ಮೆಕ್ಸಿಕೋ ದಲ್ಲಿ ಡ್ರೆನೇಜ್ ಸ್ವಚ್ಛಗೊಳಿಸುವಾಗ ಸಿಕ್ಕಿತು ಮನುಷ್ಯರಿಗಿಂತ ದೊಡ್ಡ ಇಲಿ! ಭ#ಯಗೊಂಡ ಜನ, Video Viral!

ಕೆಲವೊಮ್ಮೆ ಕೆಲವು ವಿಚಿತ್ರ ಅಥವಾ ಸೋಜಿಗ ಎನಿಸುವ ಸನ್ನಿವೇಶಗಳು ಎದುರಾದರೆ ಒಂದು ಕ್ಷಣ ಅವುಗಳನ್ನು ಎದುರಿಗೇ ಇದ್ದರೂ ಕೂಡಾ ನಂಬಲು ಅಸಾಧ್ಯವಾಗಿ ಬಿಡುತ್ತದೆ‌. ಕಣ್ಮುಂದೆ ಇರುವುದು ಕಲ್ಪನೆಯೋ ಅಥವಾ ವಾಸ್ತವವೋ ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. ಆದರೆ ಇಂತಹ ಘಟನೆಗಳು ನಡೆಯುವುದು ಬಹಳ ಅಪರೂಪ ಅಥವಾ ವಿರಳ ಎಂದೇ ನಾವು ಹೇಳಬಹುದು. ಆದರೆ ಆ ಘಟನೆಗೆ ಸಾಕ್ಷಿಯಾದರೆ ಮಾತ್ರ ಅದೊಂದು ಎಂದೂ ಮರೆಯಲಾಗದ ಅನುಭವವಾಗಿ ಉಳಿಯುವುದು ಕೂಡಾ ವಾಸ್ತವ‌. ಇಂತಹ ವಾಸ್ತವ ವಾದರೂ ಕಲ್ಪನೆ ಎನಿಸುವ ಘಟನೆಗಳ ವಿವರಗಳು ಕೂಡಾ ಆಗಾಗ ನಮಗೆ ಸೋಶಿಯಲ್ ಮೀಡಿಯಾಗಳಲ್ಲಿ ಕಾಣ ಸಿಗುತ್ತಿರುತ್ತವೆ‌. ಆದರೆ ಅದನ್ನು ಕೆಲವರು ನಂಬಿದರೆ ಇನ್ನೂ ಕೆಲವರು ಇದೆಲ್ಲಾ ನಕಲಿ ಎಂದು ಹೇಳಿ ಸುಮ್ಮನಾಗಿ ಬಿಡುತ್ತಾರೆ.

ಹಾಗಾದರೆ ಅಂತದ್ದೇ ಒಂದು ಘಟನೆಯ ಬಗ್ಗೆ ಈಗ ನಾವು ತಿಳಿಯೋಣ ಬನ್ನಿ‌. ಸಾಮಾನ್ಯವಾಗಿ ಇಲಿ ಎಂದರೆ ಎಲ್ಲರಿಗೂ ತಿಳಿದೇ ಇದೆ. ಅದೊಂದು ಪುಟ್ಟ ಜೀವಿ, ಸಂದಿಗೊಂದಿಗಳಲ್ಲಿ, ಬಿಲಗಳಲ್ಲಿ, ಕಸದಲ್ಲಿ ಕಾಣುವ ಪುಟಾಣಿ ಜೀವಿ‌. ಇಲಿಗಳಿಗಿಂತ ಗಾತ್ರದಲ್ಲಿ ಹೆಚ್ಚಾದರೆ ಅದನ್ನು ನಾವು ಹೆಗ್ಗಣ ಎಂತಲೂ ಕರೆಯುತ್ತೇವೆ. ಹೆಗ್ಗಣ ಕೂಡಾ ಹೆಚ್ಚೆಂದರೆ ಒಂದು ದಢೂತಿ ಬೆಕ್ಕಿನ ಗಾತ್ರದಲ್ಲಿ ಇರಬಹುದು. ಆದರೆ ಅಷ್ಟು ಸಣ್ಣ ಇಲಿಗಳನ್ನೇ ನೋಡಿದರೆ ಜನರು ಹೆದರುತ್ತಾರೆ, ದೂರ ಓಡುತ್ತಾರೆ‌. ಇನ್ನು ಹೆಗ್ಗಣಗಳು ಕಂಡರಂತೂ ಭಯವೋ ಭಯ ಎನ್ನುವಂತೆ ಇರುತ್ತದೆ ಪರಿಸ್ಥಿತಿ. ಅಂತಹವರ ಮುಂದೆ ಮನುಷ್ಯನ ಗಾತ್ರದ ಇಲಿಯೊಂದು ಬಂದರೆ ಹೇಗಿರುತ್ತದೆ? ಊಹಿಸುವುದು ಕೂಡಾ ಕಷ್ಟವೇ ಅಲ್ಲವೇ?

ಅಂತಹ ರಾ” ಕ್ಷಸ ಗಾತ್ರದ ಇಲಿಗಳನ್ನು ಸಿನಿಮಾಗಳಲ್ಲಿ ಅದು ಗ್ರಾಫಿಕ್ಸ್ ಮಾಯಾಜಾಲದಲ್ಲಿ ಮಾತ್ರ ನೋಡಲು ಸಾಧ್ಯ ಎನ್ನುವುದಾದರೆ ಸ್ವಲ್ಪ ತಡೆಯಿರಿ, ಏಕೆಂದರೆ ಈ ಸುದ್ದಿ ಓದಿದ ಮೇಲೆ ನಿಮ್ಮ ಆಲೋಚನೆ ಸರಿಯೋ ಅಥವಾ ತಪ್ಪೋ ಎಂಬುದು ನಿಮಗೇ ತಿಳಿದು ಬರುತ್ತದೆ. ಮೆಕ್ಸಿಕೋ ನಗರದಲ್ಲಿ ಒಂದು ಡ್ರೈನೇಜ್ ಸ್ವಚ್ಛ ಮಾಡಲು ಅಲ್ಲಿನ ನಗರ ಪಾಲಿಕೆ ಕರ್ಮಚಾರಿಗಳು ಒಳಗೆ ಇಳಿದಿದ್ದಾರೆ. ಆಗ ಅಲ್ಲಿ ಅವರು ನೋಡಿದ್ದು ಮಾತ್ರ ನಿಜವಾಗಿಯೂ ಊಹೆ ಕೂಡಾ ಮಾಡಿರದ ದೃಶ್ಯ‌. ಅಲ್ಲಿ ಅವರ ಕಣ್ಣಿಗೆ ಒಂದು ಮಾನವ ಗಾತ್ರಕ್ಕಿಂತ ದೊಡ್ಡ ಇಲಿಯನ್ನು ನೋಡಿದ್ದಾರೆ. ಇಲಿ ಒಳಗೆ ದಿಕ್ಕು ತೋಚದೆ ಇತ್ತು ಎನ್ನಲಾಗಿದ್ದು ಅದನ್ನು ಡ್ರೈನೇಜ್ ನಿಂದ ಮೇಲೆ ಎತ್ತಿದ್ದಾರೆ.

ಮೇಲೆ ತಂದ ಇಲಿಯನ್ನು ನೀರಿನಿಂದ ತೊಳೆಯುತ್ತಿರುವ ವೀಡಿಯೋಗಳು, ಫೋಟೊಗಳು ಭರ್ಜರಿ ವೈರಲ್ ಆಗಿದ್ದು, ನೀರಿನಿಂದ ಅದನ್ನು ತೊಳೆಯುವಾಗ ಅದರ ಸುತ್ತ ನಿಂತವರು ಅದಕ್ಕಿಂತ ಚಿಕ್ಕದಾಗಿ ಕಾಣುತ್ತಿದ್ದಾರೆ. ಶನಿವಾರ ವೈರಲ್ ಆಗಿರುವ ಈ ವೀಡಿಯೋವನ್ನು ಈಗಾಗಲೇ ಐದು ಲಕ್ಷ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಅಸಂಖ್ಯಾತ ಮಂದಿ ಅದಕ್ಕೆ ಪ್ರತಿಕ್ರಿಯೆಗಳನ್ನು ಕೂಡಾ ನೀಡುತ್ತಿದ್ದು, ವೀಡಿಯೋವನ್ನು ಇನ್ನೂ ಅನೇಕರು ಶೇರ್ ಕೂಡಾ ಮಾಡುತ್ತಿದ್ದಾರೆ. ಜನರು ಈ ದೈ”ತ್ಯ ಇಲಿಯನ್ನು ನೋಡಿ ಇದು ನಿಜವೋ ಅಥವಾ ಶಿಲ್ಪವೋ ಎಂದು ಅನುಮಾನ ಕೂಡಾ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ..

ಇದರ ನಡುವೆಯೇ ಎವಿಲಿನ್ ಎನ್ನುವ ಮಹಿಳೆ ಈ ಇಲಿ ನನ್ನದು, ಇದು ನಕಲಿ ಇಲಿಯಾಗಿದ್ದು ಹೈಲೋವೀನ್ ಅಲಂಕಾರಕ್ಕಾಗಿ ತಾನು ಈ ಇಲಿಯನ್ನು ಮಾಡಿಸಿದ್ದಾಗಿ ಹೇಳಿದ್ದಾರೆ. ಆದರೆ ಅದು ಅತಿವೃಷ್ಟಿಯ ಸಂದರ್ಭದಲ್ಲಿ ಮಳೆ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿತ್ತು. ತಾನು ಅದನ್ನು ಹುಡುಕಿಸುವ ಪ್ರಯತ್ನಗಳನ್ನು ಮಾಡಿದ್ದಾಗಿ ಆದರೆ ಅದು ಸಿಕ್ಕಿರಲಿಲ್ಲ ಎಂದು ಹೇಳುತ್ತಿದ್ದಾರೆ. ಆಗ ಇಲಿಯನ್ನು ಹುಡುಕಲು ಕೇಳಿದಾಗ ಯಾರೂ ನೆರವಿಗೆ ಬರಲಿಲ್ಲ ಎಂದಿರುವ ಮಹಿಳೆ, ಈಗ ಸಿಕ್ಕಿರುವ ತನ್ನ ಈ ಬೃಹತ್ ಇಲಿಯನ್ನು ಮನೆಗೆ ಕರೆದುಕೊಂಡು ಹೋಗುವುದೋ ಬೇಡವೋ ಎಂಬುದನ್ನು ನಿರ್ಧಾರ ಮಾಡಬೇಕಿದೆ ಎಂದಿದ್ದಾರೆ.