Video: ಹಸಿರು ಡ್ರೆಸ್ ಧರಿಸಿ ಪಂಜಾಬಿ ಹಾಡಿನ ಮೇಲೆ ಭರ್ಜರಿ ಡಾನ್ಸ್ ಮಾಡಿದ ಚಹಲ್ ಪತ್ನಿ ಧನಾಶ್ರೀ; ವಿಡಿಯೋ ವೈರಲ್!
ಸುಪ್ರಸಿದ್ಧ ಯೂಟ್ಯೂಬರ್ ಧನಾಶ್ರೀ ವರ್ಮಾ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸುದ್ದಿಯಲ್ಲಿದ್ದಾರೆ. ಬಹುಶಃ ಸಿನಿಮಾ ಅಥವಾ ಸ್ಟೇಜ್ ಶೋ ಗಳ ಮೂಲಕ ಕೂಡಾ ಸದ್ದು ಮಾಡದ ಮಟ್ಟಿಗೆ ಯೂಟ್ಯೂಬ್ ವೀಡಿಯೋಗಳ ಮೂಲಕವೇ ಧನಾಶ್ರೀ ವರ್ಮಾ ಸದ್ದು, ಸುದ್ದಿಯನ್ನು ಮಾಡುತ್ತಿದ್ದಾರೆ. ಧನಾಶ್ರೀ ವರ್ಮಾ ಕ್ರಿಕೆಟ್ ಆಟಗಾರ ಯಜ್ವೇಂದ್ರ ಚಹಲ್ ಅವರ ಭಾವೀ ಪತ್ನಿಯಾಗಿದ್ದು, ಅವರಿಬ್ಬರ ನಿಶ್ಚಿತಾರ್ಥ ಕೂಡಾ ಮುಗಿದಿದೆ. ಧನಾಶ್ರೀ ವರ್ಮಾ ಡಾಕ್ಟರ್ ಮಾತ್ರವೇ ಅಲ್ಲದೇ ಪರಿಣಿತ ಕೊರಿಯೋಗ್ರಾಫರ್ ಕೂಡಾ ಆಗಿದ್ದು, ಡಾಕ್ಟರ್ ಗಿಂತ ಆಕೆ ಡಾನ್ಸರ್ ಆಗಿಯೇ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದ್ದು, ಒಂದಾದ ನಂತರ ಮತ್ತೊಂದು ಎನ್ನುವಂತೆ ಅವರ ಡಾನ್ಸ್ ವೀಡಿಯೋಗಳು ಭರ್ಜರಿ ವೈರಲ್ ಆಗುತ್ತಿವೆ.
ಈಗ ಅದೇ ಹಾದಿಯಲ್ಲಿ ಧನಾಶ್ರೀ ವರ್ಮಾ ಅವರ ವೀಡಿಯೋ ಒಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದೆ. ಯೂಟ್ಯೂಬ್ ನಲ್ಲಿ ಹೊಸ ಡಾನ್ಸ್ ವೀಡಿಯೋ ನೆಟ್ಟಿಗರನ್ನು ಕುಣಿದಾಡುವಂತೆ ಮಾಡುತ್ತಿದೆ. ಈ ಹೊಸ ಡಾನ್ಸ್ ವೀಡಿಯೋದಲ್ಲಿ ಧನಾಶ್ರೀ ಹಸಿರು ಬಣ್ಣದ ಪಟಿಯಾಲಾ ಸೂಟ್ ಧರಿಸಿದ್ದು, ಆಕೆ ಬಹಳ ಅಂದವಾಗಿ ಕಾಣುತ್ತಿದ್ದಾರೆ. ಈ ಬಾರಿ ಆಕೆ ಪಂಜಾಬಿ ಹಾಡಾದ ವಾಂಗ ಕಾಲಿಯಾ ಎನ್ನುವ ಹಾಡಿಗೆ ವಾವ್ ಎನ್ನುವ ಡಾನ್ಸ್ ಮೂವ್ಸ್ ಗಳನ್ನು ಮಾಡಿದ್ದಾರೆ. ಧನಾಶ್ರೀ ಯ ಹಾವ ಭಾವಗಳು ನೋಡುಗನಿಗೆ ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡುತ್ತಿದೆ.
ಧನಾಶ್ರೀ ಅವರ ಡಾನ್ಸ್ ಸ್ಟೆಪ್ ಗಳು, ಡಾನ್ಸ್ ಮೂವ್ ಗಳು ನೋಡುಗರಿಗೆ ಅದರಲ್ಲೂ ಡಾನ್ಸ್ ಪ್ರಿಯರಿಗೆ ಬಹಳಷ್ಟು ಹಿಡಿಸಿದೆ. ಅದೇ ಕಾರಣದಿಂದಲೇ ವೀಡಿಯೋ ವೈರಲ್ ಆಗುತ್ತಾ ಇದುವರೆಗೂ 3 ಲಕ್ಷ 99 ಸಾವಿರಕ್ಕಿಂತ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಭಿಮಾನಿಗಳು ಮೆಚ್ಚಿರುವ ವೀಡಿಯೋಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಧನಾಶ್ರೀ ತಮ್ಮ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದು, ಅದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದು, ಅವರ ಜನ್ಮದಿನಕ್ಕೆ ಯಜ್ವೇಂದ್ರ ಕೂಡಾ ಸರ್ಪ್ರೈಸ್ ಗಿಫ್ಟ್ ಗಳನ್ನು ನೀಡಿದ್ದಾರೆ.
ವಿಡಿಯೋ ನೋಡಿ.
ಯಜ್ವೇಂದ್ರ ನೀಡಿರುವ ವಿಶೇಷ ಉಡುಗೊರೆಗಳ ಫೋಟೋಗಳನ್ನು ಕೂಡಾ ಧನಾಶ್ರೀ ವರ್ಮಾ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಧನಾಶ್ರೀ ವೃತ್ತಿಯಿಂದ ಒಬ್ಬ ಡಾಕ್ಟರ್ ಆಗಿದ್ದರೂ ಕೂಡಾ ಆಕೆ ಗುರುತಿಸಲ್ಪಟ್ಟಿರುವುದು ಒಬ್ಬ ಅದ್ಭುತ ಡಾನ್ಸರ್ ಆಗಿ. ಅವರ ಯೂಟ್ಯೂಬ್ ವೀಡಿಯೋಗಳು ಬಿರುಗಾಳಿಯನ್ನೇ ಎಬ್ಬಿಸುವಂತೆ ವೈರಲ್ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನಿಸಿದೆ. ಧನಾಶ್ರೀ ವರ್ಮಾ ಅವರ ಡಾನ್ಸ್ ವೀಡಿಯೋಗಳು ಡಾನ್ಸ್ ಪ್ರಿಯರಿಗೆ ನಿಜಕ್ಕೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.