ಕೊರೊನಾದಿಂದ ಗಂಡನ ಸಾ#ವು; ವಿರಹ ಸಹನೆಯಾಗದೆ ನೇ#ಣಿಗೆ ಶರಣಾದ ಪತ್ನಿ! ಅನಾಥರಾದ ಮಕ್ಕಳು!
ಜಗತ್ತಿನ ಮೇಲೆ ಆವರಿಸಿದ ಈ ಕೊರೋನಾ ಸಂಕಟವು ಯಾವಾಗ ದೂರವಾಗುತ್ತದೆ ಎಂಬುದು ತಿಳಿದಿಲ್ಲ. ಇದರ ಕಾರಣದಿಂದ ಅನೇಕ ಮನೆಗಳು ಅನೇಕ ಸಂಸಾರಗಳು ಬೀದಿ ಪಾಲಾಗಿವೆ. ಎಷ್ಟೋ ಜನರು ಕೊರೋನಾಗೆ ತುತ್ತಾಗಿ ತೀರಿಕೊಂಡರೆ, ಇನ್ನು ಎಷ್ಟೋ ಜನರು ಕೆಲಸವಿಲ್ಲದೆ ಹತಾಶರಾಗಿ ಬೀದಿ ಪಾಲಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಇಂತಹದೇ ಒಂದು ಮನಕಲಕುವ ಘಟನೆ ವರದಿಯಾಗಿದೆ. ಕೊರೋನಾದ ಕಾರಣದಿಂದಾಗಿ ಪತಿ ತೀರಿಕೊಂಡಿದ್ದರಿಂದ ಪತ್ನಿ ತನ್ನ ಪತಿಯ ವಿರಹ ವೇದನೆಯನ್ನು ಸಹಿಸಿಕೊಳ್ಳಲಾಗದೆ ಆ#ತ್ಮಹತ್ಯೆಗೆ ಶರಣಾಗಿದ್ದಾಳೆ. ತಾನು ಸಾ#ಯುವ ಮುನ್ನ ಎರಡು ಚಂದದ ಮಕ್ಕಳ ವಿಚಾರವನ್ನಾದರೂ ಮಾಡಬಾರದಾಗಿತ್ತೇ ಎಂದು ನೆರೆಹೊರೆಯವರು ಮಾತನಾಡುತ್ತಿದ್ದಾರೆ.

ವಿಸ್ತೃತ ವರದಿಯ ಪ್ರಕಾರ, ಜುಲೈ 18 ರಂದು ಗುರುಬಸಪ್ಪ ಖಜೂರ್ ಕರ್ ಅಲಿಯಾಸ್ ಪ್ರಕಾಶ್ ಖಜೂರ್ ಕರ್ (36) ಅವರ ಸಾವು ಕೊರನ ಕಾರಣದಿಂದ ಆಗಿತ್ತು. ಗುರುಬಸಪ್ಪ ಪುಣೆಯಲ್ಲಿ ಟಿವಿ ಫಿಟ್ಟಿಂಗ್ ಮತ್ತು ಇನ್ಸ್ಟಾಲೇಷನ್ ಕೆಲಸ ಮಾಡಿಕೊಂಡಿದ್ದರು. ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಗುರುಬಸಪ್ಪ ಅವರ ಮೇಲಿತ್ತು. ಪತ್ನಿ ಗೋದಾವರಿಯು ಸಹಿತ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿ ಗಂಡನಿಗೆ ಸಹಾಯ ಮಾಡುತ್ತಿದ್ದಳು. ಎಲ್ಲವೂ ಚೆನ್ನಾಗಿ ನಡೆದ ಸಂಸಾರದಲ್ಲಿ ಒಮ್ಮೆಲೆ ಕೋರೋನಾ ಬಂದು ವಕ್ಕರಿಸಿ 36 ರ ಹರೆಯದ ಗುರುಬಸಪ್ಪ ಅವರನ್ನು ಬ#ಲಿ ತೆಗೆದುಕೊಂಡಿತು. ಆ ಸಮಯದಲ್ಲಿ ಅವರಿಗೆ ಒಳ್ಳೆಯ ಉಪಚಾರ ದೊರೆಯಲೆಂದು ಅಕ್ಕಪಕ್ಕದ ಜನರು ಸಹ ತುಂಬಾ ಪ್ರಯತ್ನ ಮಾಡಿದರು. ಆದರೆ ವಿಧಿಗೆ ಇದು ಇಷ್ಟವಿರಲಿಲ್ಲ ಅಂತ ಕಾಣುತ್ತೆ. ಉಪಚಾರ ಫಲಿಸದೆ ಗುರುಬಸಪ್ಪ ಅವರು ತೀ#ರಿಕೊಂಡರು. ಗುರುಬಸಪ್ಪ ಅವರಿಗೆ 11 ವರ್ಷದ ಹುಡುಗ ಮತ್ತು 7 ವರ್ಷದ ಹುಡುಗಿ ಹೀಗೆ ಎರಡು ಮಕ್ಕಳು. ಗುರುಬಸಪ್ಪ ಅವರು ತಾಯಿ ಹೆಂಡತಿ ಮಕ್ಕಳನ್ನು ಆಕಸ್ಮಿಕವಾಗಿ ಆಗಲಿ ಹೋದುದರಿಂದ ಗೋದಾವರಿಯು ಹತಾಶರಾದಳು. ಗಂಡ ಬಿಟ್ಟು ಹೋದ ನಂತರ ಇನ್ನು ಮುಂದೆ ನಮ್ಮ ಸಂಸಾರ ಹೇಗೆ ಎಂಬ ಪ್ರಶ್ನೆ ಗೋದಾವರಿಗೆ ಕಾಡಿತು. ಇದೇ ಚಿಂತೆಯಿಂದ ಹತಾಶಳಾಗಿ ಗೋದಾವರಿಯು (30) ಶುಕ್ರವಾರ ನೇ#ಣಿಗೆ ಶರಣಾದಳು. ಸದ್ಯಕ್ಕೆ ಎರಡು ಮಕ್ಕಳು ಮತ್ತು ಅಜ್ಜಿ ಹೀಗೆ ಮೂರು ಜನ ಇದ್ದಾರೆ. ಮಕ್ಕಳ ಜವಾಬ್ದಾರಿ ಎಲ್ಲವೂ ಅಜ್ಜಿಯ ಮೇಲೆ ಬಿದ್ದಿದೆ. ಘಟನೆ ತಿಳಿದ ಮೇಲೆ ಅಲ್ಲಿಯ ಶಿವಸೇನೆಯ ನಗರ ಸಂಘಟಕರಾದ ಶ್ರೀಮತಿ ಸುಲಭ ಉಬಾಳೆಯವರು ಎರಡು ಅನಾಥ ಮಕ್ಕಳ ಮುಂದಿನ ಖರ್ಚನ್ನು ಕೊನೆಯವರೆಗೆ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಇನ್ನೊಬ್ಬ ಮಾಜಿ ನಗರ ಸೇವಕರಾದ ಜಿತೇಂದ್ರ ನನವರೆ ಅವರು ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಂಡಿದ್ದಾರೆ. ಗೋದಾವರಿಯ ತವರೂರಿನ ಸಂಬಂಧಿಕರು ಸೋಲಾಪುರದ ಕರ್ನಾಟಕದ ಸೀಮೆಯಲ್ಲಿರುವ ಊರಿನಿಂದ ಬಂದು ಅಂ#ತ್ಯಸಂ#ಸ್ಕಾರವನ್ನು ಮಾಡಲಿದ್ದಾರೆ.