ರಾನು ಮಂಡಲ್ ಬಗ್ಗೆ ಗಾನಕೋಗಿಲೆ ಲತಾ ಮಂಗೇಶ್ಕರ್ ಹೇಳಿದ ‘ಆ’ ಮಾತು ನಿಜವಾಯಿತು!
ಅದ್ಭುತ ಕಂಠಸಿರಿಯನ್ನು ಹೊಂದಿದ ಕೋಟ್ಯಂತರ ಜನರನ್ನು ತನ್ನ ಕೋಗಿಲೆಯ ಸ್ವರದಿಂದ ಮಂತ್ರ ಮುಗ್ಧರನ್ನಾಗಿಸಿದ ಲತಾ ಮಂಗೇಶ್ಕರ್ ಅವರ ಜನ್ಮದಿನ ನಿನ್ನೆ ಆಚರಿಸಲಾಯಿತು. ನಿನ್ನೆ ಅವರ 92 ನೇ ಹುಟ್ಟುಹಬ್ಬಕ್ಕೆ ಗಣ್ಯಾತಿಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು.
ಸ್ವರ ಸಾಮ್ರಾಜ್ಯದ ಮೇರು ಮುಕುಟವಾದ ಲತಾ ಅವರು ಹಾಡಿದ “ಏಕ ಪ್ಯಾರ ಕಾ ನಗ್ಮಾ ಹೈ” ಇದೇ ಹಾಡನ್ನು ಹಾಡಿ ಇಂಟರ್ನೆಟ್ ಸೆನ್ಸೇಷನ್ ಆದ ರಾನು ಮೊಂಡಲ್ ಅವರಿಗೆ ಎಲ್ಲರಿಂದಲೂ ಹೊಗಳಿಕೆ ಸಿಕ್ಕಿತು. ಸ್ವತಃ ಲತಾ ದೀದೀಯವರು ಸಹಿತ ರಾನುಗೆ ಹೊಗಳಿ ಹಾಡಿದರು. ಇದರ ಜೊತೆಗೆ ಲತಾ ಅವರು ರಾನುಗೆ ಒಂದು ಸಲಹೆಯನ್ನು ಕೊಟ್ಟಿದ್ದರು.
ರಾನುಳ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಲತಾ ದೀದೀಯವರು ಆಗ ವ್ಯಕ್ತ ಮಾಡಿದ ಭವಿಷ್ಯವು ಈಗ 100 ಕ್ಕೆ ನೂರರಷ್ಟು ನಿಜವಾಗುತ್ತಿದೆ. ಏಕೆಂದರೆ, ರಾನುಳ ಸ್ಟಾರ್ ಡಮ್ ಇದು ಕೆಲವೇ ದಿವಸಗಳ ಸಲುವಾಗಿ ಇತ್ತು, ಈಗ ರಾನು ಮತ್ತೆ ಮೊದಲಿನ ಹಾಗೆಯೇ ಸ್ಟೇಷನ್ ನಲ್ಲಿ ನಿಂತು ಹಾಡುವ ಪರಿಸ್ಥಿತಿ ಮರುಕಳಿಸಿದೆ.

ಲತಾ ಮಂಗೇಶ್ಕರ್ ಅವರು ಕೆಲವು ದಿನಗಳ ಹಿಂದೆ ವೃತ್ತಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾನುಳ ಬಗ್ಗೆ ಹೀಗೆ ಹೇಳಿದ್ದರು. ನನ್ನ ಹೆಸರಿನಿಂದ ಮತ್ತು ನನ್ನ ಕೆಲಸದಿಂದ ಇನ್ನೊಬ್ಬರ ಜೀವನದಲ್ಲಿ ಒಳ್ಳೆಯದಾಗುತ್ತಿದ್ದರೆ, ನಾನು ನಿಜವಾಗಿಯೂ ಭಾಗ್ಯವಂತೆಳೆಂದೆ ಭಾವಿಸಿಕೊಳ್ಳುತ್ತೇನೆ. ಆದರೆ ನನಗನಿಸುವ ಪ್ರಕಾರ ಇನ್ನೊಬ್ಬರ ಅನುಕರಣ ಮಾಡಿ ಪಡೆದುಕೊಂಡು ಯಶಸ್ಸು ಬಹಳ ದಿನಗಳವರೆಗೆ ಉಳಿದುಕೊಳ್ಳುವುದು ತುಂಬಾ ಕಷ್ಟ ಎಂದಿದ್ದರು. ಈಗಿನ ಯುವ ಗಾಯಕರು ಹಳೆಯ ಹೆಸರಾಂತ ಗಾಯಕರ ಹಾಡುಗಳನ್ನು ಹಾಡಿ ತಮ್ಮಲ್ಲಿಯ ಪ್ರತಿಭೆಯನ್ನು ತೋರಿಸುತ್ತಾರೆ. ಆದರೆ ಅದು ಕೊನೆಯವರೆಗೆ ಉಳಿಯುವುದಿಲ್ಲ, ಎಂದು ಹೇಳಿದ್ದರು.
ಅದರ ಜೊತೆಗೆ ಇತ್ತೀಚೆಗೆ tv ಗಳಲ್ಲಿ ಬಿತ್ತರವಾಗುತ್ತಿರುವ ಹೆಚ್ಚಿನ ಸಂಖ್ಯೆಗಳಲ್ಲಿಯ ರಿಯಾಲಿಟಿ ಶೋಗಳ ಬಗ್ಗೆ ಅವರು ಚಿಂತೆಯನ್ನು ಸಹಿತ ವ್ಯಕ್ತ ಮಾಡಿದರು. ಅನೇಕ ಮಕ್ಕಳು ನಾನು ಹಾಡಿದ ಹಾಡುಗಳನ್ನು ತುಂಬಾ ಸುಂದರವಾಗಿ ಹಾಡಿದ್ದಾರೆ. ಆದರೆ ಆ ಎಲ್ಲ ಮಕ್ಕಳು ಈಗ ಎಲ್ಲಿದ್ದಾರೆ. ಅವರಲ್ಲಿ ನಾನು ಬರೀ ಸುನಿಧಿ ಚವಾಣ್ ಮತ್ತು ಶ್ರೇಯಾ ಘೋಷಾಲ್ ಅವರನ್ನಷ್ಟೆ ನೋಡ್ತಾ ಇದ್ದೀನಿ. ಅವರನ್ನಷ್ಟೇ ಗುರುತಿಸುತ್ತೇನೆ. ಉಳಿದವರನ್ನು ನಾನು ಗುರಿತಿಸುವದೆ ಇಲ್ಲ. ಸ್ವಲ್ಪ ಸಮಯದ ವರೆಗೆ ನೀವು ಇನ್ನೊಬ್ಬರ ಹಾಡುಗಳನ್ನು ಹಾಡಿ ಆನಂತರ ಒರಿಜಿನಲ್ ಹಾಡಲು ಕಲಿಯಿರಿ ಮತ್ತು ಒರಿಜಿನಲ್ ಆಗಿಯೇ ಇರಿ ಎಂದು ಎಲ್ಲರಿಗೂ ಸಮಜಾಯಿಷಿ ನೀಡಿದ್ದಾರೆ.