ಜಿಂಕೆಯ ಬೇ#ಟೆಯಾಡಿ ತಿನ್ನಲು ಮುಂದಾದ ಹೈನಾ; ಆದರೂ ಜೀವ ಉಳಿಸಿಕೊಂಡ ಜಿಂಕೆ, ಅದಕ್ಕೆ ಕಾರಣ ಒಂದು ಸಿಂಹ! ನೋಡಿ ಈ Video

ಜೀವ ಎಂಬುದು ಪ್ರತಿಯೊಂದು ಜೀವಿಗೂ ಕೂಡಾ ಅತ್ಯಮೂಲ್ಯ. ಬಹುಶಃ ಅದಕ್ಕೆ ಸರಿ ಸಮಾನವಾದ ಇನ್ನೊಂದು ವಸ್ತು ಇಲ್ಲ ಹಾಗೂ ಸಿಗುವುದೂ ಇಲ್ಲ ಎಂದು ಹೇಳಬಹುದು. ಏಕೆಂದರೆ ದೇಹದಲ್ಲಿ ಜೀವ ಇದ್ದರೆ ಮಾತ್ರವೇ ಉಳಿದಿದೆಲ್ಲವಕ್ಕೂ ಮಾನ್ಯತೆ. ಜೀವವೇ ಹೋದ ಮೇಲೆ ಉಳಿದಿದ್ದು ಇದ್ದರೆಷ್ಟು, ಬಿಟ್ಟರೆಷ್ಟು. ಅದಕ್ಕಾಗಿಯೇ ಜೀವ ಹೋಗುವ ಸಮಯ ಅಥವಾ ಸನ್ನಿವೇಶವು ಕಾಲಕ್ಕಿಂತ ಮೊದಲೇ ಎದುರಾದರೆ ಪ್ರತಿಯೊಂದು ಜೀವಿಯೂ ಕೂಡಾ ಕೊನೆ ಕ್ಷಣದವರೆಗೂ ತಾನು ಬದುಕಬಹುದೆಂಬ ಒಂದು ಸಣ್ಣ ಆಸೆಯಿಂದ ಪ್ರಾಣ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತದೆ. ಜೀವ ಭಯ ಎಂಬುದು ಆ ಸಮಯದಲ್ಲಿ ಒಂದು ಶಕ್ತಿಯನ್ನು ಕೂಡಾ ತುಂಬಿ ಬಿಡುತ್ತದೆ. ಹಾಗೆ ತಪ್ಪಿಸಿಕೊಂಡರೆ ನಿಜಕ್ಕೂ ಒಂದು ಸಾಹಸವೇ ಸರಿ. ನಮ್ಮಲ್ಲಿ ಅದಕ್ಕೆ ಹೇಳುತ್ತಾರೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವ ಮಾತು.

ಕಾಡಿನ ಪ್ರಾಣಿಗಳಿಗೂ ಕೂಡಾ ಜೀವ ಭಯ ಎಂಬುದು ಸದಾ ಇದ್ದೇ ಇರುತ್ತದೆ. ಅದರಲ್ಲೂ ಸಾಧು ಜೀವಿಗಳಿಗೆ ಎಲ್ಲಿ ತಮ್ಮ ಮೇಲೆ ಬೇರೆ ಪ್ರಾಣಿಗಳು ಆಕ್ರಮಣ ಮಾಡುವವೋ ಎನ್ನುವ ಭಯದಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿ ಅವುಗಳು ತಮ್ಮ ಜೀವನವನ್ನು ನಡೆಸುತ್ತಾ ಇರುತ್ತವೆ. ಆದರೆ ಅದರ ಹೊರತಾಗಿಯೂ ಅವು ಮಾಂಸ ತಿಂದು ಬದುಕುವ ಪ್ರಾಣಿಗಳ ಹಿಡಿತಕ್ಕೆ ಸಿಕ್ಕಿ ಅವುಗಳ ಆಹಾರವಾಗುತ್ತದೆ. ಇದು ಪ್ರಕೃತಿಯ ನಿಯಮ ಕೂಡಾ ಹೌದು. ಆದರೆ ಕ್ರೂ” ರ ಜಂತುವಿನ ಕೈಗೆ ಸಿಕ್ಕ ಸಾಧು ಪ್ರಾಣಿಗಳು ಮಾತ್ರ ಜೀವವನ್ನು ಉಳಿಸಿಕೊಳ್ಳಲು ಪಡುವ ಪಾಡನ್ನು ನೋಡಿದಾಗ ಮನಸ್ಸಿಗೆ ವೇದನೆಯಾದರೂ ಕೂಡಾ ಅದೆಲ್ಲಾ ಪ್ರಕೃತಿಯ ಕ್ರಮ ಎಂದು ಸುಮ್ಮನಾಗಲೇಬೇಕು.

ಆದರೆ ಕೆಲವೊಮ್ಮೆ ಅದೃಷ್ಟ ಎನ್ನುವಂತೆ ಪ್ರಾಣಾಪಾಯಕ್ಕೆ ಸಿಲುಕಿದರೂ ಕೂಡಾ ಜೀವ ಉಳಿಸಿಕೊಂಡ ಪ್ರಾಣಿಗಳ ಉದಾಹರಣೆಗಳು ಕೂಡಾ ನಮಗೆ ಸಿಗುತ್ತವೆ. ಅಂತಹುದೇ ಒಂದು ವೀಡಿಯೋ ಬಗ್ಗೆ ನಾವು ಹೇಳಲಿದ್ದೇವೆ. ವೀಡಿಯೋದಲ್ಲಿ ಒಂದು ಹೈನಾ ( ಕತ್ತೆ ಕಿರುಬ ) ಜಿಂಕೆಯೊಂದನ್ನು ಬೇಟೆಯಾಡಿ ಹಿಡಿದಿದೆ. ಅದನ್ನು ನೆಲದ ಮೇಲೆ ಹೇಳಿಕೊಂಡಿದೆ. ಜಿಂಕೆಗೆ ಕೂಡಾ ಬಹುಶಃ ತಾನು ಉಳಿಯುವುದು ಅಸಾಧ್ಯ ಎಂಬುದನ್ನು ಕಂಡು ಕೊಂಡು, ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡದೇ ಆ ಕತ್ತೆ ಕಿರುಬನಿಗೆ ಶರಣಾಗಿ ಪ್ರಾಣ ಬಿಡಲು ಸಿದ್ಧವಾದಂತೆ ಕಂಡಿದೆ. ಹೈನಾ ಜಿಂಕೆಯ ಹಿಂದಿನ ಕಾಲಿನ ಭಾಗವನ್ನು ಎಳೆದು, ಕಚ್ಚಲು ಮುಂದಾಗುವ ವೇಳೆಗೆ ಅದಕ್ಕೆ ಬೇರೇನೋ ಸೂಚನೆ ಸಿಕ್ಕಿದಂತೆ ತಲೆ ಎತ್ತಿ ನೋಡಿದೆ.

ಹಯನಕ್ಕೆ ಎದುರಲ್ಲಿ ಸಿಂಹವೊಂದು ಬರುವುದು ಕಂಡಿದೆ. ಎಲ್ಲಿ ತನ್ನ ಆಹಾರ ಬೇರೆಯವರ ಪಾಲಾಗುವುದೋ ಎಂದು ಹಯನ ಸಿಂಹವನ್ನು ಓಡಿಸಲು ತನ್ನ ಆಹಾರವನ್ನು ಅಲ್ಲೇ ಬಿಟ್ಟು ಸಿಂಹವನ್ನು ಓಡಿಸಲು ಮುಂದೆ ಓಡಿದೆ. ಹಯನ ಬಂದ ರೀತಿ ನೋಡಿದ ಸಿಂಹ ಅಲ್ಲಿಂದ ಓಟ ಕಿತ್ತಿದೆ. ಹಯನಾ ಸಿಂಹ ಹೋದ ಖುಷಿಯಲ್ಲಿ ತನ್ನ ಬೇಟೆಯನ್ನು ತಿನ್ನಲು ಹಿಂದೆ ನೋಡುವ ವೇಳೆಗೆ ಅದೇ ಸರಿಯಾದ ಅವಕಾಶವೆಂದು ಜಿಂಕೆ ಎದ್ದು ವಾಯುವೇಗದಲ್ಲಿ ಅಲ್ಲಿಂದ ಓಡಿ ಹೋಗಿದೆ. ಪಾಪಾ ಹಯನಕ್ಕೆ ಅದರ ಆಹಾರ ಕಣ್ಮುಂದೆಯೇ ಓಡಿದ್ದನ್ನು ನೋಡಿ ಬೇಸರ ಕೂಡಾ ಆಗಿರಬಹುದು.

ವಿಡಿಯೋ ನೋಡಿ

ಈಗಾಗಲೇ 5.7 ಲಕ್ಷ ದಾಟಿದೆ ಈ ವೀಡಿಯೋದ ವೀಕ್ಷಣೆಯ ಸಂಖ್ಯೆ. ಸಾವಿರಕ್ಕಿಂತ ಅಧಿಕ ಜನರು ಇದನ್ನು ಮೆಚ್ಚಿದ್ದಾರೆ. ವೀಡಿಯೋ ನೋಡಿದವರು ಜಿಂಕೆಯ ಅದೃಷ್ಟ ಚೆನ್ನಾಗಿತ್ತು ಎಂದಿದ್ದಾರೆ. ಸಿಂಹವು ಜಿಂಕೆಯ ಪ್ರಾಣ ಉಳಿಸಿತು ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಗೆ ಹೊಡೆದಾಡಬೇಡಿ, ಅವಕಾಶಗಳು ಕೈ ಜಾರಿ ಹೋಗುತ್ತವೆ ಎಂದು ಒಬ್ಬರು ಹಯನದ ಬಗ್ಗೆ ಸಿಂಪಂತಿಯನ್ನು ತೋರಿಸಿದ್ದಾರೆ. ಹೀಗೆ ನೆಟ್ಟಿಗರು ತಮ್ಮ ತಮ್ಮ ದೃಷ್ಟಿಕೋನದಿಂದ ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.