Video: ಮನೆಯ ಮುಂದೆ ಮಲಗಿದ ನಾಯಿಯನ್ನು ಎತ್ತಿಕೊಂಡು ಹೋದ ಚಿರತೆ! ಸಂಪೂರ್ಣ ಘಟನೆ CCTV ಯಲ್ಲಿ ಸೆರೆ!

ದಿನಗಳು ಕಳೆದಂತೆ ಮನುಷ್ಯ ಮತ್ತು ವನ್ಯ ಪ್ರಾಣಿಗಳ ನಡುವಿನ ಅಂತರ ಕೂಡಾ ಕಡಿಮೆಯಾಗುತ್ತಾ ಬರುತ್ತಿದ್ದು ಇದರ ಪರಿಣಾಮಗಳನ್ನು ಕೂಡಾ ಎದುರಿಸಬೇಕಾದಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಪ್ರಮುಖವಾದ ಕಾರಣವು ಕೂಡಾ ಮಾನವರೇ ಎನ್ನುವುದು ಕೂಡಾ ನಿಜ. ಆಧುನಿಕತೆಯ ಹೆಸರಿನಲ್ಲಿ ನಗರ, ಪಟ್ಟಣಗಳ ವ್ಯಾಪಕವಾಗಿ ತಮ್ಮ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿವೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ, ತನ್ನ ಅವಶ್ಯಕತೆ ಯನ್ನು ಪೂರೈಸಿಕೊಳ್ಳುವುದಕ್ಕಾಗಿ ಅಮೂಲ್ಯ ಸಂಪತ್ತು ಎನಿಸಿರುವ ಕಾಡನ್ನು ಕಡಿದು ನಾಶ ಮಾಡುತ್ತಿದ್ದು, ಇದರಿಂದಾಗಿ ವನ್ಯ ಜೀವಿಗಳು ತಮ್ಮ ಮೂಲ ನೆಲೆಯನ್ನು, ತಮ್ಮ ಆಶ್ರಯವನ್ನು ಕಳೆದುಕೊಳ್ಳುವಂತೆ ಆಗಿವೆ. ಅದೆಷ್ಟೋ ಪ್ರಾಣಿಗಳ ಸಂಕುಲ ದಿನೇ ದಿನೇ ಕಣ್ಮರೆಯಾಗುತ್ತಿದೆ ಕೂಡಾ.

ಹೀಗೆ ಕಾಡಿನ ಪ್ರಮಾಣ ಕಡಿಮೆಯಾಗಿರುವುದರಿಂದ ಪ್ರಾಣಿಗಳು ತಮ್ಮ ಆಹಾರವನ್ನು ಅರಸಿಕೊಂಡು ನಗರಗಳು, ಪಟ್ಟಣಗಳು ಹಾಗೂ ಅರಣ್ಯದ ಸಮೀಪ ಇರುವ ಗ್ರಾಮಗಳ ಕಡೆ ಬರುವಂತೆ ಆಗಿದೆ. ಕೆಲವೊಮ್ಮೆ ಮನುಷ್ಯ ಹಾಗೂ ಈ ವನ್ಯ ಪ್ರಾಣಿಗಳು ಎದುರಾಗುವ ಸಂಭಾವ್ಯಗಳು ಕೂಡಾ ಇವೆ. ಆಗಾಗ ಗ್ರಾಮಗಳ ಕಡೆ ಬರುವ ಮಾಂಸಾಹಾರಿ ಜಂತುಗಳು ಹಳ್ಳಿಗಳಲ್ಲಿನ ಕುರಿ,ಮೇಕೆ, ಹಸುಗಳನ್ನು ಕೊಲ್ಲುವುದು ಅಥವಾ ಸಾಧ್ಯವಾದರೆ ಅವುಗಳನ್ನು ಎಳೆದುಕೊಂಡು ಹೋಗುವ ಕೆಲಸವನ್ನು ಕೂಡಾ ಮಾಡುತ್ತವೆ. ಏಕೆಂದರೆ ಅವುಗಳಿಗೆ ಆಹಾರಕ್ಕಾಗಿ ಅದನ್ನು ಬಿಟ್ಟರೆ ಬೇರೊಂದು ಮಾರ್ಗವೇ ಇಲ್ಲದ್ದರಿಂದ ಆಹಾರವನ್ನು ಹುಡುಕಿಕೊಂಡು ಜನ ವಾಸವಿರುವ ಪ್ರದೇಶಗಳಿಗೆ ಬರುವುದು ಅನಿವಾರ್ಯವಾಗಿದೆ.

ಈಗ ಇಂತಹುದೊಂದು ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಮಹಾರಾಷ್ಟ್ರದ ಪುಣೆಯ ಬಳಿ
ಶಿಂಗಾವೆ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿದೆ. ಸೆಪ್ಟೆಂಬರ್ 20 ರ ರಾತ್ರಿ ರೈತನೊಬ್ಬರ ಮನೆಯ ಹೊರಗೆ ಮಲಗಿದ್ದ ಅವರ ಸಾಕು ನಾಯಿಯನ್ನು ಚಿರತೆಯೊಂದು ಬಂದು ಹಿಡಿದುಕೊಂಡು ಹೋಗಿದ್ದು ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಶೇಷ ಏನಂದ್ರೆ ಇದು ಆ ರೈತನ ಮೂರನೇ ಸಾಕು ನಾಯಿ ಚಿರತೆಯ ಧಾ ಳಿಗೆ ಒಳಗಾಗಿರುವುದು. ಈ ಚಿರತೆ ಒಂದಾದ ನಂತರ ಇನ್ನೊಂದರಂತೆ ನಾಯಿಗಳನ್ನು ಬೇಟೆಯಾಡುತ್ತಿದೆ ಎನ್ನಲಾಗಿದೆ.

ರೈತ ಕುಲ್ಲುರಾಮ್ ಲೋಖಂಡೇ ಅವರೇ ಚಿರತೆಯಿಂದಾಗಿ ಮೂರನೇ ಸಲ ಸಾಕಿದ ನಾಯಿಯನ್ನು ಕಳೆದುಕೊಂಡಿರುವ ವ್ಯಕ್ತಿಯಾಗಿದ್ದಾರೆ.‌
ವೀಡಿಯೋದಲ್ಲಿ ನೋಡಿದಾಗ ರಾತ್ರಿಯ ವೇಳೆ ಅಪಾಯದ ಯಾವುದೇ ಮುನ್ಸೂಚನೆ ಇಲ್ಲದೇ, ಅಪಾಯದ ಅರಿವು ಕೂಡಾ ಇಲ್ಲದ ನಾಯಿ ಮನೆಯ ಹೊರಗೆ ಆರಾಮವಾಗಿ ಮಲಗಿ ನಿದ್ರೆ ಮಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಆಗಲೇ ಚಿರತೆಯು ತನ್ನ ಸದ್ದಾಗದಂತೆ ಮನೆಯ ಅಂಗಳವನ್ನು ಬಹಳ ಚಾಣಾಕ್ಷತೆಯಿಂದ ನುಸುಳಿ ಬಂದಿದೆ. ಸಹಜವಾಗಿಯೇ ನಾಯಿಗಳು ಸ್ವಲ್ಪ ಸದ್ದಾದರೂ ಎಚ್ಚರವಾಗಿ ಬಿಡುತ್ತವೆ. ಆದರೆ ಈ ಚಿರತೆ ನಾಯಿಗೆ ಯಾವುದೇ ಸುಳಿವು ಸಿಗದ ಹಾಗೇ ನುಸುಳಿ ಬಂದಿದೆ.

ವಿಡಿಯೋ ನೋಡಿ..

ಹೀಗೆ ಸದ್ದಿಲ್ಲದೇ ಬಂದ ಚಿರತೆ ನಾಯಿಯ ಮೇಲೆ ಏಕಾ ಏಕೀ ಧಾಳಿ ಮಾಡಿ ಅದನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡಿದೆ.‌ ನಾಯಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ತನ್ನ ಪ್ರಯತ್ನವನ್ನು ಮಾಡಿದೆಯಾದರೂ ಚಿರತೆಯ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೊನೆಗೆ ಚಿರತೆ ನಾಯಿಯನ್ನು ತನ್ನ ಬಾಯಿಯಲ್ಲಿ ಗಟ್ಟಿಯಾಗಿ ಕಚ್ಚಿಕೊಂಡು ಅಲ್ಲಿಂದ ಎತ್ತಿಕೊಂಡು ಹೋಗಿದೆ. ಒಟ್ಟಾರೆ ನಾಯಿಯ ಅದೃಷ್ಟ ಕೆಟ್ಟತ್ತಾದರೂ, ಚಿರತೆಗೆ ಕೂಡಾ ಬೇರೆ ದಾರಿಯಿರಲಿಲ್ಲ ಎನ್ನಲೂ ಬಹುದು. ಏಕೆಂದರೆ ಚಿರತೆ ಬದುಕಿಗೆ ಆಹಾರ ಬೇಕೇ ಬೇಕು.