OMG! ಕಾರಿನ ಚಕ್ರದಲ್ಲಿ ಸಿಲುಕಿದ 14 ಫೀಟ್ ಉದ್ದದ ಹೆಬ್ಬಾವು! ನೋಡಿ ಈ Viral Video!
ಕಾರಿನ ಚಕ್ರದಲ್ಲಿ ಸಿಲುಕಿದ ಹೆಬ್ಬಾವಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 14 ಅಡಿ ಉದ್ದದ ಹೆಬ್ಬಾವು ಕಾರಿನ ಚಕ್ರದಲ್ಲಿ ಸಿಲುಕಿದ ನಂತರ ಅದನ್ನು ತುಂಬಾ ಜಾಣತನದಿಂದ ತೆಗೆದು ಮುಕ್ತವೂ ಮಾಡಿದ್ದಾರೆ. ಅದರ ಜೊತೆಗೆ ಮನುಷ್ಯತ್ವದ ಪರಿಚಯವನ್ನು ನೀಡಿದ್ದಾರೆ.
ವಿಡಿಯೋದಲ್ಲಿ ಕಂಡುಬಂದ ವಿಶೇಷವೇನೆಂದರೆ, ಹೆಬ್ಬಾವಿಗೆ ಯಾವುದೇ ರೀತಿಯ ಗಾಯಗಳನ್ನು ಮಾಡದೆ ಸುಖ ರೂಪವಾಗಿ ವಾಹನದ ಚಕ್ರದಿಂದ ಬಚಾವ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನೀವು ನೋಡಬಹುದು ಹಾವು ಅಥವಾ ಹೆಬ್ಬಾವು ಗಾಡಿಯ ಚಕ್ರದಲ್ಲಿ ಸಿಲುಕಿದಾಗ ಮೊದಲು ಚಕ್ರವನ್ನು ಹೊರಗೆ ತೆಗೆದು ಆಮೇಲೆ ಹೆಬ್ಬಾವನ್ನು ಬಿಡುಗಡೆಗೊಳಿಸಿದ್ದಾರೆ. ಇದು ದೊಡ್ಡ ಹೆಬ್ಬಾವಾಗಿರುವುದರಿಂದ ಸಹಜವಾಗಿ ಹೊರಗೆ ತೆಗೆಯುವದು ಕಷ್ಟವಾಗಿತ್ತು. ಆದರೆ ತುಂಬಾ ಕಾಳಜಿ ಮತ್ತು ಜಾಣತನದಿಂದ ಇದನ್ನು ಹೊರಗೆ ತೆಗೆಯಲಾಗಿದೆ. ಇದನ್ನು ನೋಡಿದವರು ಲೈಕ್ ಮಾಡುವದರೊಂದಿಗೆ ಕಾಮೆಂಟ್ನಲ್ಲಿ ಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಡಿಯೋ ನೋಡಿ…
In monsoon snakes can sneak into vehicles. Just be little careful. pic.twitter.com/C6mzWkZSLH
— Susanta Nanda IFS (@susantananda3) September 22, 2020
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಶಾಂತನಂದ ಇವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಮಳೆಗಾಲದಲ್ಲಿ ಈ ರೀತಿಯ ಘಟನೆಗಳು ಯಾವತ್ತು ಅಲ್ಲಲ್ಲಿ ಕಂಡುಬರುತ್ತವೆ. ಅದರಲ್ಲಿ ಹೆಚ್ಚಾಗಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಹಾವುಗಳು ವಾಹನಗಳ ಅಡಿಯಲ್ಲಿ ಹೋಗಿ ಸಿಲುಕಿ ಬೀಳುವುದು ಸರ್ವೇಸಾಮಾನ್ಯ. ಅದಕ್ಕಾಗಿ ಸುಶಾಂತ್ ಅವರು ಈ ರೀತಿಯ ಅವಘಡಗಳಿಂದ ಕಾಳಜಿ ತೆಗೆದುಕೊಳ್ಳಿ ಅಂತ ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಇಲ್ಲಿಯವರೆಗೆ 15 ಸಾವಿರಕ್ಕೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ.