ಮೊಟ್ಟೆ ಮತ್ತು ಮೀನಿಗಿಂತಲೂ ಹೆಚ್ಚು ಶಕ್ತಿವರ್ಧಕ ಮತ್ತು ಪ್ರೊಟೀನ್ ಇರುವ 10 ಸಸ್ಯಾಹಾರಿ ಆಹಾರಗಳು ನಿಮಗೆ ತಿಳಿದಿರಲಿ!

ಅತಿ ಹೆಚ್ಚು ಶಕ್ತಿವರ್ಧಕ ಆಹಾರಗಳು ಎಂದಾಗ ಸಹಜವಾಗಿಯೇ ಮೀನು, ಮೊಟ್ಟೆ, ಮಾಂಸ, ಚಿಕನ್ ಈ ಆಹಾರಗಳು ನಮ್ಮ ಕಣ್ಣು ಮುಂದೆ ಬರುತ್ತವೆ. ಇವುಗಳು ಸಾಕಷ್ಟು ಪ್ರೋಟೀನ್ಸ್ ಗಳಿಂದ ತುಂಬಿರುತ್ತದೆ. ಆದರೆ ಸಸ್ಯಾಹಾರಿ ಜನರು ತಮ್ಮ ದೇಹದಲ್ಲಿಯ ಶಕ್ತಿಯನ್ನು ವರ್ಧಿಸಲು ಮತ್ತು ಪ್ರೋಟೀನ್ಸ್ ಗಳ ಕೊರತೆಯನ್ನು ತುಂಬಿ ತೆಗೆಯಲು ಸಹಾಯ ಮಾಡುವಂತಹ ಆಹಾರಗಳನ್ನು ನಾವಿಲ್ಲಿ ವಿಶ್ಲೇಷಿಸಿದ್ದೇವೆ. ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಆರೋಗ್ಯವು ಸದೃಢವಾಗಲು ಸಹಾಯವಾಗುತ್ತದೆ.

  1. ಬಾದಾಮಿ:- ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ಸ್ ಮತ್ತು ಪೌಷ್ಟಿಕತೆ ದೊರೆಯುತ್ತದೆ. ಇದರಿಂದ ದೇಹ ಸದೃಢವಾಗುತ್ತದೆ.
  2. ಗ್ರೀಕ್ ಯೋಗರ್ಟ್:- ಗ್ರೀಕ್ ಯೋಗರ್ಟ್ ಒಂದು ಪ್ರಕಾರದ ಮೊಸರಾಗಿದೆ. ಇದು ತಿನ್ನಲು ತುಂಬಾ ಸ್ವಾದಿಷ್ಠವಾಗಿದ್ದು ಶರೀರದಲ್ಲಿಯ ಪೌಷ್ಟಿಕತೆಯ ಕೊರತೆ ಯನ್ನು ತುಂಬಿ ತೆಗೆಯಲು ಮಹತ್ವದ ಆಹಾರ ಪದಾರ್ಥವಾಗಿದೆ. ಫ್ಯಾಟ್ ಇಲ್ಲದಿರುವ ಈ ಗ್ರೀಕ್ ಮೊಸರಿನಲ್ಲಿ 48% ಪ್ರೋಟೀನ್ಸ್ ಇರುತ್ತದೆ.
  3. ಓಟ್ಸ್:- ಕಳೆದ ಕೆಲವು ವರ್ಷಗಳಿಂದ ಓಟ್ಸ್ ನ್ನು ಆಹಾರದಲ್ಲಿ ಉಪಯೋಗ ಮಾಡುವ ಪದ್ಧತಿ ತುಂಬಾ ವೇಗವಾಗಿ ಪ್ರಚಲಿತವಾಗುತ್ತಿದೆ. ಇದರ ಮುಖ್ಯ ಕಾರಣವೇನೆಂದರೆ ಓಟ್ಸ್ ನಲ್ಲಿ ಬರೀ ಪ್ರೊಟೀನ್ ಅಷ್ಟೇ ಅಲ್ಲ ಜೊತೆಗೆ ಫೈಬರ್, ಮೆಗ್ನೀಷಿಯಂ, ಮ್ಯಾಂಗನೀಸ್, ಥೈಮಿಂಗ್, ವಿಟಮಿನ್ ಬಿ 1, ಈ ರೀತಿಯ ಅನೇಕ ಪ್ರಕಾರದ ಪೋಷಕ ಘಟಕಗಳು ಸಮ್ಮಿಳಿತವಾಗಿವೆ. ಅರ್ಧ ಕಪ್ ಕಚ್ಚಾ ಬಾರ್ಲಿಯಲ್ಲಿ 13 ಗ್ರಾಂ ಪ್ರೋಟೀನ್ಸ್ ಇರುತ್ತದೆ. ಅದರಲ್ಲಿ 303 ಕ್ಯಾಲರಿ ಇರುತ್ತದೆ.
  4. ಕಡಲೆಕಾಯಿ:- ಇದು ಪ್ರೋಟೀನ್ಸ್ ಗಳಿಂದ ಸಮೃದ್ಧವಾಗಿದೆ. 100 ಕಡಲೆಕಾಯಿಗಳಲ್ಲಿ 24 ಗ್ರಾಂ ಪ್ರೊಟೀನ್ ಇರುತ್ತದೆ. ಇದನ್ನೇ ಒಂದು ವೇಳೆ ಚಿಕನ್ ಗೆ ಹೋಲಿಸಿದರೆ 100ಗ್ರಾಂ ಚಿಕನ್ ನಲ್ಲಿ 15 ರಿಂದ 16 ಗ್ರಾಂ ಪ್ರೋಟೀನ್ ಇರುತ್ತದೆ. ಇದರಿಂದ ನೀವೇ ತಿಳಿದುಕೊಳ್ಳಿ ಯಾವುದು ಹೆಚ್ಚಿಗೆ ಶಕ್ತಿಶಾಲಿಯಾಗಿದೆ.
  5. ಪನ್ನೀರ್:- ಪ್ರೋಟೀನ್ ನಿಂದ ಸಮೃದ್ಧವಾದ ಪದಾರ್ಥವೇಂದರೆ ಪನ್ನೀರ್. ಇದರಲ್ಲಿ ಫ್ಯಾಟ್ ಮತ್ತು ಕ್ಯಾಲರಿ ಅಂಶವು ಇರುತ್ತದೆ. ಇದರ ಹೊರತಾಗಿ ಕ್ಯಾಲ್ಸಿಯಂ, ಫೋಸ್ಪರಸ್, ಸೆಲೆನಿಯಂ, ವಿಟಮಿನ್ ಬಿ12, ರೈಬೋಫ್ಲೇವಿನ್ ರೀತಿಯ ಅನೇಕ ಪೌಸ್ಟಿಕ ಪದಾರ್ಥಗಳನ್ನು ಒಳಗೊಂಡಿದೆ. 100 ಗ್ರಾಂ ಪನ್ನೀರ್ ನಲ್ಲಿ ಹತ್ತರಿಂದ ಹನ್ನೆರಡು ಗ್ರಾಮ ಪ್ರೋಟೀನ್ ಇದ್ದು 90 ರ ವರೆಗೆ ಕ್ಯಾಲರಿ ಇರುತ್ತದೆ.
  6. ಬೀನ್ಸ್(ರಾಜ್ಮಾ):– ಪ್ರೋಟೀನ್ ನಿಂದ ಸಮೃದ್ಧವಾದ ಇನ್ನೊಂದು ಆಹಾರ ಪದಾರ್ಥವೆಂದರೆ ರಾಜ್ಮ ಇದಕ್ಕೆ ಅಥವಾ ಬೀನ್ಸ್ ಎಂದೂ ಕರೆಯುತ್ತಾರೆ. ಇದರ ಪಲ್ಲೆ ಮತ್ತು ಸೂಪ್ ಕುಡಿಯುವುದರಿಂದ ದೇಹಕ್ಕೆ ಪ್ರೊಟೀನ್ಸ್ ಚಿಕನ್ ಆಹಾರಕ್ಕಿಂತಲೂ ಹೆಚ್ಚು ದೊರೆಯುತ್ತದೆ. ಆದ್ದರಿಂದ ಈ ಆಹಾರಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೇರ್ಪಡಿಸುವುದರಿಂದ ದೇಹವು ವೃದ್ಧಿಯಾಗುವುದು.
  7. ಬ್ರೊಕೋಲಿ:- ಬ್ರೊಕೋಲಿ ಸಿ ಜೀವನಸತ್ವ, ವಿಟಮಿನ್ ಕೆ, ಫೈಬರ್, ಮತ್ತು ಪ್ರೋಟಿನ್ ವರ್ಧಕವಾಗಿದೆ. ಬ್ರೊಕೋಲಿ ಇದು ವಿವಿಧ ಬಾಯೋಆಕ್ಟಿವ್ ಪೋಷಕ ತತ್ವಗಳ ಸಂಗ್ರಹವಾಗಿದೆ. ಇದರ ಆಹಾರ ಸೇವನೆಯು ಕರ್ಕ ರೋಗದಿಂದ ಬಚಾವ್ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಇನ್ನಿತರ ತರಕಾರಿಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್ ಅಂಶವಿದೆ. 100 ಗ್ರಾಂ ಬ್ರೊಕೋಲಿಯಲ್ಲಿ 4 ಗ್ರಾಂ ಪ್ರೋಟೀನ್ಸ್ ಮತ್ತು ಕೇವಲ 31 ಕ್ಯಾಲರಿ ಇರುತ್ತದೆ.
  8. ನೆನೆಯಿಸಿದ ಕಡಲೆ:- 100 ಗ್ರಾಂ ನೆನೆಯುಸಿದ ಕಡಲೆಯನ್ನು ತಿನ್ನುವುದರಿಂದ ದೇಹಕ್ಕೆ 50 ಗ್ರಾಂ ಪ್ರೋಟೀನ್ಸ್ ದೊರೆಯುವುದು. ಇದು ಚಿಕನ್ ಗಿಂತಲೂ ಎರಡು ಪಟ್ಟಾಗಿದೆ. ಆದ್ದರಿಂದ ನೆನೆಸಿದ ಕಡಲೆಯನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
  9. ಕ್ವಿನೋಆ:- ಕ್ವಿನೋಆದ ಬೀಜಗಳು ಸದ್ಯ ಜಗತ್ತಿನಾದ್ಯಂತ ತುಂಬಾ ಜನಪ್ರಿಯವಾದ ಸೂಪರ್ ಫುಡ್ ಗಳ ಪೈಕಿ ಒಂದಾಗಿದೆ. ಇದು ಅನೇಕ ರೀತಿಯ ಜೀವನ ಸತ್ವಗಳನ್ನು ಖನಿಜ ಮತ್ತು ಫೈಬರ್ ಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಆಕ್ಸಿಡೆಂಟ್ಸ್ ಗಳು ಹೇರಳವಾಗಿರುತ್ತದೆ. 1 ಕಪ್ ಬೇಯಿಸಿದ ಕ್ವಿನೋಆದಲ್ಲಿ 22 ಗ್ರಾಮ್ ಕ್ಯಾಲರಿ ಇದ್ದು 8 ಗ್ರಾಂ ಪ್ರೋಟೀನ್ಸ್ ಇರುತ್ತದೆ.