Funny Jokes: ಹೆಂಡತಿ: ನಮ್ಮ ನೆರೆಮನೆಯ ಶರ್ಮಾ ದಿನಾ ಅವರ ಹೆಂಡತಿಗೆ ಕಿ#ಸ್ ಮಾಡಿನೇ ಆಫೀಸಿಗೆ ಹೋಗೋದು.. ನೀವು ಯಾಕೆ ಹಾಗೆ ಮಾಡಲ್ಲ..?

ನಗು ನಮ್ಮ ಜೀವನದ ಒಂದು ಭಾಗವಾದರೆ ಮಾಡುವ ಕೆಲಸದಲ್ಲಿ ಒಂದು ನವಚೈತನ್ಯ ಹೊಮ್ಮುತ್ತದೆ. ನಗುವು ನೀರಸ ಬದುಕಿನಲ್ಲಿ ಒಂದು ಹೊಸ ಉತ್ಸಾಹವನ್ನು ಮೂಡಿಸುತ್ತದೆ. ನಗು ನಮ್ಮ ಸುತ್ತಲ ವಾತಾವರಣವನ್ನು ಚೇತೋಹಾರಿಯನ್ನಾಗಿ ಮಾಡುತ್ತದೆ. ನಗು ಆರೋಗ್ಯಕ್ಕೆ ಒಂದು ಮದ್ದು ಇದ್ದಂತೆ. ಆಧುನಿಕತೆಯ ಸೋಗಿನಲ್ಲಿ, ಕೆಲಸದ ಒತ್ತಡದಲ್ಲಿ ದೂರಾಗುತ್ತಿರುವ ನಗೆಯ ಹೊನಲನ್ನು ಮತ್ತೊಮ್ಮೆ ನಿಮ್ಮ ಮೊಗದಲ್ಲಿ ಮೂಡಿಸುವ ಶಕ್ತಿ ಇರುವುದು ನಗೆ ಹನಿಗಳಲ್ಲಿ ಮಾತ್ರ. ಆ ನಗುವನ್ನು ನಿಮ್ಮಲ್ಲಿ ಮೂಡಿಸಲು ಇಲ್ಲಿದೆ ಒಂದು ಸಣ್ಣ ಪ್ರಯತ್ನ.

ಜೋಕ್ ೧

ಹುಡುಗ: ಸರ್ ಲಾಸ್ಟ್ ಲೈನ್ ಬಿಟ್ಟು ಉಳಿದ ಉತ್ತರ ನನಗೆ ನೆನಪಿಲ್ಲ.

ಟೀಚರ್ : ಪರವಾಗಿಲ್ಲ ಆ ಲಾಸ್ಟ್ ಲೈನ್ ಏನು ಅಂತ ಹೇಳು ಮಾರಾಯಾ? ಅದನ್ನಾದ್ರೂ ಕೇಳಿ ತೃಪ್ತಿ ಪಡೋಣ.

ಹುಡುಗ: ಇದನ್ನೇ ನ್ಯೂಟನ್ ಸಿದ್ಧಾಂತ ಎನ್ನುತ್ತಾರೆ..

ಉತ್ತರ ಕೇಳಿ ಟೀಚರ್ ಶಾಕ್…

ಜೋಕ್ ೨

ಗುಂಡ : ಮನುಷ್ಯರ ಮಕ್ಕಳಿಗೂ, ಪ್ರಾಣಿಗಳ ಮಕ್ಕಳಿಗೂ ವ್ಯತ್ಯಾಸವೇನು?

ಪಿಂಕಿ : ಕತ್ತೆಯ ಮರಿ ಕತ್ತೆಯಾಗುತ್ತದೆ, ಗೂಬೆಯ ಮರಿ ಗೂಬೆಯಾಗುತ್ತದೆ. ಆದರೆ ಮನುಷ್ಯನ ಮಕ್ಕಳು ಕತ್ತೆ ಬೇಕಾದ್ರೂ ಆಗಬಹುದು, ಗೂಬೆ ಬೇಕಾದ್ರೂ ಆಗಬಹುದು….

ಜೋಕ್ ೩.

ಟೀಚರ್: ಬಸ್ ಡ್ರೈವರ್ ಮತ್ತು ಕಂಡಕ್ಟರ್ ನಡುವೆ ವ್ಯತ್ಯಾಸ ಏನು?

ಗುಂಡ: ಕಂಡಕ್ಟರ್ ನಿದ್ರೆ ಮಾಡಿದರೆ ಯಾರಿಗೂ ಟಿಕೆಟ್ ಕೊಡೊಲ್ಲಾ, ಡ್ರೈವರ್ ನಿದ್ದೆ ಮಾಡಿದರೆ ಎಲ್ಲರಿಗೂ ಡೈರಕ್ಟ್ ಟಿಕೆಟ್ ಸಿಗುತ್ತೆ.

ಜೋಕ್ ೪

ಅಧ್ಯಾಪಕ : ಇವತ್ತು ಏನನ್ನು ಓದಿಸ್ಲಿ?

ವಿದ್ಯಾರ್ಥಿ: ಸರ್ ಇವತ್ತು ನಿಖಾ ಓದಿಸಿ ಬಿಡಿ. ರೋಲ್ ನಂಬರ್ ಏಳನೇ ಹುಡುಗಿ ಜೊತೆ.

ಜೋಕ್ ೫

ಪತ್ನಿ ( ರೋಮ್ಯಾಂಟಿಕ್ ಮೂಡಲ್ಲಿ): ಏನ್ರಿ ಮೊದಲ ರಾತ್ರಿ ನನ್ನ ಮುಖದ ಮೇಲೆ ಮುಚ್ಚಿದ ಸೆರಗನ್ನು ಸರಿಸಿ ನನ್ನ ನೋಡಿದಾಗ ನಿಮ್ಮ ಅನುಭವ ಹೇಗಿತ್ತು?

ಪತಿ: ನಿಜ ಹೇಳ್ಲಾ, ನನಗೆ ಹನುಮಾನ್ ಚಾಲೀಸಾ ಬರದೇ ಇದ್ದಿದ್ದರೆ ಆವತ್ತೆ ಸತ್ತು ಹೋಗಿರ್ತಾ ಇದ್ದೆ.

ಜೋಕ್ ೬

ಹೆಂಡತಿ ತರಕಾರಿಯವರ ಬಳಿ ಚೌಕಾಸಿ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಳು. ಅದನ್ನು ನೋಡಿ ಬೇಸತ್ತ ಪತಿ,

ಪತಿ: ಬೇಗ ಬೇಗ ತರಕಾರಿ ತಗೋ, ನನಗೆ ಆಫೀಸಿಗೆ ಲೇಟ್ ಆಗ್ತಾ ಇದೆ.

ಹೆಂಡತಿ: ನೀವು ಮಧ್ಯೆ ಬಾಯಿ ಹಾಕಬೇಡಿ.. ಹೀಗೆ ಬೇಗ ಬೇಗ ಅಂದಿದ್ದಕ್ಕೆ ನನಗೆ ನಿಮ್ಮಂತ ಗಂಡ ಸಿಕ್ಕಿದ್ದು, ಕೊನೆ ಪಕ್ಷ ತರಕಾರಿ ವಿಷಯದಲ್ಲಾದರೂ ನಾನು ತಪ್ಪು ಮಾಡಲ್ಲ ತಿಳ್ಕೊಳ್ಳಿ..

ಜೋಕ್ ೭

ಪತ್ನಿ: ನಮ್ಮ ನೆರಮನೆಯ ಶರ್ಮಾ ದಿನಾ ಅವರ ಹೆಂಡತಿಗೆ ಕಿಸ್ ಮಾಡೀನೇ ಆಫೀಸ್ ಗೆ ಹೋಗೋದು.. ನೀವು ಯಾಕೆ ಒಂದು ದಿನ ಕೂಡಾ‌ ಹಾಗೆ ಮಾಡಲ್ಲ..

ಪತಿ: ನಿನಗೆ ಬುದ್ಧಿ ಇದ್ಯಾ? ಶರ್ಮಾ ಅವರ ಹೆಂಡತಿ ನನಗೆ ಪರಿಚಯ ಕೂಡಾ ಇಲ್ಲ, ಅಂದ್ಮೇಲೆ ಅವರನ್ನು ಕಿಸ್ ಮಾಡೋದಾದ್ರೂ ಹೇಗೆ ಸಾಧ್ಯ..

ಜೋಕ್ ೮

ಒಂದು ಅಂಗಡಿಯ ಫಲಕದ ಮೇಲೆ ಬಹಳ ಸುಂದರವಾಗಿ ಬರೆಸಲಾಗಿತ್ತು , “ನಮ್ಮ ಗ್ರಾಹಕರು ನಮ್ಮ ದೇವರುಗಳು, ದೇವರಿಗೆ ಸಾಲ ಕೊಡುವ ಯೋಗ್ಯತೆ ನಮಗಿಲ್ಲ” ಎಂದು….

ಜೋಕ್ ೯

ಪಪ್ಪು: ಮಮ್ಮೀ ಪೋಲಿಸರು ಲಾಠಿ ಚಾರ್ಚ್ ಮಾಡೋವಾಗ ಚಾರ್ಜಿಂಗ್ ಮಾಡೋಕೆ ಯಾವ ಕಂಪನಿ ಬ್ಯಾಟರಿ ಬಳಕೆ ಮಾಡ್ತಾರೆ…

ಪಪ್ಪು ಮಮ್ಮೀ ಈಗ ಕೋಮಾದಲ್ಲಿ ಇದ್ದಾರೆ.

ಜೋಕ್ ೧೦

ಆಲಿಯಾ: ನಾನು ಚಿಕ್ಕವಳಾಗಿದ್ದಾಗ ಛಾವಣಿ ಮೇಲಿಂದ ಕೆಳಗೆ ಬಿದ್ದಿದ್ದೆ.

ರಾಹುಲ್: ಹಾಗಾದ್ರೆ ನೀನು ಬದುಕಿದ್ದಾ ಅಥವಾ ಸತ್ತಿದ್ದಾ?

ಆಲಿಯಾ: ಏ ಹುಚ್ಚ, ನಾನು ಆಗ ಚಿಕ್ಕವಳು ಅದೆಲ್ಲಾ ಹೇಗೆ ಗೊತ್ತಾಗುತ್ತೆ.

ರಾಹುಲ್: ಹೌದಲ್ವಾ, ನಾನೆಂತ ದಡ್ಡ ನೋಡು…

ಜೋಕ್ ೧೧

ಕೆಲಸದವಳು: ಅಮ್ಮಾವ್ರೇ ನಾನು ಗರ್ಭಿಣಿ ಸ್ವಲ್ಪ ಜಾಸ್ತಿ ದಿನ ರಜೆ ಬೇಕು.

ಮಾಲೀಕಳು: ಓ ಕಂಗ್ರಾಟ್ಸ್ ಕಣೇ, ಸರಿ ಹೋಗು ಹುಷಾರಾಗಿ ಆರೋಗ್ಯ ಕಾಪಾಡಿಕೋ…

ಕೆಲಸದವಳು: ನೀವು ಹುಷಾರಾಗಿರಿ ಅಮ್ಮಾವ್ರೇ ನಿಮ್ಮ ಎಜಮಾನ್ರಿಗೆ ಮಕ್ಕಳಾಗದೇ ಇರಲಿ ಅಂತ ಮಾಡ್ಸಿರೋ ಆಪರೇಷನ್ ಫೇಲ್ ಆಗಿದೆ..