ಅಷ್ಟಕ್ಕೂ ರಸ್ತೆ ಬದಿಗಿರುವ ಮರಗಳಿಗೆ ಬಣ್ಣ ಏಕೆ ಬಳಿಯುತ್ತಾರೆ ಗೊತ್ತಾ? ಇದರ ಹಿಂದಿದೆ ಅಚ್ಚರಿ ಮೂಡಿಸುವ ಕಾರಣ!

ರಸ್ತೆಯ ಇಕ್ಕೆಲಗಳಲ್ಲಿ ನೆಟ್ಟಿರುವ ಮರಗಳನ್ನು ನೋಡಿದಾಗ ಸಾಮಾನ್ಯವಾಗಿ ಆ ಮರಗಳ ಬೇರಗಳ ಮೇಲ್ಭಾಗದಲ್ಲಿ ಬಣ್ಣವನ್ನು ಬಳಿದಿರುವುದನ್ನು ನಾವೆಲ್ಲಾ ನೋಡಿಯೇ ಇದ್ದೇವೆ. ಮರಗಳ ಬೇರುಗಳಿಂದ ಸ್ವಲ್ಪ ಎತ್ತರದವರೆಗೆ ಬಿಳಿಯ ಮತ್ತು ಕೆಂಪು ಬಣ್ಣವನ್ನು ಸಾಧಾರಣವಾಗಿ ಹಚ್ಚಲಾಗಿರುತ್ತದೆ.‌ ಅದನ್ನು ನೋಡಿದಾಗ ಕೆಲವರ ಮನಸ್ಸಿನಲ್ಲಿ ಏಕೆ ಈ ರೀತಿ ಬಣ್ಣವನ್ನು ಹಚ್ಚಲಾಗಿದೆ ಎನ್ನುವ ಪ್ರಶ್ನೆ ಮೂಡಿದರೂ ಉತ್ತರ ಹುಡುಕುವ ಕಡೆ ಗಮನ ನೀಡುವುದಿಲ್ಲ. ಇನ್ನೂ ಕೆಲವರು ಅದನ್ನು ನೋಡಿ ಸುಮ್ಮನಾಗಿ ಬಿಡುತ್ತಾರೆ‌. ಆದರೆ ಅದರ ಬಗ್ಗೆ ಉತ್ತರ ಸಿಗದೇ ಇದ್ದರೆ, ಅಂತಹವರಿಗಾಗಿ ಉತ್ತರ ಇಲ್ಲಿದೆ. ನಿಜ ಹೇಳಬೇಕೆಂದರೆ ಮರಗಳ ಮೇಲೆ ಈ ರೀತಿ ಬಣ್ಣ ಬಳಿಯುವುದು ಸುಮ್ಮನೆಯಂತೂ ಖಂಡಿತಾ ಅಲ್ಲ. ಈ ರೀತಿ ಬಣ್ಣ ಬಳಿಯುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.

ಮರಗಳ ಕೆಳಗಿನ ಭಾಗದಲ್ಲಿ ಈ ರೀತಿ ಬಣ್ಣವನ್ನು ಬಳಿಯುವುದು ಬಹಳ ಪ್ರಾಚೀನವಾದ ಒಂದು ವಿಧಾನವಾಗಿದೆ. ಹೀಗೆ ಬಣ್ಣ ಹಾಕುವ ಮುಖ್ಯ ಉದ್ದೇಶವೇನೆಂದರೆ ಹಸಿರಿನಿಂದ ಕಂಗೊಳಿಸುವ ಈ ಮರಗಳನ್ನು ಮತ್ತಷ್ಟು ಸದೃಢವನ್ನಾಗಿ ಮಾಡುವುದಾಗಿದೆ. ಸಾಮಾನ್ಯವಾಗಿ ದಿನಗಳೆದಂತೆ ಮರಗಳ ಕಾಂಡದ ಹಾಗೂ ಕೊಂಬೆಗಳ ಮೇಲೆ ಹಾಗೂ ಇತರೆ ಭಾಗಗಳಲ್ಲಿ ಕೂಡಾ ಬಿರುಕುಗಳು ಉಂಟಾಗಿ, ಅದು ಸೀಳಿಕೊಂಡು ಚೂರಗಳಾಗಿ ಉದುರಲು ಆರಂಭವಾಗುತ್ತದೆ. ಹೀಗೆ ಮರದ ಮೇಲಿನ ಪದರವೊಂದು ಹಾಳಾಗಿ ಉದುರುವುದರಿಂದ ಮರವು ದು ರ್ಬಲಗೊಳ್ಳಲು ಆರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮರಗಳನ್ನು ಸದೃಢವನ್ನಾಗಿ ಮಾಡಲು ಅವುಗಳಿಗೆ ಬಣ್ಣ ಹಚ್ಚಲಾಗುತ್ತದೆ. ಬಣ್ಣ ಹಚ್ಚುವುದರಿಂದ ಮರದ ಆಯುಷ್ಯ ಕೂಡಾ ವೃದ್ಧಿಯಾಗುತ್ತದೆ.

ಇದು ಮಾತ್ರವೇ ಅಲ್ಲದೇ ಮರಗಳಿಗೆ ಬಣ್ಣ ಹಚ್ಚುವುದಕ್ಕೆ ಇನ್ನೊಂದು ಉದ್ದೇಶ ಕೂಡಾ ಇದೆ. ಅದೇನೆಂದರೆ ಮರಗಳಿಗೆ ಗೆದ್ದಲು ಹತ್ತದೇ ಇರಲಿ ಅಥವಾ ಬೇರೆ ಕೀಟಗಳ ತೊಂದರೆಗೆ ಮರವು ಬಾ ಧಿತವಾಗಬಾರದು ಎನ್ನುವುದು ಕೂಡಾ ಒಂದು ಉದ್ದೇಶವಾಗಿದೆ. ಕೀಟಗಳು ಯಾವುದೇ ಮರವನ್ನಾದರೂ ಒಳಗಿನಿಂದ ಟೊಳ್ಳಾಗಿಸಿಬಿಡುತ್ತವೆ. ಆದರೆ ಬಣ್ಣ ಬಳಿಯುವುದರಿಂದ ಅವುಗಳಿಗೆ ಕೀಟ ಹತ್ತುವುದಿಲ್ಲ ಹಾಗೂ ಗೆದ್ದಲು ಕೂಡಾ ಹಿಡಿಯದೇ ಕೀಟಗಳು ಹಾಗೂ ಗೆದ್ದಲಿನಿಂದ ಬಣ್ಣವು ಅವುಗಳ ರಕ್ಷಣೆಯನ್ನು ಮಾಡಲು ಸಹಾಯವನ್ನು ಮಾಡುತ್ತದೆ.

ಮರಗಳ ಮೇಲೆ ಬಣ್ಣ ಹಚ್ಚುವುದರಿಂದ ಮರಗಳ ಸುರಕ್ಷತೆಯೂ ಕೂಡಾ ಹೆಚ್ಚುತ್ತದೆ. ಬಣ್ಣ ಬಳಿದಿರುವುದು ಆ ಮರಗಳು ವನ್ಯ ವಿಭಾಗದ ಪರಿವೀಕ್ಷಣೆಗೆ ಒಳಪಟ್ಟಿದೆ ಎಂದೂ, ಅವುಗಳನ್ನು ಕತ್ತರಿಸುವುದು ಕಾನೂನಿಗೆ ವಿ ರುದ್ಧ ಎನ್ನುವುದನ್ನು ಸಂಕೇತಿಸಿ, ಮರಗಳನ್ನು ಕತ್ತರಿಸುವವರಿಗೆ ಅದು ಎಚ್ಚರಿಕೆಯ ಸಂದೇಶವನ್ನು ಸದಾ ನೀಡುತ್ತಾ ಇರುತ್ತದೆ‌. ಸಾಮಾನ್ಯವಾಗಿ ಬಣ್ಣ ಹಚ್ಚಲು ಬಿಳಿಯ ಬಣ್ಣವನ್ನು ಬಳಸಲಾಗುತ್ತದೆ. ಆದರೆ ಕೆಲವು ಕಡೆಗಳಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳನ್ನು ಬಳಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಮರಗಳ ಮೇಲೆ ಬಿಳಿಯ ಬಣ್ಣವನ್ನು ಬಳಿಯಲಾಗಿರುತ್ತದೆ. ಏಕೆಂದರೆ ರಾತ್ರಿಯ ಕತ್ತಲಲ್ಲಿ ಕೂಡಾ ಮರಗಳ ಮೇಲಿನ ಆ ಬೆಳಕು ಹೊಳೆದು ದಾರಿಹೋಕರಿಗೆ ನೆರವನ್ನು ನೀಡುತ್ತದೆ.

ಹೀಗೆ ನಾನಾ ಉದ್ದೇಶಗಳ ಸಲುವಾಗಿ ಮರಗಳ ಮೇಲೆ ಬಣ್ಣವನ್ನು ಬಳಿಯಲಾಗುತ್ತದೆ ಎಂಬುದನ್ನು ತಿಳಿದಾಗ ನಿಜಕ್ಕೂ ಮರಕ್ಕೆ ಹಚ್ಚುವ ಬಣ್ಣದ ಹಿಂದೆ ಇಷ್ಟೆಲ್ಲಾ ವಿಷಯ ಇದೆಯಾ ಎನ್ನುವ ಜೊತೆಗೆ, ಅದರ ಉದ್ದೇಶದ ಅರಿವು ಕೂಡಾ ನಮಗಾಗಿ ಸಾಕಷ್ಟು ಜ್ಞಾನಾಭಿವೃದ್ಧಿ ಕೂಡಾ ಆಗುತ್ತದೆ ಎನ್ನುವ ಸಮಾಧಾನವೊಂದು ಈಗ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ‌. ಒಟ್ಟಾರೆ ಮರದ ಮೇಲೆ ಬಣ್ಣ ಹಚ್ಚುವ ಈ ಕಾರ್ಯದಲ್ಲಿ ಮರದ ರಕ್ಷಣೆಯ ಕಳಕಳಿ ನಿಜಕ್ಕೂ ಮೆಚ್ಚುವಂತಹ ವಿಷಯ ಎನಿಸುವುದು.