ಸೀರೆ ಮೇಲಿನ ಇಂಥ ಡ್ಯಾನ್ಸ್ ನೀವೆಂದೂ ನೋಡಲಿಕ್ಕಿಲ್ಲ! ಆನಂದ ಮಹಿಂದ್ರಾ ಅವರಿಗೂ ಇಷ್ಟವಾದ Viral Video!
ಡ್ಯಾನ್ಸ್ ಒಂದು ಕಲೆ, ಡಾನ್ಸ್ ಮಾಡುವುದು ಒಂದು ಜಾದೂ, ಕೆಲವರು ಡ್ಯಾನ್ಸ್ ಮಾಡುತ್ತಿದ್ದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ಅದರಲ್ಲೂ ಕೆಲವರ ಡ್ಯಾನ್ಸ್ ಮೂವ್ ಗಳು ಡ್ಯಾನ್ಸ್ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರೆ, ಇನ್ನೂ ಕೆಲವರ ಡ್ಯಾನ್ಸ್ ಹೃದಯದ ಬಡಿತವನ್ನು ಕೂಡಾ ಹೆಚ್ಚಿಸುತ್ತದೆ. ಬಹುತೇಕ ನರ್ತಕ/ನರ್ತಕಿಯರು ಡ್ಯಾನ್ಸ್ ಎಂದಾಗ ಅವರ ನೃತ್ಯಕ್ಕೆ ತಕ್ಕಂತಹ ಡ್ರೆಸ್ ಗಳಿಗೆ ಪ್ರಥಮ ಆದ್ಯತೆಯನ್ನು ನೀಡುತ್ತಾರೆ. ಏಕೆಂದರೆ ಕಂಫರ್ಟಬಲ್ ವಸ್ತ್ರಗಳನ್ನು ಧರಿಸಿದ್ದರೆ ಡ್ಯಾನ್ಸ್ ಮೂವ್ಸ್ ಕೂಡಾ ಪರಿಪೂರ್ಣ ಹಾಗೂ ಬಹಳ ಅಚ್ಚುಕಟ್ಟಾಗಿ ಮೂಡಿ ಬರಲು ಸಾಧ್ಯ ಎನ್ನುವುದು ವಾಸ್ತವ. ಅದಕ್ಕೆ ಡ್ಯಾನ್ಸರ್ ಗಳು ಉಡುಪುಗಳ ವಿಷಯದಲ್ಲಿ ಬಹಳ ಹೆಚ್ಚು ಗಮನ ನೀಡುತ್ತಾರೆ.
ಇನ್ನು ಆಧುನಿಕ ಶೈಲಿಯ ಹೊಸ ಹೊಸ ನೃತ್ಯಗಳನ್ನು ಮಾಡುವಾಗಲಂತೂ ಧರಿಸುವ ವಸ್ತ್ರಗಳಿಗೆ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಕೂಡಾ ಇದೆ. ಆದರೆ ಒಂದು ಅದ್ಭುತ ಡ್ಯಾನ್ಸ್ ಅನ್ನು ಸೀರೆ ಉಟ್ಟುಕೊಂಡು ಒಬ್ಬ ಯುವತಿ ಮಾಡಿದ್ದಾಳೆ ಎಂದರೆ ಇದು ನಿಜಾನಾ? ಅನ್ನುವವರು ಇದ್ದಾರೆ. ಕಾರಣ ಇಂದಿನ ದಿನಗಳಲ್ಲಿ ಸೀರೆ ಉಟ್ಕೊಂಡು ಹುಡುಗಿಯರಿಗೆ ನಡೆಯೋದೇ ಕಷ್ಟ ಅಂತಾದ್ರಲ್ಲಿ ಡಾನ್ಸ್ ಮಾಡೋದು ಅಂದ್ರೆ ಅಂತ ಅನುಮಾನ ಪಡೋ ಮೊದಲು ಈ ವಿಷಯ ಒಮ್ಮೆ ಓದಿ ನೋಡಿ. ಇಲ್ಲೊಬ್ಬ ಹುಡುಗಿ ಸೀರೆ ಉಟ್ಟು ಮಾಡಿರುವ ಡಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂಚಲನವನ್ನೇ ಹುಟ್ಟು ಹಾಕಿದೆ.
ವಿಡಿಯೋ ನೋಡಿ..
ಏಷ್ನಾ ಕುಟ್ಟಿ ಎನ್ನುವ ಯುವತಿ ಡೆಲ್ಲಿ 6 ಸಿನಿಮಾದ ಸಸುರಾಲ್ ಗೇಂಡಾ ಪೂಲ್ ಹಾಡಿಗೆ ಭರ್ಜರಿಯಾದ ಡ್ಯಾನ್ಸ್ ಮಾಡಿದ್ದು ಸೀರೆಯುಟ್ಟು ಡ್ಯಾನ್ಸ್ ಮಾಡಿರುವುದೇ ಆಶ್ಚರ್ಯ ಎಂದು ನೋಡುವಾಗಲೇ ಈ ಯುವತಿ ಹುಲ್ಲಾ ಹೂಪ್ಸ್ ಕೂಡಾ ಬಳಸಿಕೊಂಡಿದ್ದು ಭಿನ್ನ ಭಿನ್ನವಾದ ಡ್ಯಾನ್ಸ್ ಮೂವ್ಮೆಂಟ್ ಗಳನ್ನು ಮಾಡಿ ತೋರಿಸಿದ್ದಾರೆ. ವೀಡಿಯೋವನ್ನು ಏಷ್ನಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅಲ್ಪಾವಧಿಯಲ್ಲೇ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಸಾಗುತ್ತಿದೆ. ನೋಡುಗರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ.
ಎಷ್ನಾ ಅವರ ವೀಡಿಯೋ ವೈರಲ್ ಆಗಿದ್ದೇ ತಡ ಈಗ ಸೋಶಿಯಲ್ ಮೀಡಿಯಾದಲ್ಲಿ #sareeflow ಹ್ಯಾಷ್ ಟ್ಯಾಗ್ ಟ್ರೆಂಡ್ ಆರಂಭವಾಗಿದೆ. ಎಷ್ನಾ ತಮ್ಮ ವೀಡಿಯೋ ಜೊತೆಗೆ ಹ್ಯಾಷ್ ಟ್ಯಾಗ್ ಸ್ಯಾರಿ ಫ್ಲೋ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ತಾನು ಈ ರೀತಿ ಬರೆಯುತ್ತಿರುವುದು ಒಂದು ಟ್ರೆಂಡ್ ಸೆಟ್ ಮಾಡಲು ಅಲ್ಲ. ಸೀರೆಯನ್ನು ಉಟ್ಟುಕೊಂಡು ಕೂಡಾ ನಾವು ಎಷ್ಟು ಆರಾಮವಾಗಿ ಇರಬಹುದು ಹಾಗೂ ಸೀರೆ ಉಟ್ಟು ಬಹಳ ನಾಜೂಕಾಗಿ ನಡೆದಾಡಬೇಕಾದ ಅಗತ್ಯವಿಲ್ಲ, ಸೀರೆ ಕೂಡಾ ಕಂಫರ್ಟಬಲ್ ಎಂಬುದನ್ನು ತಿಳಿಸಲು ಈ ವೀಡಿಯೋ ಎಂದಿದ್ದಾರೆ. ಎಷ್ನಾ ಇಂತಹ ವೀಡಿಯೋ ಹಾಕಿರುವುದು ಇದೇ ಮೊದಲಲ್ಲ.
I believe I’m already late in noticing this video…But it doesn’t make me any less awestruck..A star is born…Thank you for the #Friday high. May the #sareeflow movement grow… https://t.co/OtinRUCqYn
— anand mahindra (@anandmahindra) September 25, 2020
ಈ ಮೊದಲು ಕೂಡಾ ಆಕೆ ವೀಡಿಯೋಗಳನ್ನು ಶೇರ್ ಮಾಡಿದ್ದಾರೆ. ಆದರೆ ಈ ಬಾರಿ ಶೇರ್ ಮಾಡಿರೋ ವೀಡಿಯೋವನ್ನು ನೆಟ್ಟಿಗರು ಭರ್ಜರಿಯಾಗಿ ಮೆಚ್ಚುಗೆ ನೀಡುವ ಮೂಲಕ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವೀಡಿಯೋ ನೋಡಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಆನಂದ್ ಮಹೀಂದ್ರಾ ಹಾಗೂ ಇನ್ನೂ ಅನೇಕ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡಾ ಎಷ್ನಾ ಅವರ ಡ್ಯಾನ್ಸ್ ವೀಡಿಯೋಗೆ ಮೆಚ್ಚುಗೆಯನ್ನು ನೀಡಿರುವುದು ಮತ್ತಷ್ಟು ವಿಶೇಷ ಎನಿಸಿದ್ದು, ವೀಡಿಯೋ ಗೆ ಸಿಕ್ಕಿರುವ ಭರ್ಜರಿ ಪ್ರತಿಕ್ರಿಯೆಗಳಿಗೆ ಇದು ಉದಾಹರಣೆಯಾಗಿದೆ.