ಮಾನವ ಮೆದುಳು ತಿನ್ನುವ ಸೂಕ್ಷ್ಮ ಜೀವಿ ನೀರಿನಲ್ಲಿ ಪತ್ತೆ; ಎಚ್ಚರಿಕೆಯ ಸೂಚನೆ ಜಾರಿ!

2020 ಈ ವರ್ಷದಲ್ಲಿ ವಿವಿಧ ಜೀವಾಣುಗಳ ಭಯದಿಂದಲೇ ಮನುಷ್ಯನ ಜೀವನ ಸಾಗಿದೆ. ವರ್ಷದ ಪ್ರಾರಂಭದಿಂದಲೇ ಕೋರೋನಾ ತನ್ನ ಅಟ್ಟಹಾಸವನ್ನು ಮೆರೆಯುತ್ತಿದ್ದು ಇನ್ನೂವರೆಗೆ ಅದರ ರುದ್ರನರ್ತನ ನಿಂತಿಲ್ಲ. ಅದರ ನಂತರವಂತೂ ನ್ಯೂಜ್ ಚಾನೆಲ್ ನವರು ದಿನಕ್ಕೊಂದು ವೈರಸ್ ಗಳ ಬಗ್ಗೆ ಹೇಳಿ ಜನಸಾಮಾನ್ಯರಿಗೆ ಪದೇ ಪದೇ ಹೆದರಿಸಿಬಿಟ್ಟರು. ಇದರಲ್ಲಿ ನಿಜವೇಷ್ಟು, ಸುಳ್ಳೆಷ್ಟು ಅವರಿಗೆ ಗೊತ್ತು.

ಟೆಕ್ಸಾಸ್:- ಈಗ ಅಮೆರಿಕೆಯ ಟೆಕ್ಸಾಸ್ ಪ್ರಾಂತದ ಆಗ್ನೇಯ ಭಾಗದಲ್ಲಿ ನೀರು ಸರಬರಾಜು ಕೇಂದ್ರದಲ್ಲಿ ಮಾನವನ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಜೀವಾಣು ಒಂದು ಸಿಕ್ಕಿದೆ. ಸಂಶೋಧನೆಯಲ್ಲಿ ಇದು ಮನುಷ್ಯನ ಮೆದುಳನ್ನು ತಿನ್ನುತ್ತದೆ ಎಂಬುದರ ಬಗ್ಗೆ ದೃಢಪಟ್ಟಿದೆ. ಇಲ್ಲಿಂದ ನೀರು ಸರಬರಾಜು ಆಗುವ 8 ಪಟ್ಟಣಗಳ ನಾಗರಿಕರಿಗೆ ಎಚ್ಚರಿಕೆಯ ಅಂಗವಾಗಿ ಟೆಕ್ಸಾಸ್ ಪ್ರಶಾಸನವು ಕೆಲವು ಸೂಚನೆಗಳನ್ನು ಕೊಟ್ಟಿದೆ. ಯಾವುದೇ ಕಾರಣಕ್ಕೂ ಎಲ್ಲರೂ ಜಾಗೃತರಾಗಿರಬೇಕು, ಇಲ್ಲವಾದರೆ ಈ ಜೀವಿಯು ಸಂಪೂರ್ಣ ಸರ್ವನಾಶ ಮಾಡುವದು ಎಂದು ತಿಳಿಸಿದೆ.

ಸದ್ಯಕ್ಕೆ ಈ ನೀರಿನ ಉಪಯೋಗವನ್ನು ತತ್ಕಾಲ್ ನಿಲ್ಲಿಸಿಬಿಡಿ. ಕಾರಣ ಈ ನೀರಿನಲ್ಲಿ ‘ನಾಯಿಗೆಲೇರಿಯಾ ಫಾವುಲೇರಿ’ ಹೆಸರಿನ ಮೆದುಳನ್ನು ತಿನ್ನುವ ಅಮೀಬಾ ದೊರಕಿದೆ, ಎಂದು ಸಂದೇಶವನ್ನು ಜನರಿಗೆ ರವಾನಿಸಿದೆ. ಇದರ ಜೊತೆಗೆ ಟೆಕ್ಸಾಸ್ ಕಮಿಷನ್ ವು ಪರಿಸರ ಗುಣಮಟ್ಟದ ಆಧಾರದ ಮೇಲೆ ಈ ವಾಟರ್ ಅಡ್ವಾಯಜರಿ ಜಾರಿ ಮಾಡಿದೆ.

ಈ ಪ್ರಕಾರದ ವಿಚಿತ್ರವಾದ ಜೀವಾಣುವಿನ ಶೋಧವಾದ ನಂತರ ಸದ್ಯ ಲೇಕ ಜಾಕ್ಸನ್, ಫ್ರೀಫೋರ್ಟ್, ಎಂಗಲಟನ್, ಬ್ರಾಜೋರಿಯಾ, ರಿಚ್ ವುಡ್, ಐಸ್ಟರ್ ಕ್ರೀಕ್, ಕ್ಲೂಟ್ ಮತ್ತು ರೋಜನ್ ಬರ್ಗ್ ಪಟ್ಟಣಗಳಿಗೆ ಸೂಚನೆ ಕೊಡಲಾಗಿದೆ. ಈ ಅಮೀಬಾಯುಕ್ತ ನೀರಿನಿಂದಾಗಿ ಲೇಕ್ ಜಾಕ್ಸನ್ ಪರಿಸರಕ್ಕೆ ತುಂಬಾ ಕಾಳಜಿ ತೆಗೆದುಕೊಳ್ಳುವ ಬಗ್ಗೆ ಹೇಳಿದ್ದಾರೆ.

ಮನುಷ್ಯನ ಮೆದುಳನ್ನೇ ತನ್ನ ಆಹಾರವನ್ನಾಗಿಸುವ ಈ ಪ್ರಕಾರದ ಜೀವಾಣುಗಳು ಸರ್ವಾಸಾಧಾರಣವಾಗಿ ಮಣ್ಣಿನಲ್ಲಿ, ಬಿಸಿನೀರಿನ ಕುಂಡಗಳಲ್ಲಿ, ನದಿಗಳಲ್ಲಿ ಹಾಗೂ ಬಿಸಿನೀರಿನ ಪ್ರವಾಹಗಳಲ್ಲಿ ಕಂಡು ಬರುತ್ತದೆ. ಇನ್ನು ಸ್ವಚ್ಛತೆಯ ಅಭಾವವಿದ್ದ ಸ್ವೀಮಿಂಗ್ ಪೂಲ್ ಗಳಲ್ಲೂ ಇದು ಕಂಡುಬರುತ್ತದೆಯಂತೆ. ಇನ್ನೊಂದು ಮಹತ್ವದ ವಿಷಯವೇನೆಂದರೆ, ಈ ಅಮೀಬಾ ಔದ್ಯೋಗಿಕ ಪ್ಲಾಂಟ್ ಗಳಿಂದ ಹೊರಹೊಮ್ಮುವ ದೂಷಿತ ಮತ್ತು ಬೆಚ್ಛಗಿನ ನೀರಿನಲ್ಲಿಯೂ ಕಂಡು ಬರುತ್ತವೆ, ಎಂದು ಹೇಳಲಾಗಿದೆ.

ಟೆಕ್ಸಾಸ್ ಕಮಿಷನ್ ವು ಪರಿಸರದ ಗುಣಮಟ್ಟದ ವಿಚಾರಮಾಡಿ ಬ್ರಾಜೋಸ್ಫೋರ್ಟ್ ವಾಟರ್ ಅಥಾರಿಟಿ ಜೊತೆಗೆ ಕೂಡಿಕೊಂಡು ಆದಷ್ಟು ಬೇಗ ಈ ಸಮಸ್ಯೆಯ ಮೇಲೆ ಉಪಾಯವನ್ನು ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದೆ.

ನೀರಿನಲ್ಲಿ ಈ ರೀತಿಯ ಅಮಿಬಾವು ಸೆಪ್ಟೆಂಬರ್ 8 ರಂದು ಕಂಡು ಬಂದಿದೆ. ಹೇಗೆಂದರೆ, ನೀರಿನಲ್ಲಿ ಅಮೀಬಾ ಇರುವದು ಒಂದು 6 ವರ್ಷದ ಮಗುವಿಗೆ ಆಸ್ಪತ್ರೆಯಲ್ಲಿ ದಾಖಲಿಸಿದ ನಂತರ ತಿಳಿದು ಬಂದಿದೆ.