ಬಡತನದ ಸಲುವಾಗಿ ಶಾಲೆಯಿಂದ ಹೊರಹಾಕಲ್ಪಟ್ಟವ ಇವತ್ತು ಭಾರತದ ಅತಿ ಕಿರಿಯ IAS ಆಫೀಸರ್!
2016 ರಲ್ಲಿ ಬರೀ 21 ನೇ ವಯಸ್ಸಿಗೆ UPSC ಪರೀಕ್ಷೆ ಪಾಸು ಮಾಡಿದ ಹೆಗ್ಗಳಿಕೆಗೆ ಪಾತ್ರರಾದ ಮಾಹಾರಾಷ್ಟ್ರದ ಅನ್ಸಾರಿ ಶೇಖ್ ಇಡೀ ಭಾರತದಲ್ಲೇ ಅತೀ ಚಿಕ್ಕ ವಯಸ್ಸಿನ ಅಧಿಕಾರಿಯಾದ ದಾಖಲೆಯನ್ನು ಮಾಡಿದವರು. ಅವರ ಆಲ್ ಇಂಡಿಯಾ ರ್ಯಾಂಕಿಂಗ್ 361 ಇತ್ತು.
ಇವರು ತಮ್ಮ ಕುಟುಂಬದಲ್ಲಿಯೇ ಗ್ರಾಜುಯೇಷನ್ ಮಾಡಿದ ಮೊದಲ ವ್ಯಕ್ತಿ ಹಾಗೂ ಸರಕಾರಿ ನೌಕರಿಯನ್ನು ಪಡೆದ ವ್ಯಕ್ತಿಯು ಮೊದಲಿಗ.
ಇವರ ತಂದೆ ಮಹಾರಾಷ್ಟ್ರದ ಜಾಲನಾ ಜಿಲ್ಲೆಯಲ್ಲಿ ರಿಕ್ಷಾ ಚಾಲಕರಾಗಿದ್ದರು. ಜೊತೆಗೆ ಕುಡಿತದ ಚಟವೂ ಇತ್ತು. ಅನ್ಸಾರಿ ತಂದೆ ಮೂರು ಬಾರಿ ಮದುವೆಯಾಗಿದ್ದರು. ತಂದೆಯ ಎರಡನೇ ಹೆಂಡತಿಯಾದ ಅನ್ಸಾರಿಯ ತಾಯಿ ಬೇರೊಬ್ಬರ ಹೊಲಗಳಿಗೆ ಹೋಗಿ ಕೆಲಸವನ್ನು ಮಾಡುತ್ತಿದ್ದರು. ಶಿಕ್ಷಣವನ್ನು ಮುಗಿಸಿ ಈ ಒಳ್ಳೆಯ ಸ್ಥಿತಿಗೆ ಬರಲು ಅನ್ಸಾರಿಯವರು ಅನೇಕ ಕಷ್ಟಗಳನ್ನು ಮೆಟ್ಟಿ ನಿಂತು ಮೇಲೆ ಬಂದವರು.
ಇವರ ಬಾಲ್ಯವು, ತಂದೆಯು ಮನೆಯಲ್ಲಿ ತಾಯಿಗೆ ಕೊಡುತ್ತಿರುವ ಹಿಂಸೆ, ಬಾಲ್ಯವಿವಾಹ ಇಂತಹ ಎಲ್ಲಾ ಸಮಸ್ಯೆಗಳನ್ನು ನೋಡಿತು. ಸಹೋದರಿಯರ ಮದುವೆ 15 ವರ್ಷಕ್ಕೆ ಆಯಿತು. ಸಹೋದರ 6 ನೇ ವರ್ಷಕ್ಕೆ ಮಾವನ ಗ್ಯಾರೇಜಿನಲ್ಲಿ ಕೆಲಸ ಮಾಡುವುದಕ್ಕಾಗಿ ಶಾಲೆ ಬಿಡುವ ಪ್ರಸಂಗ ಬಂದಿತು.

ಅನ್ಸಾರಿಯ ಸಹೋದರ ಅನ್ಸಾರಿ ಗಿಂತಲೂ ಎರಡು ವರ್ಷ ಚಿಕ್ಕವನಿದ್ದರೂ ಅನ್ಸಾರಿಯವರು ತಮ್ಮನಿಗೆ ಯಾವತ್ತೂ ದೊಡ್ಡವರಂತೆ ಕಾಣುತ್ತಿದ್ದರು ಅದಕ್ಕೆ ಕಾರಣವು ಹಾಗೆಯೇ ಇದೆ. ಹೀಗೇಕೆ ಎಂಬುದು ಮುಂದೆ ಗೊತ್ತಾಗುತ್ತದೆ.
ಎಲ್ಲರಿಗೂ ಮನೆಯ ಪರಿಸ್ಥಿತಿ ನೋಡಿ ಅಭ್ಯಾಸದಲ್ಲಿ ಜಾಣನಾದ ಅನ್ಸಾರಿ ಮಧ್ಯದಲ್ಲಿಯೇ ತನ್ನ ಅಭ್ಯಾಸವನ್ನು ಬಿಟ್ಟುಬಿಡುತ್ತಾನೆ ಎಂದೆನಿಸಿತ್ತು, ಆದರೆ ಹಾಗಾಗಲಿಲ್ಲ.
ನನ್ನ ಎಲ್ಲಾ ಸಂಬಂಧಿಕರು ನನ್ನ ಅಭ್ಯಾಸದ ಬಗ್ಗೆ ಬಹಳ ಚಿಂತೆ ವ್ಯಕ್ತ ಮಾಡುತ್ತಿದ್ದರು. ಮನೆಯಲ್ಲಿ ಹಣ ಹಣವಿಲ್ಲದ ಕಾರಣ ಅನ್ಸಾರಿಗೆ ಶಾಲೆ ಕಲಿಸುವುದು ಏನು ಅವಶ್ಯಕತೆ ಇದೆ ಎಂದು ನನ್ನ ತಂದೆ ತಾಯಿಗೆ ಬುದ್ಧಿ ಹೇಳುತ್ತಿದ್ದರು. ಆದರೆ ಶಾಲೆಯಲ್ಲಿ ಆ ಗುರುಗಳು ನನ್ನ ತಂದೆ ತಾಯಿಗೆ ಈ ವಿಚಾರದಿಂದ ಪರಾವೃತ್ತ ಮಾಡಿದರು. ಅವರು ನನ್ನ ತಂದೆ ತಾಯಿಗೆ ಹೀಗೆ ಹೇಳಿದರು. ನಿಮ್ಮ ಮಗ ಅಭ್ಯಾಸದಲ್ಲಿ ತುಂಬ ಜಾಣನಾಗಿದ್ದಾನೆ, ಆತನಿಗೆ ನೀವು ಶಾಲೆ ಕಲಿಸುವುದು ಮತ್ತು ಶಾಲೆಗಾಗಿ ಹಣ ಖರ್ಚು ಮಾಡುವುದು ಎಂದಿಗೂ ವ್ಯರ್ಥವಾಗುವುದಿಲ್ಲ ನಿಮ್ಮ ಮಗ ನಿಮ್ಮ ಭವಿಷ್ಯವನ್ನು ಸತ್ಯವಾಗಿಯೂ ಬದಲಿಸುತ್ತಾನೆ ಎಂದು ಹೇಳಿದ ಮಾತುಗಳು ನನ್ನ ತಂದೆ ತಾಯಿಗೆ ತುಂಬಾ ಸ್ಪೂರ್ತಿಯನ್ನು ಕೊಟ್ಟವು. ಎಂದು ಅನ್ಸಾರಿ ತಮ್ಮ ಒಂದು ಭಾಷಣದಲ್ಲಿ ಹೀಗೆ ಹೇಳಿದ್ದಾರೆ.
ಗುರುಗಳು ಹೇಳಿದ ಮಾತಿನಿಂದ ಪ್ರಭಾವಿತರಾಗಿ ಅನ್ಸಾರಿಯ ತಾಯಿ-ತಂದೆ ಅನ್ಸಾರಿಯನ್ನು ಶಾಲೆ ಬಿಡಿಸಲು ಪ್ರಯತ್ನವೇ ಮಾಡಲಿಲ್ಲ. ಮಗನು ಸಹ ಗುರುಗಳು ಹೇಳಿದ ಮಾತನ್ನು ನಿಜವಾಗಿಸುವ ನಿಟ್ಟಿನಲ್ಲಿ ಪಿಯುಸಿ ಯಲ್ಲಿ 91% ಅಂಕಗಳನ್ನು ಪಡೆದನು.
12ನೇ ಇಯತ್ತೆಯವರೆಗೆ ಮರಾಠಿಯಲ್ಲಿ ಕಲಿತನಂತರ ಮುಂದೆ ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ಸಾಯನ್ಸ್ ನಲ್ಲಿ ಗ್ರಾಜುಯೇಷನ್ ಪೂರ್ಣ ಮಾಡಿದರು. ಆದರೆ ಇಲ್ಲಿ ಹಣದ ಸಮಸ್ಯೆ ತಲೆದೊರತೊಡಗಿತು. ತಂದೆ ಹೇಗಾದರೂ ಮಾಡಿ ಅನ್ಸಾರಿಗೆ ಸ್ವಲ್ಪ ಹಣವನ್ನು ಕಳುಹಿಸುತ್ತಿದ್ದರು. ಆದರೆ ತಮ್ಮನು ಮಾತ್ರ ಏನೇ ಪ್ರಯತ್ನ ಮಾಡಿ ಪ್ರತಿ ತಿಂಗಳು ತನಗೆ ಬಂದ ಸಂಬಳದಲ್ಲಿ 6 ಸಾವಿರ ರೂಪಾಯಿಗಳನ್ನು ತಮ್ಮನಿಗಾಗಿ ಕಳಿಸಿಕೊಡುತ್ತಿದ್ದ. ಹೀಗೆಲ್ಲಾ ಇಂಥ ಪರಿಸ್ಥಿತಿ ಇದ್ದರೂ ಸಹಿತ ಅನ್ಸಾರಿಯು ಬಡತನವು ಅಭ್ಯಾಸದಲ್ಲಿ ಎಂದಿಗೂ ತನ್ನ ದಾರಿಯಲ್ಲಿ ಅಡ್ಡಲಾಗಿದೆ ಎಂದು ತಿಳಿಯಲಿಲ್ಲ. ಅಭ್ಯಾಸದ ಜೊತೆಗೆ UPSC ಪರೀಕ್ಷೆಯನ್ನು ಕಟ್ಟಿ ಅದರ ಅಭ್ಯಾಸವನ್ನು ಸಹಿತ ಅನ್ಸಾರಿ ಶುರುಮಾಡಿದರು. ಆದರೆ ಯುಪಿಎಸ್ಸಿ ಕೋಚಿಂಗ್ ಸಲುವಾಗಿ ತುಂಬಬೇಕಾದ 70,000 ಹಣವನ್ನು ಎಲ್ಲಿಂದ ತರುವುದು ಎಂಬ ಪ್ರಶ್ನೆ ಅನ್ಸಾರಿಯ ಮುಂದೆ ಇತ್ತು.
ಅನ್ಸಾರಿ ಹೇಳುವ ಹಾಗೆ ಕೋಚಿಂಗ್ ಕ್ಲಾಸಿನಲ್ಲಿ ಜಾದವ್ ಸರ್ ಹೆಸರಿನ ಸರ್ ಒಬ್ಬರಿಗೆ ತನ್ನ ಮನೆಯ ಪರಿಸ್ಥಿತಿ ಹೇಳಿದಾಗ ಅವರು 70,000 ರೂಪಾಯಿಗಳ ಬದಲಾಗಿ 50 % ಡಿಸ್ಕೌಂಟ್ ನೀಡಿ 35 ಸಾವಿರ ರೂಪಾಯಿಗಳನ್ನು ತುಂಬಲು ಹೇಳಿದರು. ಕೋಚಿಂಗ್ ಕ್ಲಾಸಿನಲ್ಲಿ ಅನ್ಸಾರಿಯವರು ಮೊದಲ ದಿನ ಕಾಲಿಟ್ಟಾಗ ಅಲ್ಲಿದ್ದವರೆಲ್ಲ 20 ರಿಂದ 30 ವರ್ಷದೊಳಗಿನವರಾಗಿದ್ದರು. ಮತ್ತು ಅವರೆಲ್ಲರೂ ಎರಡು-ಮೂರು ಬಾರಿ ಪರೀಕ್ಷೆಯನ್ನು ಕಟ್ಟಿ ಪ್ರಯತ್ನ ಫಲಿಸಿದೆ ಮತ್ತೆ ಬಂದಿದ್ದರು. ಇವರು ಆಗ ಬರಿ 19 ವರ್ಷದವರಾಗಿದ್ದರು. ಹೀಗಾಗಿ ಅವರ ಜೊತೆಗೆ ಹೇಗೆ ಮಾತನಾಡಬೇಕು ಎಂಬ ಸಮಸ್ಯೆಯೂ ಸಹಿತ ಅನ್ಸಾರಿಯವರಿಗೆ ಕಾಡುತ್ತಿತ್ತು. ಹೇಗೆ ಕ್ಲಾಸ್ಗಳು ಪ್ರಾರಂಭವಾದವು ಹಾಗೆ ಅನ್ಸಾರಿ ಅವರು ತಮ್ಮ ಅಭ್ಯಾಸದ ಕಡೆಗೆ ಗಮನಹರಿಸುತ್ತ ತಮಗೆ ಎದುರಾದ ಸಮಸ್ಯೆಗಳನ್ನು ಯಾವುದೇ ಹಿಂಜರಿಕೆ ಇಲ್ಲದೆ ಶಿಕ್ಷಕರನ್ನು ಕೇಳಿಕೊಳ್ಳುತ್ತಿದ್ದರು. ಹತ್ತಿರ ಹಣವಿಲ್ಲದ ಕಾರಣದಿಂದ ಎಷ್ಟೋ ದಿವಸಗಳವರೆಗೆ ಬರೀ ವಡಾಪಾವ್ ತಿಂದು ದಿನಗಳನ್ನು ದೂಡಿದರು. ನೋಟ್ಸ್ ಗಳಿಗೆ ಹಣ ಇರುತ್ತಿರಲಿಲ್ಲ ಮಿತ್ರರ ಪುಸ್ತಕಗಳನ್ನು ತೆಗೆದುಕೊಂಡು ಫೋಟೋ ಕಾಪಿ ಮಾಡಿಕೊಳ್ಳುತ್ತಿದ್ದರು. ದಿನಕ್ಕೆ 13 ರಿಂದ 14 ಗಂಟೆಗಳ ವರೆಗೆ ಅಭ್ಯಾಸ ಮಾಡುತ್ತಿದ್ದರು. ಇವರು ಹೇಳುವ ಪ್ರಕಾರ ಈ ರೀತಿ ಬೆಂಬಿಡದೆ ಪ್ರಯತ್ನ ಮಾಡುವ ಹಿಂದಿನ ಉದ್ದೇಶವೇನೆಂದರೆ ಎರಡನೇ ಬಾರಿ ಪರೀಕ್ಷೆಗೆ ಕುಳಿತುಕೊಳ್ಳುವ ಆರ್ಥಿಕ ಬಲ ಇವರಲ್ಲಿ ಇರಲಿಲ್ಲ. ಹೀಗಾಗಿ ಇವರ ಹತ್ತಿರ ಫೇಲ್ ಆಗುವ ಪರ್ಯಾಯವೇ ಇರಲಿಲ್ಲ.
ಇಂತಹ ಬಿಕ್ಕಟ್ಟಾದ ಪರಿಸ್ಥಿತಿಯಲ್ಲಿಯೇ ತಂಗಿಯ ಗಂಡ ಅತಿಯಾದ ಕುಡಿತದಿಂದ ತೀರಿಕೊಂಡು ಹೋದ. ಹೀಗಾಗಿ ಕೋಚಿಂಗ್ ಅರ್ಧದಲ್ಲಿಯೇ ನಿಲ್ಲಿಸಿ ಮತ್ತೆ ವಾಪಸ್ ಅನ್ಸಾರಿ ಅವರು ಊರಿಗೆ ಹೋದರು. ಆದರೆ ತಂಗಿಯು ಅನ್ಸಾರಿ ಅವರಿಗೆ ನಿನ್ನ ಅಭ್ಯಾಸವನ್ನು ನೀನು ಯಾವತ್ತೂ ನಿಲ್ಲಿಸಬೇಡ ಆದಷ್ಟು ಬೇಗ ಪುಣೆಗೆ ವಾಪಸ್ ಹೋಗು ಎಂದು ಕಳಿಸಿದಳು. ಕೊನೆಗೊಂದು ದಿನ ಅನ್ಸಾರಿ ಅವರು ಮಾಡಿದ ಪ್ರಯತ್ನಕ್ಕೆ ಫಲಿತಾಂಶ ಸಹಿತ ಅನುಕೂಲಕರವಾಗಿಯೆ ಬಂದಿತ್ತು.
ಅನ್ಸಾರಿ ಅವರು ತಮಗೆ ಮೌಖಿಕ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯನ್ನು ನೆನಪಿಸಿಕೊಳ್ಳುತ್ತಾರೆ. ಅವರಿಗೆ ಸಂದರ್ಶನದಲ್ಲಿ ಈ ರೀತಿಯ ಪ್ರಶ್ನೆಯನ್ನು ಕೇಳಲಾಗಿತ್ತು. ನೀವು ಶಿಯಾ ಸಂಪ್ರದಾಯದವರೋ ಅಥವಾ ಸುನ್ನಿ ಸಂಪ್ರದಾಯದವರೋ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಅನ್ಸಾರಿ ಅವರು ನಾನೊಬ್ಬ ಭಾರತೀಯ ಮುಸ್ಲಿಂ ಎಂದು ಉತ್ತರಿಸಿದ್ದರು.