Viral Video: ತನ್ನ ಮರಿಯನ್ನು ಬೇ#ಟೆಯಾಡಲು ಬಂದ ಚಿರತೆಯ ದಂಡನ್ನು ಧೈರ್ಯದಿಂದ ಎದುರಿಸಿದ ತಾಯಿ ಜಿರಾಫೆ!
ಈ ಜಗತ್ತಿನಲ್ಲಿ ಮಕ್ಕಳ ಮೇಲೆ ತಾಯಿ ತೋರುವ ಪ್ರೀತಿ, ಮಮತೆ ಹಾಗೂ ಕಾಳಜಿಯನ್ನು ಬೇರೆ ಯಾರೂ ಕೂಡಾ ತೋರಿಸಲು ಸಾಧ್ಯವೇ ಇಲ್ಲ. ಅದು ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಗಳೇ ಆಗಿರಲಿ ಮಾತೃ ಪ್ರೇಮ ಎನ್ನುವುದಕ್ಕೆ ಸರಿ ಸಾಟಿ ಇನ್ನೊಂದಿಲ್ಲ. ತಾಯಿ ತನ್ನ ಮಕ್ಕಳಿಗಾಗಿ ತನ್ನ ಸರ್ವಸ್ವವನ್ನು ಕೂಡಾ ಧಾರೆಯೆರೆಯಲು ಸಿದ್ಧವಾಗಿರುತ್ತಾಳೆ. ಆಕೆ ತನ್ನ ಮಗುವಿನ ರಕ್ಷಣೆಗೆ ಎಂತಹ ಆಪತ್ತನ್ನು, ಎಂತಹ ತೊಂದರೆಯನ್ನು ಕೂಡಾ ಎದುರಿಸಲು ಹಿಂದು ಮುಂದು ಆಲೋಚನೆಯನ್ನು ಮಾಡುವುದಿಲ್ಲ ಎಂಬುದು ಕೂಡಾ ವಾಸ್ತವ. ಮಕ್ಕಳ ವಿಷಯ ಬಂದಾಗ ತಾಯಿಗೆ ಒಂದು ಶಕ್ತಿಯೇ ಬಂದು ಬಿಡುತ್ತದೆ ಎನ್ನುವಂತೆ ಕೆಲವೊಮ್ಮೆ ಅನಿಸುವುದು ಉಂಟು. ಇದು ಕೇವಲ ಮನುಷ್ಯರಲ್ಲಿ ಮಾತ್ರ ನೋಡಲು ಸಾಧ್ಯ ಎಂದುಕೊಂಡರೆ ಅದು ಸತ್ಯದ ಮಾತಲ್ಲ.
ಪ್ರಾಣಿಗಳಲ್ಲಿ ಕೂಡಾ ತಾಯಿ ತನ್ನ ಮರಿಗಳ ರಕ್ಷಣೆ, ಅವುಗಳ ಪಾಲನೆ , ಪೋಷಣೆಯಲ್ಲಿ ಸಾಕಷ್ಟು ಗಮನವನ್ನು ನೀಡುತ್ತದೆ. ತನ್ನ ಮರಿಗಳಿಗೆ ಬಂದೊದಗಬಹುದಾದ ಅಪಾಯವನ್ನು ಎದುರಿಸಲು ತಾಯಿ ಸದಾ ಸಜ್ಜಾಗಿರುತ್ತಾಳೆ. ಕಾಡಿನಲ್ಲಿ ಅಪಾಯದೊಂದಿಗೆ ಸದಾ ಬದುಕಬೇಕಾದ ಸನ್ನಿವೇಶದಲ್ಲಿ ತಾಯಿಯು ತನ್ನ ಮರಿಗಳ ಸಂರಕ್ಷಣೆಗಾಗಿ ಮೈಯೆಲ್ಲಾ ಕಣ್ಣಾಗಿ ಕಾವಲು ಕಾಯುವುದು ಕೂಡಾ ಉಂಟು. ಅಂತಹುದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ಜನರ ಗಮನವನ್ನು ಸೆಳೆಯುತ್ತಿದೆ. ತಾಯಿ ತನ್ನ ಮರಿಯನ್ನು ರಕ್ಷಣೆ ಮಾಡಲು ತೋರಿರುವ ಸಾಹಸದ ನಡೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಟ್ವಿಟರ್ ನಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಸೆಪ್ಟೆಂಬರ್ 18 ರಂದು ಜಿರಾಫೆ ತನ್ನ ಮರಿಯನ್ನು ಕಾಪಾಡುವ ವೀಡಿಯೋ ಒಂದನ್ನು ಶೇರ್ ಮಾಡಿ, “ತಾಯಿಗೆ ಅಂತಹ ಧೈರ್ಯ ಎಲ್ಲಿಂದ ಬರುತ್ತದೆ ಎಂದು ನಾನು ಆಶ್ಚರ್ಯ ಪಡುತ್ತೇನೆ
ಇಲ್ಲಿ ಅದು ತನ್ನ ಮರಿಯನ್ನು ಚಿರತೆಗಳ ಗುಂಪಿನಿಂದ ಕಾಪಾಡುವಲ್ಲಿ ಯಶಸ್ವಿಯಾಗಿದೆ” ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಈಗಾಗಲೇ ಈ ವೀಡಿಯೋವನ್ನು ಹದಿಮೂರು ಸಾವಿರಕ್ಕಿಂತ ಅಧಿಕ ಜನರು ನೋಡಿದ್ದು, ಸಾವಿರಕ್ಕಿಂತ ಅಧಿಕ ಜನರು ಮೆಚ್ಚಿದ್ದಾರೆ. ಈ ವೀಡಿಯೋ ನೋಡುಗನಿಗೆ ನಿಜಕ್ಕೂ ಕೂಡಾ ಮಾತೃಪ್ರೇಮದ ಪರಾಕಾಷ್ಠೆಯ ಅರಿವನ್ನು ಮೂಡಿಸುತ್ತದೆ.
ವೀಡಿಯೋದಲ್ಲಿ ನಾವು ನೋಡಿದಾಗ ಜಿರಾಫೆಯೊಂದು ಅದರ ಮರಿಯೊಡನೆ ಇರುವಾಗ ಚಿರತೆಗಳು ದಂಡೊಂದು ಆ ಮರಿಯನ್ನು ತಮ್ಮ ಬೇ”ಟೆಯನ್ನಾಗಿಸಿಕೊಳ್ಳಲು ಸಂಚು ಹಾಕಿವೆ. ಅನಂತರ ಹೊಂಚು ಹೂಡಿದ ಅವು ಜಿರಾಫೆಯ ಬಳಿಗೆ ಬರುವ ವೇಳೆಗೆ ತಾಯಿ ಜಿರಾಫೆ ಆ ಚಿರತೆಗಳ ದಂಡಿನಿಂದ ತನ್ನ ಪುಟ್ಟ ಕಂದನನ್ನು ರಕ್ಷಿಸಲು ಸಜ್ಜಾಗಿದೆ. ತನ್ನದೆರು ಇರುವುದು ಕ್ರೂ” ರವಾದ ಚಿರತೆಗಳು ಎಂಬುದು ತಿಳಿದಿದ್ದರೂ ಕೂಡಾ ಮರಿಯ ರಕ್ಷಣೆಗಾಗಿ ಜಿರಾಫೆ ಅವುಗಳನ್ನು ಎದುರಿಸಲು ಹಿಂಜರಿಯದೆ ಮರಿಯನ್ನು ಹಿಡಿಯಲು ಬಂದ ಚಿರತೆಗಳ ಮೇಲೆ ತಾನೇ ಆ” ಕ್ರಮಣ ಮಾಡಲು ಸಜ್ಜಾಗಿದೆ. ತನ್ನ ಮರಿಗನ್ನು ರಕ್ಷಣೆ ಮಾಡಿದೆ.
ವಿಡಿಯೋ ನೋಡಿ
I wonder from where a mother gets such courage 💕
— Susanta Nanda IFS (@susantananda3) September 18, 2020
Here it protects its calf successfully against a coalition of Cheetahs ….
🎥John Temut pic.twitter.com/vEdYtxJeR3
ವೀಡಿಯೋ ನೋಡಿದ ನೆಟ್ಟಿಗರು ಅನೇಕರು ಅದನ್ನು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಯಾವಾಗಲೂ ಅದು ತಾಯಿಯೇ ಏಕಾಗಿರಬೇಕು, ತಂದೆ ಕೂಡಾ ಆಗಿರಬಹುದಲ್ಲವೇ ಎಂದು ಅನುಮಾನ ಹೊರಹಾಕಿದ್ದಾರೆ. ಅದಕ್ಕೆ ಸುಶಾಂತ್ ಅವರು ನಿಮ್ಮ ಈ ಸಂಶೋಧನೆಯನ್ನು ಇನ್ನು ಸ್ವಲ್ಪ ವಿವರವಾಗಿ ಹೇಳಿ ಎಂದಿದ್ದಾರೆ. ಮತ್ತೊಬ್ಬರು ಜಿರಾಫೆಯ ಆ ಬಲವಾದ ಕಾಲುಗಳ ಪೆಟ್ಟು ಬಿದ್ದರೆ ಗಾಯಗೊಳ್ಳುವುದು ಖಚಿತ ಎಂದಿದ್ದಾರೆ. ಮತ್ತೊಬ್ಬರು ಸರಿಯಾಗಿ ಒಂದು ಕಿಕ್ ಕೊಟ್ಟರೆ ಚಿರತೆಯ ಗತಿ ಅಷ್ಟೇ ಎಂದು ಉದ್ಗರಿಸಿದ್ದಾರೆ. ಒಟ್ಟಿನಲ್ಲಿ ವೀಡಿಯೋ ಮಾತ್ರ ಜನರ ಗಮನ ಸೆಳೆದು ವೈರಲ್ ಆಗುತ್ತಿದೆ.