ಗೆಳತಿಯರ ಜೊತೆ ಮೋಜು ಮಾಡುತ್ತಿದ್ದ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್; ಬ್ಯಾಲೆನ್ಸ್ ತಪ್ಪಿ ಮೇಲೆ ಬಿತ್ತು ನೀರು ತುಂಬಿದ ಟಬ್! ನೋಡಿ ಈ Video

ಮಲೆಯಾಳಂ ಬೆಡಗಿ, ನಟಿ ಹಾಗೂ ಕಣ್ಸನ್ನೆ ಹುಡುಗಿಯಾಗಿ ಇಡೀ ದೇಶದ ಗಮನವನ್ನು ತನ್ನತ್ತ ಕೇವಲ ಕಣ್ಣಿನ ಸನ್ನೆಯಿಂದಲೇ ಸೆಳೆದು, ಇರುಳು ಕಳೆದು ಹಗಲಾಗುವ ವೇಳೆಗೆ ನ್ಯಾಷನಲ್ ಸೆನ್ಸೇಷನ್ ಆದವರು ಪ್ರಿಯಾ ಪ್ರಕಾಶ್ ವಾರಿಯರ್. ಆಕೆಯ ಅದೊಂದು ವೀಡಿಯೋ ದೇಶದಲ್ಲಿ ಒಂದು ಸಂಚಲನ ಹುಟ್ಟಿಸಿ, ಕೋಟ್ಯಂತರ ಜನರು ಅದನ್ನು ನೋಡಿದರೆ, ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಕೂಡಾ ಪ್ರಿಯಾ ಪ್ರಕಾಶ್ ವಾರಿಯರ್ ನ ಕಣ್ಸನ್ನೆಯ ವೀಡಿಯೋ ತುಂಬಿ ಹೋಗಿತ್ತು. ಬಹುಶಃ ಅದಕ್ಕೂ ಮುನ್ನ ಯಾವೊಬ್ಬ ದೊಡ್ಡ ಸ್ಟಾರ್ ನಟಿಗೂ ಕೂಡಾ ಇಂತಹ ಒಂದು ಪ್ರತಿಕ್ರಿಯೆ ಜನರಿಂದ ಸಿಕ್ಕಿರಲಿಲ್ಲ ಎಂದು ಕೂಡಾ ಹೇಳಬಹುದು. ಸಿನಿಮಾ ನಟಿಯಾಗಿ ಪ್ರಿಯಾ ಎಷ್ಟು ಜನಪ್ರಿಯರಾದರೋ ಅದು ನಂತರದ ಮಾತು, ಆದರೆ ಒಂದು ಸಣ್ಣ ವೀಡಿಯೋ‌ ತುಣುಕಿನಿಂದ ಪ್ರಿಯಾ ದೇಶ ವ್ಯಾಪ್ತಿ ಜನಪ್ರಿಯತೆಯನ್ನು ಪಡೆದುಕೊಂಡು ಬಿಟ್ಟಿತ್ತು.

ಇದಾದ ನಂತರ ಪ್ರಿಯಾ ಪ್ರಕಾಶ್ ವಾರಿಯರ್ ಮೇಲೆ ಯುವಕರಲ್ಲಿ ಒಂದು ಕ್ರೇಜ್ ಹುಟ್ಟಿದ್ದು ಸಹಜ‌. ಅನಂತರದ ದಿನಗಳಲ್ಲಿ ಪ್ರಿಯಾ ಅವರ ಬಗೆಗಿನ ಸಣ್ಣ ಸಣ್ಣ ವಿಷಯಗಳು ಕೂಡಾ ದೊಡ್ಡ ಸದ್ದು ಸುದ್ದಿ ಮಾಡತೊಡಗಿದವು‌. ಪ್ರಿಯಾ ದೊಡ್ಡ ಸ್ಟಾರ್ ಆಗಿ ಬಿಟ್ಟರು‌. ಈಗಲೂ ಕೂಡಾ ಪ್ರಿಯಾ ಅವರ ವೀಡಿಯೋ ಗಳು ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಆಕೆಯ ಫೋಟೋಗಳು ಕೂಡಾ ಅಷ್ಟೇ ಸಿಕ್ಕಾಪಟ್ಟೆ ಕ್ರೇಜನ್ನು ಹುಟ್ಟು ಹಾಕುತ್ತಾ ಇರುತ್ತದೆ. ಈಗಲೂ ಕೂಡಾ ಪ್ರಿಯಾ ಅವರ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿ ಜನರ ಹಾಗೂ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿದೆ.

ವೈರಲ್ ಆಗಿರುವ ಪ್ರಿಯಾ ಅವರ ಈ ವೀಡಿಯೋದಲ್ಲಿ ನಮಗೆ ಪ್ರಿಯಾ ಮತ್ತು ಅವರ ಗೆಳತಿಯರನ್ನು ನೋಡಬಹುದು. ಅದರಲ್ಲಿ ಪ್ರಿಯಾ ಹಾಗೂ ಅವರು ಗೆಳತಿಯರು ನೆಲದ ಮೇಲೆ ಮಲಗಿಕೊಂಡು, ಎಲ್ಲರೂ ತಮ್ಮ ಕಾಲುಗಳನ್ನು ಮೇಲೆಕ್ಕೆತ್ತಿ, ಕಾಲಿನ ಮೇಲೆ ನೀರನಿಂದ ತುಂಬಿರುವ ಒಂದು ಟಬ್ ಅನ್ನು ಒಟ್ಟು ಅದನ್ನು ಕೆಳಗೆ ಬೀಳದಂತೆ ಬ್ಯಾಲೆನ್ಸ್ ಮಾಡಲು ಸಾಕಷ್ಟು ಶ್ರಮ ವಹಿಸುತ್ತಿರುವುದನ್ನು ನಾವು ಕಾಣಬಹುದು. ನಂತರ ಅವರು ಮೊದಲನೇ ಸುತ್ತಿನಲ್ಲಿ ಒಬ್ಬೊಬ್ಬರೇ ಟಬ್ ಅನ್ನು ಬ್ಯಾಲೆನ್ಸ್ ಮಾಡುತ್ತಾ ಒಂದು ಕಾಲಿನಲ್ಲಿ ಕಾಲಿಗೆ ಧರಿಸಿರುವ ಕಾಲು ಚೀಲಗಳನ್ನು ರಿಮೂವ್ ಮಾಡುತ್ತಾರೆ‌.

ವಿಡಿಯೋ ನೋಡಿ

View this post on Instagram

Things we do for @thesharannair 😂

A post shared by Priya Prakash Varrier💫 (@priya.p.varrier) on

ಆದರೆ ಎರಡನೇ ರೌಂಡ್ ನಲ್ಲಿ ಅವರೆಲ್ಲಾ ಮತ್ತೊಮ್ಮೆ ಇನ್ನೊಂದು ಕಾಲಿನಲ್ಲಿನ ಕಾಲು ಚೀಲವನ್ನು ತೆಗೆಯಲು ಪ್ರಯತ್ನವನ್ನು ಮಾಡುತ್ತಾರೆ. ಆದರೆ ಈ ಸುತ್ತಿನಲ್ಲಿ ಅವರ ಪ್ರಯತ್ನ ವಿಫಲವಾಗಿ, ಬ್ಯಾಲೆನ್ಸ್ ತಪ್ಪಿ ನೀರು ತುಂಬಿರುವ ಟಬ್ ಅವರ ಮೇಲೆ ಬಿದ್ದಿದೆ‌. ಪ್ರಿಯಾ ಹಾಗೂ ಅವರ ಗೆಳತಿರುವ ಈ ಫನ್ನಿ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ಈಗಾಗಲೇ ಇದನ್ನು ನಾಲ್ಕು ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಅಭಿಮಾನಿಗಳು ಕೂಡಾ ಈ ವೀಡಿಯೋ ನೋಡಿ ಭರ್ಜರಿ ಪ್ರತಿಕ್ರಿಯೆಗಳನ್ನು ಕೂಡಾ ನೀಡಿದ್ದಾರೆ‌. ಒಟ್ಟಾರೆ ಕಣ್ಸನ್ನೆ ಹುಡುಗಿಯ ವೀಡಿಯೋಗಳು ಎಂದರೆ ಆಕೆಯ ಅಭಿಮಾನಿಗಳ ಕಣ್ಣಂಚಲ್ಲಿ ಒಂದು ಕಾಂತಿ ಮೂಡಿರುತ್ತದೆ‌.