ಲಾಕ್ ಡಾವುನ್ ನಲ್ಲಿ ಮುಂಬಯಿಯಿಂದ ಮನೆ ಸೇರಲು ಈ ಭೂಪ ಆಡಿದ್ದು 3 ಲಕ್ಷ ₹ ಗಳ ಆಟ ಹೇಗೆ ನೋಡಿ?!

ಇಲ್ಲೊಬ್ಬ ಮನೆಗೆ ತೆರಳಲು ಮಾಡಿದ ಸಖತ್ ಐಡಿಯಾನೆ ಬೇರೆ!ಕಲ್ಲಂಗಡಿ & ಈರುಳ್ಳಿಯ ವ್ಯಾಪಾರಿಯಾಗಿ ಮುಂಬಯಿಯಿಂದ ಪ್ರಯಾಗರಾಜಕ್ಕೆ ಹೋದ ಅನುಭವ ನೋಡಿ ಹೇಗಿದೆ.

ಪ್ರಯಾಗರಾಜ ಪಟ್ಟಣದ ಪ್ರೇಮ್ ಮೂರ್ತಿ ಪಾಂಡೆಯ ಹೇಳಿದ ಮಾತು ಕೇಳಿದರೆ ನಿಜಕ್ಕೂ ಅದ್ಭುತವೆನಿಸುತ್ತದೆ.

ನಾನು ಮುಂಬಯಿಯಲ್ಲಿ 21 ದಿನಗಳನ್ನು ಹೇಗೋ ಕಳೆದೆ, ಆದ್ರೆ ಲಾಕ್ ಡಾವುನ್ ತೆಗೆಯುವ ಯಾವುದೇ ಚಿಹ್ನೆ ಕಾಣದಾದಾಗ ಮಾತ್ರ ನನ್ನೂರಿಗೆ ಹೇಗೆ ತೆರಳಬೇಕು ಎನ್ನುವ ಬಗ್ಗೆ ವಿಚಾರ ಮಾಡಿದೆ.

ಈ ಲಾಕ್ ಡಾವುನ್ ನಲ್ಲಿ ಜನ ತಮ್ಮೂರಿಗೆ ಹೋಗಲಿಕ್ಕಾಗಿ ಮಾಡಿದ ಒಂದೊಂದು ಐಡಿಯಾಗಳು ಎಂತೆಂತೆಹುದು ಎಂಬುದು ಒಂದೊಂದಾಗಿ ಈಗ ತಿಳಿಯುತ್ತಿವೆ. ಅದರಲ್ಲಿಯದೇ ಒಂದು ಸೂಪರ್ ಐಡಿಯಾ ಇಲ್ಲಿದೆ.

ಪ್ರೇಮ್ ಮೂರ್ತಿ ಪಾಂಡೆ ಹೆಸರಿನ ವ್ಯಕ್ತಿಯೊಬ್ಬ ಕಲ್ಲಂಗಡಿ ಮತ್ತು ಈರುಳ್ಳಿ ವ್ಯಾಪಾರಿಗನಾಗಿ ಮುಂಬಯಿಯಿಂದ ಪ್ರಯಾಗರಾಜಕ್ಕೆ ಹೋದನು. ಈ ವ್ಯಾಪಾರದಲ್ಲಿ ಆತ 3 ಲಕ್ಷಕ್ಕಿಂತಲೂ ಹೆಚ್ಚು ರೂಪಾಯಿಗಳ ಗೇಮ್ ಆಡಿದ.

ವಾಸ್ತವವಾಗಿ ಮುಂಬಯಿಯ ಅಂಧೇರಿ ಪೂರ್ವದಲ್ಲಿ ಈತನ ಮನೆ ಕೊಲೆಗೇರಿಯಲ್ಲಿ ಜನನಿಬಿಡ ವಸ್ತಿಯಲ್ಲಿದೆ ಮತ್ತು ಕೊರೊನಾ ಅಂಥಲ್ಲಿ ಬಹುಬೇಗನೆ ಹರುಡುವ ಭಯ ಬೇರೆ ಆತನಿಗೆ ಇತ್ತು.

ಮುಂಬಯಿಯ ಏರ್ಪೋರ್ಟನಲ್ಲಿ ಕೆಲಸ ಮಾಡುವ ಪಾಂಡೆ ಹೇಳುವ ಪ್ರಕಾರ ಸರಕಾರ ಒಂದೇ ಒಂದು ದಾರಿ ಬಿಟ್ಟುಕ್ಕೊಟ್ಟಿತ್ತು ಅದೆಂದರೆ ವ್ಯಾಪಾರ. ಅದೇ ಮಾರ್ಗದಿಂದ ತರಕಾರಿ, ಹಣ್ಣು ಮತ್ತು ಹಾಲಿನ ವ್ಯಾಪಾರ ಮಾಡುತ್ತ ನಿಧಾನವಾಗಿಯಾದರೂ ನನ್ನೂರಿನತ್ತ ಸಾಗಬಹುದೆಂಬ ಆಸೆಯಿಂದ ನಾನು ಈ ದಾರಿಯನ್ನು ಆಯ್ದುಕೊಂಡೆ ಮತ್ತು ನನ್ನೂರಿಗೆ ತಲುಪಿದೆ ಎಂದು ಗರ್ವದಿಂದ ಹೇಳುತ್ತಾನೆ.17 ಏಪ್ರಿಲ್ ಗೆ ಈತ ಮುಂಬಯಿಯಿಂದ ಪಿಂಪಳಗಾಂವ ಕ್ಕೆ ಬಂದು ಅಲ್ಲಿ 10000 ರೂಪಾಯಿಗಳಲ್ಲಿ 1300 ಕಿಲೋ ಕಲ್ಲಂಗಡಿ ಖರೀದಿಸಿ ಒಂದು ಚಿಕ್ಕ ಗಾಡಿಯಲ್ಲಿ ಮುಂಬಯಿಗೆ ಕಳುಹಿಸಿದನು. ಮುಂಬಯಿಯಲ್ಲಿ ಒಬ್ಬ ಹಣ್ಣಿನ ವ್ಯಾಪಾರಿಯ ಜೊತೆಗೆ ಮೊದಲೇ ಕಲ್ಲಂಗಡಿಯ ವ್ಯವಹಾರ ಮಾಡಿದ್ದ.ಮುಂದೆ ಅಲ್ಲಿಯೇ ಪಿಂಪಳಗಾಂವ್ ನಲ್ಲಿ ಈರುಳ್ಳಿ ಮತ್ತು ಅದರ ದರದ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಒಬ್ಬರ ಕಡೆಗೆ 2,32,232 ₹ ಗಳಿಗೆ 25,520 ಕಿಲೋ ಈರುಳ್ಳಿ(9.10 ಪ್ರತಿ ಕಿಲೋ) ಖರೀದಿಸಿ 77500 ₹ ಗೆ ಬಾಡಿಗೆಗೆ ಪಡೆದು 20 ಏಪ್ರಿಲ್ ಕ್ಕೆ ಪ್ರಯಾಗರಾಜಕ್ಕೆ ಪ್ರಯಾಣ ಬೆಳೆಸಿ 23 ಏಪ್ರಿಲ್ ರಂದು ತಲುಪಿದನು.

ಊರಿಗೆ ತಲುಪಿದ ನಂತರ ಮೊದಲು ಪಾಂಡೆ ಹೋದದ್ದು ಮಾರ್ಕೆಟ್ಟಿಗೆ.ಆದರೆ ಇಷ್ಟೊಂದು ಹಣ ಒಮ್ಮೆಲೇ ನಗದು ಪಾವತಿಸಲು ವ್ಯಾಪಾರಿ ನಿರಾಕರಿಸಿದ. ನಂತರ ಈರುಳ್ಳಿಯ ಟ್ರಕ್ ತೆಗೆದುಕೊಂಡು ಡೈರೆಕ್ಟ್ ತನ್ನ ಮನೆಗೆ ಹೋಗಿ ಸಂಪೂರ್ಣ ಈರುಳ್ಳಿಯನ್ನು ಮನೆಯಲ್ಲೇ ಇಳಿಸಿದನು.ನಂತರ ತನ್ನೂರಿನ ಪೊಲೀಸ್ ಸ್ಟೇಷನ್ನಿಗೆ ಹೋಗಿ ತಾನು ಮುಂಬಯಿಯಿಂದ ಬಂದುದರ ಬಗ್ಗೆ ಮಾಹಿತಿ ಕೊಟ್ಟ ಮೇಲೆ ಚೆಕ್ ಅಪ್ ಮಾಡಲು ಬಂದ ಮೆಡಿಕಲ್ ಸ್ಟಾಫ್ ಗೂ ಸಹಕರಿಸಿದ್ದಾನೆ.
ಮತ್ತು ಡಾಕ್ಟರ್ಸ್ ಗಳೂ ಆತನನ್ನು ಕ್ವಾರಂಟೈನ್ ಮಾಡಲು ಹೇಳಿದ್ದಾರೆ.

ಸದ್ಯಕ್ಕೆ ಪಾಂಡೆ ಲಾಕ್ ಡಾವುನ್ ಹಿಂತೆಗೆದ ಮೇಲೆ ತಾನು ತಂದಿದ್ದ ಈರುಳ್ಳಿಯನ್ನು ಒಳ್ಳೆಯ ಬೆಳೆಗೆ ಮಾರುವ ದಾರಿ ಕಾಯ್ತಾ ಇದ್ದಾನೆ.