ಮೀನಿನ ಹೊಟ್ಟೆಯಲ್ಲಿ ಆಮೆ ಮರಿಗಳು! ಮರಿಗಳ ಅವಸ್ಥೆ ನೋಡಿ ಅ#ಯ್ಯೋ ಪಾ#ಪ ಎಂದ ಜನ! ನೋಡಿ ಈ Viral Video

ವಿಚಿತ್ರ ಎನಿಸುವ ಸನ್ನಿವೇಶಗಳು, ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ ಈಗ ಸೋಶಿಯಲ್ ಮೀಡಿಯಾಗಳಿಂದಾಗಿ ಕೇವಲ ಕೇಳುವುದು ಮಾತ್ರವೇ ಅಲ್ಲದೇ ಇಂತಹ ವಿಚಿತ್ರವಾದ ಘಟನೆಗಳನ್ನು ನೋಡುವುದು ಕೂಡಾ ಸಾಧ್ಯ ಆಗುತ್ತೆ. ಟ್ವಿಟರ್ ನಲ್ಲಿ ದಿನವೂ ಒಂದಲ್ಲಾ ಒಂದು ಅದ್ಭುತ ಎನಿಸುವ ವೀಡಿಯೋ ನೋಡೋಕೆ ಸಿಗ್ತಾನೇ ಇರುತ್ತೆ. ಅಷ್ಟೇ ಅಲ್ಲಾ ಅಂತಹ ವೀಡಿಯೋಗಳು ವೈರಲ್ ಕೂಡಾ ಆಗಿ ಲಕ್ಷಾಂತರ ಜನರ ಗಮನ ಕೂಡಾ ಸೆಳೆಯುತ್ವೆ. ಒಂದಕ್ಕಿಂದ ಇನ್ನೊಂದು ವೀಡಿಯೋ ವಿಶೇಷ ಅನ್ನೋ ತರ ಇರುತ್ತೆ. ಅಂತದ್ದೇ ಒಂದು ವೀಡಿಯೋ ಬಗ್ಗೆ ನಾವು ಹೇಳ್ತೀವಿ ಬನ್ನಿ. ಆಮೇಲೆ ನೀವು ಕೂಡಾ ಹೌದು ಅಂತ ಒಪ್ಪಲೇ ಬೇಕಾದ ವಿಷಯ ಇಲ್ಲಿದೆ ಅಂತ.

ಮನೆಗಳಲ್ಲಿ ಮಕ್ಕಳಿಗೆ ಊಟ ಆದ್ಮೇಲೆ ತಿಂದಿದ್ದು ಜೀರ್ಣ ಆಗೋಕೆ ಸ್ವಲ್ಪ ಓಡಾಡು ಅಂತ ಮಕ್ಕಳಿಗೆ ಹೇಳ್ತಾರೆ. ಇಲ್ದೇ ಇದ್ರೆ ತಿಂದಿದ್ದು ಸರಿಯಾಗಿ ಜೀರ್ಣ ಆಗಲ್ಲ ಅಂತ. ಇದು ಬಹುಶಃ ಪ್ರಾಣಿಗಳಿಗೂ ಕೂಡಾ ಅನ್ವಯ ಆಗಬಹುದು ಅನ್ನೋ ಹಾಗಿರೋ ಒಂದು ವೀಡಿಯೋ ವೈರಲ್ ಆಗಿದೆ. ಪಾಪಾ ಮೀನೊಂದು ತಾನು ನುಂಗಿದ ಪದಾರ್ಥಗಳು ಅದರ ಹೊಟ್ಟೆಯಲ್ಲಿ ಜೀರ್ಣವೇ ಆಗದೇ ಅದು ಹೇಗೆ ಅದನ್ನು ನುಂಗಿತ್ತೋ ಹಾಗೇ ಯಥಾವತ್ತಾಗಿ ಅದರ ಹೊಟ್ಟೆಯಲ್ಲಿದೆ. ಬಹುಶಃ ಅದಕ್ಕೆ ಯಾರೂ ಕೂಡಾ ತಿಂದ ಮೇಲೆ ಚೆನ್ನಾಗಿ ಕೆಲಸ ಮಾಡಬೇಕು ಅಂತ ಹೇಳಿಲ್ಲ ಅನ್ಸುತ್ತೆ. ಹೀಗೆ ಅನ್ಕೊಂಡ್ರೆ ಹಾಸ್ಯ ಎನಿಸಬಹುದು ಅಲ್ವಾ ಆದರೆ ಒಂದ್ಸಲ ಹಾಗೆ ಅನ್ಸುತ್ತೆ.

ಹಾಗಾದರೆ ಆ ಮೀನಿನ ಹೊಟ್ಟೇಲಿ ಜೀರ್ಣ ಆಗದೇ ಏನು ಹಾಗೇ ಉಳಿದ ವಸ್ತು ಅಂತೀರಾ? ಅದು ಯಾವುದೇ ವಸ್ತು ಅಲ್ಲ, ಬದಲಿಗೆ ಪುಟಾಣಿ ಜೀವಿಗಳು‌ ಅಂದರೆ ಆಶ್ಚರ್ಯ ಆಗಬಹುದು. ಆ ಆಶ್ಚರ್ಯಕರ ವಿಷಯದ ಪೂರ್ತಿ ವಿವರಕ್ಕೆ ಹೋದರೆ
ಸಮುದ್ರವೊಂದರಲ್ಲಿ ಮೀನು ಹಿಡಿಯಲು ಹೋದಂತಹ ಸಂದರ್ಭದಲ್ಲಿ ಒಬ್ಬಾತನಿಗೆ ದೊಡ್ಡ ಗಾತ್ರದ ಮೀನೊಂದು ಸಿಕ್ಕಿದೆ. ಸಿಕ್ಕಿದ ಆ ದೊಡ್ಡ ಗಾತ್ರದ ಮೀನಿನ ಹೊಟ್ಟೆಯ ಭಾಗವನ್ನು ಹರಿತವಾದ ವಸ್ತುವನ್ನು ಬಳಸಿ ಸೀ” ಳಿದ್ದಾರೆ. ಆ ಸಂದರ್ಭದಲ್ಲಿ ಆ ಮೀನಿನ ಹೊಟ್ಟೆಯಲ್ಲಿ ಆತನಿಗೆ ಒಂದು ಎರಡಲ್ಲಾ ಬದಲಿಗೆ ಸುಮಾರು 10-15 ಆಮೆ ಮರಿಗಳು ಸಿಕ್ಕಿವೆ.

ಹೌದು, ಮೀನು ಯಾವುದೋ ಸಂದರ್ಭದಲ್ಲಿ ಆಮೆಯ ಮರಿಗಳನ್ನು ನುಂಗಿದೆ. ಆದರೆ ಆ ಆಮೆಯ ಮರಿಗಳು ಮೀನಿನ ಹೊಟ್ಟೆಯೊಳಗೆ ಹಾಗೇ ಉಳಿದು ಹೋಗಿವೆ. ಮೀನನ್ನು ಹಿಡಿದ ವ್ಯಕ್ತಿ ಅದರ ಹೊಟ್ಟೆಯನ್ನು ಬಗೆದು ತೆರೆದಾಗ ಒಂದೊಂದೇ ಆಮೆ ಮರಿಗಳನ್ನು ತೆಗೆಯುತ್ತಾ ಹೋಗಿದ್ದಾರೆ. ಆ ವ್ಯಕ್ತಿ ತೆಗೆಯುತ್ತಿದ್ದರೆ ಒಂದಾದ ನಂತರ ಮತ್ತೊಂದು ಎನ್ನುವಂತೆ ಸುಮಾರು ಹತ್ತಕ್ಕಿಂತ ಹೆಚ್ಚು ಆಮೆ ಮರಿಗಳು ಮೀನಿನ ಹೊಟ್ಟಯಿಂದ ಹೊರ ಬಂದಿದೆ. ಅದಾಗಲೇ ಎಲ್ಲಾ ಮರಿಗಳು ಸತ್ತು ಹೋಗಿದ್ದರಿಂದ ಅವು ಬೊಂಬೆಗಳ ಹಾಗೆ ಕಾಣುತ್ತಿವೆ ಆ ಆಮೆಯ ಮರಿಗಳು.

ವಿಡಿಯೋ ನೋಡಿ

ಆತ ಆ ಆಮೆ ಮರಿಗಳನ್ನು ಒಂದರ ಪಕ್ಕ ಒಂದು ದೋಣಿಯಲ್ಲಿ ಇಟ್ಟಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಆಶ್ಚರ್ಯವನ್ನು ಹೊರ ಹಾಕಿದ್ದಾರೆ. ಒಬ್ಬ ಟ್ವಿಟರ್ ಬಳಕೆದಾರರು ಆಮೆಗಳ ಸಂಖ್ಯೆ ಕಡಿಮೆಯಾಗಲು ಮನುಷ್ಯರು ಎಸೆದ ಪ್ಲಾಸ್ಟಿಕ್ ಕಾರಣ ಅನ್ಕೊಂಡಿದ್ವಿ, ಆದರೆ ಅದಕ್ಕೆ ಮೀನುಗಳು ಕಾರಣ ಅಂತ ಈಗ ಗೊತ್ತಾಗಿದೆ ಎಂದು ಹಾಸ್ಯದ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅವು ಇನ್ನೂ ಸತ್ತಿರುವುದಿಲ್ಲ ಮೀನಿನ ಹೊಟ್ಟೆಯಲ್ಲಿ ಇರುವ ಆಸಿಡ್ ಗಳನ್ನು ಬಳಸಿಕೊಂಡು ಬದುಕಿರುತ್ತವೆ ಎಂದಿದ್ದಾರೆ. ಮತ್ತೊಬ್ಬರು ಮೀನನ್ನು ಪ್ಯಾನ್ ಮೇಲೆ ಇಟ್ಟು ಫ್ರೈ ಮಾಡಿ, ಆಮೆಗಳ ಸ್ಪಫ್ ತುಂಬಿ ತಿನ್ನಿ ಎಂದು ಕಾಲೆಳೆದಿದ್ದಾರೆ.