ಅತ್ತ ಭಾರತೀಯ ಆಟಗಾರರು ದುಬೈನಲ್ಲಿ IPL ಆಡುತ್ತಿರುವಾಗ ಇತ್ತ ಸುರೇಶ್ ರೈನಾ ಮಾತ್ರ…

ಮಹೇಂದ್ರ ಸಿಂಗ್ ಧೋನಿಯವರ ಜೊತೆಗೆ ಸುರೇಶ್ ರೈನಾ ಅವರು ಸಹಿತ ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ರಂದು ಕ್ರಿಕೆಟ್ ನಿಂದ ನಿವೃತ್ತರಾದರು. ಐಪಿಎಲ್ ಆಡುವ ಸಲುವಾಗಿ ಸಿಎಸ್ಕೆ ತಂಡದ ವತಿಯಿಂದ ಸುರೇಶ್ ರೈನಾ ಅವರು ಯುಎಇ ಗೆ ತೆರಳಿದ್ದರು. ಐಪಿಎಲ್ ಪ್ರಾರಂಭವಾಗುವ ಮುನ್ನವೇ ಯಾವುದೋ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್ಟಾಗಿ ಸುರೇಶ್ ರೈನಾ ಅವರು ಐಪಿಎಲ್ ವನ್ನು ಅರ್ಧದಲ್ಲೆ ಬಿಟ್ಟು ಮರಳಿ ಭಾರತಕ್ಕೆ ಬಂದರು. ಇಲ್ಲಿ ಭಾರತಕ್ಕೆ ಬಂದು ಸುಮ್ಮನೆ ಕೂಡದೇ ಒಂದು ಮಹತ್ವದ ಕೆಲಸಕ್ಕೆ ಕೈಹಾಕಿದ್ದಾರೆ.

ಇವರು ಯಾವ ಮಹತ್ವದ ಕೆಲಸಕ್ಕೆ ತಮ್ಮನ್ನು ತೊಡಗಿಸಿದ್ದಾರೆ ಎಂದರೆ, ಜಮ್ಮು-ಕಾಶ್ಮೀರದ ಆಟದಿಂದ ವಂಚಿತವಾದ ಮಕ್ಕಳಿಗೆ ಕ್ರಿಕೆಟ್ ಕಲಿಸುವ ಕೆಲಸವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಕಳೆದ ಕೆಲವು ತಿಂಗಳಿಂದ ಜಮ್ಮು-ಕಾಶ್ಮೀರದ ಡಿಜಿಪಿಯಾದ ದಿಲ್ಬಾಗ್ ಸಿಂಗ್ ಅವರ ಜೊತೆಗೆ ಕ್ರಿಕೆಟ್ ಅಕಾಡೆಮಿಯೊಂದನ್ನು ಪ್ರಾರಂಭಿಸುವ ಬಗ್ಗೆ ಸಂಪರ್ಕದಲ್ಲಿದ್ದಾರೆ. ಇದಕ್ಕೆ ಜಮ್ಮು-ಕಾಶ್ಮೀರ ಸರ್ಕಾರವು ಸುರೇಶ್ ರೈನಾ ಅವರ ಈ ವಿನಂತಿಗೆ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಅದರಂತೆ ಜಮ್ಮು-ಕಾಶ್ಮೀರದಲ್ಲಿ ಒಟ್ಟು ನಾಲ್ಕು ಅಕಾಡೆಮಿಗಳನ್ನು ತೆರೆಯಲಿದ್ದಾರೆ.

ಮಾಜಿ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ಜಮ್ಮು-ಕಾಶ್ಮೀರ್ ಪೊಲೀಸ್ ಮುಖ್ಯಾಲಯದಲ್ಲಿ ಡಿಜಿಪಿಯವರನ್ನು ಭೇಟಿ ಮಾಡಿದರು. ಕಾಶ್ಮೀರದ ಕಣಿವೆಯಲ್ಲಿ ಮಕ್ಕಳಿಗೆ ಆಟದ ಸಲುವಾಗಿ ಪ್ರೋತ್ಸಾಹವನ್ನು ನೀಡಲು ಅವಶ್ಯಕವಾದ ಯೋಜನೆಗಳ ಮೇಲೆ ಚರ್ಚೆ ಮಾಡಿದರು. ಹಾಗೆಯೇ ಕೆಲವೊಂದು ಕ್ರಿಕೆಟ್ ಸಂಘಗಳ ಜೊತೆಗೆ ಸುರೇಶ್ ರೈನಾ ಅವರು ಚರ್ಚೆ ಮಾಡಿ ಕ್ರಿಕೆಟ್ ಬಗ್ಗೆ ಮಾಹಿತಿಯನ್ನು ನೀಡಿದರು ಎಂದು ಜಮ್ಮು ಕಾಶ್ಮೀರ್ ಪೊಲೀಸ್ ರು ಟ್ವಿಟರ್ ಮುಖಾಂತರ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರ ಪೊಲೀಸ್ ರು ಮಾಡಿರತಕ್ಕಂತಹ ಟ್ವೀಟ್ ಗೆ ಸುರೇಶ್ ರೈನಾ ಅವರು ಮರು ಟ್ವೀಟ್ ಮಾಡಿ, “ನಾನು ಜಮ್ಮು-ಕಾಶ್ಮೀರದ ಮಕ್ಕಳ ಭವಿಷ್ಯಕ್ಕೆ ಆಕಾರವನ್ನು ಕೊಡುವ ವಿಚಾರವನ್ನು ಮಾಡುತ್ತಿರುವೆ”. ಎಂದು ಹೇಳಿದ್ದಾರೆ.

ಸುರೇಶ್ ರೈನಾ ಅವರು ಯಾವ ಅಪೀಲ್ ಮಾಡಿದ್ದರು?

ರೈನಾ ಅವರು ಪತ್ರದ ಮುಖಾಂತರ ಜಮ್ಮು-ಕಾಶ್ಮೀರದ ಡಿಜಿಪಿ ಡಿಲ್ಬಾಗ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಪತ್ರದ ಸಾರಾಂಶದಲ್ಲಿ ಹೀಗೆ ಬರೆದಿದ್ದರು. ನನಗೆ 15 ವರ್ಷಗಳವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವವಿದೆ. ಈ ನನ್ನ ಅನುಭವ ಮತ್ತು ಕ್ಷಮತೆಯನ್ನು ನಾನು ನನ್ನ ಮುಂದಿನ ಪೀಳಿಗೆಗೆ ಧಾರೆ ಎರೆಯುವ ಇಚ್ಛೆಯನ್ನು ಹೊಂದಿದ್ದೇನೆ, ಎಂದಿದ್ದಾರೆ.

ತಮ್ಮ ಗುರಿಯ ಬಗ್ಗೆ ಮಾತನಾಡುತ್ತಾ ರೈನಾ ಅವರು ಹೀಗೆ ಹೇಳುತ್ತಾರೆ. ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಆಟಗಳಿಗೆ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹನೆ ಸಿಗಬೇಕಾಗಿದೆ. ಅದರ ಜೊತೆಗೆ ಕೇಂದ್ರ ಶಾಸಿತ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭಾವಂತ ಆಟಗಾರರನ್ನು ಶೋಧಿಸುವುದು ಮತ್ತು ಅವರಿಗೆ ಯೋಗ್ಯರೀತಿಯಲ್ಲಿ ತರಬೇತಿಯನ್ನು ಕೊಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಕ್ರಿಕೆಟ್ ಈ ಆಟವು ಬರೀ ಒಂದು ಆಟವಲ್ಲ, ಇದನ್ನು ಆಡುವುದರಿಂದ ಆಟಗಾರನಿಗೆ ವ್ಯವಸಾಯಿಕ ದೃಷ್ಟಿಕೋನ, ಶಿಸ್ತು, ಫಿಟ್ನೆಸ್, ಶಾರೀರಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರನ್ನಾಗಿಸುತ್ತದೆ.

ಕಳೆದ ತಿಂಗಳು ಜಮ್ಮು-ಕಾಶ್ಮೀರ್ ಪೊಲೀಸ್ ಸುರೇಶ್ ರೈನಾ ಅವರಿಗೆ ಕ್ರಿಕೆಟ್ ನ ಕೆಲವು ಯುಕ್ತಿಗಳನ್ನು ಮಕ್ಕಳಿಗೆ ಕಳಿಸಿ ಕೊಡುವುದಕ್ಕಾಗಿ ಆಮಂತ್ರಣವನ್ನು ಕೊಟ್ಟಿದ್ದರು.