ನೀಲಿ ಬಣ್ಣದ ಹಾವನ್ನು ನೋಡಿದ್ದೀರಾ? ಈ ದುರ್ಲಭ Video ಮಿಸ್ ಮಾಡದೆ ನೋಡಿ!
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ದುರ್ಲಭವಾದ ಹಾವಿನ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಒಂದು ನೀಲಿಬಣ್ಣದ ಹಾವು ಕೆಂಪು ಗುಲಾಬಿ ಹೂವಿನ ಮೇಲೆ ಕುಳಿತಿದೆ. ಇಲ್ಲಿಯವರೆಗೆ ನಾವು ಅನೇಕ ಬಣ್ಣಗಳ ಹಾವುಗಳನ್ನು ನೋಡಿದ್ದೇವೆ ಆದರೆ ನೀಲಿಬಣ್ಣದ ಹಾವನ್ನು ನೋಡಿರಲಿಲ್ಲ. ಈ ಪ್ರಜಾತಿಯ ಹಾವು ಹೆಚ್ಚಾಗಿ ಹಸಿರು ಬಣ್ಣದಲ್ಲಿ ಕಂಡುಬರುತ್ತದೆ, ಆದರೆ ಮೊದಲ ಸಲ ಈ ಜಾತಿಯ ಹಾವು ನೀಲಿ ಬಣ್ಣದಲ್ಲಿ ಗೋಚರಿಸಿದೆ. ರಶಿಯಾದ ಮಾಸ್ಕೋ ಪ್ರಾಣಿಸಂಗ್ರಹಾಲಯದ ಅಧ್ಯಯನದ ಪ್ರಕಾರ, ಈ ಹಾವು ಇಂಡೋನೇಷಿಯಾ ಮತ್ತು ಪೂರ್ವ ತೈಮೂರಿನ ಭಾಗದಲ್ಲಿ ಕಂಡುಬರುತ್ತದೆ. ಈ ಹಾವಿನ ಹೆಸರು ಬ್ಲೂ ಪಿಟ್ ವೈಪರ್ ಇದ್ದು ಕಾಣಲು ತುಂಬಾ ಸುಂದರವಾಗಿದೆ. ಆದರೆ ಈ ಹಾವು ಅಷ್ಟೇ ಪ್ರಾಣಘಾತಕವಾಗಿದೆ. ಇದು ಕಚ್ಚುವುದರಿಂದ ವ್ಯಕ್ತಿಗೆ ತೀವ್ರ ರಕ್ತಸ್ರಾವವಾಗುವುದು.
ವಿಡಿಯೋ ನೋಡಿ…
The incredibly beautiful Blue Pit Viper pic.twitter.com/zBSIs0cs2t
— Life on Earth (@planetpng) September 17, 2020
ಹಾವಿನ ಈ ಸುಂದರವಾದ ವಿಡಿಯೋವನ್ನು ಟ್ವಿಟರ್ನಲ್ಲಿ ‘ಲೈಫ್ ಆನ್ ಅರ್ಥ್’ ಹೆಸರಿನಿಂದ ಶೇರ್ ಮಾಡಲಾಗಿದೆ. ಸೆಪ್ಟೆಂಬರ್ 17ರಂದು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಇದನ್ನು ಇಲ್ಲಿಯವರೆಗೆ 2.2 ಮಿಲಿಯನ್ ಜನ ವೀಕ್ಷಿಸಿದ್ದಾರೆ.