Viral Video: ನೋಡ್ ನೋಡುತ್ತಲೇ ಪಾರಿವಾಳದ ಬೇ#ಟೆಯಾಡಿದ ಆಮೆ! ಆಮೆಯಂಥ ಸಾಧು ಜೀವಿಯ ಇನ್ನೊಂದು ಮುಖ ನೋಡಿ ಅಚ್ಚರಿ ಪಟ್ಟ ಜನ!
ಆಮೆ ಎಂದರೆ ಒಂದು ಸಾಧು ಜೀವಿಯಂತೆ ಕಾಣುತ್ತದೆ. ನಿಧಾನ ನಡಿಗೆಯ, ಜೋರು ಶಬ್ಧ ಮಾಡದ, ನಿಂತಲ್ಲೇ ನಿಂತ ಹಾಗೆ ಒಂದೇ ಕಡೆ ಚಲನೆ ಇಲ್ಲದ ಹಾಗೇ ಉಳಿಯುವ, ಅಪಾಯ ಎದುರಾಯಿತು ಎಂದರೆ ತನ್ನ ಚಿಪ್ಪಿನೊಳಗೆ ದೂರಿ ಪ್ರಾಣ ರಕ್ಷಣೆ ಮಾಡಿಕೊಳ್ಳೋ ಈ ಜೀವಿಯನ್ನು ನೋಡಿದಾಗಲೆಲ್ಲಾ ಅಯ್ಯೋ ಪಾಪದ ಜೀವಿ ಇದು, ಎಂಥ ಅಮಾಯಕ ಪ್ರಾಣಿ ಇದು ಅಂತೆಲ್ಲಾ ನಮಗೆ ಅನಿಸೋದು ಸಹಜ. ಅನೇಕರಿಗೆ ಆಮೆಗಳ ಈ ಮೌನವಾಗಿರೋ ಗುಣವು ಬಹಳ ಇಷ್ಟ ಆಗುತ್ತೆ, ತಮ್ಮ ಪಾಡಿಗೆ ತಾವು ಇರೋ ಈ ಜೀವಿಗಳು ಎಂತಹ ಅದ್ಭುತ ಸೃಷ್ಟಿ ಅಲ್ಲವೇ ಅಂತ ಕೂಡಾ ಅನೇಕರು ಭಾವಿಸುತ್ತಾರೆ. ಕೆಲವರು ಆಮೆಗಳನ್ನು ತಮ್ಮ ಮನೆಗಳಲ್ಲಿ ಸಾಕುತ್ತಾರೆ ಕೂಡಾ, ಅವುಗಳನ್ನು ಮುದ್ದಿಸಿ ಆರೈಕೆಯನ್ನು ಕೂಡಾ ಮಾಡುತ್ತಾರೆ.
ಹೀಗೆ ತನ್ನ ಶಾಂತ ಸ್ವಭಾವ ಹಾಗೂ ಅಮಾಯಕತೆಯ ಕಾರಣದಿಂದಲೇ ಜನರ ಮನಸ್ಸಿಗೆ ಹತ್ತಿರವಾದ ಆಮೆಯು ಕೂಡಾ ಅಮಾಯಕತನದಲ್ಲೇ ಇತರೆ ಜೀವಿಗಳಿಗೆ ಪ್ರಾಣ ಕಂಟಕವೂ ಆದರೆ ಹೇಗಿರುತ್ತೇ? ಈ ಪ್ರಶ್ನೆ ಕೇಳಿದಾಗ, ಏ ಏನು ಆಮೆ ಬೇರೆ ಪ್ರಾಣಿಗಳನ್ನು ಕೊಲ್ಲೋದಾ? ಇಲ್ಲ ಬಿಡಿ ಇದೆಲ್ಲಾ ಸಾಧ್ಯ ಇಲ್ಲ, ಆಮೆ ಪಾಪ ಸಾಧು ಜೀವಿ ಹೀಗೆಲ್ಲಾ ಹೇಳ ಬಿಡ್ರಿ ಅಂತಾರೆ. ಆದರೆ ಹೀಗೆ ಹೇಳೋರಿಗೆ ಅವರ ಆಲೋಚನೆ ಬದಲಿಸೋ ವೀಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಾ ಇವೆ. ಕೆಲವೇ ದಿನಗಳ ಹಿಂದೆ ನೀರೊಳಗೆ ಇದ್ದ ಆಮೆ ಒಂದು ನೀರ ಮೇಲೆ ಹೋಗ್ತಾ ಇದ್ದ ನೀರು ಹಾವನ್ನು ಹಿಡಿದು ಜೀವಂತ ಹಾವನ್ನೇ ತಿಂದ ವೀಡಿಯೋ ವೈರಲ್ ಆಗಿತ್ತು.
ಆಮೆ ಹಾವನ್ನು ಹಿಡಿದು ತಿಂದಿದ್ದು ನೋಡಿದವರು ಆಶ್ಚರ್ಯ ಪಟ್ಟಿದ್ದರು, ನಂಬಲು ಅಸಾಧ್ಯ ಎಂದಿದ್ದರು. ಈಗ ಆ ವೀಡಿಯೋ ನೋಡಿಯೇ ಆಶ್ಚರ್ಯ ಪಡುತ್ತಾ ಇದ್ದವರಿಗೆ ಆಮೆಯ ಇನ್ನೊಂದು ಮುಖವನ್ನು ತೋರಿಸೋ ಮತ್ತೊಂದು ವೀಡಿಯೋ ಕೂಡಾ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ. ಹಾಗಾದರೆ ಈ ವೀಡಿಯೋದಲ್ಲಿ ಏನಿದೆ ಅಂತೀರಾ? ಬನ್ನಿ ಹೇಳ್ತೀವಿ. ಕೊಳವೊಂದರ ಬಳಿ ಪಾರಿವಾಳಗಳು ಸ್ವಚ್ಛಂದವಾಗಿ ಓಡಾಡ್ತಾ ಇವೆ. ಆಮೆ ಆಗ ನೀರಿನೊಳಗಿಂದ ದಡದ ಕಡೆಗೆ ಬರುತ್ತೆ. ಸಾಮಾನ್ಯವಾಗಿ ಆಮೆ ಏನು ಮಾಡಲ್ಲ ಅನ್ನೋ ನಂಬಿಕೆಯಿಂದ ಪಾರಿವಾಳಗಳು ತಮ್ಮ ಪಾಡಿಗೆ ತಾವು ಅಲ್ಲೇ ಏನೇನೋ ಆಯುತ್ತಾ ಇವೆ.
ಆಗ ನಡೆಯೋ ಸನ್ನಿವೇಶ ನೋಡೋರಿಗೆ ಒಂದು ಕ್ಷಣ ಶಾಕ್ ಆಗುತ್ತೆ. ಅಮಾಯಕನಂತೆ ಬಂದ ಆಮೆ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಪಾರಿವಾಳದ ಕುತ್ತಿಗೆಯ ಭಾಗವನ್ನು ಗಟ್ಟಿಯಾಗಿ ತನ್ನ ಬಾಯಲ್ಲಿ ಹಿಡಿದುಕೊಂಡು, ಅದನ್ನು ತಪ್ಪಿಸಿಕೊಳ್ಳಲು ಬಿಡದೇ ನೀರೋಳಗೆ ಎಳೆದುಕೊಂಡು ಹೋಗಿ ಮುಳುಗಿದೆ. ಅಲ್ಲಿಗೆ ಆ ಪಾರಿವಾಳದ ಕಥೆ ಮುಗಿಯಿತು ಎಂದು ನಮಗೆ ಅರ್ಥವಾಗುತ್ತೆ. ಆದರೆ ಆಮೆಯ ಇಂತಹ ಶಾಕಿಂಗ್ ವರ್ತನೆ ನೋಡಿದಾಗ ಒಂದು ಕ್ಷಣ ಆಮೆ ಇಂತಹ ಕೆಲಸ ಮಾಡುತ್ತಾ? ಅಂತ ಅನಿಸೋದು ಸಹಜ ಆದರೂ ವೀಡಿಯೋ ಕಣ್ಮುಂದೆ ಇರೋದ್ರಿಂದ ನಂಬಲೇ ಬೇಕಾಗುತ್ತದೆ.
ವಿಡಿಯೋ ನೋಡಿ
Turtle kills a pigeon pic.twitter.com/h8wuW60b0p
— The Dark Side Of Nature (@Darksidevid) September 14, 2020
ಈಗಾಗಲೇ 10 ಲಕ್ಷ ಕ್ಕಿಂತ ಅಧಿಕ ವೀಕ್ಷಣೆ, ಸಾವಿರಕ್ಕಿಂತ ಅಧಿಕ ಲೈಕ್ಸ್ ಹಾಗೂ ನಾನೂರಕ್ಕಿಂತ ಅಧಿಕ ರೀಟ್ವೀಟ್ ಆಗಿರುವ ಈ ವೀಡಿಯೋಗೆ ವೈವಿದ್ಯಮಯವಾದ ಪ್ರತಿಕ್ರಿಯೆಗಳು ಕೂಡಾ ಸಿಕ್ಕಿವೆ. ಒಬ್ಬ ಟ್ವಿಟರ್ ಖಾತೆದಾರರು ಆ ಪಾರಿವಾಳ ಬಹಳ ದಿನಗಳಿಂದ ಆಮೆಗೆ ಗೇಲಿ ಮಾಡುತ್ತಿತ್ತು, ಅದಕ್ಕೆ ಒಂದು ಆಮೆ ಪಾರಿವಾಳಕ್ಕೆ ಪಾಠ ಕಲಿಸಿದೆ ಎಂದಿದ್ದಾರೆ. ಇನ್ನೊಬ್ಬರು ಆಮೆಗಳು ಬೇಟೆಯಾಡುವುದು ಅಂತ ಇದೇ ಮೊದಲ ಬಾರಿ ನೋಡಿದ್ದು ಎಂದಿದ್ದಾರೆ. ಆಮೆ ಪಾರಿವಾಳವನ್ನು ಕೊಂದಿತೇ? ಎಂದು ಪ್ರಶ್ನೆ ಮಾಡಿದ್ದಾರೆ. ಬಹುತೇಕರು ಆಶ್ಚರ್ಯವನ್ನೇ ಚಿತ್ರಗಳ ಮೂಲಕ ವ್ಯಕ್ತಪಡಿಸಿದ್ದಾರೆ.