ತಮ್ಮ ಐಷಾರಾಮಿ ಮನೆಯನ್ನು ತೋರಿಸಿದ ಹೃತಿಕ್ ಮಾಜಿ ಪತ್ನಿ ಸೂಸೈನ್! ಇದು ಮನೆಯಲ್ಲ ಅರಮನೆ ಎಂದ ಫ್ಯಾನ್ಸ್! ರಿಯಾಕ್ಟ್ ಮಾಡಿದ ಹೃತಿಕ್.. Video

ಬಾಲಿವುಡ್ ನ ಸುಂದರಾಂಗ ಹಾಗೂ ಡಾನ್ಸ್ ಹಾಗೂ ನಟನೆಗೆ ತನ್ನದೇ ಆದ ಹೆಸರು ಪಡೆದಿರುವ ನಟ ಹೃತಿಕ್ ರೋಶನ್ ಅವರ ಮಾಜಿ ಪತ್ನಿ ಸೂಸೈನ್ ಖಾನ್ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಕೆಲವೊಮ್ಮೆ ಫೋಟೋಗಳು, ಮತ್ತೆ ಕೆಲವೊಮ್ಮೆ ವೀಡಿಯೋಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಸೂಸೈನ್ ಹಲವು ವಿಚಾರಗಳನ್ನು ತಿಳಿಸುತ್ತಾ ಇರುತ್ತಾರೆ. ಸೂಸೈನ್ ಖಾನ್ ತಮ್ಮ ಕೆರಿಯರ್ ಅನ್ನು ನಟನೆಯಲ್ಲಿ ಅಲ್ಲ, ಬದಲಿಗೆ ಇಂಟೀರಿಯಲ್ ಡಿಸೈನಿಂಗ್ ಕ್ಷೇತ್ರದಲ್ಲಿ ಇದೆ ಎಂದು ಅದನ್ನು ಆಯ್ಕೆ ಮಾಡಿಕೊಂಡಿದ್ದು, ಇಂದು ಆಕೆ ಒಬ್ಬ ಯಶಸ್ವಿ ಬ್ಯುಸಿನೆಸ್ ವುಮೆನ್ ಆಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಸೂಸೈನ್ ತಮ್ಮ ಮುಂಬೈನ ಮನೆಯ ಒಂದು ಅಂದವಾದ ವೀಡಿಯೋವನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.

ಸೂಸೈನ್ ಶೇರ್ ಮಾಡಿರುವ ವೀಡಿಯೋದಲ್ಲಿ ಅವರ ಐಶಾರಾಮೀ ಮನೆಯನ್ನು ನೋಡಿದ ನೆಟ್ಟಿಗರು ಮನೆಯ ಅಂದವನ್ನು ನೋಡಿ ಅಬ್ಬಬ್ಬಾ ಎಷ್ಟು ಅಂದವಾದ ಹಾಗೂ ಅದ್ಭುತವಾದ ಮನೆಯಿದು ಎಂದು ಉದ್ಗಾರವನ್ನು ಮಾಡಿದ್ದಾರೆ. ಸೂಸೈನ್ ಕೂಡಾ ವೀಡಿಯೋದಲ್ಲಿ ತಮ್ಮ ವಿಶಾಲವಾದ ಮನೆಯ ಪ್ರತಿಯೊಂದು ಕೋಣೆಯ ಬಹಳ ಸುಂದರವಾದ ಒಳಾಂಗಣ ವಿನ್ಯಾಸ ಹಾಗೂ ಮಾಡಿರುವ ಅಲಂಕಾರವನ್ನು ಆಕೆ ಬಹಳ ಅಚ್ಚುಕಟ್ಟಾಗಿ ನೆಟ್ಟಿಗರೊಂದಿಗೆ ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದವರೆಲ್ಲಾ ಮನೆಯ ಶ್ರೀಮಂತಿಕೆಯನ್ನು ನೋಡಿ ವಿಸ್ಮಯವನ್ನು ವ್ಯಕ್ತಪಡಿಸಿದ್ದಾರೆ.

ಹೃತಿಕ್ ಅವರ ಮಾಜಿ ಪತ್ನಿ ಸೂಸೈನ್ ಶೇರ್ ಮಾಡಿರುವ ಈ ವೀಡಿಯೋ ಒಟ್ಟು 18 ನಿಮಿಷಗಳ ಸಮಯದ್ದಾಗಿದೆ. ಈ ವೀಡಿಯೋವನ್ನು ಆಕೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ನಾವು ಅವರ ಮನೆಯು ಎಂತಹ ಐಶಾರಾಮೀ ಲುಕ್ ಪಡೆದಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಮುಂಬೈನ ಜುಹುವಿನಲ್ಲಿ ನಿರ್ಮಾಣವಾಗಿರುವ ಕಟ್ಟಡವೊಂದರೆ ಹದಿನೈದನೇ ಅಂತಸ್ತಿನಲ್ಲಿ ಇರುವ ಸೂಸೈನ್ ಅವರ ಈ ಮನೆಯನ್ನು ಎರಡು ಅಪಾರ್ಟ್ಮೆಂಟ್ ನ್ನು ಸೇರಿಸಿ ಸೂಸೈನ್ ಅವರ ಮನೆಯನ್ನು ನಿರ್ಮಾಣ ಮಾಡಲಾಗಿದೆ. ವೀಡಿಯೋದಲ್ಲಿ ಅದನ್ನು ಅವರು ವಿವರಿಸಿದ್ದಾರೆ.

ವಿಡಿಯೋ ನೋಡಿ

ಈ ಅಪಾರ್ಟ್ಮೆಂಟ್ ನಲ್ಲಿ ದೊಡ್ಡ ಹಾಗೂ ಹೊರನೋಟಕ್ಕೆ ಕಾಣುವ ಲಿವಿಂಗ್ ರೂಂ ನೊಂದಿಗೆ ಮಲ್ಟಿಪಲ್ ಸೆಟ್ಟಿಂಗ್ ಏರಿಯಾ ಆಗಿದೆ. ಅವರ ಮನೆಯ ಅಡುಗೆ ಮನೆ ಕೂಡಾ ವಿಶೇಷವಾಗಿ ಎಲ್ಲರ ಗಮನವನ್ನು ಸೆಳೆದಿದೆ. ಸೂಸೈನ್ ಶೇರ್ ಮಾಡಿರುವ ಹದಿನೆಂಟು ನಿಮಿಷಗಳ ಈ ವೀಡಿಯೋಗೆ ಹೃತಿಕ್ ರೋಶನ್ ಸಹಿತ ಅನೇಕ ಸೆಲೆಬ್ರಿಟಿಗಳು ರಿಯಾಕ್ಟ್ ಮಾಡಿದ್ದಾರೆ ಹಾಗೂ ಹೊಗಳಿಕೆ ನೀಡಿದ್ದಾರೆ. ಇನ್ನೂ ಅಭಿಮಾನಿಗಳಿಗೂ ಕೂಡಾ ಈ ವೀಡಿಯೋ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಸೂಸೈನ್ ದಿ ಚಾರ್ಕೋಲ್ ಪ್ರಾಜೆಕ್ಟ್ ಎನ್ನುವ ಒಂದು ಇಂಟೀರಿಯಲ್ ಡಿಸೈನಿಂಗ್
ಸ್ಟುಡಿಯೋ ಕೂಡಾ ಆರಂಭ ಮಾಡಿದ್ದಾರೆ. ನಟ ಹೃತಿಕ್ ರೋಶನ್ ಮತ್ತು ಸೂಸೈನ್ 2000 ರಲ್ಲಿ ಮದುವೆಯಾಗಿದ್ದರು. ಅನಂತರ ಅವರು 2013 ರಲ್ಲಿ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆದು ದೂರಾಗಿದ್ದಾರೆ.