ಬ್ರಿಡ್ಜ್ ಮೇಲೆ ಮೊಣಕಾಲೂರಿ ಲವ್ ಪ್ರಪೋಸ್ ಮಾಡಲು ಮುಂದಾದ ಯುವಕ, ಆದರೆ ಮುಂದೆ ಆಗಿದ್ದೇ ಬೇರೆ! ನೋಡಿ ಈ Viral Video!

ಪ್ರೇಮ ಅನ್ನೋದು ಒಂದು ಮಧುರಾನುಭೂತಿ, ಪ್ರೇಮಿಗಳ ಜೀವನದಲ್ಲಿ ಅತಿ ಮಧುರವಾದ ಹಾಗೂ ಸದಾ ನೆನಪಲ್ಲಿ ಉಳಿಯುವ ಸ್ಮರಣೆ ಎಂದರೆ ಅದು ಪ್ರೇಮಿಯು ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಳ್ಳುವುದು. ಮೊದಲು ಮೆಚ್ಚಿದ ಹುಡುಗಿಯನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ, ಅದೆಷ್ಟೋ ಅಡೆ ತಡೆಗಳನ್ನು ದಾಟಿ ನಾನಾ ವಿಧದಲ್ಲಿ ಶ್ರಮ ಪಡುವ ಹುಡುಗರಿಗೆ ಹುಡುಗಿಯು ಗೆಳತಿಯಾಗಿ ಒಲಿದ ಮೇಲೆ ಕಾಡುವ ಮತ್ತೊಂದು ಸಮಸ್ಯೆ ಎಂದರೆ ಅದು ಪ್ರೇಮ ನಿವೇದನೆ ಮಾಡುವುದು. ಅದರಲ್ಲೂ ಬಹಳ ದಿನಗಳಿಂದ ಸ್ನೇಹವಿದ್ದು, ಆ ಸ್ನೇಹ ಪ್ರೇಮವಾದಾಗ ಹುಡುಗನಿಗೆ ತನ್ನ ಗೆಳತಿಗೆ ತನ್ನ ಪ್ರೇಮ ತಿಳಿಸುವ ವಿಚಾರಕ್ಕೆ ಸಾಕಷ್ಟು ಪೂರ್ವ ತಯಾರಿ ಕೂಡಾ ಮಾಡಬೇಕಾಗುತ್ತದೆ ಹಾಗೂ ಅದಕ್ಕಾಗಿ ಅವರು ಪಡುವ ಪಾಡು ಕೂಡಾ ಅಷ್ಟಿಷ್ಟಲ್ಲ.

ಲವ್ ಪ್ರಪೋಸ್ ಮಾಡುವ ಕ್ಷಣವನ್ನು ಬಹಳ ವಿಶೇಷ, ಸದಾ ನೆನಪಿರುವ ಹಾಗೂ ಪರ್ಫೆಕ್ಟ್ ಮಾಡಲು ಬಯಸುತ್ತಾರೆ ಪ್ರತಿ ಪ್ರೇಮಿಗಳ ಜೋಡಿ ಕೂಡಾ. ಲವ್ ಪ್ರಪೋಸ್ ನಲ್ಲಿ ಪ್ರಮುಖ ಪಾತ್ರ ವಹಿಸುವುದು ಉಂಗುರ ಮತ್ತು ಪ್ರಪೋಸ್ ಮಾಡುವ ಸ್ಥಳ. ಅದಕ್ಕೆ ಪ್ರೇಮಿಗಳು ಇವುಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ ಇಷ್ಟೆಲ್ಲಾ ಪ್ಲಾನ್ ಮಾಡಿ, ಪ್ರಪೋಸ್ ಮಾಡಲು ಮಾಡಿದ ಸಿದ್ಧತೆಗಳು ಯಾವಾಗಲೂ ಕೂಡಾ ಪರ್ಫೆಕ್ಟ್ ಆಗುತ್ತವೆ ಎನ್ನುವ ಗ್ಯಾರಂಟಿ ಅಂತೂ ಇರುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದು ಒಳ್ಳೆ ಮಜಾ ನೀಡುವ ವೀಡಿಯೋ ಒಂದು ವೈರಲ್ ಆಗುತ್ತಾ ಸಾಗಿದೆ‌.‌

ವೀಡಿಯೋದ ಆರಂಭವು ಯಾವುದೋ ಸಿನಿಮಾದ ರೋಮ್ಯಾಂಟಿಕ್ ಸೀನ್ ನಂತೆ ಕಾಣುತ್ತದೆ. ನ್ಯೂಯಾರ್ಕ್ ನಗರದ ಸುಪ್ರಸಿದ್ಧ ಬ್ರೂಕ್ಲಿನ್ ಬ್ರಿಡ್ಜ್ ಮೇಲೆ ವ್ಯಕ್ತಿಯೊಬ್ಬನು ಮೊಣಕಾಲೂರಿ ಕುಳಿತು ತನ್ನ ಹುಡುಗಿಯ ಕಣ್ಣಲ್ಲಿ ನೋಡುತ್ತಾ ಆಕೆಗೆ ವಿವಾಹದ ಪ್ರಪೋಸ್ ಅನ್ನು ಮಾಡುತ್ತಾ ಇರುತ್ತಾನೆ. ಫೋಟೋಗ್ರಾಫರ್ ಅಲ್ಲಿನ ಟ್ರಾಫಿಕ್ ಅನ್ನು ನಿಭಾಯಿಸುತ್ತಾ ಫೋಟೋ ಗಳನ್ನು ತೆಗೆಯುತ್ತಾ ಇರುತ್ತಾಳೆ. ಯಾವಾಗ ಒಂದು ಪರ್ಫೆಕ್ಟ್ ಫೋಟೋಗಾಗಿ ಫೋಟೋಗ್ರಾಫರ್ ಮುಂದೆ ಬರುತ್ತಾಳೋ, ಅದೇ ಸಮಯಕ್ಕೆ ಒಬ್ಬ ಸೈಕಲ್ ಸವಾರ ಆ ಮಾರ್ಗದಲ್ಲಿ ಬಂದು ಆಕೆಗೆ ಡಿಕ್ಕಿ ಹೊಡೆಯುತ್ತಾನೆ. ಇಬ್ಬರೂ ಕೆಳಗೆ ಬೀಳುತ್ತಾರೆ.

ವಿಡಿಯೋ ನೋಡಿ

ಈ ವೀಡಿಯೋದಲ್ಲಿ ಯಾವ ವ್ಯಕ್ತಿ ತನ್ನ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡ್ತಾ ಇರ್ತಾನೋ ಆತನ ಹೆಸರು ಕ್ರಿಸ್ ವಿಗಿ ಎನ್ನಲಾಗಿದೆ. ವೀಡಿಯೋವನ್ನು ಕ್ರಿಸ್ ವಿಗಿ ತನ್ನ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದು, ಕ್ಯಾಪ್ಷನ್ ನಲ್ಲಿ ನೀವು ಕೂಡಾ ನಿಮ್ಮ ಲವ್ ಪ್ರಪೋಸಲ್ ವೀಡಿಯೋವನ್ನು ಸದಾ ನೆನಪಿನಲ್ಲಿ ಇಡುವಂತೆ ಶೂಟ್ ಮಾಡಿಸಬೇಕಾದರೆ ಅದನ್ನು NYC ಯಲ್ಲಿ ಮಾಡಿಸಿ ಎಂದು ಬರೆದುಕೊಂಡಿದ್ದಾರೆ. ನೆಟ್ಟಿಗರು ಈ ಫನ್ನಿಯಾದ ವೀಡಿಯೋವನ್ನು ನೋಡಿ ಕಾಮೆಂಟ್ ಗಳನ್ನು ಮಾಡದೇ ಇರಲಾರರು ಎನ್ನುವಂತೆ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಈ ವೀಡಿಯೋವನ್ನು 47 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.