇಳಿದ್ದಾರೆ.

ಶಾಸ್ತ್ರಜ್ಞರ ಪ್ರಕಾರ ಇಲ್ಲಿಯ ಉಷ್ಣ ಮತ್ತು ಆರ್ದ್ರ ದಿಂದ ಕೂಡಿದ ಸಮುದ್ರದ ಗಾಳಿಗಳು ಸೊಳ್ಳೆಗಳ ಸಂತಾನೋತ್ಪತ್ತಿಗೆ ಮಾರಕವಾಗಿರಬಹುದು. ಇನ್ನೊಂದು ಕಾರಣವೇನೆಂದರೆ ಈ ದ್ವೀಪವು ಸಂಪೂರ್ಣವಾಗಿ ಲಾವಾರಸದ ಉಗಮದಿಂದ ತಯಾರಾದ ದ್ವೀಪವಾಗಿದೆ. ಈ ದ್ವೀಪವು ಉತ್ತರ ಗೋಲಾರ್ಧದ ಸಮೀಪ ವಿದ್ದರೂ ಇಲ್ಲಿಯ ವಾತಾವರಣದಲ್ಲಿಯ ನೈಸರ್ಗಿಕ ಉಷ್ಣತೆ ಮತ್ತು ಸಮುದ್ರದಲ್ಲಿಯ ತಂಪು ಹಾಗೂ ಉಷ್ಣ ಪ್ರವಾಹಗಳು ಸೊಳ್ಳೆಗಳ ಮೊಟ್ಟೆಗಳಿಗೆ ಪೋಷಕವಾಗಿಲ್ಲ. ಶಾಸ್ತ್ರಜ್ಞರ ಮೂರನೆಯ ಸಿದ್ಧಾಂತದ ಪ್ರಕಾರ ಈ ದ್ವೀಪವು ಲಾವಾರಸದಿಂದ ತಯಾರಾದ ಕಾರಣ ಇಲ್ಲಿಯ ಮಣ್ಣು ಮತ್ತು ನೀರಿನ ರಾಸಾಯನಿಕ ರಚನೆ ಇವುಗಳಿಂದಾಗಿಯೂ ಸೊಳ್ಳೆಗಳಿಗೆ ಅನುಕೂಲವಾದ ವಾತಾವರಣವಿಲ್ಲ.

ಈ ದ್ವೀಪದ ಪೂರ್ವಕ್ಕೆ ಸಮೀಪದಲ್ಲಿಯೇ ಇರುವ ಸ್ಕಾಡಿನೇವಿಯನ್ ದೇಶದಲ್ಲಿ ಸೊಳ್ಳೆಗಳ ವಿವಿಧ ಪ್ರಕಾರಗಳನ್ನು ನೋಡಬಹುದು. ಆದರೆ ಆ ಸೊಳ್ಳೆಗಳು ಐಸ್ಲ್ಯಾಂಡ್ ದೇಶದವರಿಗೆ ಬಂದು ತಲುಪಲು ಸಾಧ್ಯವಿಲ್ಲ.

ಈ ಮೇಲಿನ ಎಲ್ಲ ಸಿದ್ಧಾಂತಗಳನ್ನು ಮಂಡಿಸುವಾಗ ಐಸ್ಲ್ಯಾಂಡ್ ವಿಶ್ವವಿದ್ಯಾಲಯದ ಬಯಾಲಜಿಸ್ಟ್ ಪ್ರೊಫೆಸರ್ ಹೇಳುತ್ತಾರೆ, ಇಲ್ಲಿಯವರೆಗೆ ಈ ದ್ವೀಪದಲ್ಲಿ ಯಾವುದೇ ಜಾತಿಯ ಸೊಳ್ಳೆಗಳು ಕಂಡುಬಂದಿಲ್ಲ.