ಒಂದೇ ಒಂದು ಮೀನಿನಿಂದ ಖುಲಾಯಿಸಿತು ಬಡ ಮಹಿಳೆಯ ಅದೃಷ್ಟ! ಸಿಕ್ಕಿದ್ದು ಬರೋಬ್ಬರಿ 3 ಲಕ್ಷ ರೂಪಾಯಿ!

ಮೇಲಿನವನ ಆಶೀರ್ವಾದ ಸಿಕ್ಕರೆ ಸಾಕು ಜೀವನದಲ್ಲಿ ಯಾವಾಗ ಬೇಕಾದರೂ ಚಮತ್ಕಾರವಾಗಲು ಸಾಧ್ಯ, ಹೌದಲ್ವಾ?

ಪಶ್ಚಿಮ ಬಂಗಾಲದಲ್ಲಿಯ ಮಹಿಳೆಯೊಬ್ಬಳಿಗೆ ಯಾವುದೇ ಲಾಟರಿ, ಅಥವಾ ಖಜಾನೆ ಸಿಗದೆ ಒಮ್ಮೆಲೆ ಬರೀ ಒಂದು ಮೀನಿನ ಅದೃಷ್ಟದ ಬಲದಿಂದ ಶ್ರೀಮಂತಳಾಗಿದ್ದಾಳೆ.

ಈ ಮಹಿಳೆಯ ದೈನಂದಿನ ಜೀವನ ಮೀನುಗಳನ್ನು ಹಿಡಿಯುವುದು ಮತ್ತು ಅವುಗಳನ್ನು ಮಾರುವುದು ಇದರ ಮೇಲೆ ನಡೆಯುತ್ತದೆ. ಅವಳ ಮೇಲೆ ದೇವರ ಕೃಪೆ ಒಮ್ಮೆಲೆ ಆದ ಹಾಗೆ ಕಾಣುತ್ತೆ. ಏಕೆಂದರೆ ಅವಳಿಗೆ ಒಂದೇ ಒಂದು ಮೀನು ಮೂರು ಲಕ್ಷ ರೂಪಾಯಿಗಳನ್ನು ತಂದುಕೊಟ್ಟಿತು. ಇಂಥ ಮೂರು ಲಕ್ಷ ರೂಪಾಯಿಗಳ ಬೆಲೆಯುಳ್ಳ ಅದ್ಭುತ ಮೀನು ಸಿಗುತ್ತದೆ ಮತ್ತು ಅದರಿಂದ ನಾನು ಲಕ್ಷಾಧೀಶಳಾತ್ತೇನೆ ಎಂದು ಕನಸಿನಲ್ಲಿಯೂ ಆಕೆ ವಿಚಾರ ಮಾಡಿರಲಿಲ್ಲ.

ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯಲ್ಲಿ ಸುಂದರಬನ ದ್ವೀಪಗಳಲ್ಲಿ ಪುಷ್ಪ ಹೆಸರಿನ ಮಹಿಳೆಯು ಮೀನು ಮಾರಿ ತನ್ನ ಜೀವನವನ್ನು ಸಾಗಿಸುತ್ತಾಳೆ. ಒಂದು ದಿನ ಹಾಗೆಯೇ ಮೀನು ಹಿಡಿಯಲು ನದಿಗೆ ತೆರಳಿದಾಗ 52 ಕಿಲೋ ಭಾರದ ಬೃಹತ್ ಮೀನೊಂದು ಕಣ್ಣಿಗೆ ಕಂಡಿದೆ. ಪುಷ್ಪ ತಕ್ಷಣ ನದಿಯಲ್ಲಿ ಜಿಗಿದು ತುಂಬ ಪರಿಶ್ರಮದಿಂದ ಆ ಮೀನನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದಳು. ಮೀನನ್ನು ನೋಡಿದ ಕೂಡಲೇ ಇದಕ್ಕೆ ತುಂಬಾ ಹೆಚ್ಚಿಗೆ ಬೇಲೆ ಬರುವುದೆಂಬ ಭಾವನೆ ನಿರ್ಮಾಣವಾಗಿತ್ತು. ಪುಷ್ಪ ಯೋಚಿಸಿದ ಹಾಗೆ ಆ ಮೀನಿನ ಪ್ರತಿಕಿಲೋ ಬೆಲೆ ಮಾರುಕಟ್ಟೆಯಲ್ಲಿ 6200 ರೂಪಾಯಿಗಳಷ್ಟಿತ್ತು. ಹೀಗಾಗಿ ಮೀನಿನಿಂದ ಆ ಮಹಿಳೆಯು ಒಂದೇ ದಿನದಲ್ಲಿ ಒಟ್ಟು ಮೂರು ಲಕ್ಷ ರೂಪಾಯಿಗಳ ಲಾಭ ಪಡೆದುಕೊಂಡಳು.

ಮೂಲಗಳ ಪ್ರಕಾರ ಈ ಬೃಹತ್ ಮೀನಿಗೆ ಹಡಗಿನ ಟಕ್ಕರ್ ದಿಂದಾಗಿ ಪೆಟ್ಟು ಬಿದ್ದು ಅದರ ಮೃತ್ಯು ಸಂಭವಿಸಿದೆ. ಅದನ್ನು ನೋಡಿ ಪುಷ್ಪ ತಡಮಾಡದೆ ತಕ್ಷಣ ನೀರಿಗೆ ಧುಮುಕಿದ್ದಾಳೆ. ನಾನು ಇಷ್ಟೊಂದು ದೊಡ್ಡ ಮೀನನ್ನು ಮೊದಲನೇ ಬಾರಿ ನೋಡಿದ್ದೆ. ಹಾಗೆಯೇ ಅದನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದೆ. ದಡಕ್ಕೆ ತರುವಲ್ಲಿ ನನಗೆ ತುಂಬಾ ಕಷ್ಟವಾಯಿತು. ದಡಕ್ಕೆ ತಂದ ಮೇಲೆ ಅಲ್ಲಿಯ ನೋಡುಗರು ಹೇಳಿದರು, ಇದು ತುಂಬಾ ಬೆಲೆಬಾಳುವ ಮೀನಾಗಿದೆ. ಇದರ ಮಾರಾಟದಿಂದ ನಿಮಗೆ ತುಂಬಾ ಹಣ ಬರಬಹುದು ಅಂತ. ಅವರ ಮಾತುಗಳನ್ನು ಕೇಳಿ ನಿಜಕ್ಕೂ ನಾನು ತುಂಬಾ ಆನಂದದಲ್ಲಿದ್ದೆ. ಈಗ ಅವರು ಹೇಳಿದ್ದಕ್ಕಿಂತ ಅಪೇಕ್ಷೆಯನ್ನು ಮೀರಿ ಹೆಚ್ಚು ಹಣವನ್ನು ಗಳಿಸಿಕೊಂಡೆ, ಎಂದು ಪುಷ್ಪ ಖುಷಿಯಿಂದ ಹೇಳುತ್ತಾಳೆ. ಬರೀ ಒಂದೇ ಮೀನಿನಿಂದ ಮೂರು ಲಕ್ಷಗಳವರೆಗೆ ಲಾಭವಾಯಿತು.

ಪುಷ್ಪ ಗೆ ದೊರೆತ ಮೀನಿನ ಉಪಯೋಗ ತಿನ್ನುವುದಕ್ಕೆ ಅಲ್ಲ ಔಷಧಿಗಾಗಿ ಉಪಯೋಗಿಸುತ್ತಾರೆ.ಈ ಮೀನನ್ನು ಮಾರಲು ತೆಗೆದುಕೊಂಡು ಹೋಗುವಾಗ ಅದು ಕೊಳೆಯುವ ಕ್ರಿಯೆ ನಡೆದಿತ್ತು. ಆಗ್ನೇಯ ಏಷ್ಯಾದಲ್ಲಿ ಈ ಮೀನಿನ ಕೆಲವು ಅವಯವಗಳನ್ನು ನಿರ್ಯಾತ ಮಾಡಲಾಗುತ್ತದೆ. ಈ ಜಾತಿಯ ಒಣಗಿಸಿದ ಮೀನಿನ ಬೆಲೆ ಸುಮಾರು 80 ಸಾವಿರ ರೂಪಾಯಿಗಳವರೆಗೆ ಪ್ರತಿ ಕಿಲೋ ಮಾರಾಟ ಮಾಡಲಾಗುತ್ತದೆ. ಪುಷ್ಪಾ ಹೇಳುವ ಪ್ರಕಾರ, ಈ ಒಂದೇ ಮೀನಿನಿಂದ ಆಕೆಯ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾದವು. ಈ ಮೀನು ನನ್ನ ಜೀವನದಲ್ಲಿ ಗಳಿಸುವ ಹಣ ಒಂದೇ ಬಾರಿಗೆ ತಂದುಕೊಟ್ಟಿತು.ಹೀಗಾಗಿ ನಾನು ತುಂಬಾ ಅದೃಷ್ಟವಂತೆ ಎಂದು ಹೇಳಿಕೊಳ್ಳುತ್ತಾಳೆ. ಇದೊಂದು ನನಗೆ ಮರೆಯಲಾಗದ ನೆನಪು ಎಂದು ಭಾವುಕಳಾಗುತ್ತಾಳೆ ಪುಷ್ಪ.